»   » ಪುನೀತ್ 'ನಿನ್ನಿಂದಲೇ' ಟಿವಿ ರೈಟ್ಸ್ ಗೆ ಭರ್ಜರಿ ರೇಟ್

ಪುನೀತ್ 'ನಿನ್ನಿಂದಲೇ' ಟಿವಿ ರೈಟ್ಸ್ ಗೆ ಭರ್ಜರಿ ರೇಟ್

Posted By:
Subscribe to Filmibeat Kannada

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಹಾಗೂ ಎರಿಕಾ ಫರ್ನಾಂಡೀಸ್ ಮುಖ್ಯಭೂಮಿಕೆಯಲ್ಲಿರುವ 'ನಿನ್ನಿಂದಲೇ' ಚಿತ್ರದ ಸ್ಯಾಟಲೈಟ್ ರೈಟ್ಸ್ ದಾಖಲೆ ಬೆಲೆಗೆ ಮಾರಾಟವಾಗಿವೆ. ಈ ವರ್ಷದ ಬಹುನಿರೀಕ್ಷಿತ ಚಿತ್ರಗಳಲ್ಲಿ ನಿನ್ನಿಂದಲೇ ಚಿತ್ರವೂ ಒಂದು.

ಮೂಲಗಳ ಪ್ರಕಾರ ಚಿತ್ರದ ಸ್ಯಾಟಲೈಟ್ ಹಕ್ಕುಗಳನ್ನು ಖಾಸಗಿ ವಾಹಿನಿಯೊಂದು ರು.6.5 ಕೋಟಿಗೆ ಖರೀದಿಸಿದೆ. ಈ ಮೂಲಕ ಪುನೀತ್ ಟಿವಿ ದಾಖಲೆಯಲ್ಲಿ ಹೊಸ ದಾಖಲೆ ಬರೆದಿದ್ದಾರೆ. ಜನವರಿ 9ಕ್ಕೆ ಚಿತ್ರ ಬಿಡುಗಡೆ ಎನ್ನಲಾಗಿತ್ತು. ಈಗ ನಿನ್ನಿಂದಲೇ ಬಿಡುಗಡೆಯನ್ನು ಮುಂದೂಡಲಾಗಿದೆ.

ಕೊನೆಯ ಹಂತದಲ್ಲಿನ ಸಿದ್ಧತೆಗಳು ಪೂರ್ಣವಾಗದ ಕಾರಣ ಚಿತ್ರದ ಬಿಡುಗಡೆಯನ್ನು ಮುಂದೂಡಲಾಗಿದೆ ಎನ್ನುತ್ತವೆ ಮೂಲಗಳು. ಕಳೆದ ಒಂದು ವರ್ಷದಿಂದ ಪುನೀತ್ ಚಿತ್ರಗಳು ತೆರೆಕಾಣದೆ ಅಭಿಮಾನಿಗಳು ಬಹಳ ನಿರೀಕ್ಷೆಯಲ್ಲಿದ್ದಾರೆ. ಈ ಬಾರಿ ಪುನೀತ್ ತಮ್ಮ ಅಭಿಮಾನಿಗಳಿಗೆ ಖಂಡಿತ ನಿರಾಸೆಪಡಿಸಲ್ಲ.

ಈಗಾಗಲೆ ಚಿತ್ರದ ಆಡಿಯೋಗೆ ಭರ್ಜರಿ ಪ್ರತಿಕ್ರಿಯೆ ಸಿಕ್ಕಿದೆ. ತೆಲುಗಿನ ಜಯಂತ್ ಸಿ ಪರಾಂಜೆ ಆಕ್ಷನ್ ಕಟ್ ಹೇಳಿರುವ ಚಿತ್ರದಲ್ಲಿ ಅದ್ಭುತ ಸಾಹಸ ಸನ್ನಿವೇಶಗಳು ಈಗಾಗಲೆ ಸ್ಯಾಂಡಲ್ ವುಡ್ ನಲ್ಲಿ ತೀವ್ರ ಕುತೂಹಲ ಕೆರಳಿಸಿವೆ. ಮಣಿಶರ್ಮ ಅವರ ಸಂಗೀತ ಸಂಯೋಜನೆ ಚಿತ್ರಕ್ಕಿದೆ.

ಅಂದಹಾಗೆ ಪುನೀತ್ ಹಾಗೂ ಎರಿಕಾ ಫರ್ನಾಂಡೀಸ್ ಅಭಿನಯದ 'ನಿನ್ನಿಂದಲೇ' ಚಿತ್ರ ಜನವರಿ 16ಕ್ಕೆ ತೆರೆಗೆ ಬರೋ ಸಾಧ್ಯತೆಯಿದೆ. ಅಂದೇ ಕೊನೆಯ ಆಟ ಮುಗಿಸಿದ್ದ ಸಾಗರ್ ಚಿತ್ರಮಂದಿರ ಕೂಡ ರೀಓಪನ್ ಆಗಲಿದೆ. ಸ್ಯಾಂಡಲ್ ವುಡ್ ನ ಲಕ್ಕಿ ಥಿಯೇಟರ್ ಎಂದೇ ಹೆಸರಾಗಿದೆ ಸಾಗರ್ ಚಿತ್ರಮಂದಿರ. (ಏಜೆನ್ಸೀಸ್)

English summary
The latest news is that the satellite rights of the Power Star Puneeth Rajkumar lead Kannada film Ninnindale have been bought at a whopping Rs 6.5 crore, a record in Sandalwood. The movie is all set to release on January 16, 2014.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada