»   » ಕನ್ನಡದ ಅಮಿತಾಬ್ ಬಚ್ಚನ್ ರೆಬೆಲ್ ಸ್ಟಾರ್ ಅಂಬಿ

ಕನ್ನಡದ ಅಮಿತಾಬ್ ಬಚ್ಚನ್ ರೆಬೆಲ್ ಸ್ಟಾರ್ ಅಂಬಿ

By: ಜೀವನರಸಿಕ
Subscribe to Filmibeat Kannada

ರೆಬೆಲ್ ಸ್ಟಾರ್ ಅಂಬರೀಶ್. ಆ ಹೆಸರಲ್ಲೇ ಒಂಥರಾ ಖದರ್. ಅಂಬಿ ರಾಜಕೀಯಕ್ಕೆ ಬಂದ ಮೇಲೆ ಅದೆಷ್ಟು ಜನರಿಗೆ ಸಂತಸವಾಗಿತ್ತು. ಆದರೆ ಸಿನಿಮಾದವರಿಗೆ ಮಾತ್ರ ಸಖತ್ ಬೇಸರವಾಗಿತ್ತು. ಯಾಕಂದ್ರೆ ಅಂಬಿ ಅನ್ನೋ ಆಕ್ಸಿಜನ್ ಎಲ್ಲರಿಗೂ ಬೇಕು. ಚಂದವನದಲ್ಲಿ ಉಸಿರಾಡೋ ಚಿಟ್ಟೆಗಳಿಂದ ಹಿಡಿದು ಹುಲಿ ಸಿಂಹಗಳವರೆಗೂ ಎಲ್ಲರಿಗೂ ಅಂಬಿನೇ ಆಮ್ಲಜನಕ.

ಅಂಬಿ ಆರೋಗ್ಯ ಹದಗೆಟ್ಟ ಸಮಯದಲ್ಲಿ ವೈದ್ಯರ ಸಲಹೆಯಂತೆ ಕಂಪ್ಲೀಟ್ ರೆಸ್ಟ್ ತೆಗೆದುಕೊಳ್ಳಬೇಕು ಅಂತ ಅಂದುಕೊಂಡಿದ್ರು. ಆದ್ರೆ ಚಿತ್ರರಂಗದ ಮಂದಿ ಬಿಡಬೇಕಲ್ಲ. ದಿನಕ್ಕೆ ಕಡಿಮೆ ಅಂದ್ರೆ ನಾಲ್ಕೈದು ಪ್ರೊಡ್ಯೂಸರ್ಗಳಾದ್ರೂ ಅಂಬಿ ಮನೆ ಮುಂದೆ ನಿಂತಿರ್ತಾರೆ. ಅವರ ಬೇಡಿಕೆ ಒಂದೇ, ಇಂಪಾರ್ಟೆಂಟ್ ಪಾತ್ರ ಮಾಡಬೇಕು ಅನ್ನೋದು.

ಸಣ್ಣ ಪಾತ್ರ ಮಾಡಿ ಅನ್ನೋದ್ರಿಂದ ಶುರುವಾಗಿ ನೀವು ಹೇಳಿದ ದಿನ ಶೂಟಿಂಗ್ ಮಾಡ್ತೀವಿ, ನೀವು ಬಂದ್ರೆ ಶೂಟಿಂಗ್ ಬರದಿದ್ರೆ ಪ್ಯಾಕಪ್ ಅನ್ನೋ ಎಲ್ಲಾ ಆಪ್ಷನ್ ಗಳನ್ನೂ ಕೊಡ್ತಾರೆ. ಸಿನಿಮಾ ತಂಡದವರನ್ನ ಎಷ್ಟು ಸಾರಿ ಆಗೋದಿಲ್ಲ ಅಂತ ಅಂಬಿ ಗದರಿದ್ರೂ ಚಿಕ್ಕ ಮಕ್ಕಳ ತರಹ ಅಂಬಿ ಮನೆಮುಂದೆ ನಿಂತುಬಿಡ್ತಾರೆ.

ಹಾಗಾದ್ರೆ ರೆಬೆಲ್ ಸ್ಟಾರ್ ಅಂಬಿ ನಟಿಸ್ತಾ ಇರೋ ಸಿನಿಮಾಗಳು ಯಾವುದು? ಅಂಥಾದ್ದೇನಿರುತ್ತೆ ಅಂಬಿ ಮಾಡೋ ಪಾತ್ರದಲ್ಲಿ? ಅನ್ನೋ ಸೀಕ್ರೇಟ್ಸ್ ಇಲ್ಲಿದೆ ನೋಡಿ.

ಕನ್ನಡದ ಅಮಿತಾಬ್ ಬಚ್ಚನ್ ಅಂಬರೀಶ್

ಬಾಲಿವುಡ್ ಸೂಪರ್ ಸ್ಟಾರ್ ಅಮಿತಾಬ್ ಬಚ್ಚನ್ ಖದರೇ ಬೇರೆ. ಶಾರುಖ್ ಖಾನ್ ಸಿನಿಮಾದಲ್ಲಿ ಅಮಿತಾಬ್ ಬಚ್ಚನ್ ಇದ್ರೂ ಆ ಸಿನಿಮಾದಲ್ಲಿ ಅಮಿತಾಬ್ ಬಚ್ಚನ್ನೇ ಹೀರೋ. ಅಮಿತಾಬ್ ಒಂದು ಡೈಲಾಗ್ ಗೆ ಸಿಗೋ ಚಪ್ಪಾಳೆ ಶಾರುಖ್ ಗೆ ಸಿಕ್ಕೋದಿಲ್ಲ. ಕನ್ನಡದಲ್ಲಿ ರೆಬೆಲ್ ಸ್ಟಾರ್ ಖದರ್ ಅಮಿತಾಬ್ ಗಿಂತ ಸ್ವಲ್ಪ ಜಾಸ್ತೀನೇ ಅನ್ನಿ.

ಪ್ರೀತಿಗೆ ಸಿನಿಮಾ ಒಪ್ಪಿಕೊಳ್ತಾರೆ ಅಂಬಿ

ಸಿನಿಮಾದಲ್ಲಿ ನಟಿಸುವಷ್ಟು ಆರೋಗ್ಯ ರೆಬೆಲ್ ಸ್ಟಾರ್ ಗೆ ಸಹಕರಿಸ್ತಾ ಇಲ್ಲ. ಆದರೆ ನಂಬಿಕೆಗೆ ವಿಶ್ವಾಸಕ್ಕೆ ಅಂಬಿ ಸಹಕರಿಸ್ತಾರೆ. ಸ್ನೇಹಕ್ಕೆ, ಪ್ರೀತಿಗೆ ಬೆಲೆಕೊಟ್ಟು ಸಿನಿಮಾ ಮಾಡೋಕೆ ಒಪ್ಪಿಕೊಳ್ತಾರೆ. ಅದೆಷ್ಟೋ ಸಿನಿಮಾಗಳಿಗೆ ಅಂಬಿ ಒಪ್ಪಿಕೊಳ್ತಾ ಇರೋದು ಇದೇ ಕಾರಣಕ್ಕೆ.

ಅಂಬರೀಶ ಸಿನಿಮಾದಲ್ಲಿ ಕೆಂಪೇಗೌಡ

ರೆಬೆಲ್ ಸ್ಟಾರ್ ಅಂಬಿಯನ್ನ ಅಪ್ಪಾಜಿ ಅಂತಾನೇ ಕರೆಯೋ ಚಾಲೆಂಜಿಂಗ್ ಸ್ಟಾರ್ ದರ್ಶನ್ ಮೇಲಿರೋ ಪ್ರೀತಿಗೆ ಅಂಬಿ ಅಂಬರೀಶ ಅನ್ನೋ ತನ್ನ ಹೆಸರನ್ನೇ ಟೈಟಲ್ ಆಗಿಸೋಕೆ ಒಪ್ಪಿಕೊಂಡು ಅಭಿನಯಿಸಿದ್ದಾರೆ.

ಎರಡು ತಿಂಗಳು ಗೆಟಪ್ ಚೇಂಜ್ ಮಾಡಲಿಲ್ಲ

ರೆಬೆಲ್ ಸ್ಟಾರ್ ತನ್ನನ್ನ ಪ್ರೀತಿಸೋರಿಗೆ ಎಂತಹಾ ತ್ಯಾಗವನ್ನೂ ಮಾಡ್ತಾರೆ ಅನ್ನೋದಕ್ಕೇ ಇದೇ ಉದಾಹರಣೆ. ಸಿಂಗಾಪುರ್ ನಲ್ಲಿ ಒಂದೆರೆಡು ತಿಂಗಳು ಚಿಕಿತ್ಸೆಯಲ್ಲಿದ್ರೂ ಆ ಇಡೀ ಸಮಯದಲ್ಲಿ ಅಂಬಿ ತನ್ನ ಕೆಂಪೇಗೌಡ ಗೆಟಪ್ ನ ಹುರಿ ಮೀಸೆಯನ್ನ ತೆಗೆದಿರಲಿಲ್ಲ. ಸಿನಿಮಾದಲ್ಲಿ ಒಂದು ಶಾಟ್ ಬಾಕಿ ಇತ್ತು ಅನ್ನೋ ಕಾರಣಕ್ಕೆ ವೈದ್ಯರು ಹೇಳಿದ್ರೂ ಆ ಗೆಟಪ್ ಉಳಿಸಿಕೊಂಡಿದ್ರು.

ದೊಡ್ಮನೆ ಹುಡುಗನಿಗೆ ತಂದೆ

ಅಂಬಿ ಮೊದಲ ಬಾರಿಗೆ ಪುನೀತ್ ಜೊತೆ ಅಭಿನಯಿಸ್ತಿದ್ದಾರೆ. ಪುನೀತ್ ಗೆ ತಂದೆ ಪಾತ್ರ ಮಾಡ್ತಿದ್ದಾರೆ. ಅಂಬಿ ತನ್ನೆಲ್ಲ ಕೆಲಸಗಳ ನಡುವೆ ಪುನೀತ್ ಗೆ ಜೋಡಿಯಾಗ್ತಿರೋದು ಅಭಿಮಾನಿಗಳಿಗೆ ಥ್ರಿಲ್ ಕೊಡಲಿದೆ.

ಮೈ ನೇಮ್ ಈಸ್ ಭೈರೇಗೌಡ

ಜೋಗಿ ಪ್ರೇಮ್ ಅಭಿನಯದ 'ಮೈ ನೇಮ್ ಈಸ್ ಭೈರೇಗೌಡ' ಸಿನಿಮಾದಲ್ಲಿ ಅಂಬಿ ಅಭಿನಯಿಸ್ತಾರೆ. ಆದರೆ ಅದು 'ಡಿಕೆ' ಸಿನಿಮಾ ಮುಗಿದ ನಂತರ. ಹೀರೋ ಯಾರೇ ಇದ್ರೂ ಇಲ್ಲೂ ಅಂಬೀನೇ ಹೀರೋ. ವಿಲನ್ ಆಗಿ ಚಿತ್ರರಂಗಕ್ಕೆ ಬಂದ ಅಂಬಿ ಆಮೇಲೆ ಯಾವತ್ತೂ ಯಾರಿಗೂ ವಿಲನ್ ಆಗ್ಲಿಲ್ಲ.

English summary
Rebel Star and Karnataka Housing Minister M.H. Ambareesh is like Amitabh Bachchan in Kannada movies. Every hero wants his guest appearance in movies. He is like oxygen for Sandalwood. Desite his health status he agrees to doing guest roles. 
Please Wait while comments are loading...