ಹೊಸ ಥ್ರಿಲ್ಲರ್ ಚಿತ್ರದಲ್ಲಿ ರವಿಚಂದ್ರನ್ ನಟನೆ.!
ಕ್ರೇಜಿಸ್ಟಾರ್ ರವಿಚಂದ್ರನ್ ತಾವೇ ನಿರ್ದೇಶನ ಮಾಡಿ, ನಟಿಸುತ್ತಿರುವ 'ರಾಜೇಂದ್ರ ಪೊನ್ನಪ್ಪ' ಚಿತ್ರದಲ್ಲಿ ಬ್ಯುಸಿಯಿದ್ದಾರೆ. ಇದೀಗ, ಮತ್ತೊಂದು ಹೊಸ ಸಿನಿಮಾವನ್ನ ಕೈಗೆತ್ತಿಕೊಳ್ಳುತ್ತಿದ್ದು, ಇದು ಥ್ರಿಲ್ಲರ್ ಕಥೆಯಾಗಿರುವುದು ವಿಶೇಷ. .
ಈ ಹಿಂದೆ 'ಜಿಗರ್ ಥಂಡಾ' ಚಿತ್ರದ ಮೂಲಕ ನಿರ್ದೇಶಕರಾದ ಶಿವಗಣೇಶ್ ಎರಡನೇ ಸಿನಿಮಾ ಆರಂಭಿಸಿದ್ದು, ಈ ಚಿತ್ರದಲ್ಲಿ ಕ್ರೇಜಿಸ್ಟಾರ್ ನಟಿಸಲಿದ್ದಾರೆ.
ಈ ಚಿತ್ರವನ್ನ ಕನ್ನಡದ ಖ್ಯಾತ ನಿರ್ಮಾಪಕ ಕೆ ಮಂಜು ನಿರ್ಮಾಣ ಮಾಡುತ್ತಿದ್ದಾರೆ. ಈಗಾಗಲೇ ಕೆ ಮಂಜು ಮಗ ನಟಿಸುತ್ತಿರುವ 'ಪಡ್ಡೆಹುಲಿ' ಚಿತ್ರದಲ್ಲಿ ರವಿಮಾಮಾ ಅಭಿನಯಿಸುತ್ತಿದ್ದಾರೆ. ಅದ್ರ ಜೊತೆ ಮಂಜು ನಿರ್ಮಾಣದಲ್ಲಿ ಸೆಟ್ಟೇರಲಿರುವ ಚಿತ್ರದಲ್ಲೂ ಕ್ರೇಜಿಸ್ಟಾರ್ ಬಣ್ಣ ಹಚ್ಚುತ್ತಿದ್ದಾರೆ.

2016ರಲ್ಲಿ ಬಿಡುಗಡಯಾಗಿದ್ದ ತಮಿಳಿನ 'ಡಿ-16' ಚಿತ್ರದ ಕಥಾವಸ್ತು ಚೆನ್ನಾಗಿದ್ದು ಇದರಿಂದ ಸ್ಫೂರ್ತಿ ಪಡೆದು ತಮ್ಮ ಎರಡನೇ ಚಿತ್ರವನ್ನು ನಿರ್ದೇಶನ ಮಾಡುತ್ತಿರುವುದಾಗಿ ನಿರ್ದೇಶಕ ಶಿವ ಗಣೇಶ್ ಹೇಳಿದ್ದಾರೆ. ಇದೊಂದು ಥ್ರಿಲ್ಲರ್ ಚಿತ್ರವಾಗಿದ್ದು ಇದಕ್ಕೆ ರವಿಚಂದ್ರನ್ ಅವರು ಹೊಂದುತ್ತಾರೆ ಎಂಬುದು ಅವರ ನಂಬಿಕೆ. ಎಲ್ಲ ಅಂದುಕೊಂಡಂತೆ ಆದ್ರೆ, ಜುಲೈ ತಿಂಗಳಲ್ಲಿ ಈ ಸಿನಿಮಾ ಶುರುವಾಗಲಿದೆ.
ಇನ್ನುಳಿದಂತೆ ಮುನಿರತ್ನ ನಿರ್ಮಾಣದ 'ಕುರುಕ್ಷೇತ್ರ' ಚಿತ್ರದಲ್ಲಿ ರವಿ
ಚಂದ್ರನ್ ಕೃಷ್ಣನ ಪಾತ್ರವನ್ನ ನಿಭಾಯಿಸಿದ್ದಾರೆ. ಇದರ ಜೊತೆ ಮತ್ತೆರಡು ಹೊಸ ಪ್ರಾಜೆಕ್ಟ್ ಗಳು ಕೂಡ ರವಿಚಂದ್ರನ್ ಬಳಿ ಇದೆ.


Click it and Unblock the Notifications











