»   » ರಿಯಲ್ ಸ್ಟಾರ್ ಉಪ್ಪಿ2ಗೆ ಮತ್ತೆ ಒಗ್ಗರಣೆ ಹಾಕಿಲ್ಲ

ರಿಯಲ್ ಸ್ಟಾರ್ ಉಪ್ಪಿ2ಗೆ ಮತ್ತೆ ಒಗ್ಗರಣೆ ಹಾಕಿಲ್ಲ

Posted By: ಸೋನು ಗೌಡ
Subscribe to Filmibeat Kannada

ಸ್ಯಾಂಡಲ್ ವುಡ್ ಕ್ಷೇತ್ರದಲ್ಲಿ ರಿಯಲ್ ಸ್ಟಾರ್ ಉಪೇಂದ್ರ ಅವರ 'ಉಪ್ಪಿ 2' ಎಷ್ಟರಮಟ್ಟಿಗೆ ಹವಾ ಎಬ್ಬಿಸಿತ್ತು ಅನ್ನೋದು ನಿಮಗೆ ತಿಳಿದೇ ಇದೆ. ಇದೀಗ ಕೆಲವು ದಿನಗಳ ಹಿಂದೆ ಉಪೇಂದ್ರ ಅವರ 'ಉಪ್ಪಿ-ಟ್ಟು' ಬಗ್ಗೆ ಕೆಲವೊಂದು ಅಂತೆ-ಕಂತೆಗಳ ಸುದ್ದಿ ಹರಿದಾಡ್ತ ಇತ್ತು.

ಅದೇನಪ್ಪಾ ಅಂದ್ರೆ ರಿಯಲ್ ಸ್ಟಾರ್ ಅವರು ಉಲ್ಟಾ ಸರ್ಕಸ್ ಮಾಡುವುದರ ಜೊತೆಗೆ 'ನೋ ಎಕ್ಸ್ ಕ್ಯೂಸ್ ಮಿ' ಅಂತ ಎಲ್ಲರ ಕಾಲೆಳೆದು ಪ್ರೇಕ್ಷಕರಲ್ಲಿ ಭಾರಿ ಕುತೂಹಲ ಮೂಡಿಸಿ ಎಲ್ಲರು ಚಿತ್ರಮಂದಿರಕ್ಕೆ ನುಗ್ಗಿ ಬರುವಂತೆ ಮಾಡಿ ಸುದ್ದಿಯಾದ್ರು. ['ಉಪ್ಪಿಟ್ಟು' ರುಚಿಗೆ ಪಾಕಿಸ್ತಾನಿ ಕ್ಲೀನ್ ಬೌಲ್ಡ್ ಗುರು.!]


Real star Upendra's kannada Movie Uppi 2 reedited?

ಉಪೇಂದ್ರ ಅವರ ಹೋಮ್ ಬ್ಯಾನರ್ ಅಡಿಯಲ್ಲಿ ಮೂಡಿ ಬಂದಿದ್ದ 'ಉಪ್ಪಿ-2' ಚಿತ್ರದ ಬಗ್ಗೆ ಕೆಲವಾರು ಗಾಸಿಪ್ ಗಳು ಹರಿದಾಡುತ್ತಿದ್ದು, ಉಪ್ಪಿ ನಿರ್ದೇಶನದ ಚಿತ್ರ ಬಿಡುಗಡೆಯಾದ ನಂತರ ಈ ನಡುವೆ ಕೆಲವು ದಿನಗಳ ಹಿಂದೆ 15 ನಿಮಿಷಗಳಷ್ಟು ಹೆಚ್ಚಿನ ಸೀನ್ ಗಳನ್ನು ಚಿತ್ರಕ್ಕೆ ಸೇರಿಸಲಾಗಿದೆ ಎಂದು ಇಡೀ ಗಾಂಧಿನಗರದಲ್ಲಿ ಮಾತ್ರವಲ್ಲದೇ ಸಾಮಾಜಿಕ ಜಾಲತಾಣಗಳಲ್ಲೂ ಈ ಸುದ್ದಿ ಹರಿದಾಡುತ್ತಿತ್ತು.


ಇದೀಗ ಇದನ್ನು ಸಂಪೂರ್ಣವಾಗಿ ಅಲ್ಲಗಳೆದಿರುವ 'ಉಪ್ಪಿ-2' ಚಿತ್ರದ ಸಂಕಲನಕಾರ ಶ್ರೀ ಕ್ರೇಜಿ ಮಿಂಡ್ಝ್ ಅವರು ಇದು ಕೆಲವರ ಊಹೆ ಅಷ್ಟೆ. ಬದಲಾಗಿ ಚಿತ್ರತಂಡದವರು ಹೆಚ್ಚಿನದನ್ನು ಏನು ಸೇರಿಸುವ ಪ್ರಯತ್ನ ಮಾಡಲಿಲ್ಲ ಆದರೆ ಚಿತ್ರವನ್ನು ನೀಟಾಗಿ ಜೋಡಿಸುವ ಕೆಲಸ ಮಾಡುತ್ತಾರೆ ಬಿಟ್ಟರೆ ಹೆಚ್ಚಿನ ಸೀನ್ ಗಳನ್ನು ಸೇರಿಸಲು ಯಾರು ಹೋಗುವುದಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.['ಬಾಹುಬಲಿ' ಆಯ್ತು, 'ಉಪ್ಪಿಟು' ಗಣೇಶ ಉಲ್ಟಾ ನಿಂತ ನೋಡಿ..]


Real star Upendra's kannada Movie Uppi 2 reedited?

ಇನ್ನು ಕೆಲವು ಚಿತ್ರಗಳಲ್ಲಿ ಅನಿವಾರ್ಯ ಎಂದಾಗ ಮಾತ್ರ ಕೆಲವಾರು ಸೀನ್ ಗಳನ್ನು ಸೇರಿಸುತ್ತಾರೆ ಬಿಟ್ಟರೆ ಇನ್ನುಳಿದ ಸಂದರ್ಭಗಳಲ್ಲಿ ಸೇರಿಸುವುದು ಬಹಳ ವಿರಳ ಎಂದು ಅವರು ನುಡಿದಿದ್ದಾರೆ.['ಬಾಹುಬಲಿ'ಯನ್ನ ಕಟ್ಟಪ್ಪ ಯಾಕೆ ಕೊಂದ? ಉಪ್ಪಿ ಬಿಚ್ಚಿಟ್ಟ ರಹಸ್ಯ]


ಉದಾಹರಣೆಗೆ ಕ್ರೇಜಿಸ್ಟಾರ್ ರವಿಚಂದ್ರನ್ ಅವರ 'ಏಕಾಂಗಿ' ಚಿತ್ರಕ್ಕೆ ಬಿಡುಗಡೆಯಾದ ಮೂರು ದಿನಗಳ ನಂತರ ಕೆಲವೊಂದು ಸೀನ್ ಗಳನ್ನು ಸೇರಿಸಲಾಗಿತ್ತು. ಜೊತೆಗೆ ಡಾ.ರಾಜ್ ಕುಮಾರ್ ಅವರ 'ಬಿಡುಗಡೆ' ಚಿತ್ರದ ಕ್ಲೈಮ್ಯಾಕ್ಸ್ ನ್ನು ಅಭಿಮಾನಿಗಳ ಒತ್ತಾಯದ ಮೇರೆಗೆ ಬದಲಾಯಿಸಲಾಗಿತ್ತು. ಆದರೆ ಇಂತಹ ಬದಲಾವಣೆ ಬಹಳ ವಿರಳ ಎಂದು 'ಉಪ್ಪಿ 2' ಚಿತ್ರದ ಸಂಕಲನಕಾರ ಶ್ರೀ ಕ್ರೇಜಿ ಅವರು ಸ್ಪಷ್ಟಪಡಿಸಿದ್ದಾರೆ.


ಒಟ್ನಲ್ಲಿ 'ಉಪ್ಪಿ 2' unknown ಅಂತ ಪ್ರೇಕ್ಷಕರ ತಲೆಗೆ ಹುಳ ಬಿಟ್ಟು ಇದು ಬುದ್ದಿವಂತರಿಗೆ ಮಾತ್ರ ಎಂದು ಸಾರಿ ಹೇಳಿದ ಉಪೇಂದ್ರ ಅವರ ಉಪ್ಪಿ-ಟ್ಟು ಬಿಡುಗಡೆಯಾದ ದಿನಗಳಲ್ಲಿ ಬಿಸಿ ಬಿಸಿ ಯಾಗಿ ಸೇಲ್ ಆಗಿದ್ದಂತೂ ನಿಜ.

English summary
In the last two days there are rumours that 15 minutes of scenes have been added to Uppi2. Even online there are such rumours and explanation for the added cenes. But it turns out that there has been no addition to the film. 'Uppi 2' movie feature Kannada actor Upendra, Actress Kristina Akheeva, Actress Parul Yadav in the lead role. The movie is directed by Upendra.

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more