For Quick Alerts
  ALLOW NOTIFICATIONS  
  For Daily Alerts

  ಕೆಜಿಎಫ್ ನಾಯಕಿಗೆ ಹುಟ್ಟುಹಬ್ಬ ಸಂಭ್ರಮ: ಕತೆಯ ಬಗ್ಗೆ ಸುಳಿವು ಕೊಟ್ಟ ಪ್ರಶಾಂತ್ ನೀಲ್!

  |

  ಕೆಜಿಎಫ್ 2 ಸಿನಿಮಾದ ನಾಯಕಿ ಶ್ರೀನಿಧಿ ಶೆಟ್ಟಿ ತಮ್ಮ 28 ನೇ ವರ್ಷದ ಹುಟ್ಟುಹಬ್ಬವನ್ನು ಇಂದು ಆಚರಿಸಿಕೊಳ್ಳುತ್ತಿದ್ದಾರೆ.

  ಶ್ರೀನಿಧಿ ಶೆಟ್ಟಿಗೆ ಕೆಜಿಎಫ್ 2 ಚಿತ್ರತಂಡ ಶುಭಾಶಯ ಕೋರಿದ್ದು, ಹುಟ್ಟುಹಬ್ಬಕ್ಕೆ ವಿಶೇಷವಾಗಿ ಶ್ರೀನಿಧಿ ಶೆಟ್ಟಿ ಅವರ ಲುಕ್ ಪೋಸ್ಟರ್ ಒಂದನ್ನು ಬಿಡುಗಡೆ ಮಾಡಿದ್ದಾರೆ.

  ಕಪ್ಪು ಬಣ್ಣದ ಉಡುಗೆಯಲ್ಲಿ ಸುಂದರವಾಗಿ ಕಾಣುತ್ತಿದ್ದಾರೆ ಶ್ರೀನಿಧಿ ಶೆಟ್ಟಿ, ಕೆಜಿಎಫ್ ಮೊದಲ ಭಾಗದಲ್ಲಿ ಸಿಟ್ಟಿನ, ಅಹಂಕಾರಿ ಹುಡುಗಿಯಾಗಿ ಕಾಣಿಸಿಕೊಂಡಿದ್ದ ಶ್ರೀನಿಧಿ ಶೆಟ್ಟಿ, ಕೆಜಿಎಫ್ 2 ನಲ್ಲಿ ಹೊಸ ಶೇಡ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ.

  ಶುಭಾಶಯ ಕೋರಿದ ಪ್ರಶಾಂತ್ ನೀಲ್

  ಶುಭಾಶಯ ಕೋರಿದ ಪ್ರಶಾಂತ್ ನೀಲ್

  ಕೆಜಿಎಫ್ 2 ನಿರ್ದೇಶಕ ಪ್ರಶಾಂತ್ ನೀಲ್ ಶ್ರೀನಿಧಿ ಶೆಟ್ಟಿಗೆ ಹುಟ್ಟುಹಬ್ಬದ ಶುಭಾಶಯ ಕೋರಿದ್ದು, ಇದರ ಜೊತೆಗೆ ಕತೆಯ ಬಗ್ಗೆ ಅಥವಾ ಶ್ರೀನಿಧಿ ಶೆಟ್ಟಿ-ಯಶ್ ನಡುವಿನ ಕಥಾ ಎಳೆಯ ಬಗ್ಗೆ ಸಣ್ಣ ಸುಳಿವು ಕೊಟ್ಟಿದ್ದಾರೆ.

  ಪ್ರೀತಿ-ಕ್ರೂರತೆ ಸಹಬಾಳ್ವೆ ನಡೆಸಬಹುದೆ?

  ಪ್ರೀತಿ-ಕ್ರೂರತೆ ಸಹಬಾಳ್ವೆ ನಡೆಸಬಹುದೆ?

  ಶ್ರೀನಿಧಿ ಶೆಟ್ಟಿಗೆ ಟ್ವಿಟ್ಟರ್‌ನಲ್ಲಿ ಹುಟ್ಟುಹಬ್ಬದ ಶುಭಾಶಯ ಕೋರಿರುವ ಪ್ರಶಾಂತ್ ನೀಲ್, 'ಪ್ರೀತಿ ಮತ್ತು ಕ್ರೂರತೆ ಸಹಬಾಳ್ವೆ ನಡೆಸಬಹುದೆ?' ಎಂದು ಬರೆದಿದ್ದಾರೆ. ಆ ಮೂಲಕ ಕೆಜಿಎಫ್ 2 ನಲ್ಲಿ ನಾಯಕ-ನಾಯಕಿ ನಡುವೆ ಅಭಿಪ್ರಾಯ ಬೇಧ ಉಂಟಾಗುವ ಸುಳಿವು ನೀಡಿದ್ದಾರೆ.

  ಕೆಜಿಎಫ್2 ನಲ್ಲಿ ಹೆಚ್ಚು ಕಾಲ ತೆರೆಯ ಮೇಲೆ

  ಕೆಜಿಎಫ್2 ನಲ್ಲಿ ಹೆಚ್ಚು ಕಾಲ ತೆರೆಯ ಮೇಲೆ

  ರಾಕಿ ಭಾಯ್ ಪ್ರೇಯಿಸಿ ರೀನಾ ದೇಸಾಯಿ ಪಾತ್ರದಲ್ಲಿ ಗಮನ ಸೆಳೆದಿದ್ದ ಶ್ರೀನಿಧಿ ಶೆಟ್ಟಿ ಕೆಜಿಎಫ್ ಮೊದಲ ಭಾಗದಲ್ಲಿ ನಲ್ಲಿ ಹೆಚ್ಚಿನ ತೆರೆ ಸಮಯ (ಸ್ಕ್ರೀನ್ ಟೈಮ್) ಇರಲಿಲ್ಲವಾದರೂ, ಕೆಜಿಎಫ್ 2 ನಲ್ಲಿ ಹೆಚ್ಚು ಕಾಲ ತೆರೆ ಮೇಲೆ ಕಾಣಿಸಿಕೊಳ್ಳಲಿದ್ದಾರೆ.

  ಹೈದರಾಬಾದ್‌ ನಲ್ಲಿ ಚಿತ್ರೀಕರಣ

  ಹೈದರಾಬಾದ್‌ ನಲ್ಲಿ ಚಿತ್ರೀಕರಣ

  ಮಂಗಳೂರಿನ ಸಮುದ್ರ ತೀರದಲ್ಲಿ ಕೆಜಿಎಫ್ 2 ಚಿತ್ರೀಕರಣ ಮುಗಿದಿದ್ದು, ಮುಂದಿನ ಚಿತ್ರೀಕರಣಕ್ಕಾಗಿ ತಂಡವು ಹೈದರಾಬಾದ್‌ ಗೆ ತೆರಳಿದೆ. ಇದೇ ಸಮಯದಲ್ಲಿ ಸಂಜಯ್ ದತ್ ಸಹ ತಾವು ಕೆಜಿಎಫ್ 2 ಚಿತ್ರೀಕರಣಕ್ಕೆ ತಯಾರಿರುವುದಾಗಿ ಹೇಳಿದ್ದಾರೆ. ಅವರೂ ಸಹ ಚಿತ್ರೀಕರಣದಲ್ಲಿ ಭಾಗವಹಿಸಲಿದ್ದಾರೆ.

  English summary
  Reena's look from KGF Chapter2 played by Srinidhi Shetty revealed on her birthday. KGF 2 team wished her.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X