For Quick Alerts
  ALLOW NOTIFICATIONS  
  For Daily Alerts

  ಏನ್ ಅಚ್ಚರಿ ಗುರು: ಸೌತ್ ಸ್ಟಾರ್ ಗಳನ್ನ ಹಿಂದಿಕ್ಕಿದ ರಶ್ಮಿಕಾ ಮಂದಣ್ಣ.!

  |
  ಏನ್ ಅಚ್ಚರಿ ಗುರು: ಸೌತ್ ಸ್ಟಾರ್ ಗಳನ್ನ ಹಿಂದಿಕ್ಕಿದ ರಶ್ಮಿಕಾ ಮಂದಣ್ಣ.! |FILMIBEAT KANNADA

  ತೆಲುಗು ಮೆಗಾಸ್ಟಾರ್ ಚಿರಂಜೀವಿ ಈ ವರ್ಷ ಗೂಗಲ್ ನಲ್ಲಿ ಅತಿ ಹೆಚ್ಚು ಸರ್ಚ್ ಆದ ಸೌತ್ ಸ್ಟಾರ್ ಆಗಿದ್ದಾರೆ. ಈ ವರ್ಷ ಚಿರು ಅಭಿನಯದ ಯಾವ ಸಿನಿಮಾನೂ ಬಿಡುಗಡೆಯಾಗಿಲ್ಲ. ಖೈದಿ ನಂ 150 ಸಿನಿಮಾ ಕಳೆದ ವರ್ಷ ರಿಲೀಸ್ ಆಗಿತ್ತು. ಈ ವರ್ಷ ಸೈರಾ ನರಸಿಂಹ ರೆಡ್ಡಿ ಚಿತ್ರದಲ್ಲಿ ಮೆಗಾಸ್ಟಾರ್ ನಟಿಸುತ್ತಿದ್ದಾರೆ.

  ಅಚ್ಚರಿ ಏನಪ್ಪಾ ಅಂದ್ರೆ, ಗೂಗಲ್ ನಲ್ಲಿ ಅತಿ ಹೆಚ್ಚು ಸರ್ಚ್ ಆದ ಸೌತ್ ಸ್ಟಾರ್ ಗಳಲ್ಲಿ ಖ್ಯಾತ ನಟರನ್ನ ಹಿಂದಿಕ್ಕಿ ರಶ್ಮಿಕಾ ಮಂದಣ್ಣ ಟಾಪ್ ಐದರಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ.

  ಭಾರತದಲ್ಲಿ ಈ ವರ್ಷ ಅತಿ ಹೆಚ್ಚು ಹುಡುಕಲ್ಪಟ್ಟ 'ಸ್ಟಾರ್' ಯಾರು ಗೊತ್ತಾ?

  ಕನ್ನಡದ ಯಾವ ನಟರು ಈ ಪಟ್ಟಿಯಲ್ಲಿಲ್ಲ. ತಮಿಳಿನ ಸ್ಟಾರ್ ನಟರು ಕೂಡ ಕಾಣಿಸಿದ್ದು ಕಡಿಮೆ. ಆದ್ರೆ, ತೆಲುಗು ನಟರೇ ಹೆಚ್ಚು ಇರುವ ಟಾಪ್ ಹತ್ತರಲ್ಲಿ ಸ್ಥಾನ ಪಡೆದಿರುವ ಏಕೈಕ ಕನ್ನಡ ನಟಿ ರಶ್ಮಿಕಾ. ಹಾಗಿದ್ರೆ, ರಶ್ಮಿಕಾ ಎಷ್ಟನೇ ಸ್ಥಾನದಲ್ಲಿದ್ದಾರೆ. ಈ ವರ್ಷ ರಶ್ಮಿಕಾ ಯಾವ ವಿಷ್ಯದಲ್ಲಿ ಹೆಚ್ಚು ಸುದ್ದಿಯಾಗಿದ್ದರು. ಮುಂದೆ ಓದಿ..

  ಐದನೇ ಸ್ಥಾನದಲ್ಲಿ ರಶ್ಮಿಕಾ.!

  ಐದನೇ ಸ್ಥಾನದಲ್ಲಿ ರಶ್ಮಿಕಾ.!

  ಈ ವರ್ಷ ಗೂಗಲ್ ನಲ್ಲಿ ಸರ್ಚ್ ಆದ ಸೌತ್ ಸ್ಟಾರ್ ಗಳ ಪೈಕಿ ಚಿರಂಜೀವಿ ಮೊದಲ ಸ್ಥಾನದಲ್ಲಿದ್ದರೇ, ನಾನಿ, ಬಾಲಕೃಷ್ಣ, ವಿಜಯ್ ದೇವರಕೊಂಡ ಕ್ರಮವಾಗಿ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ಐದನೇ ಸ್ಥಾನದಲ್ಲಿ ರಶ್ಮಿಕಾ ಕಾಣಿಸಿಕೊಂಡಿದ್ದು, ಟಾಪ್ ಹತ್ತರಲ್ಲಿ ಇರುವ ಏಕೈಕ ಕನ್ನಡ ನಟಿ. ರಶ್ಮಿಕಾ ನಂತರ ಅನಸೂಯ ಭಾರಧ್ವಜ್, ಪ್ರಕಾಶ್ ರಾಜ್, ಮೋಹನ್ ಬಾಬು, ಜಗಪತಿ ಬಾಬು ನಾಗ ಶೌರ್ಯ ಕಾಣಿಸಿಕೊಂಡಿದ್ದಾರೆ.

  ಈ ವರ್ಷ ಗೂಗಲ್ ನಲ್ಲಿ ಅತಿ ಹೆಚ್ಚು ಹುಡುಕಲ್ಪಟ್ಟ ಟಾಪ್-10 ಚಿತ್ರಗಳು

  'ಗೀತಾ ಗೋವಿಂದಂ' ಸಿನಿಮಾ

  'ಗೀತಾ ಗೋವಿಂದಂ' ಸಿನಿಮಾ

  ಅಂದ್ಹಾಗೆ, ರಶ್ಮಿಕಾ ಮಂದಣ್ಣ ಈ ವರ್ಷ ಹೆಚ್ಚು ಸುದ್ದಿ ಮಾಡಿದ್ದೇ ಗೀತಾ ಗೋವಿಂದ ಸಿನಿಮಾ ಮೂಲಕ. ಈ ಚಿತ್ರದಲ್ಲಿ ವಿಜಯ್ ದೇವರಕೊಂಡ ನಾಯಕಿಯಾಗಿ ಅಭಿನಯಿಸಿದ್ದ ರಶ್ಮಿಕಾ, ಟ್ರೈಲರ್ ಮತ್ತು 'ಇಂಕೇಮ್ ಇಂಕೇಮ್ ಕಾವಲಿ' ಹಾಡಿನ ಮೂಲಕ ಸಖತ್ ಸೌಂಡ್ ಮಾಡಿದ್ದರು.

  ಪಾಕಿಸ್ತಾನದಲ್ಲಿ ಈ ವರ್ಷ ಅತಿ ಹೆಚ್ಚು ಸದ್ದು ಮಾಡಿದ ಭಾರತೀಯ ಚಿತ್ರ ಯಾವುದು?

  ಲಿಪ್ ಲಾಕ್ ಸೀನ್ ಲೀಕ್

  ಲಿಪ್ ಲಾಕ್ ಸೀನ್ ಲೀಕ್

  ಇದೇ ಚಿತ್ರದ ಕ್ಲೈಮ್ಯಾಕ್ಸ್ ನಲ್ಲಿ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ನಡುವೆ ಲಿಕ್ ಲಾಕ್ ಸೀನ್ ಇದೆ. ಈ ದೃಶ್ಯ ಸಿನಿಮಾ ಬಿಡುಗಡೆಗೂ ಮುಂಚೆಯೇ ಲೀಕ್ ಆಗಿತ್ತು. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿತ್ತು. ಬಹುಶಃ ಗೀತಾ ಗೋವಿಂದಂ ಚಿತ್ರಕ್ಕಿಂತ ಈ ಲೀಕ್ ವಿಡಿಯೋವೇ ಹೆಚ್ಚು ಸದ್ದು ಮಾಡಿತ್ತು.

  2018 ರೌಂಡಪ್: ಗಾಂಧಿನಗರದಲ್ಲಿ ಈ ವರ್ಷ ಕೋಲಾಹಲ ಸೃಷ್ಟಿಸಿದ ವಿವಾದಗಳಿವು.!

  ನಿಶ್ಚಿತಾರ್ಥ ಬ್ರೇಕ್ ಅಪ್

  ನಿಶ್ಚಿತಾರ್ಥ ಬ್ರೇಕ್ ಅಪ್

  ರಶ್ಮಿಕಾ ಮಂದಣ್ಣ ಮತ್ತು ರಕ್ಷಿತ್ ಶೆಟ್ಟಿ ನಿಶ್ಚಿತಾರ್ಥ ಆಗಿತ್ತು. ಮದುವೆಗೆ ಎಲ್ಲ ಸಿದ್ದತೆ ನಡೆದಿತ್ತು. ಆದ್ರೆ, ಮಧ್ಯದಲ್ಲೇ ರಕ್ಷಿತ್ ಮತ್ತು ರಶ್ಮಿಕಾ ನಿಶ್ಚಿತಾರ್ಥ ಮುರಿದುಬಿತ್ತು. ಇದರಿಂದ ರಶ್ಮಿಕಾ ಮಂದಣ್ಣ ದಕ್ಷಿಣ ಭಾರತದಲ್ಲಿ ಹೆಚ್ಚು ಸುದ್ದಿಯಾದರು.

  2018 ರಿವೈಂಡ್: ಪರಭಾಷಾ ಅಂಗಳದ ಗದ್ದಲದ ಗಲ್ಲಿಯಲ್ಲಿ ಒಂದು ಸುತ್ತು.!

  ರಶ್ಮಿಕಾ ಅಭಿನಯಿಸಿದ ಸಿನಿಮಾಗಳು

  ರಶ್ಮಿಕಾ ಅಭಿನಯಿಸಿದ ಸಿನಿಮಾಗಳು

  'ಗೀತಾ ಗೋವಿಂದಂ' ಚಿತ್ರದ ನಂತರ ನಾಗಾರ್ಜುನ, ನಾನಿ ಅಭಿನಯಿಸಿದ್ದ ದೇವದಾಸ್ ಸಿನಿಮಾದಲ್ಲಿ ರಶ್ಮಿಕಾ ನಾಯಕಿಯಾಗಿ ಅಭಿನಯಿಸಿದ್ದರು. ಈ ಕಡೆ ಕನ್ನಡದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಜೊತೆ ಯಜಮಾನ ಸಿನಿಮಾ ಮಾಡಿದರು. ಈಗ ಧ್ರುವ ಸರ್ಜಾ ಜೊತೆ ಪೊಗರು ಮಾಡ್ತಿದ್ದಾರೆ.

  English summary
  Telugu film industry’s mega star Chiranjeevi was the top trending South Indian actor on Google for 2018. rashmika mandanna is fifth place

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X