For Quick Alerts
  ALLOW NOTIFICATIONS  
  For Daily Alerts

  ಪ್ರೇಮ್ 'ಏಕ್ ಲವ್ ಯಾ' ಸಿನಿಮಾಗೆ ಸಿಕ್ಕಳು ಹೊಸ ನಾಯಕಿ

  |

  ನಿರ್ದೇಶಕ ಜೋಗಿ ಪ್ರೇಮ್ ಸಿನಿಮಾಗಳೆಂದ್ರನೆ ವಿಭಿನ್ನ. ಅದರಲ್ಲೂ ನಾಯಕಿಯರ ವಿಚಾರಕ್ಕೆ ಬಂದರೆ, ಯಾವಾಗಲು ಹೊಸಬರನ್ನು ಕನ್ನಡ ಪ್ರೇಕ್ಷಕರಿಗೆ ಪರಿಚಯಿಸುವ ಮೂಲಕ ಸದ್ದುಮಾಡುತ್ತಾರೆ. ಅದರಲ್ಲೂ ಪರಭಾಷೆಯ ಸ್ಟಾರ್ ನಟಿಯನ್ನು ಕನ್ನಡಕ್ಕೆ ಕರೆತರುವಲ್ಲಿ ಪ್ರೇಮ್ ಎತ್ತಿದ ಕೈ. ಪ್ರೇಮ್ ಸಿನಿಮಾ ಸೆಟ್ಟೇರುತ್ತೆ ಅಂದ್ರೆ ನಾಯಕಿ ಯಾರಾಗಿರುತ್ತಾರೆ ಎನ್ನುವ ಕುತೂಹಲವೆ ಅಭಿಮಾನಿಗಳಲ್ಲಿ ಹೆಚ್ಚಾಗಿರುತ್ತೆ.

  ಈ ಹಿಂದೆ ತೆರೆಕಂಡ 'ದಿ ವಿಲನ್' ಸಿನಿಮಾದ ಮೂಲಕ ಬ್ರಿಟನ್ ಬೆಡಗಿ ಆಮಿ ಜಾಕ್ಸನ್ ಅನ್ನು ಕನ್ನಡಕ್ಕೆ ಪರಿಚಯಿಸಿದ್ರು. ಪ್ರೇಮ್ ಈಗ ಹೊಸ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. 'ದಿ ವಿಲನ್' ನಂತರ 'ಏಕ್ ಲವ್ ಯಾ' ಚಿತ್ರದ ಮೂಲಕ ಮತ್ತೆ ಕನ್ನಡ ಅಭಿಮಾನಿಗಳ ಮುಂದೆ ಬರ್ತಿದ್ದಾರೆ.

  ರಕ್ಷಿತಾ ಪ್ರೇಮ್ ನಿರ್ಮಾಣದ ಸಿನಿಮಾದಲ್ಲಿ ರಚಿತಾ ರಾಮ್ ನಾಯಕಿ

  ಏಕ್ ಲವ್ ಯಾ ಚಿತ್ರದಲ್ಲಿ ನಾಯಕಿ ಯಾರಾಗಲಿದ್ದಾರೆ ಎನ್ನುವ ಕುತೂಹಲ ಕನ್ನಡ ಚಿತ್ರಾಭಿಮಾನಿಗಳಲ್ಲಿ ಇತ್ತು. ಸಾಕಷ್ಟು ನಾಯಕಿಯ ಹೆಸರುಗಳು ಕೂಡ ಕೇಳಿ ಬರುತ್ತಿತ್ತು. ಆದ್ರೀಗ ಆ ಕುತೂಹಲಕ್ಕೆ ತೆರೆ ಬಿದ್ದಿದೆ. 'ಏಕ್ ಲವ್ ಯಾ' ಚಿತ್ರಕ್ಕೀಗ ನಾಯಕಿ ಫಿಕ್ಸ್ ಆಗಿದ್ದಾರೆ. ಹೊಸ ಪ್ರತಿಭೆಯನ್ನು ಕರೆತರುವ ಮೂಲಕ ಕನ್ನಡಕ್ಕೆ ಹೊಸ ನಾಯಕಿಯನ್ನು ಪರಿಚಯಿಸಿದ್ದಾರೆ ಪ್ರೇಮ್. ಮುಂದೆ ಓದಿ..

  'ಏಕ್ ಲವ್ ಯಾ' ನಾಯಕಿ ರೀಷ್ಮಾ ನಾನಯ್ಯ

  'ಏಕ್ ಲವ್ ಯಾ' ನಾಯಕಿ ರೀಷ್ಮಾ ನಾನಯ್ಯ

  ರೀಷ್ಮಾ ನಾನಯ್ಯ ಏಕ್ ಲವ್ ಯಾ ಸಿನಿಮಾ ಮೂಲಕ ನಾಯಕಿಯಾಗಿ ಬಣ್ಣದ ಲೋಕಕ್ಕೆ ಕಾಲಿಡುತ್ತಿದ್ದಾರೆ. ಮೂಲತಹ ಕೊಡಗಿನವರಾದ ರೀಷ್ಮಾ ಪ್ರೇಮ್ ಸಿನಿಮಾದ ಮೂಲಕ ಎಂಟ್ರಿ ಕೊಡುತ್ತಿರುವ ಬಗ್ಗೆ ಸಖತ್ ಎಕ್ಸಾಯಿಟ್ ಆಗಿದ್ದಾರೆ. ಏಕ್ ಲವ್ ಯಾ ಪಕ್ಕಾ ಲವ್ ಸ್ಟೋರಿಯ ಸಿನಿಮಾ. ಅಂದ್ಮೇಲೆ ಚಿತ್ರದಲ್ಲಿ ರೀಷ್ಮಾ ರೋಮ್ಯಾಂಟಿಕ್ ಆಗಿ ಕಾಣಿಸಿಕೊಳ್ಳಲಿದ್ದಾರೆ. 18 ವರ್ಷದ ರೀಷ್ಮಾ ಇನ್ನು ದ್ವಿತೀಯ ಪಿಯುಸಿ ಓದುತ್ತಿದ್ದಾರೆ.

  ಪ್ರೇಮ್ ಚಿತ್ರಕ್ಕಾಗಿ ಮತ್ತೆ ಕನ್ನಡಕ್ಕೆ ಬಂದ 'ಸ್ಟಂಟ್ ಶಿವ'

  ಓದು-ಅಭಿನಯ ಎರಡನ್ನು ನಿಭಾಯಿಸಲಿದ್ದಾರೆ

  ಓದು-ಅಭಿನಯ ಎರಡನ್ನು ನಿಭಾಯಿಸಲಿದ್ದಾರೆ

  ಸದ್ಯ ಜ್ಯೋತಿ ನಿವಾಸ ಕಾಲೇಜ್ ನಲ್ಲಿ ದ್ವಿತೀಯ ಪಿಯುಸಿ ಓದುತ್ತಿರುವ ರೀಷ್ಮಾ ಅಭಿನಯ ಮತ್ತು ವಿದ್ಯಾಭ್ಯಾಸ ಎರಡನ್ನು ನಿಭಾಯಿಸಿಕೊಂಡು ಹೋಗಲಿದ್ದಾರಂತೆ. ಈಗಾಗಲೆ ಫ್ಯಾಷನ್ ಲೋಕದಲ್ಲಿ ಸಕ್ರೀಯರಾಗಿರುವ ರೀಷ್ಮಾ ಅವರಿಗೆ ಅಭಿನಯ ಅಷ್ಟೇನು ಕಷ್ಟ ಎನಿಸುವುದಿಲ್ಲ. ಕಾಲೇಜಿನಲ್ಲಿಯು ರೀಷ್ಮಾ ಅವರಿಗೆ ಉತ್ತಮ ಪ್ರೋತ್ಸಾಹ ಸಿಗುತ್ತಿದೆಯಂತೆ. ಹಾಗಾಗಿ ಸಿನಿಮಾ ಮತ್ತು ಓದು ಎರಡನ್ನು ಬ್ಯಾಲೆನ್ಸ್ ಮಾಡಿಕೊಂಡು ಹೋಗಲು ಸಾಧ್ಯವಾಗುತ್ತಿದೆಯಂತೆ.

  'ಏಕ್ ಲವ್ ಯಾ' ಗಾಗಿ ತರಬೇತಿ

  'ಏಕ್ ಲವ್ ಯಾ' ಗಾಗಿ ತರಬೇತಿ

  ರೀಷ್ಮಾ ಈಗಾಗಲೆ ಟ್ರೈನಿಂಗ್ ಕೂಡ ಪಡೆದಿದ್ದಾರೆ. ಚಿತ್ರಕ್ಕಾಗಿ ಮೂರು ವಾರಗಳ ಕಾಲ ಕಡಿಮೆ ಅವಧಿಯ ತರಬೇತಿ ಪಡೆದು ಎಲ್ಲಾ ಸಿದ್ದತೆ ಮಾಡಿಕೊಂಡಿದ್ದಾರೆ. ಅಲ್ಲದೆ ಈಗಾಗಲೆ ಚಿತ್ರೀಕರಣ ಪ್ರಾರಂಭ ವಾಗಿರುವುದರಿಂದ ಚಿತ್ರೀಕರಣ ಸೆಟ್ ಗೆ ಹೋಗಿ ನೋಡಿಕೊಳ್ಳುತ್ತಿದ್ದಾರಂತೆ. ಇದರಿಂದ ಚಿತ್ರೀಕರಣ ಸೆಟ್ ನಲ್ಲಿ ವಾತಾವರಣ ಹೇಗಿರಲಿದೆ ಎನ್ನುವುದು ಗೊತ್ತಗಲಿದೆಯಂತೆ ಮತ್ತು ಆತ್ಮವಿಶ್ವಾಸ ಹೆಚ್ಚಾಗಲು ಸಹಾಯವಾಗುತ್ತಿದೆಯಂತೆ.

  'ಏಕ್ ಲವ್ ಯಾ' ಚಿತ್ರೀಕರಣ ಪ್ರಾರಂಭಸಿದ ನಿರ್ದೇಶಕ ಪ್ರೇಮ್

  ಚಿತ್ರೀಕರಣದಲ್ಲಿ 'ಏಕ್ ಲವ್ ಯಾ'

  ಚಿತ್ರೀಕರಣದಲ್ಲಿ 'ಏಕ್ ಲವ್ ಯಾ'

  'ಏಕ್ ಲವ್ ಯಾ' ಚಿತ್ರದ ಚಿತ್ರೀಕರಣ ಈಗಾಗಲೆ ಪ್ರಾರಂಭವಾಗಿದೆ. ಚಿತ್ರದಲ್ಲಿ ರಕ್ಷಿತಾ ಪ್ರೇಮ್ ಸಹೋದರ ರಾಣಾ ನಾಯಕನಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಈಗಾಗಲೆ ಆಕ್ಷನ್ ದೃಶ್ಯಗಳನ್ನು ಸೆರೆ ಹಿಡಿಯುವಲ್ಲಿ ಚಿತ್ರತಂಡ ಬ್ಯುಸಿಯಾಗಿತ್ತು. ಚಿತ್ರಕ್ಕೆ ರಕ್ಷಿತಾ ಪ್ರೇಮ್ ಬಂಡವಾಳ ಹೂಡುತ್ತಿದ್ದಾರೆ. ಅಂದ್ಹಾಗೆ ರೀಷ್ಮಾ ಇದೇ ತಿಂಗಳು 22ರಿಂದ ಚಿತ್ರೀಕರಣದಲ್ಲಿ ಭಾಗಿಯಾಗಲಿದ್ದಾರಂತೆ.

  ಪ್ರಮುಖ ಪಾತ್ರದಲ್ಲಿ ರಚಿತಾ

  ಪ್ರಮುಖ ಪಾತ್ರದಲ್ಲಿ ರಚಿತಾ

  ಏಕ್ ಲವ್ ಯಾ ಚಿತ್ರದಲ್ಲಿ ರಚಿತಾ ರಾಮ್ ಪ್ರಮುಖ ಪಾತ್ರದಲ್ಲಿ ಕಾಣಿಕೊಳ್ಳುತ್ತಿದ್ದಾರೆ. ಚಿತ್ರದಲ್ಲಿ ರಚಿತಾ ಅವರು ಮಾಸ್ ಲುಕ್ ನಲ್ಲಿ ಮಿಂಚಲಿದ್ದಾರಂತೆ. ಚಿತ್ರದ ಎಂಟ್ರಿ ದೃಶ್ಯವೆ ತುಂಬಾ ಇಂಟ್ರಸ್ಟಿಂಗ್ ಆಗಿದೆಯಂತೆ. ಪ್ರೇಮ್ ನಿರ್ದೇಶನ, ರಕ್ಷಿತಾ ನಿರ್ಮಾಣದ ಚಿತ್ರದಲ್ಲಿ ಕಾಣಿಸಿಕೊಳ್ಳಲು ರಚಿತಾ ಸಖತ್ ಎಕ್ಸಾಯಿಟ್ ಆಗಿದ್ದಾರಂತೆ. ಇದೇ ತಿಂಗಳು ಕೊನೆಯಲ್ಲಿ ಚಿತ್ರೀಕರಣಕ್ಕೆ ಹಾಜರಾಗಲಿದ್ದಾರೆ ರಚಿತಾ.

  English summary
  Kannada new actress Reeshma Nanaiah is playing lead opposite Rana in Ek Love Ya film. This movie is directed by Prem.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X