For Quick Alerts
  ALLOW NOTIFICATIONS  
  For Daily Alerts

  ಮಾಧ್ಯಮದವರು ಕೇಳಿದ್ರಲ್ಲಿ ತಪ್ಪೇನಿದೆ: ರಕ್ಷಿತಾ ನೀಡಿದ ಸ್ಪಷ್ಟನೆ ಏನ್ ಹೇಳ್ತಿದೆ?

  |

  ನಿರ್ದೇಶಕ ಪ್ರೇಮ್ ನಿರ್ದೇಶನ ಮಾಡಲಿರುವ ಆರು ಜನ ಚಿತ್ರದ ಬಗ್ಗೆ ಪ್ರಶ್ನಿಸಿದ್ದಕ್ಕೆ ''ಸ್ಟುಪಿಡ್ ಥರ ಪ್ರಶ್ನೆಗಳನ್ನ ಕೇಳಬೇಡಿ'' ಎಂದು ಕೋಪ ಮಾಡ್ಕೊಂಡು ಹೋಗಿದ್ದರು. ಹೇಳಿಕೆಯನ್ನ ಕೆಲವು ಮಾಧ್ಯಮಗಳು ಹಾಗೂ ಸೋಶಿಯಲ್ ಮಿಡಿಯಾದ ಜನ ಖಂಡಿಸಿದ್ದರು. ಇದೀಗ, ಈ ಬಗ್ಗೆ ರಕ್ಷಿತಾ ಸ್ಪಷ್ಟನೆ ಕೂಡ ನೀಡಿದ್ದಾರೆ.

  ಸ್ಪಷ್ಟನೆ ಏನು ಅಂತ ಮುಂದಿನ ಸ್ಲೈಡ್ ಗಳಲ್ಲಿ ನೋಡಿ. ಅದಕ್ಕೂ ಮುಂಚೆ ಮಾಧ್ಯಮಗಳು ರಕ್ಷಿತಾ ಬೇಜಾರಾಗೋ ಅಂತಹ ಪ್ರಶ್ನೆ ಏನಾದರೂ ಕೇಳ್ಬಿಟ್ರಾ ಅಂತ ನೋಡಿದ್ರೆ, ಅಂತಹದೇನು ಇಲ್ಲ. ಆದ್ರೂ ಕ್ರೇಜಿ ಕ್ವೀನ್ ಸ್ವಲ್ಪ ಟೆಂಕ್ಷನ್ ಆದ್ರು.

  ಪ್ರೇಮ್ ಮಾಡ್ತೀನಿ ಹೇಳಿರುವ ಆರು ಜನರ ಸಿನಿಮಾಗೆ ರಕ್ಷಿತಾ ಸಹಾಯ ಮಾಡ್ತಿದ್ದೀರಾ? ನೀವೇನಾದ್ರೂ ಈ ಪ್ರಾಜೆಕ್ಟ್ ನಲ್ಲಿ ತೊಡಗಿಕೊಳ್ತೀರಾ ಎಂದು ಕೇಳಲಾಗಿದೆ. ಹಾಗ್ನೋಡಿದ್ರೆ, ಪ್ರೇಮ್ ಸಿನಿಮಾಗಳ ಬಗ್ಗೆ ನಿರ್ಮಾಪಕಿ ಹಾಗೂ ಪ್ರೇಮ್ ಪತ್ನಿಯಾಗಿರುವ ರಕ್ಷಿತಾಗೆ ಈ ಪ್ರಶ್ನೆ ಕೇಳಿದ್ರಲ್ಲಿ ತಪ್ಪೇನಿದೆ? ಇದಕ್ಕೆ ಕ್ರೇಜಿ ನಟಿ ಕೋಪ ಮಾಡಿಕೊಳ್ಳುವ ಅವಶ್ಯಕತೆ ಏನಿದೆ ಎಂದು ಈಗ ಪ್ರಶ್ನೆ? ಆದ್ರೂ, ರಕ್ಷಿತಾ ಅವರು ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ಮುಂದೆ ಓದಿ....

  ನನ್ನನ್ನು ಬೆಳಸಿದ ಎಲ್ಲರನ್ನ ಗೌರವಿಸುತ್ತೇನೆ

  ನನ್ನನ್ನು ಬೆಳಸಿದ ಎಲ್ಲರನ್ನ ಗೌರವಿಸುತ್ತೇನೆ

  ''ಮಾಧ್ಯಮಗಳ ವಿರುದ್ಧ ಮಾತನಾಡಿದ್ದಕ್ಕೆ ನನ್ನ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಕಾಮೆಂಟ್ ಮಾಡಿ ಅದಕ್ಕೆ ನನ್ನನ್ನು ಟ್ಯಾಗ್ ಮಾಡ್ತಿದ್ದಾರೆ. ಆದ್ರೆ ನನ್ನನ್ನು ಬೆಳೆಸಿದ್ದು ಕರ್ನಾಟಕದ ಜನರು ಹಾಗೂ ಜವಬ್ದಾರಿಯುತ ಹಿರಿಯ ಪತ್ರಕರ್ತರು ಹಾಗೂ ಮಾಧ್ಯಮಗಳು. ಇವರೆಲ್ಲರನ್ನು ನಾನು ಸದಾ ಗೌರವಿಸುತ್ತೇನೆ. ನನ್ನ ಸ್ನೇಹಿತರಲ್ಲಿ ಬಹಳಷ್ಟು ಜನ ಪತ್ರಕರ್ತರಿದ್ದಾರೆ. ಅವರು ನನ್ನ ಕುಟುಂಬದವರಂತೆ ಹಾಗೂ ತನ್ನ ಆತ್ಮೀಯರು ಕೂಡ. ಅವರು ನನ್ನ ಆಲೋಚನೆಯನ್ನು ಹಾಗೂ ವ್ಯಕ್ತಿತ್ವವನ್ನು ಎಂದಿಗೂ ಗೌರವಿಸಿದ್ದಾರೆ''

  ಕಾಲೆಳೆದ್ರಾ? ಇಲ್ಲ ರೇಗಿಸಿದ್ರಾ? 'ಸೀಕ್ರೆಟ್ ಅಫೇರ್' ಬಗ್ಗೆ ರಕ್ಷಿತಾ ಹೀಗ್ಯಾಕಂದ್ರು?

  ನಮ್ಮ ಕೆಲಸಗಳ ಬಗ್ಗೆ ಲೇವಡಿ.!

  ನಮ್ಮ ಕೆಲಸಗಳ ಬಗ್ಗೆ ಲೇವಡಿ.!

  ''ಆದ್ರೆ ಯಾವಾಗ ಜನರು ನನ್ನ ಹಾಗೂ ಪ್ರೇಮ್ ಅವರ ಕೆಲಸಗಳ ಮೇಲೆ ಲೇವಡಿ ಮಾಡಿ ಪ್ರಶ್ನಿಸಿದಾಗ ನಮ್ಮ ಭಾವನೆಗಳಿಗೆ ನೋವಾಗಿದೆ. ವೈಯಕ್ತಿಕವಾಗಿ ಇದನ್ನೆಲ್ಲ ಯಾಕೆ ನಾನು ಸಹಿಕೊಳ್ಳಬೇಕು? ನಾನು ತುಂಬಾ ಮೃದು ಸ್ವಭಾವದವಳು. ನಾನು ಎಂದಿಗೂ ಯಾರನ್ನೂ ನೋಯಿಸಲು ಇಷ್ಟಪಡಲ್ಲ. ನಾನು ಪ್ರತಿಯೊಬ್ಬ ಪ್ರಜೆಯನ್ನೂ ಗೌರವಿಸುತ್ತೆನೆ. ಕೆಲವೊಮ್ಮೆ ಮನುಷ್ಯನಾಗಿ ಮನುಷ್ಯತ್ವವನ್ನು ತಿಳಿಯುವುದು ಬಹಳ ಮುಖ್ಯ''

  ರಕ್ಷಿತಾ ಪ್ರೇಮ್ ಕಾತರದಿಂದ ಕಾಯುತ್ತಿರುವುದು 'ಈ' ಕ್ಷಣಕ್ಕೋಸ್ಕರ.!

  ನನ್ನ ಜೊತೆಗಿದ್ದ ಎಲ್ಲರಿಗೂ ಧನ್ಯವಾದ

  ''ಯಾವುದೇ ಮಾಧ್ಯಮಗಳಾದ್ರೂ ಸರಿ ನನ್ನ ಜೀವನದಲ್ಲಿ ವಿಶೇಷ ಸ್ಥಾನ ಪಡೆದಿದೆ. ನನ್ನೊಂದಿಗೆ ಸದಾ ಇದೆ. ನಾನು ಮಾಧ್ಯಮಗಳನ್ನು ಗೌರವಿಸುತ್ತೇನೆ, ಅವರು ಕೂಡ ನನ್ನನ್ನು ಗೌರವಿಸುತ್ತಾರೆ. ನನ್ನ ಭಾವನೆಗಳನ್ನು ಅರ್ಥಮಾಡಿಕೊಂಡು ನನಗೆ ಸಾಥ್ ನೀಡಿದ್ದಕ್ಕೆ ಸಮಸ್ತ ಕರ್ನಾಟಕ ಜನತೆಗೆ ಪ್ರೀತಿಯಿಂದ ಧನ್ಯವಾದಗಳು'' ಎಂದು ತಮ್ಮ ಫೇಸ್‍ಬುಕ್ ಖಾತೆಯಲ್ಲಿ ರಕ್ಷಿತಾ ಅವರು ಬರೆದುಕೊಂಡಿದ್ದಾರೆ.

  ದಿ ವಿಲನ್ ಸಿನಿಮಾದ ಟ್ರೋಲ್ ಎಲ್ಲದಕ್ಕೂ ಕಾರಣ

  ದಿ ವಿಲನ್ ಸಿನಿಮಾದ ಟ್ರೋಲ್ ಎಲ್ಲದಕ್ಕೂ ಕಾರಣ

  'ದಿ ವಿಲನ್' ಸಿನಿಮಾದ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ, ಅದರಲ್ಲೂ ಕೆಲವು ಟ್ರೋಲ್ ಪೇಜ್ ಗಳು ನೆಗಿಟೀವ್ ಕಾಮೆಂಟ್ ಮಾಡಿದ್ದರು. ಸಿನಿಮಾ ಚೆನ್ನಾಗಿಲ್ಲ ಎಂಬ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದರು. ಅದು ಎಷ್ಟರ ಮಟ್ಟಿಗೆ ಅಂದ್ರೆ ಪ್ರೇಮ್ ಮತ್ತು ರಕ್ಷಿತಾ ಅವರ ಮೇಲೆ ಪರ್ಸನಲ್ ಅಟ್ಯಾಕ್ ಮಾಡುವಷ್ಟು ಹೇಳಿಕೆಗಳು ಬರ್ತಿದ್ದವು. ಇದರಿಂದ ಸಹಜವಾಗಿ ಬೇಜರಾಗಿದ್ದ ಪ್ರೇಮ್ ದಂಪತಿ ಪೊಲೀಸ್ ದೂರು ನೀಡಿದ್ದರು. ಇದಾದ ಬಳಿಕ ಪ್ರೇಮ್ ಆರು ಜನರ ಹೀರೋಗಳ ಜೊತೆ ದೊಡ್ಡ ಸಿನಿಮಾ ಮಾಡೋ ಪ್ಲಾನ್ ಇದೆ ಎಂದು ಹೇಳಿಕೊಂಡಿದ್ದರು. ವಿಲನ್ ಸಿನಿಮಾ ಇಷ್ಟಪಡದ ಜನರು ಈ ಚಿತ್ರಕ್ಕೆ ಆರಂಭದಲ್ಲೇ ಕಾಲೆಳೆಯಲು ಶುರು ಮಾಡಿದ್ದಾರೆ. ಆದ್ರೆ, ಸಿನಿಮಾ ಬಗ್ಗೆ ಪ್ರಶ್ನಿಸಿದ ಮಾಧ್ಯಮಗಳ ಬಳಿ ರಕ್ಷಿತಾ ಸಹಜವಾಗಿ ಮಾತನಾಡಬಹುದಿತ್ತು ಎಂಬುದು ಕೆಲವರ ಅಭಿಪ್ರಾಯ.

  English summary
  Kannada actress raskhitha prem taken her facebook account and clarified her statement about media.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X