»   » ಕ್ರೇಜಿ ಸ್ಟಾರ್ ರವಿಚಂದ್ರನ್ ಗೆ ಬೇಸರವಾಗಿದೆ.! ಅಸಲಿ ಕಾರಣ ಇಲ್ಲಿದೆ.!

ಕ್ರೇಜಿ ಸ್ಟಾರ್ ರವಿಚಂದ್ರನ್ ಗೆ ಬೇಸರವಾಗಿದೆ.! ಅಸಲಿ ಕಾರಣ ಇಲ್ಲಿದೆ.!

Posted By:
Subscribe to Filmibeat Kannada

''ನನ್ನ ಹೆಗಲ ಮೇಲೆ ಯಾರೂ ಕೈ ಹಾಕ್ಲಿಲ್ಲವಲ್ಲಾ ಅನ್ನೋ ಬೇಜಾರಿದೆ. ನಾನು ಎಫರ್ಟ್ ಹಾಕಿಲ್ವಾ? ನಿಮ್ಮ ತಾಯಿ ಬೇಕಂತಾನೇ ನಿಮಗೆ ಅಡುಗೆಯನ್ನ ಕೆಟ್ಟದ್ದಾಗಿ ಮಾಡ್ತಾರಾ? ದುಡ್ಡಿನ ಉದ್ದೇಶ ಇಲ್ಲದೆ ನಾನು ಎರಡು ವರ್ಷ ಸಮಯ ತೆಗೆದುಕೊಂಡು 'ಅಪೂರ್ವ' ಮಾಡಿದ್ದು.''

''ದುಡ್ಡು ಮಾಡಬೇಕಾದರೆ ಬೇರೆ ಸಿನಿಮಾ ಮಾಡ್ತಾ ಇದ್ದೆ. ನಾಲ್ಕು ಕಾಮಿಡಿ ಸೀನ್ ಹಾಕುವುದು ಕಷ್ಟ ಅಲ್ಲ. ಹೀರೋಯಿನ್ ಗೆ ಸ್ವಿಮ್ ಸೂಟ್ ಹಾಕಿಸಿ ಸಿನಿಮಾ ತೆಗೆಯೋದು ಕಷ್ಟ ಅಲ್ಲ.''


- ಹೀಗಂತ ಪತ್ರಿಕಾ ಹಾಗೂ ಮಾಧ್ಯಮ ಮಿತ್ರರ ಮುಂದೆ 'ಅಪೂರ್ವ' ಚಿತ್ರದ ಸೋಲಿನ ಬಗ್ಗೆ ಮಾತಿಗಿಳಿದವರು ಕ್ರೇಜಿ ಸ್ಟಾರ್ ರವಿಚಂದ್ರನ್. [ವಿಮರ್ಶೆ: 'ಅಪೂರ್ವ' ಸುಂದರಿ, 'ಅಪೂರ್ಣ' ಮಾದರಿ]


'ಅಪೂರ್ವ' ಸಿನಿಮಾ ಬಿಡುಗಡೆ ಆದ್ಮೇಲೆ ಪತ್ರಿಕಾ ಮಿತ್ರರಿಗೆ ರವಿಚಂದ್ರನ್ ಸಿಕ್ಕಿರಲಿಲ್ಲ. ಹೀಗಿರುವಾಗಲೇ, ಮೊನ್ನೆಯಷ್ಟೇ ಕಲರ್ಸ್ ಕನ್ನಡ ವಾಹಿನಿಯ 'ಡ್ಯಾನ್ಸಿಂಗ್ ಸ್ಟಾರ್ - 3' ಪತ್ರಿಕಾಗೋಷ್ಟಿ ನಡೆಯಿತು. ಅಂದು ರವಿಚಂದ್ರನ್ ಮಾತಿಗೆ ಸಿಕ್ಕಿದ್ರು. ['ಡ್ಯಾನ್ಸಿಂಗ್ ಸ್ಟಾರ್' ಮಗದೊಮ್ಮೆ ಶುರು: ಈ ಬಾರಿ ಸ್ಪರ್ಧಿಗಳು ಯಾರು?]


'ಅಪೂರ್ವ' ಸೋಲಿನ ಬಗ್ಗೆ ರವಿಚಂದ್ರನ್ ಬಿಚ್ಚಿಟ್ಟಿರುವ ಮನದಾಳ ಯಥಾವತ್ತಾಗಿ ನಿಮ್ಮ ಮುಂದೆ ಇಡ್ತಿದ್ದೀವಿ. ಎಲ್ಲವನ್ನ ಅವರು ಮಾತುಗಳಲ್ಲೇ ಓದಿರಿ, ಕೆಳಗಿರುವ ಫೋಟೋ ಸ್ಲೈಡ್ ಗಳಲ್ಲಿ.....


ನನಗೆ ಬೇಜಾರಿದೆ.!

''ಇವತ್ತು ಜನ ಸಿನಿಮಾ ನೋಡಿದರೆ, ರವಿಚಂದ್ರನ್ ಹೊಕ್ಕಳ ಮೇಲೆ ದ್ರಾಕ್ಷಿ ಹಾಕಿದ್ರು, ಅದು ಹಾಕಿದ್ರು ಅಂತಾರೆ. ಬೇರೆ ಮಾಡಿದಾಗ ಏನೇಳ್ತಾರೆ? ಅದನ್ನು ಮಾಡಲಿಲ್ಲ ಅಂತಾರೆ. ನಂಗೆ ಅದು ಮುಖ್ಯ ಅಲ್ಲ. ನಾನು ಅದನ್ನೂ ಮಾಡ್ತೀನಿ, ಇದನ್ನೂ ಮಾಡ್ತೀನಿ. ನಾನು 'ಅಪೂರ್ವ' ಹೀಗೆ ಇರಬೇಕು, ಬರಬೇಕು ಅಂದುಕೊಂಡು ಮಾಡಿದವನು. ನನಗೆ ಕೋಪ ಇಲ್ಲ. ಆದ್ರೆ, ನನ್ನ ಹೆಗಲ ಮೇಲೆ ಯಾರೂ ಕೈ ಹಾಕಲಿಲ್ಲವಲ್ಲಾ ಅನ್ನೋ ಬೇಜಾರಿದೆ'' - ವಿ.ರವಿಚಂದ್ರನ್ [ಹೆದರಿಕೊಂಡೇ 'ಅಪೂರ್ವ' ನೋಡಿದವರು ಬರೆದಿರುವ ಅಪರೂಪದ ಪತ್ರ.!]


ಹೀರೋ ಅಂದುಕೊಂಡು ಸಿನಿಮಾ ಮಾಡಿದವನಲ್ಲ.!

''ನಾನು ಯಾವತ್ತೂ ಹೀರೋ ಅಂದುಕೊಂಡು ಸಿನಿಮಾ ಮಾಡಿದವನಲ್ಲ. ನಾನು ಶಿಳ್ಳೆಗೆ ಸಿನಿಮಾ ಮಾಡಿದವನಲ್ಲ. ಆದರೆ ಅದು ಇಲ್ಲಿ ಬೆಳೆದುಬಿಟ್ಟಿದೆ. ಇಲ್ಲಿ ಫಿಲಾಸಫಿ ಮಾತಾಡಿದ್ರೆ ಇಷ್ಟಪಡ್ತಾರೆ. ಅದೇ ಥಿಯೇಟರ್ ನಲ್ಲಿ ಇಷ್ಟಪಡಲ್ಲ.'' - ವಿ.ರವಿಚಂದ್ರನ್ [ರವಿಚಂದ್ರನ್ ಬಗ್ಗೆ ಕೊಂಕು ನುಡಿದವರಿಗೆ ಗುಂಡ್ ಪಿನ್ ಚುಚ್ಚಿದ ಯೋಗರಾಜ್ ಭಟ್]


ನನ್ನ ವಯಸ್ಸನ್ನ ಜನ ನಂಬುತ್ತಿಲ್ಲ!

''ಸಾಮಾನ್ಯವಾಗಿ ಎಲ್ಲರೂ ವಯಸ್ಸನ್ನು ಕಡಿಮೆ ಹೇಳಿ ಸಿನಿಮಾ ಮಾಡ್ತಾರೆ. ನಾನು ಜಾಸ್ತಿ ಹೇಳ್ಕೊಂಡು ಸಿನಿಮಾ ಮಾಡಿದ್ದೀನಿ. ಅಂಥದರಲ್ಲಿ ಜನ ನನ್ನ ಇರುವ ವಯಸ್ಸನ್ನೇ ನಂಬುತ್ತಿಲ್ಲ'' - ವಿ.ರವಿಚಂದ್ರನ್ [ರವಿಯನ್ನು ಕೆಣಕಿದ ರಾಘವ ದ್ವಾರ್ಕಿಗೆ ಅಭಿಮಾನಿಯ ಛಡಿಯೇಟು.!]


ಫಲ ಸಿಗ್ಲಿಲ್ಲ.!

''ನನಗೆ ಸಿನಿಮಾ ಮಾಡೋದು ಕಷ್ಟ ಅಲ್ಲ. ಎಲ್ಲಾ ಸಿನಿಮಾಗಳು ಕಮರ್ಷಿಯಲ್ ಆಗಿರಲ್ಲ. ಈ ಸಿನಿಮಾಗೆ ನಾನು ಯಾಕೆ 2 ವರ್ಷ ಟೈಮ್ ತಗೋಬೇಕಿತ್ತು.? ಒಂದುವರೆ ವರ್ಷ ಕಾಲ ಎಡಿಟಿಂಗ್ ಮಾಡ್ತಾ ಕೂರಬೇಕಿತ್ತು? ಇದಕ್ಕಿಂತ ಕಾಂಪ್ಲಿಕೇಟೆಡ್ ಸಿನಿಮಾ ಇಟ್ಟಿದ್ದೆ. ನಾನು 2 ಸಿನಿಮಾ ಮಾಡಿದ್ದೆ. ಇದೊಂದು, ಅದೊಂದು. ವಿಶ್ವಾಸ ಇತ್ತು. ಜನ ಇದನ್ನು ಸ್ವೀಕರಿಸ್ತಾರೆ ಅಂತ. ಪ್ರಯತ್ನ ಮಾಡಿದೆ ಫಲ ಸಿಗಲಿಲ್ಲ'' - ವಿ.ರವಿಚಂದ್ರನ್


ಎಫರ್ಟ್ ಮುಖ್ಯ!

''ನನಗೆ ಸಕ್ಸಸ್, ಫೇಲ್ಯೂರ್ ಮುಖ್ಯ ಅಲ್ಲ. ಎಫರ್ಟ್ ಮುಖ್ಯ. ಅದು 'ಅಪೂರ್ವ'ದಲ್ಲಿದೆ ಅಷ್ಟು ಸಾಕು'' - ವಿ.ರವಿಚಂದ್ರನ್


ಸ್ವಿಮ್ ಸೂಟ್ ಹಾಕಿಸ್ಬಹುದಿತ್ತು.!

''ಬ್ಯಾಂಕಲ್ಲಿ ದುಡ್ಡು ಇಡಲು ಸಿನಿಮಾ ಮಾಡಿದವನಲ್ಲ. ಬ್ಯಾಂಕಲ್ಲಿ ದುಡ್ಡು ಇಡೋಕೆ ಸಿನಿಮಾ ಮಾಡೋದಾಗಿದ್ರೆ, ಅದರಲ್ಲಿ ನಾಲ್ಕು ಕಾಮಿಡಿ ಸೀನ್ ಹಾಕುವುದು ಕಷ್ಟ ಅಲ್ಲ. ಹುಡುಗಿಗೆ ಸ್ವಿಮ್ ಸೂಟ್ ಹಾಕಿಸಿ ಸಿನಿಮಾ ತೆಗೆಯೋದು ಕಷ್ಟ ಅಲ್ಲ'' - ವಿ.ರವಿಚಂದ್ರನ್


ನ್ಯೂ ಫ್ಲೇವರ್ ಸಿನಿಮಾ ಅಂದಿದ್ದೆ!

''ನ್ಯೂ ಫ್ಲೇವರ್ ಸಿನಿಮಾ ಇದು ಅಂದಿದ್ದೆ. ಇದು ಕಮರ್ಶಿಯಲ್ ಸಿನಿಮಾ ಅಲ್ಲ. ದರ್ಶನ್, ಸುದೀಪ್ ಸಿನಿಮಾ ತರಹ ನಿರೀಕ್ಷಿಸಬೇಡಿ. ನಾನು ಹಾಗೆ ಮಾಡಿಲ್ಲ. ಬೇರೆ ಥರಾ ಸಿನಿಮಾ ಮಾಡೋಕೆ ಹೊರಟಿದ್ದೇನೆ. ನೀವು ಹಾಗೆ ನೋಡೋಕೆ ಟ್ರೈ ಮಾಡಿ ಅಂತ ಹೇಳಿದ್ದೆ'' - ವಿ.ರವಿಚಂದ್ರನ್


ಡಿ ಗ್ರೇಡ್ ಸಿನಿಮಾ ಮಾಡಿಲ್ಲ.!

''ಅಪೂರ್ವ'ದಲ್ಲಿ ನಾನು XXX ಅಂತ ಹಾಕಿದ್ದೆ. ಹಾಗಂದ್ರೆ, ಕಾಮನ್ ಆಗಿ ಅಂದುಕೊಳ್ಳುವುದೇ ಬೇರೆ. ಆದರೆ, ನಾನು ಅದು ಹಾಗಲ್ಲ ಅಂತ ಆರಂಭದಲ್ಲೇ ಸ್ಪಷ್ಟಪಡಿಸಿದ್ದೇನೆ. ಸೋ, ನಾವು ಅಂದುಕೊಳ್ಳೋದು ಒಂದು. ಆಗೋದು ಒಂದು. ಕೊನೆಗೆ ಎಲ್ಲಾ ಸೇರಿ ಮಾಡಿದ್ದು ಒಂದು. ತಪ್ಪೇನಿಲ್ಲ. ನನಗೆ 'ಅಪೂರ್ವ' ಬಗ್ಗೆ ಹೆಮ್ಮೆ ಇದೆ. ನಾನೇನು ಡಿ ಗ್ರೇಡ್ ಸಿನಿಮಾ ಮಾಡಿಲ್ಲ'' - ವಿ.ರವಿಚಂದ್ರನ್


English summary
Crazy Star V.Ravichandran has spoken about 'Apoorva' failure during Press interaction. Read the article to know Ravichandran's opinion.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada