For Quick Alerts
  ALLOW NOTIFICATIONS  
  For Daily Alerts

  ರಿಷಬ್ ಶೆಟ್ಟಿ ನಿರ್ದೇಶನದ ಎಲ್ಲಾ ಚಿತ್ರಗಳ ಬಜೆಟ್ ಹಾಗೂ ಕಲೆಕ್ಷನ್ ವಿವರ; 4ರಿಂದ 400 ಕೋಟಿ ಜರ್ನಿ!

  |

  ರಿಷಬ್ ಶೆಟ್ಟಿ ಸದ್ಯ ಭಾರತ ಚಲನಚಿತ್ರರಂಗದಲ್ಲಿ ದೊಡ್ಡ ಮಟ್ಟದಲ್ಲಿ ಕೇಳಿ ಬರುತ್ತಿರುವ ಹೆಸರು. ಕಿರಿಕ್ ಪಾರ್ಟಿ ಹಾಗೂ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು ಮೂಲಕ ಕರ್ನಾಟಕದಲ್ಲಿ ಭರ್ಜರಿ ಸದ್ದು ಮಾಡಿದ್ದ ರಿಷಬ್ ಶೆಟ್ಟಿ ಸದ್ಯ ಕಾಂತಾರ ಚಿತ್ರದ ಮೂಲಕ ದೇಶವ್ಯಾಪಿ ಸದ್ದು ಮಾಡಿದ್ದಾರೆ. ಕಾಂತಾರ ಯಶಸ್ಸು ರಿಷಬ್ ಶೆಟ್ಟಿಗೆ ಸಾಲು ಸಾಲು ಆಫರ್‌ಗಳು ವಿವಿಧ ಭಾಷೆಯ ದೊಡ್ಡ ದೊಡ್ಡ ಬ್ಯಾನರ್‌ಗಳಿಂದ ಬರುವಂತೆ ಮಾಡಿದೆ.

  ಈ ಹಿಂದೆ ಸಿನಿಮಾ ಅವಕಾಶಕ್ಕಾಗಿ ಸೈಕಲ್ ಹೊಡೆದಿದ್ದ ರಿಷಬ್ ಶೆಟ್ಟಿಗೆ ಬಾಲಿವುಡ್ ಆಹ್ವಾನವಿತ್ತಿದೆ ಹಾಗೂ ಟಾಲಿವುಡ್‌ನ ಖ್ಯಾತ ನಿರ್ಮಾಪಕ ಅಲ್ಲು ಅರವಿಂದ್ ರಿಷಬ್ ಶೆಟ್ಟಿ ಬಳಿ ತಮ್ಮ ಬ್ಯಾನರ್ ಅಡಿಯಲ್ಲಿ ಚಿತ್ರವೊಂದನ್ನು ನಿರ್ದೇಶಿಸಿ ಎಂದು ಬೇಡಿಕೆ ಇಟ್ಟಿದ್ದಾರೆ. ಯಾವ ಚಿತ್ರಮಂದಿರಲ್ಲಿ ರಿಷಬ್ ಶೆಟ್ಟಿ ನಿರ್ದೇಶನದ ಮೊದಲ ಚಿತ್ರಕ್ಕೆ ಒಂದೇ ಒಂದು ಪ್ರದರ್ಶನವನ್ನೂ ನೀಡಿರಲಿಲ್ಲವೋ ಅದೇ ಚಿತ್ರಮಂದಿರದಲ್ಲಿ ಕಾಂತಾರ ದಿನವೊಂದಕ್ಕೆ ಹದಿನಾರು ಪ್ರದರ್ಶನಗಳನ್ನು ಸತತ ಎರಡು ವಾರ ತುಂಬಿದ ಜನರೊಂದಿಗೆ ಪೂರೈಸಿದೆ.

  ₹400 ಕೋಟಿ ಕಲೆಕ್ಷನ್ ಮಾಡೇ ಬಿಡ್ತು ರಿಷಬ್ ಶೆಟ್ಟಿ 'ಕಾಂತಾರ': ಇದರಲ್ಲಿ ಕರ್ನಾಟಕದ ಪಾಲು ಎಷ್ಟು? ₹400 ಕೋಟಿ ಕಲೆಕ್ಷನ್ ಮಾಡೇ ಬಿಡ್ತು ರಿಷಬ್ ಶೆಟ್ಟಿ 'ಕಾಂತಾರ': ಇದರಲ್ಲಿ ಕರ್ನಾಟಕದ ಪಾಲು ಎಷ್ಟು?

  ಮೊದಲಿಗೆ ಕನ್ನಡ ಚಿತ್ರವಾಗಿ ಮಾತ್ರ ಬಿಡುಗಡೆಗೊಂಡಿದ್ದ ಕಾಂತಾರ ತನ್ನ ಅದ್ಭುತ ಪ್ರತಿಕ್ರಿಯೆ ಪಡೆದುಕೊಂಡು ನಂತರ ಪ್ಯಾನ್ ಇಂಡಿಯಾ ಚಿತ್ರವಾಗಿ ಎಲ್ಲೆಡೆ ಗೆದ್ದು ಬೀಗಿದೆ. ಸದ್ಯ ಕರ್ನಾಟಕ ನೆಲದಲ್ಲಿ ಯಶ್ ಅಭಿನಯದ ಕೆಜಿಎಫ್ ಚಾಪ್ಟರ್ 2 ದಾಖಲೆಯನ್ನು ಹಿಂದಿಕ್ಕಿರುವ ಕಾಂತಾರ ರಾಜ್ಯದ ನೂತನ ಇಂಡಸ್ಟ್ರಿ ಹಿಟ್ ಆಗಿದೆ. ದೇಶದಾದ್ಯಂತ 400 ಕೋಟಿ ಗಡಿ ದಾಟಿರುವ ಕಾಂತಾರ ಯಾರೂ ಊಹಿಸಿರದ ಮಟ್ಟಿಗೆ ಕಲೆಕ್ಷನ್ ಮಾಡಿದೆ. ಈ ಮೂಲಕ ರಿಷಬ್ ಶೆಟ್ಟಿ ಸ್ಪಷ್ಟ ಹ್ಯಾಟ್ರಿಕ್ ಸಾಧಿಸಿದ್ದಾರೆ. ಹಾಗಿದ್ದರೆ ರಿಷಬ್ ಶೆಟ್ಟಿ ನಿರ್ದೇಶನದ ಚಿತ್ರಗಳ ಬಜೆಟ್ ಹಾಗೂ ಅವುಗಳು ಮಾಡಿದ ಬಾಕ್ಸ್ ಆಫೀಸ್ ಕಲೆಕ್ಷನ್ ಎಷ್ಟು ಎಂಬ ವಿವರ ಈ ಕೆಳಕಂಡಂತಿದೆ.

  ಸೋಲೇ ಇಲ್ಲ, ಗೆಲುವೇ ಎಲ್ಲಾ!

  ಸೋಲೇ ಇಲ್ಲ, ಗೆಲುವೇ ಎಲ್ಲಾ!

  ರಿಷಬ್ ಶೆಟ್ಟಿ ಮೊದಲಿಗೆ ಡೈರೆಕ್ಟರ್ ಕ್ಯಾಪ್ ತೊಟ್ಟದ್ದು 2016ರಲ್ಲಿ ತೆರೆಕಂಡ ರಿಕ್ಕಿ ಚಿತ್ರದ ಮೂಲಕ. ಸುಮಾರು ಒಂದೂವರೆ ಕೋಟಿ ಬಜೆಟ್‌ನಲ್ಲಿ ತಯಾರಾಗಿದ್ದ ರಿಕ್ಕಿ ಬಾಕ್ಸ್ ಆಫೀಸ್‌ನಲ್ಲಿ ಸುಮಾರು ಮೂರರಿಂದ 4 ಕೋಟಿ ಗಳಿಕೆ ಮಾಡಿತ್ತು ಎಂದು ಬಾಕ್ಸ್ ಆಫೀಸ್ ಟ್ರಾಕರ್ಸ್ ತಿಳಿಸಿದ್ದರು. ಇನ್ನು ಇದೇ ವರ್ಷ ಕಿರಿಕ್ ಪಾರ್ಟಿ ಎಂಬ ಚಿತ್ರವನ್ನು ನಿರ್ದೆಶಿಸಿದ ರಿಷಬ್ ಶೆಟ್ಟಿ ಕ್ಲೀನ್ ಬ್ಲಾಕ್ ಬಸ್ಟರ್ ಬಾರಿಸಿದರು. 4 ಕೋಟಿ ವೆಚ್ಚದಲ್ಲಿ ತಯಾರಾಗಿದ್ದ ಕಿರಿಕ್ ಪಾರ್ಟಿ 50 ಕೋಟಿ ಬಾಚಿ ಯಶಸ್ಸು ಕಂಡಿತ್ತು. ನಂತರ 2018ರಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡುಗೆ ಆಕ್ಷನ್ ಕಟ್ ಹೇಳಿದ ರಿಷಬ್ ಮತ್ತೊಮ್ಮೆ ಗೆದ್ದರು. 2 ಕೋಟಿ ವೆಚ್ಚದಲ್ಲಿ ತಯಾರಾಗಿದ್ದ ಈ ಚಿತ್ರ 26 ಕೋಟಿ ಬಾಕ್ಸ್ ಆಫೀಸ್ ಕಲೆಕ್ಷನ್ ಮಾಡಿತು. ಇನ್ನು ಸದ್ಯ 400ಕ್ಕೂ ಅಧಿಕ ಕಲೆಕ್ಷನ್ ಮಾಡಿರುವ ಕಾಂತಾರ ಚಿತ್ರದ ಬಜೆಟ್ 16 ಕೋಟಿ ರೂಪಾಯಿಗಳು.

  ಕಮರ್ಷಿಯಲ್ ಸಕ್ಸಸ್ ಬೆನ್ನಲ್ಲೇ ಪ್ರಯೋಗಕ್ಕೆ ಮುಂದಾಗಿದ್ದ ರಿಷಬ್

  ಕಮರ್ಷಿಯಲ್ ಸಕ್ಸಸ್ ಬೆನ್ನಲ್ಲೇ ಪ್ರಯೋಗಕ್ಕೆ ಮುಂದಾಗಿದ್ದ ರಿಷಬ್

  ಇನ್ನು ಕಿರಿಕ್ ಪಾರ್ಟಿ ರೀತಿಯ ಕಮರ್ಷಿಯಲ್ ಚಿತ್ರ ನಿರ್ದೇಶಿಸಿ ದೊಡ್ಡ ಗೆಲುವು ಕಂಡ ರಿಷಬ್ ಶೆಟ್ಟಿ ಮುಂದಿನ ನಡೆ ಏನು ಎಂದು ಎಲ್ಲರೂ ಕಾಯುತ್ತಿರುವಾಗಲೇ ಮಕ್ಕಳ 'ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು' ಘೋಷಿಸಿದ ರಿಷಬ್ ಶೆಟ್ಟಿ ನಡೆ ಕಂಡು ಎಲ್ಲರೂ ಆಶ್ಚರ್ಯಕ್ಕೊಳಗಾಗಿದ್ದರು. ಕಮರ್ಷಿಯಲ್ ಸಕ್ಸಸ್ ಬೆನ್ನಲ್ಲೇ ಈ ರೀತಿಯ ಪ್ರಯೋಗ ಯಾಕೆ ಎಂದು ಪ್ರಶ್ನೆ ಇಟ್ಟವರೇ ಅಂದಿನ ದಿನ ಹೆಚ್ಚಿದ್ದರು. ಇದಾವುದಕ್ಕೂ ತಲೆ ಕೆಡಿಸಿಕೊಳ್ಳದ ರಿಷಬ್ ಶೆಟ್ಟಿ ಚಿತ್ರವನ್ನು ತಮ್ಮ ಕನಸಿನ ಚಿತ್ರವನ್ನು ನಿರ್ದೇಶಿಸಿ ಬಿಡುಗಡೆ ಮಾಡಿದರು. ಚಿತ್ರ ಬಾಕ್ಸ್ ಆಫೀಸ್‌ನಲ್ಲೂ ಗೆದ್ದಿತು ಹಾಗೂ ರಾಷ್ಟ್ರ ಪ್ರಶಸ್ತಿಯನ್ನೂ ಪಡೆಯಿತು.

  ಮುಂದಿನ ಚಿತ್ರಗಳಾವುವು?

  ಮುಂದಿನ ಚಿತ್ರಗಳಾವುವು?

  ಸದ್ಯ ನಾಲ್ಕು ಚಿತ್ರಗಳನ್ನು ನಿರ್ದೇಶಿಸಿ ಅತಿಹೆಚ್ಚು ಬೇಡಿಕೆಯ ನಿರ್ದೇಶಕನಾಗಿರುವ ರಿಷಬ್ ಶೆಟ್ಟಿ ಮುಂದೆ ಯಾವ ಚಿತ್ರಗಳಿಗೆ ಆಕ್ಷನ್ ಕಟ್ ಹೇಳಲಿದ್ದಾರೆ ಎಂಬ ಪ್ರಶ್ನೆ ಎಲ್ಲರಲ್ಲೂ ಇದೆ. ಇದಕ್ಕೆ ಉತ್ತರ ರುದ್ರಪ್ರಯಾಗ್ ಹಾಗೂ ಎಸ್‌ಆರ್‌ಕೆ 126. ರುದ್ರಪ್ರಯಾಗ ಚಿತ್ರದಲ್ಲಿ ಅನಂತ್ ನಾಗ್ ಜತೆ ರಿಷಬ್ ಶೆಟ್ಟಿ ನಟಿಸಲಿದ್ದು ಸ್ವತಃ ಆಕ್ಷನ್ ಕಟ್ ಹೇಳಲಿದ್ದಾರೆ ಹಾಗೂ ಶಿವರಾಜ್ ಕುಮಾರ್ ಅಭಿನಯಿಸಲಿರುವ 126ನೇ ಚಿತ್ರಕ್ಕೂ ರಿಷಬ್ ಡೈರೆಕ್ಟರ್ ಕ್ಯಾಪ್ ತೊಡಲಿದ್ದಾರೆ.

  English summary
  Rishab Shetty directional all movies budget and collection details. Take a look
  Wednesday, November 23, 2022, 12:49
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X