»   » ರೆಬೆಲ್ ಸ್ಟಾರ್ ಅಂಬರೀಶ್ ಕಂಡೀಷನ್ ಈಗ ಹೇಗಿದೆ?

ರೆಬೆಲ್ ಸ್ಟಾರ್ ಅಂಬರೀಶ್ ಕಂಡೀಷನ್ ಈಗ ಹೇಗಿದೆ?

Posted By:
Subscribe to Filmibeat Kannada

ನಟ, ವಸತಿ ಸಚಿವ ರೆಬೆಲ್ ಸ್ಟಾರ್ ಅಂಬರೀಶ್ (61) ಅವರು ಶ್ವಾಸಕೋಶದ ಸೋಂಕಿನ ಹಿನ್ನೆಲೆಯಲ್ಲಿ ಬೆಂಗಳೂರಿನ ಕನ್ನಿಂಗ್ ಹ್ಯಾಂ ರಸ್ತೆಯ ವಿಕ್ರಂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈಗ ಅವರ ಆರೋಗ್ಯ ಸ್ಥಿತಿ ಹೇಗಿದೆ ಎಂಬ ಬಗ್ಗೆ ಅವರ ಅಪಾರ ಅಭಿಮಾನಿ ಬಳಗ ಆತಂಕಕ್ಕೀಡಾಗಿದೆ.

ಇದೀಗ ಬಂದ ವರದಿ ಪ್ರಕಾರ, ಅಂಬರೀಶ್ ಅವರ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿದ್ದು ಅವರು ಆರೋಗ್ಯದಿಂದಿದ್ದಾರೆ. ಅಭಿಮಾನಿಗಳು ಆತಂಕ ಪಡಬೇಕಾಗಿಲ್ಲ. ಇಂದು ಮುಂಜಾನೆ ನಟ ದರ್ಶನ್ ಅವರು ಆಸ್ಪತ್ರೆಗೆ ಭೇಟಿ ನೀಡಿ ಅಂಬರೀಶ್ ಅವರ ಆರೋಗ್ಯವನ್ನು ವಿಚಾರಿಸಿದರು. ಒಂದು ಗಂಟೆಗೂ ಅಧಿಕ ಕಾಲ ಅವರು ಆಸ್ಪತ್ರೆಯಲ್ಲೇ ಕಳೆದರು. [ಪೈಸಾಗಾಗಿ ಚಿತ್ರ ಮಾಡುತ್ತಿರುವ ಸುಮಲತಾ ಅಂಬರೀಶ್]


ಈಗಾಗಲೆ ನಟಿ ಹಾಗೂ ಸಂಸದೆ ರಮ್ಯಾ ಅವರೂ ಆಸ್ಪತ್ರೆಗೆ ಭೇಟಿ ನೀಡಿ ಅಂಬರೀಶ್ ಅವರ ಆರೋಗ್ಯವನ್ನು ವಿಚಾರಿಸಿಕೊಂಡರು. ಇನ್ನೊಂದೆರಡು ಮೂರು ದಿನಗಳಲ್ಲಿ ಅಂಬರೀಶ್ ಅವರು ಡಿಸ್ಚಾರ್ಜ್ ಆಗಲಿದ್ದಾರೆ ಎಂದು ಆಸ್ಪತ್ರೆ ವೈದ್ಯ ಡಾ.ರಂಗನಾಥ್ ತಿಳಿಸಿದ್ದಾರೆ.

ಅಂಬರೀಶ್ ಆರೋಗ್ಯವಾಗಿದ್ದಾರೆ, ಮಾತನಾಡುತ್ತಿದ್ದಾರೆ, ಆಸ್ಪತ್ರೆ ಬಳಿ ಯಾರೂ ಬರಬೇಡಿ ಎಂದು ಅಭಿಮಾನಿಗಳಿಗೆ ಆರೋಗ್ಯ ಸಚಿವ ಯುಟಿ ಖಾದರ್ ಹಾಗೂ ವಿಕ್ರಂ ಆಸ್ಪತ್ರೆ ವೈದ್ಯರು ಮನವಿ ಮಾಡಿದ್ದರೂ ಲೆಕ್ಕಿಸದೆ ರಾಜ್ಯದ ಮೂಲೆ ಮೂಲೆಗಳಿಂದ ವಿಕ್ರಂ ಆಸ್ಪತ್ರೆ ಬಳಿಕ ಅಂಬರೀಶ್ ಅಭಿಮಾನಿಗಳು ಹರಿದುಬರುತ್ತಿದ್ದಾರೆ.

ವಿಕ್ರಂ ಆಸ್ಪತ್ರೆಗೆ ನಟ ದುನಿಯಾ ವಿಜಯ್, ರಾಕ್ ಲೈನ್ ವೆಂಕಟೇಶ್ ಸೇರಿದಂತೆ ನಾಣಯ್ಯ, ಯುಟಿ ಖಾದರ್ ಖಾನ್ ಭೇಟಿ ನೀಡಿದ್ದಾರೆ. ಮಂಡ್ಯದ ಗಂಡು, ಕಲಿಯುಗ ಕರ್ಣ ಅಂಬರೀಶ್ ಅವರು ಆದಷ್ಟು ಬೇಗ ಚೇತರಿಸಿಕೊಳ್ಳಲಿ, ಅವರು ಬೇಗ ಗುಣಮುಖರಾಗಲಿ. (ಒನ್ಇಂಡಿಯಾ ಕನ್ನಡ)

English summary
How is the condition of housing minister and Kannada actor Rebel Star Ambareesh (61), he has been admitted to the Vikram Hospital in the Bangalore after he had trouble breathing. His health condition improved. Rebel Star is recovering gradually and his health condition is slightly better at the moment. 
Please Wait while comments are loading...