twitter
    For Quick Alerts
    ALLOW NOTIFICATIONS  
    For Daily Alerts

    ತಡವಾಗಿ ಚಿತ್ರ ವೀಕ್ಷಿಸಿ, ಮೆಚ್ಚಿ, ಪ್ರೋತ್ಸಾಹಿಸಿದ ಚಿತ್ರಪ್ರೇಮಿಗೆ ರಿಷಬ್ ಶೆಟ್ಟಿ ಧನ್ಯ.!

    |

    Recommended Video

    Rishab Shetty receives a letter with 200 RS from his fan | Rishabshetty | 200 | Fan

    ವೇಗದ ಈ ಇಂಟರ್ ನೆಟ್ ಯುಗದಲ್ಲಿ ಡಿಜಿಟಲ್ ಪ್ಲ್ಯಾಟ್ ಫಾರ್ಮ್ ಗೆ ಹೆಚ್ಚಿನ ಬೇಡಿಕೆ ಇದೆ. ಸಿನಿಮಾಗಳು ಥಿಯೇಟರ್ ಗಳಲ್ಲಿ ರಿಲೀಸ್ ಆದ ಕೆಲವೇ ದಿನಗಳ ಅಂತರದಲ್ಲಿ ಡಿಜಿಟಲ್ ಪ್ಲ್ಯಾಟ್ ಫಾರ್ಮ್ ಗಳಿಗೂ ಲಗ್ಗೆ ಇಡುತ್ತವೆ.

    ಹೀಗಿರುವಾಗ, ಥಿಯೇಟರ್ ನಲ್ಲಿ ಯಾರು ದುಡ್ಡು ಕೊಟ್ಟು ಸಿನಿಮಾ ನೋಡ್ತಾರೆ.? ಮೊಬೈಲ್ ನಲ್ಲೇ ಮನೆ-ಮಂದಿಯೆಲ್ಲಾ ಚಿತ್ರವನ್ನು ನೋಡಬಹುದು ಅಂತ ಯೋಚಿಸುವವರೇ ಜಾಸ್ತಿ. ಅಂಥದ್ರಲ್ಲಿ, ಇಲ್ಲೋರ್ವ ವ್ಯಕ್ತಿ ಕನ್ನಡದ 'ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು' ಚಿತ್ರವನ್ನು ಡಿಜಿಟಲ್ ಪ್ಲ್ಯಾಟ್ ಫಾರ್ಮ್ ನಲ್ಲಿ ವೀಕ್ಷಿಸಿ, ಮೆಚ್ಚುಗೆ ವ್ಯಕ್ತಪಡಿಸಿ ನಿರ್ದೇಶಕ ರಿಶಬ್ ಶೆಟ್ಟಿಗೆ ಪತ್ರ ಬರೆದಿದ್ದಾರೆ.

    ತಡವಾಗಿ ಈ ಚಿತ್ರವನ್ನು ನೋಡಿದ ತಪ್ಪಿಗೆ, ಥಿಯೇಟರ್ ನಲ್ಲಿ ಈ ಚಿತ್ರವನ್ನು ನೋಡದ ಕಾರಣಕ್ಕೆ ಪತ್ರದ ಜೊತೆಗೆ ಟಿಕೆಟ್ ದುಡ್ಡು 200 ರೂಪಾಯಿಯನ್ನೂ ಸೇರಿಸಿ ಕಳುಹಿಸಿದ್ದಾರೆ.

    Rishab Shetty feels happy about Fans letter on Sarkari Hiriya Prathamika Shale Kasaragodu

    ಮೈಸೂರಿನ ಪುಸ್ತಕ ಪ್ರಕಾಶಕ ಭರತ್ ರಾಮಸ್ವಾಮಿ ಬರೆದಿರುವ ಪತ್ರ ಮತ್ತು ಟಿಕೆಟ್ ದುಡ್ಡಿನ ಫೋಟೋವನ್ನು ಫೇಸ್ ಬುಕ್ ನಲ್ಲಿ ಹಂಚಿಕೊಂಡು ಸಂತಸ ವ್ಯಕ್ತಪಡಿಸಿದ್ದಾರೆ ನಟ, ನಿರ್ದೇಶಕ ರಿಶಬ್ ಶೆಟ್ಟಿ.

    ವಿಮರ್ಶೆ: ಕನ್ನಡ ಭಾಷಾಭಿಮಾನ ಹೆಚ್ಚಿಸುವ 'ಸರ್ಕಾರಿ ಹಿ.ಪ್ರಾ. ಶಾಲೆ, ಕಾಸರಗೋಡು'ವಿಮರ್ಶೆ: ಕನ್ನಡ ಭಾಷಾಭಿಮಾನ ಹೆಚ್ಚಿಸುವ 'ಸರ್ಕಾರಿ ಹಿ.ಪ್ರಾ. ಶಾಲೆ, ಕಾಸರಗೋಡು'

    ''ನಾವು ನಿರ್ಮಿಸಿದ ಸಿನಿಮಾವೊಂದು ಅದೆಷ್ಟೇ ಪ್ರಶಸ್ತಿಗಳನ್ನು ಪಡೆದಿದ್ದರೂ, ಜನಮಾನಸದಿಂದ ಬರುವ ಪ್ರಶಂಸೆಯ ಮುಂದೆ ಅವೆಲ್ಲಾ ನಗಣ್ಯವೆನಿಸುತ್ತದೆ. ಜನರಿಂದ ಬಂದ ಈ ಅಭಿಮಾನದ ಕುರುಹುಗಳು ಅವರೊಡನೆ ನಮ್ಮನ್ನು ಭಾವನಾತ್ಮಕವಾಗಿ ಬೆಸೆಯುತ್ತದೆ. ಅದರಲ್ಲೂ ಚಿತ್ರವನ್ನು ತಡವಾಗಿ ವೀಕ್ಷಿಸಿದರೂ ಮೆಚ್ಚಿ ಪ್ರೋತ್ಸಾಹಿಸುವ ಇಂತಹ ಚಿತ್ರಪ್ರೇಮಿಗಳಿರುವಾಗ ಒಳ್ಳೆಯ ಕನ್ನಡ ಚಿತ್ರಗಳಿಗೆ ಎಂದಿಗೂ ಸೋಲಿಲ್ಲ. ಏಕೆಂದರೆ ಪ್ರೇಕ್ಷಕರ ಒಲವೇ ಚಿತ್ರದ ನಿಜವಾದ ಗೆಲುವು. ಚಿತ್ರತಂಡದ ಪರವಾಗಿ ಭರತ್ ರಾಮಸ್ವಾಮಿ ಅವರಿಗೆ ಧನ್ಯವಾದಗಳು. ನಿಮ್ಮ ಈ ಪ್ರೀತಿಯ ಕಾಣಿಕೆಯನ್ನು ಅದರ ದುಪ್ಪಟ್ಟು ಪ್ರೀತಿಯಿಂದ ಸ್ವೀಕರಿಸುತ್ತೇವೆ'' ಎಂದು ಫೇಸ್ ಬುಕ್ ನಲ್ಲಿ ರಿಶಬ್ ಶೆಟ್ಟಿ ಬರೆದುಕೊಂಡಿದ್ದಾರೆ.

    'ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ'ಯಲ್ಲಿ ಅಪ್ಪು ಇಷ್ಟಪಟ್ಟ ಅಂಶಗಳಿವು'ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ'ಯಲ್ಲಿ ಅಪ್ಪು ಇಷ್ಟಪಟ್ಟ ಅಂಶಗಳಿವು

    ಕನ್ನಡ ಚಿತ್ರಗಳನ್ನು ವೀಕ್ಷಿಸಿ ಈ ರೀತಿ ಪ್ರೋತ್ಸಾಹಿಸುವವರ ಸಂಖ್ಯೆ ದೊಡ್ಡದಾದರೆ, ಇನ್ನೂ ಹೆಚ್ಚು ಉತ್ತಮ ಚಿತ್ರಗಳು ಕನ್ನಡ ಚಿತ್ರರಂಗದಲ್ಲಿ ತಯಾರಾಗುವುದರಲ್ಲಿ ಯಾವುದೇ ಅನುಮಾನ ಇಲ್ಲ.

    2 ಕೋಟಿ ವೆಚ್ಚದ 'ಸರ್ಕಾರಿ ಶಾಲೆ ಕಾಸರಗೂಡು' ಗಳಿಸಿದ್ದು 25 ಕೋಟಿ.!2 ಕೋಟಿ ವೆಚ್ಚದ 'ಸರ್ಕಾರಿ ಶಾಲೆ ಕಾಸರಗೂಡು' ಗಳಿಸಿದ್ದು 25 ಕೋಟಿ.!

    ಅಂದ್ಹಾಗೆ, 2018 ರಲ್ಲಿ ಬಿಡುಗಡೆ ಆಗಿದ್ದ ರಿಶಬ್ ಶೆಟ್ಟಿ ನಿರ್ಮಾಣದ ಮತ್ತು ನಿರ್ದೇಶನದ 'ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು' ಚಿತ್ರ ರಾಜ್ಯ ಮತ್ತು ರಾಷ್ಟ್ರ ಪ್ರಶಸ್ತಿಗೆ ಭಾಜನವಾಗಿದೆ.

    English summary
    Rishab Shetty feels happy about Fan's letter on Sarkari Hiriya Prathamika Shale Kasaragodu movie.
    Friday, January 31, 2020, 16:45
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X