For Quick Alerts
  ALLOW NOTIFICATIONS  
  For Daily Alerts

  ಅಂಬರೀಶ್ ಪ್ರೀತಿಯ ಶ್ವಾನ 'ಕನ್ವರ್' ಇನ್ನು ನೆನಪು ಮಾತ್ರ

  |

  ದಿವಂಗತ ನಟ ರೆಬೆಲ್ ಸ್ಟಾರ್ ಅಂಬರೀಶ್ ಪ್ರೀತಿಯ ಶ್ವಾನ 'ಕನ್ವರ್' ನಿಧನವಾಗಿದೆ. ಸೋಮವಾರ ಬೆಳಗ್ಗೆ ಕನ್ವರ್ ಸಾವನ್ನಪ್ಪಿದೆ ಎಂಬ ವಿಚಾರ ತಿಳಿದು ಬಂದಿದೆ.

  ಅಂಬರೀಶ್ ಬದುಕಿದ್ದಾಗ ಪ್ರತಿದಿನವೂ ಕನ್ವರ್ ಜೊತೆ ಸಮಯ ಕಳೆಯುತ್ತಿದ್ದರು. ಪ್ರಾಣಿಪ್ರಿಯರಾಗಿದ್ದ ಅಂಬಿ ತುಂಬಾ ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದರು. ಕನ್ವರ್ ಜೊತೆಗೆ ಬುಲ್ ಬುಲ್ ಎಂಬ ಮತ್ತೊಂದು ಶ್ವಾನ ಇದೆ. ಈ ಎರಡು ಶ್ವಾನಗಳನ್ನು ಅಂಬಿ ಬಹಳ ಇಷ್ಟಪಟ್ಟು ಚಿಕ್ಕವಯಸ್ಸಿನಿಂದಲೂ ಸಾಕಿದ್ದರು. ಆದ್ರೀಗ, ತನ್ನ ಯಜಮಾನನಿಲ್ಲದ ಮನೆಯನ್ನು ಬಿಟ್ಟು ಹೋಗಿದೆ. ಮುಂದೆ ಓದಿ...

  ಅಂಬಿ ನಿಧನಕ್ಕೆ ಮುದ್ದಿನ ಶ್ವಾನ 'ಕನ್ವರ್ ಲಾಲ್' ಮೂಕ ರೋದನಅಂಬಿ ನಿಧನಕ್ಕೆ ಮುದ್ದಿನ ಶ್ವಾನ 'ಕನ್ವರ್ ಲಾಲ್' ಮೂಕ ರೋದನ

  ಕನ್ವರ್ ಮತ್ತು ಬುಲ್ ಬುಲ್

  ಕನ್ವರ್ ಮತ್ತು ಬುಲ್ ಬುಲ್

  ಸೇಂಟ್ ಬರ್ನಾಡ್ ತಳಿಯ ಶ್ವಾನಗಳಾದ ಕನ್ವರ್ ಮತ್ತು ಬುಲ್ ಬುಲ್ ಅಂಬಿ ನಿವಾಸದ ಖಾಯಂ ಸದಸ್ಯರಾಗಿದ್ದರು. ಅಭಿಷೇಕ್‌ಗೂ ಈ ಶ್ವಾನಗಳಂದ್ರೆ ಬಹಳ ಅಚ್ಚುಮೆಚ್ಚು. ಅದರಲ್ಲೂ ಕನ್ವರ್ ಅಂದ್ರೆ ಸ್ವಲ್ಪ ಆತ್ಮೀಯತೆ ಹೆಚ್ಚಿತ್ತು. ಅಂಬಿ ವಾಕಿಂಗ್ ಹೋದಾಗ ಕನ್ವರ್‌ನ ಜೊತೆಯಲ್ಲಿ ಕರೆದುಕೊಂಡು ಹೋಗುತ್ತಿದ್ದರು. ಮನೆಯಲ್ಲಿದ್ದಾಗಲೂ ''ಹೇ ಕನ್ವರ್'' ಎಂದು ಕರೆದ ತಕ್ಷಣ ಎಲ್ಲಿದ್ದರೂ ಬಂದು ನಿಲ್ಲುತ್ತಿತ್ತು.

  ಇಷ್ಟದ ಹೆಸರಿಟ್ಟಿದ್ದ ಅಂಬಿ

  ಇಷ್ಟದ ಹೆಸರಿಟ್ಟಿದ್ದ ಅಂಬಿ

  ತಮ್ಮ ವೃತ್ತಿ ಜೀವನದಲ್ಲಿ ಬಹಳ ಖ್ಯಾತಿ ತಂದುಕೊಟ್ಟಿದ್ದ ಚಿತ್ರಗಳ ಫೇಮಸ್ ಡೈಲಾಗನ್ನೇ ಶ್ವಾನಗಳಿಗೆ ಹೆಸರಾಗಿಸಿದ್ದರು. ನಾಗರಹಾವು ಚಿತ್ರದಲ್ಲಿ ಜಲೀಲಾನ ಪಾತ್ರ ನಿಭಾಯಿಸಿದ್ದ ಅಂಬರೀಶ್‌ಗೆ 'ಬುಲ್ ಬುಲ್ ಮಾತಾಡಕ್ಕಿಲ್ವಾ...' ಡೈಲಾಗ್ ಬಹಳ ದೊಡ್ಡ ಖ್ಯಾತಿ ತಂದು ಕೊಟ್ಟಿತ್ತು. 'ಅಂತ' ಚಿತ್ರದ 'ಕನ್ವರ್ ಲಾಲ್' ಹೆಸರು ಸಹ ಹಾಗೂ 'ಕುತ್ತೇ...ಕನ್ವರ್ ನಹೀ ಕನ್ವರ್ ಲಾಲ್ ಬೋಲೋ' ಡೈಲಾಗ್ ಅಷ್ಟೇ ಯಶಸ್ಸು ಕೊಟ್ಟಿತ್ತು. ಹಾಗಾಗಿ, ಈ ನೆನಪಿಗಾಗಿ ಶ್ವಾನಗಳಿಗೆ ಆ ಹೆಸರು ಇಟ್ಟಿದ್ದರು.

  ಅಂಬಿ ನಿಧನದ ನಂತರ ಒಂಟಿಯಾಗಿದ್ದ ಕನ್ವರ್

  ಅಂಬಿ ನಿಧನದ ನಂತರ ಒಂಟಿಯಾಗಿದ್ದ ಕನ್ವರ್

  ಅಂಬರೀಶ್ ನಿಧನರಾದ ಬಳಿಕ ಕನ್ವರ್ ಮಾನಸಿಕವಾಗಿ ನೊಂದಿತ್ತು. ಸರಿಯಾಗಿ ಊಟ ಮಾಡುತ್ತಿರಲಿಲ್ಲ, ಯಾರ ಬಳಿಯೂ ಸೇರುತ್ತಿರಲಿಲ್ಲ, ಒಬ್ಬಂಟಿಯಾಗಿ ಇರುತ್ತಿತ್ತು. ಇದೀಗ, ಅಂಬಿ ನಿಧನದ ಎರಡೂವರೆ ವರ್ಷದ ಬಳಿಕ ಕನ್ವರ್ ಸಹ ಕೊನೆಯುಸಿರೆಳೆದಿದೆ.

  Recommended Video

  Corona ರೋಗಿಗಳ ಉಸಿರಿಗಾಗಿ ಉಸಿರು ತಂಡಕ್ಕೆ ಗಜ ಬಲ ತಂದ D Boss | Filmibeat Kannada
  ದರ್ಶನ್ ಜೊತೆ ಕನ್ವರ್

  ದರ್ಶನ್ ಜೊತೆ ಕನ್ವರ್

  ಅಂಬರೀಶ್‌ ಮನೆಗೆ ಯಾವಾಗಲೂ ಹೋಗ್ತಿದ್ದ ನಟ ದರ್ಶನ್‌ಗೂ ಸಹ ಕನ್ವರ್ ಜೊತೆ ಬಾಂಧವ್ಯ ಇತ್ತು. ಕನ್ವರ್ ಜೊತೆ ದರ್ಶನ್ ಕಾಣಿಸಿಕೊಂಡಿದ್ದ ಫೋಟೋಗಳು ಸಹ ವೈರಲ್ ಆಗಿತ್ತು. ದುರಂತ ಅಂದ್ರೆ ಮೇ 29 ರಂದು ಅಂಬಿ ಹುಟ್ಟುಹಬ್ಬವಿತ್ತು. ಅದಕ್ಕೂ ಐದು ದಿನದ ಮುಂಚೆ ಕನ್ವರ್ ಇನ್ನಿಲ್ಲದಂತಾಗಿದೆ.

  English summary
  Late Actor Rebel Star Ambareesh's Pet Dog Kanwar Dies Today (May 24).
  Monday, May 24, 2021, 15:16
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X