»   » 'ಸ್ಯಾಂಡಲ್ ವುಡ್ ಕೃಷ್ಣ' ರವಿಮಾಮನಿಗೆ ಪ್ರೇಕ್ಷಕರು ಫಿದಾ

'ಸ್ಯಾಂಡಲ್ ವುಡ್ ಕೃಷ್ಣ' ರವಿಮಾಮನಿಗೆ ಪ್ರೇಕ್ಷಕರು ಫಿದಾ

Posted By:
Subscribe to Filmibeat Kannada

ಕನ್ನಡ ಸಿನಿಮಾರಂಗದಲ್ಲಿ ಕ್ರೇಜಿಸ್ಟಾರ್ ಆಗಿ ಇಷ್ಟು ವರ್ಷಗಳ ಕಾಲ ರಂಜಿಸಿರುವ ರವಿಚಂದ್ರನ್ ಮೊಟ್ಟ ಮೊದಲಬಾರಿಗೆ ಪೌರಾಣಿಕ ಚಿತ್ರದಲ್ಲಿ ಅಭಿನಯಿಸಿದ್ದಾರೆ. 'ಕುರುಕ್ಷೇತ್ರ'ದಲ್ಲಿ ಕೃಷ್ಣನ ಪಾತ್ರದಲ್ಲಿ ನಟಿಸಿರುವ ರವಿಮಾಮನ ಫಸ್ಟ್ ಲುಕ್ ರಿವಿಲ್ ಆಗಿದೆ.

ಕೃಷ್ಣನ ಲುಕ್ ನೋಡಿ ಇಡೀ ಚಿತ್ರರಂಗವೇ ಪಿದಾ ಆಗಿದೆ. ಯಾರು ಕೂಡ ಊಹಿಸಲಾಗದಂತೆ ರವಿಚಂದ್ರನ್ ಕಾಣಿಸಿಕೊಂಡಿದ್ದು ಕೃಷ್ಣನ ಲುಕ್ ನೋಡಿದವರೆಲ್ಲರೂ ಪರ್ಫೆಕ್ಟ್ ಆಗಿದೆ ಎಂದು ಹೊಗಳಿದ್ದಾರೆ.

ಸೂಷಿಯಲ್ ಮಿಡಿಯಾದಲ್ಲಿ ಕೃಷ್ಣನ ಅವತಾರ ವೈರಲ್ ಆಗಿದ್ದು ಪಾತ್ರಕ್ಕಾಗಿ ಸ್ಯಾಂಡಲ್ ವುಡ್ ನ ರಣಧೀರ ಎಷ್ಟರ ಮಟ್ಟಿಗೆ ತಯಾರಿ ಮಾಡಿಕೊಂಡಿದ್ದಾರೆ ಎನ್ನುವುದು ಫೋಟೋ ನೋಡಿದರೆ ತಿಳಿಯುತ್ತಿದೆ.

Ravichandran's kurukshetra Krishna Look viral

'ಕೃಷ್ಣ'ನಾಗಿ ಕ್ರೇಜಿ ಸ್ಟಾರ್ ರವಿಚಂದ್ರನ್ ಹೇಗೆ ಕಾಣ್ತಾರೆ ಅಂತ ನೀವೇ ನೋಡಿ...

ಚಿತ್ರರಂಗದಲ್ಲಿ ಎಲ್ಲಾ ರೀತಿಯ ಪಾತ್ರಗಳನ್ನ ನಿರ್ವಹಿಸಿರುವ ರವಿಚಂದ್ರನ್ ಇದೇ ಮೊದಲಬಾರಿಗೆ ಇಂತದೊಂದು ಪಾತ್ರವನ್ನ ಒಪ್ಪಿಕೊಂಡಿದ್ದಾರೆ. ಕೃಷ್ಣನ ಫಸ್ಟ್ ಲುಕ್ ಟ್ವಿಟ್ಟರ್ ನಲ್ಲಿ ಶೇರ್ ಮಾಡಿರುವ ರವಿಚಂದ್ರನ್ ಪುತ್ರ ಮನೋರಂಜನ್ "ಶ್ರೀ ಕೃಷ್ಣನ ಪಾತ್ರದಲ್ಲಿರುವ ನನ್ನ ತಂದೆ ದೇವರು" ಎಂದು ಬರೆದುಕೊಂಡಿದ್ದಾರೆ.

ರವಿಚಂದ್ರನ್ ಅವರ ಬಳಿ ಸಾಕಷ್ಟು ವರ್ಷ ಕೆಲಸ ಮಾಡಿರುವ ನಟ, ನಿರ್ದೇಶಕ ರಘುರಾಮ್ "ರಣಧೀರನಾಗಿಯೂ ಕೊಳಲು ,ರಸಿಕನಾಗಿಯೂ ಕೊಳಲು ,ಕೊಳಲಿಗೆ ರಾಯಭಾರಿ ಯಶೋದೆಯ ಮುರಾರಿ ,ಶ್ರೀ ಕೃಷ್ಣನ ಪಾತ್ರದಾರಿ ಕುರುಕ್ಷೇತ್ರದ ರೂವಾರಿ ನಮ್ಮ ಕನಸುಗಾರರೀ..ಕೃಷ್ಣ ಪರಮಾತ್ಮನ ಪಾತ್ರದಲ್ಲಿ ನಮ್ಮ ಕ್ರೇಜಿ ಸ್ಟಾರ್" ಎಂದು ಹೇಳಿದ್ದಾರೆ.

Ravichandran's kurukshetra Krishna Look viral

ದಿನದಿಂದ ದಿನಕ್ಕೆ ಹೊಸ ಹೊಸ ಕುತೂಹಲವನ್ನ ಹುಟ್ಟುಹಾಕುತ್ತಿರುವ 'ಕುರುಕ್ಷೇತ್ರ' ಸಿನಿಮಾ ಚಿತ್ರರಂಗದಲ್ಲಿ ಹೊಸ ಇತಿಹಾಸ ಬರೆಯುವುದು ಮತ್ತಷ್ಟು ಹೆಚ್ಚಾಗುತ್ತಿದೆ.

English summary
Kannada actor Ravichandran's kurukshetra movie first look was released, Ravichandran plays the role of Krishna. First Look has been viral at Social Media.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X