»   » ಜುಲೈ 10ಕ್ಕೆ 'ರಿಂಗ್ ರೋಡ್' ಲೋಕಾರ್ಪಣೆ..!

ಜುಲೈ 10ಕ್ಕೆ 'ರಿಂಗ್ ರೋಡ್' ಲೋಕಾರ್ಪಣೆ..!

Posted By:
Subscribe to Filmibeat Kannada

ಎಲ್ಲವೂ ಅಂದುಕೊಂಡಂತೆ ಆಗಿದ್ದರೆ, ಇಷ್ಟೊತ್ತಿಗಾಗಲೇ 'ರಿಂಗ್ ರೋಡ್ ಶುಭ' ಅಲ್ಲ...ಅಲ್ಲ 'ರಿಂಗ್ ರೋಡ್ ಸುಮ' ತೆರೆಗೆ ಬಂದಿರಬೇಕಿತ್ತು. ಆದ್ರೆ, ಅನಿವಾರ್ಯ ಕಾರಣಗಳಿಂದ ಮುಂದೆ ಹೋಗುತ್ತಲೇ ಇದ್ದ 'ರಿಂಗ್ ರೋಡ್ ಸುಮ'ಗೆ ಕಡೆಗೂ ಬಿಡುಗಡೆ ಭಾಗ್ಯ ದೊರಕಿದೆ.

ಇನ್ನು ಕೆಲವೇ ದಿನಗಳಲ್ಲಿ, ಅಂದ್ರೆ ಜುಲೈ 10ಕ್ಕೆ 'ರಿಂಗ್ ರೋಡ್ ಸುಮ' ತೆರೆಗೆ ಅಪ್ಪಳಿಸಲಿದೆ. 'ಶುಭ' ಅನ್ನುವ ಹೆಸರು ವಿವಾದಕ್ಕೆ ಎಡೆ ಮಾಡಿಕೊಡಬಹುದು ಅನ್ನುವ ಕಾರಣಕ್ಕೆ ಸುಮ ಅಂತ ಹೆಸರು ಬದಲಿಸಲಾಗಿದೆ. ['ರಿಂಗ್ ರೋಡ್ ಶುಭ'ಗೆ ಟೈಟಲ್ ಟ್ರಬಲ್]


ring road

ಶುಭ ಅಂದ ತಕ್ಷಣ ಹಂತಕಿ ಲಾಯರ್ ಶುಭ ನಿಮ್ಮ ಕಣ್ಣ ಮುಂದೆ ಬರಬಹುದು. ಈಗಾಗಲೇ ರಿಲೀಸ್ ಆಗಿರುವ ಟ್ರೈಲರ್ ಗಳಲ್ಲಿ 'ಲಾಯರ್ ಶುಭ' ಬದುಕಿನ ಕೆಲ ಘಟನೆಗಳ ಝಲಕ್ ಇರುವುದು ಕುತೂಹಲಕ್ಕೆ ಕಾರಣವಾಗಿದೆ. [ನಿರ್ಲಿಪ್ತಳಾದ ವಕೀಲೆ ಶುಭಾಗೆ ಜಾಮೀನು ಸಿಕ್ಕಿದ್ದೇಕೆ?]


ಆದರೂ, ಇದು 'ಲಾಯರ್ ಶುಭ' ಕಥೆ ಅಲ್ಲ. ''ನೀವು ಕೇಳದ ಕಥೆ'' ಅಂತಾರೆ ನಿರ್ದೇಶಕಿ ಪ್ರಿಯಾ ಬೆಳ್ಳಿಯಪ್ಪ. ಎರಡು ಜಡೆ ಒಟ್ಟಿಗೆ ಸೇರಲ್ಲ ಅನ್ನುವ ಮಾತಿದೆ. ಆದ್ರೆ, 'ರಿಂಗ್ ರೋಡ್ ಸುಮ' ಚಿತ್ರವನ್ನ ಬರೀ ಹುಡುಗೀರೇ ಸೇರಿಕೊಂಡು ಮಾಡಿದ್ದಾರೆ.


khushi

ನಿರ್ದೇಶನ-ನಿರ್ಮಾಣ-ಛಾಯಾಗ್ರಹಣ-ಸಂಕಲನ ಸೇರಿದಂತೆ ಪ್ರೊಡಕ್ಷನ್ ನ ಪ್ರತಿ ಹಂತದಲ್ಲೂ ಹೆಣ್ಮಕ್ಕಳೇ ಇದ್ದಾರೆ. ವಿಶೇಷ ಪಾತ್ರದಲ್ಲಿ ದುನಿಯಾ ವಿಜಿ ಮತ್ತು ನಿಖಿತಾ ಕಾಣಿಸಿಕೊಂಡಿದ್ದಾರೆ. ಸುಮ ಪಾತ್ರಧಾರಿಯಾಗಿ ಖುಷಿ ನಟಿಸಿದ್ದಾರೆ. ಸಂಜನಾ, ನೀತು ಸೇರಿದಂತೆ ದೊಡ್ಡ ತಾರಾಬಳಗ ಚಿತ್ರದಲ್ಲಿದೆ.


ವರ್ಷಗಳ ಪರಿಶ್ರಮದ ನಂತ್ರ 'ರಿಂಗ್ ರೋಡ್ ಸುಮ' ಇದೇ ಜುಲೈ 10ನೇ ತಾರೀಖು ನಿಮ್ಮ ಮುಂದೆ ಬರ್ತಿದ್ದಾಳೆ. ಆಕೆಯನ್ನ ಹೇಗೆ ಸ್ವಾಗತಿಸುತ್ತೀರಾ ಅನ್ನೋದು ನಿಮಗೆ ಬಿಟ್ಟಿದ್ದು.

English summary
Newcomer Priya Belliyappa directed 'Ring Road Suma' is all set to release on July 10th. 'Ring Road Suma' features Duniya Vijay, Nikitha and others.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada