ಫೆಬ್ರವರಿಯಲ್ಲಿ ಆದಿತ್ಯ ಜೊತೆ ನಟಿ ರಾಣಿ ಸಪ್ತಪದಿ
ಕಡೆಗೂ ಎಲ್ಲಾ ಗಾಸಿಪ್ ಸುದ್ದಿಗಳಿಗೆ ತೆರೆಬೀಳುವ ಸಮಯ ಬಂದಿದೆ. ಕಳೆದ ಕೆಲವರ್ಷಗಳಿಂದ ಈ ಜೋಡಿ ಹಕ್ಕಿಗಳು ಒಂದಾಗುತ್ತಾರೆ ಎಂಬ ಮಾತುಗಳು ಕೇಳಿಬರುತ್ತಿದ್ದವು. ಅವು ನಿಜವಾಗುವ ದಿನಗಳು ಈಗ ಹತ್ತಿರವಾಗಿವೆ. ಬಾಲಿವುಡ್ ನ ಪ್ರೇಮ ಪಕ್ಷಿಗಳಾದ ರಾಣಿ ಮುಖರ್ಜಿ ಹಾಗೂ ಆದಿತ್ಯ ಚೋಪ್ರಾ ಮದುವೆಗೆ ಮುಹೂರ್ತ ಕೂಡಿಬಂದಿದೆ.
ಮೂಲಗಳ ಪ್ರಕಾರ ಫೆಬ್ರವರಿ 10, 2014ರಂದು ಇವರಿಬ್ಬರೂ ಜೊತೆಯಾಗಿ ಹಿತವಾಗಿ ಸಪ್ತಪದಿ ತುಳಿಯಲಿದ್ದಾರೆ.ಇವರಿಬ್ಬರ ಮದುವೆ ಜೋಧ್ ಪುರದ ಉಮೈದ್ ಭವನ್ ಪ್ಯಾಲೇಸ್ ನಲ್ಲಿ ರಾಣಿ ಆದಿತ್ಯ ಹಾರಬದಲಾಯಿಸಿಕೊಳ್ಳಲಿದ್ದಾರೆ. [ಗುಟ್ಟಾಗಿ ನಿಶ್ಚಿತಾರ್ಥ ಮಾಡಿಕೊಂಡ ಖ್ಯಾತ ತಾರೆ]

ಅದು ಹೇಗೂ ಆ ಕಿವಿಯಿಂದ ಈ ಕಿವಿಗೆ ತಲುಪಿ ಕಡೆಗೆ ಮಾಧ್ಯಮಗಳ ಕಿವಿಗೂ ಬಿದ್ದಿದೆ. ಜೋಧ್ ಪುರ್ ಪ್ಯಾಲೇಸ್ ನಲ್ಲಿ ಮದುವೆಯಾಗಲು ಆದಿತ್ಯ ಅವರಿಗೂ ಹೇಳಿದ್ದಾರಂತೆ. ಆ ಕಡೆಯಿಂದಲೂ ಗ್ರೀನ್ ಸಿಗ್ನಲ್ ಬಂದಿದ್ದು ಇನ್ನೇನಿದ್ದರೂ ಗಟ್ಟಿಮೇಳ ಮೊಳಗುವುದು ಬಾಕಿ ಇದೆ.
ಬಹಳ ಸುದೀರ್ಘ ಸಮಯದಿಂದ ಇವರಿಬ್ಬರೂ ಡೇಟಿಂಗ್ ಮಾಡುತ್ತಿದ್ದಾರೆ. ಮದುವೆ ಯಾವಾಗ ಎಂಬ ಬಗ್ಗೆ ಮಾತ್ರ ಇಬ್ಬರೂ ಬಾಯಿಬಿಟ್ಟಿರಲಿಲ್ಲ. ಕೇಳಿದಾಗಲೆಲ್ಲಾ ಆ ರೀತಿಯೇನೂ ಇಲ್ಲ ಎಂದು ಕಾಗೆ ಹಾರಿಸುತ್ತಿದ್ದರು. ಈಗ ಇಬ್ಬರೂ ಗಂಡಹೆಂಡತಿಯಾಗಲು ಹೊರಟಿದ್ದಾರೆ.


Click it and Unblock the Notifications











