»   » ಸೋಷಿಯಲ್ ಮೀಡಿಯಾದಲ್ಲಿ ಅತ್ಯಾಚಾರ ಬೆದರಿಕೆ: ದೂರು ಕೊಟ್ಟ Rapid ರಶ್ಮಿ

ಸೋಷಿಯಲ್ ಮೀಡಿಯಾದಲ್ಲಿ ಅತ್ಯಾಚಾರ ಬೆದರಿಕೆ: ದೂರು ಕೊಟ್ಟ Rapid ರಶ್ಮಿ

Posted By:
Subscribe to Filmibeat Kannada
ತೊಂದರೆಯಲ್ಲಿದ್ದಾರೆ ರಾಪಿಡ್ ರಶ್ಮಿ | Rapid rashmi is in trouble | Filmibeat Kannada

ಕೆಲವೇ ಕೆಲವು ದಿನಗಳ ಹಿಂದೆಯಷ್ಟೇ RJ Rapid ರಶ್ಮಿ ಬೇಡದ ವಿಚಾರಕ್ಕೆ ಸುದ್ದಿಯಾಗಿದ್ದರು. 'ರಾಜರಥ' ಚಿತ್ರದ ನಾಯಕ ನಿರೂಪ್ ಭಂಡಾರಿ, ನಿರ್ದೇಶಕ ಅನೂಪ್ ಭಂಡಾರಿಗೆ 'ಡ್ಯಾಶಿಂಗ್ ಪ್ರಶ್ನೆ' ಕೇಳಿ Rapid ರಶ್ಮಿ ವಿವಾದಕ್ಕೆ ಗ್ರಾಸವಾಗಿದ್ದರು.

'''ರಾಜರಥ' ನೋಡದವರು ಕಚಡಾ, ಲೋಫರ್ ನನ್ ಮಕ್ಳು'' ಎಂದು ಹೇಳಿದ ಅನೂಪ್ ಹಾಗೂ ನಿರೂಪ್ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಯಿತು. ಇನ್ನೂ ಅಂತಹ ಪ್ರಶ್ನೆ ಕೇಳಿದ Rapid ರಶ್ಮಿಗೂ ಜನ ಛೀಮಾರಿ ಹಾಕಲು ಶುರು ಮಾಡಿದರು.

ಸೋಷಿಯಲ್ ಮೀಡಿಯಾದಲ್ಲಿ ಛೀಮಾರಿ ಹಾಕುವುದರ ಜೊತೆಗೆ Rapid ರಶ್ಮಿಗೆ ಕೆಲವರು ನಿಂದಿಸಿದ್ದಾರೆ. ಕಿಡಿಗೇಡಿಗಳು ಅತ್ಯಾಚಾರದ ಬೆದರಿಕೆಯನ್ನೂ ಹಾಕಿದ್ದಾರೆ. ಎಲ್ಲವನ್ನೂ ಗಮನಿಸಿದ ಮೇಲೆ ಮಹಿಳಾ ಆಯೋಗಕ್ಕೆ ದೂರು ನೀಡಿದ್ದಾರೆ. ಮುಂದೆ ಓದಿರಿ...

Rapid ರಶ್ಮಿಗೆ ಲೈಂಗಿಕ ಕಿರುಕುಳ

''ನಿನ್ನ ರೇಟ್ ಎಷ್ಟು?'' ಎಂದು ಕೇಳುವುದರ ಜೊತೆಗೆ ಫೇಸ್ ಬುಕ್ ಹಾಗೂ ಯೂಟ್ಯೂಬ್ ನಲ್ಲಿ ಕೆಲವರು Rapid ರಶ್ಮಿಗೆ ಕೆಟ್ಟದಾಗಿ ಮೆಸೇಜ್ ಕಳುಹಿಸಿದ್ದಾರೆ. ಅಶ್ಲೀಲ ಪದಗಳನ್ನು ಉಪಯೋಗಿಸಿ Rapid ರಶ್ಮಿಗೆ ಕಿರುಕುಳ ಕೊಟ್ಟಿದ್ದಾರೆ ಕೆಲ ಕಿಡಿಗೇಡಿಗಳು. ಅತ್ಯಾಚಾರದ ಬೆದರಿಕೆಯೂ ಬಂದ ಮೇಲೆ ಮಹಿಳಾ ಆಯೋಗದ ಮೆಟ್ಟಿಲು ಹತ್ತಿದ್ದಾರೆ Rapid ರಶ್ಮಿ.

ಭಂಡಾರಿ ಸಹೋದರರ ಜೊತೆಗೆ RJ ರಶ್ಮಿಗೂ ಬೆಂಡೆತ್ತಿ ಬ್ರೇಕ್ ಹಾಕುತ್ತಿರುವ ಕನ್ನಡ ಪ್ರೇಕ್ಷಕರು!

ರಶ್ಮಿ ಏನಂತಾರೆ.?

''ಫೇಸ್ ಬುಕ್ ಹಾಗೂ ಯೂಟ್ಯೂಬ್ ನಲ್ಲಿ ನನಗೆ ಲೈಂಗಿಕ ಕಿರುಕುಳ ನೀಡಿರುವ ಪ್ರತಿಯೊಂದು ಕಾಮೆಂಟ್ ನೂ ಮಹಿಳಾ ಆಯೋಗದ ಗಮನಕ್ಕೆ ತಂದಿದ್ದೇನೆ. ಸೈಬರ್ ಕ್ರೈಮ್ ವಿಭಾಗದ ಪೊಲೀಸರು ಈ ಬಗ್ಗೆ ತನಿಖೆ ಮಾಡುತ್ತಾರೆ'' ಅಂತಾರೆ Rapid ರಶ್ಮಿ.

RJ Rapid ರಶ್ಮಿ ಶೋಗೆ ಯಾರೂ ಹೋಗಬೇಡಿ, ಎಲ್ಲರೂ ಬಹಿಷ್ಕಾರ ಹಾಕಿ.!

ಶೋ ಬಗ್ಗೆ ಮಾತನಾಡಲಿ, ನನ್ನ ಬಗ್ಗೆ ಅಲ್ಲ.!

''ನನ್ನ ಕಾರ್ಯಕ್ರಮದ ಬಗ್ಗೆ ಕಾಮೆಂಟ್ ಮಾಡಲಿ. ಆದ್ರೆ, ನನ್ನ ಬಗ್ಗೆ ಕೆಟ್ಟದಾಗಿ ಕಾಮೆಂಟ್ ಮಾಡುವ, ಅತ್ಯಾಚಾರದ ಬೆದರಿಕೆ ಹಾಕುವ, ಬಾಯಿಗೆ ಬಂದಂತೆ ಮಾತನಾಡಿ ನನ್ನ ಮುಖಕ್ಕೆ ಮಸಿ ಬಳಿಯುವ ಅಧಿಕಾರ ಯಾರಿಗೂ ಇಲ್ಲ'' ಎಂದು ತಮ್ಮ ಅಸಮಾಧಾನವನ್ನು ಹೊರಹಾಕಿದ್ದಾರೆ Rapid ರಶ್ಮಿ.

ಭಂಡಾರಿ ಬ್ರದರ್ಸ್ ವಿವಾದ : 'ರಾಜರಥ' ಚಿತ್ರ ನೋಡದಿದ್ದವರು 'ಕಚಡ ಲೋಫರ್ ನನ್ ಮಕ್ಳು'

ವಿವಾದಕ್ಕೆ ರಶ್ಮಿ ಸಿಲುಕಿದ್ದು...

ರಾಜರಥ' ಸಿನಿಮಾ ಬಿಡುಗಡೆಗೂ ಮುನ್ನ RJ Rapid ರಶ್ಮಿ ನಿರೂಪಣೆಯ ಶೋನಲ್ಲಿ ಅನೂಪ್ ಭಂಡಾರಿ, ನಿರೂಪ್ ಭಂಡಾರಿ ಹಾಗೂ ಅವಂತಿಕಾ ಶೆಟ್ಟಿ ಭಾಗವಹಿಸಿದ್ದರು. ಈ ವೇಳೆ ''ರಾಜರಥ ಸಿನಿಮಾ ನೋಡದ ಪ್ರೇಕ್ಷಕರು ....' ಎಂದು ಬಿಟ್ಟ ಸ್ಥಳವನ್ನು ತುಂಬಿಸುವಂತೆ RJ Rapid ರಶ್ಮಿ ಪ್ರಶ್ನಿಸಿದರು. ಹೇಳಿ ಕೇಳಿ ಇದು ಫಿಲ್ಟರ್ ಇಲ್ಲದ ಶೋ. ಹೀಗಾಗಿ ಬೋಲ್ಡ್ ಆಗಿ ಉತ್ತರ ನೀಡಬೇಕು ಎಂಬ ಕಾರಣಕ್ಕೆ, ''ರಾಜರಥ ಸಿನಿಮಾ ನೋಡದ ಪ್ರೇಕ್ಷಕರು ಕಚಡ ನನ್ ಮಕ್ಳು'' ಎಂದುಬಿಟ್ಟರು ಅನೂಪ್ ಭಂಡಾರಿ. ಅದೇ ಪ್ರಶ್ನೆ ನಿರೂಪ್ ಭಂಡಾರಿಗೆ ಬಂದಾಗ, ಒಂದು ಹೆಜ್ಜೆ ಮುಂದಕ್ಕೆ ಹೋಗಿ ''ರಾಜರಥ ಸಿನಿಮಾ ನೋಡದ ಪ್ರೇಕ್ಷಕರು ಕಚಡ ಮಾತ್ರವಲ್ಲ ಲೋಫರ್ ನನ್ ಮಕ್ಳು'' ಎಂದರು. ಈ ಹೇಳಿಕೆಯಿಂದ ಕನ್ನಡಿಗರು ಆಕ್ರೋಶಗೊಂಡರು. ಅನೂಪ್, ನಿರೂಪ್ ಜೊತೆಗೆ ರಶ್ಮಿಗೂ ಬೆಂಡೆತ್ತಿದರು.

English summary
RJ Rapid Rashmi has lodged a complaint with the Karnataka State Commission for Women after receiving rape threats online.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X