»   » ಶಿವಣ್ಣ ಜೊತೆ ‘ಸ್ಮೈಲ್‌’ ಮಾಡಲು ರಾಣಿ ಅಥವಾ ಬಿಪಾಶ

ಶಿವಣ್ಣ ಜೊತೆ ‘ಸ್ಮೈಲ್‌’ ಮಾಡಲು ರಾಣಿ ಅಥವಾ ಬಿಪಾಶ

Posted By: Staff
Subscribe to Filmibeat Kannada
Rani or Bipasha to pair up with Shivarajkumar in Smile!
ಲಕ್ಷಗಳಲ್ಲೇ ಸಿನಿಮಾ ಮುಗಿಸಬೇಕೆಂದು ಸೀತಾರಾಂ ಕಾರಂತ್‌ಗೆ ಅಣತಿ ಕೊಟ್ಟಿದ್ದ ನಿರ್ಮಾಪಕ ಎನ್‌.ಕೆ.ಪ್ರಕಾಶ್‌ ಬಾಬು ಗೀಳು ಇದೀಗ ಬಾಲಿವುಡ್‌ ತಾರೆಯರತ್ತ. ಥೈಲಿ ಬಗ್ಗೆ ಈಗ ಅವರಿಗಿಲ್ಲ ಮೋಹ.

ಬಹುದಿನಗಳ ನಂತರ ಶಿವಣ್ಣ ನಟಿಸುತ್ತಿರುವ ಸ್ವಮೇಕ್‌ 'ಸ್ಮೈಲ್‌"ಗೆ ನಾಯಕಿ ಆಯ್ಕೆ ಇನ್ನೂ ಆಗಿಲ್ಲ. ಆದರೆ ಶೂಟಿಂಗ್‌ ಶುರುವಾಗಿದೆ. ಈಗ ಸ್ಯಾಂಡಲ್‌ವುಡ್‌ನಲ್ಲಿ ಕೇಳಿಬರುತ್ತಿರುವ ಮಾತು- ಈ ಸಿನಿಮಾದ ನಾಯಕಿ ರಾಣಿ ಮುಖರ್ಜಿ ಅಥವಾ ಬಿಪಾಶ ಬಸು!

ಪ್ರಕಾಶ್‌ ಬಾಬು ಬಜೆಟ್ಟಿಗೆ ತಕ್ಕಂತೆ ಯೋಚಿಸುತ್ತಿದ್ದ ನಿರ್ದೇಶಕ ಸೀತಾರಾಂ ಕಾರಂತ್‌ಗೆ ದಿಢೀರ್‌ ಶಾಕ್‌. ಶೂಟಿಂಗ್‌ನಲ್ಲಿ ಇದ್ದಕ್ಕಿದ್ದಂತೆ ಬಾಬು, ರಾಣಿ ಮುಖರ್ಜಿ ನನ್ನ ಸಿನಿಮಾದ ನಾಯಕಿ ಅಂದಾಗ ಎಲ್ಲರೂ ಅವಾಕ್ಕಾದರು. ಯಾಕೆಂದರೆ ರಾಣಿ ಮುಖರ್ಜಿಯದ್ದು ಶಿವಣ್ಣನಷ್ಟೇ ಸಂಭಾವನೆ. ಕೊನೆಗೆ ಈ ನಿರ್ಧಾರದ ಮೇಲೆ ಇನ್ನೊಂದು ಕೊಸರು- ರಾಣಿ ಡೇಟ್ಸ್‌ ಸಿಗದಿದ್ದರೆ, ಬಿಪಾಶ ಬಸು!.

ಪ್ರಕಾಶ್‌ ಬಾಬುಗೆ ಈ ಮಾತು....
ಬಿಪಾಶ ಬಸು ರಾಣಿಗಿಂತ ಈಗ ಚಾಲ್ತಿ. ಸಂಭಾವನೆಯೂ ಜಾಸ್ತಿ. ಸೆಟ್‌ಗಳಲ್ಲಿ ಬಿಪಾಶ ಧೋರಣೆಗಳ ಕಂಡವರ ಪ್ರಕಾರ, ಆಕೆ ಆಡುವುದು ಕುಸ್ತಿ. ಅರ್ಥಾತ್‌ ಜಟಾಪಟಿ. ಹೀಗೇ ಆಗಬೇಕು, ಅದೇ ಬೇಕು ಅನ್ನುವ ಹಟ; ಥೇಟ್‌ ನಮ್ಮ ನಖರಾ ನವೀನ್‌ ಮಯೂರ್‌ ತರಹದ ಗಾಂಚಲಿ. ತಣ್ಣಗಿನ ಸಿನಿಮಾಗಳ ಮಾಡುವ ಸೀತಾರಾಂ ಕಾರಂತ್‌ಗೆ ಪರದೇಶೀ ನಾಯಕಿ ಸೂಟ್‌ ಆಗದಿರುವ ಆತಂಕವೂ ಇದೆ. ಯಾಕೆಂದರೆ ಮೊದಲೇ ನಿಗದಿಯಾಗಿದ್ದ ಬಜೆಟ್ಟಿಗೆ ತಕ್ಕಂಥ ಕತೆ ರೆಡಿಯಾಗಿದೆ. ಈಗ ಬಾಲಿವುಡ್‌ ನಟಿ ಅಂದರೆ, ಕುಣಿತ ಹೆಚ್ಚು ಮಾಡಬೇಕು. ಆಕೆಯ ಮಾತು ಕಡಿಮೆ ಮಾಡಬೇಕು.

ನಿಮಗೆ ಬೇಗ ಜ್ಞಾನೋದಯವಾಗಲಿ. ರಾಣಿ, ಬಿಪಾಶ ಕನಸು ಬಿಟ್ಟು ನಗುವುದನ್ನು ಕಲಿಯಿರಿ. ಯಾಕೆಂದರೆ, ನಿಮ್ಮ ಸಿನಿಮಾ ಹೆಸರೂ ಕೂಡ ಅದೇ (ಸ್ಮೈಲ್‌). ಮೊನಿಷಾ ಕೊಯಿರಾಲ ಕೋಟಿ ನಿರ್ಮಾಪಕ ರಾಮುಗೆ ಏನು ಮಾಡಿದರು ಅನ್ನುವ ಉದಾಹರಣೆ ಇನ್ನೂ ಹಸುರಾಗೇ ಇದೆಯಲ್ಲಾ ?

English summary
N.K.Prakash Babu to bring Rani Mukharjee or Bipasha Basu to Sandalwood

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada