For Quick Alerts
  ALLOW NOTIFICATIONS  
  For Daily Alerts

  ತಮ್ಮ ವಿಶೇಷ ಅಭಿಮಾನಿಯನ್ನು ಭೇಟಿ ಮಾಡಿದ ರಿಷಭ್ ಶೆಟ್ಟಿ

  |

  'ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು' ಸಿನಿಮಾವನ್ನು ನೋಡಿ ನಿರ್ದೇಶಕ ರಿಷಭ್ ಶೆಟ್ಟಿಗೆ ಅಭಿಮಾನಿಯೊಬ್ಬರು ಪತ್ರ ಬರೆದಿದ್ದರು. ಈ ಅಭಿಮಾನಿಯನ್ನು ರಿ‍ಷಭ್ ಶೆಟ್ಟಿ ನಿನ್ನೆ (ಫೆಬ್ರವರಿ 2) ಭೇಟಿ ಮಾಡಿದ್ದಾರೆ.

  Bigg Boss Kannada 07 :final 5 got reward for being finalists this season | BBK7 | Shineshetty | Kuri

  ಕೆಲಸ ಮೇಲೆ ರಿ‍ಷಭ್ ಶೆಟ್ಟಿ ಮೈಸೂರಿಗೆ ಹೋಗಿದ್ದರು. ಈ ವೇಳೆ ತಮ್ಮ ಅಪರೂಪದ ಅಭಿಮಾನಿಯನ್ನು ಭೇಟಿ ಮಾಡಿದ್ದಾರೆ. ಸಿನಿಮಾ ನೋಡಿ ಪತ್ರ ಬರೆದ ಅಭಿಮಾನಿಗೆ ಅಭಿನಂದನೆ ಸಲ್ಲಿಸಿದ್ದಾರೆ.

  ''ಒಂದು ಸಿನಿಮಾವನ್ನು ಸಿನಿಮಾ ಮೀರಿ ಭಾವನೆಯಾಗಿ ತೆಗೆದುಕೊಳ್ಳುವುದು ದೊಡ್ಡದು. ನನಗೆ ಅವರು ಬರೆದಿರುವ ಪತ್ರ ಬೇರೆ ಪ್ರಶಸ್ತಿಗಳಿಗಿಂತ ಹೆಚ್ಚು ಅನಿಸಿತು. ಕನ್ನಡ ಸಿನಿಮಾದ ಅಭಿಮಾನಿಗಳಿಂದ ಕನ್ನಡ ಸಿನಿಮಾ ಉಳಿಯುತ್ತದೆ. ಮುಂದೆ ಬೆಳೆಯುತ್ತದೆ.'' ಎಂದು ರಿ‍ಷಭ್ ಸಂತಸ ವ್ಯಕ್ತಪಡಿಸಿದರು.

  ಭರತ್ ರಾಮಸ್ವಾಮಿ ಎಂಬುವವರು ಮೈಸೂರಿನ ಅಭಿಮಾನಿ. ಡಿಜಿಟಲ್ ಪ್ಲ್ಯಾಟ್ ಫಾರ್ಮ್ ನಲ್ಲಿ 'ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು' ಚಿತ್ರವನ್ನು ವೀಕ್ಷಿಸಿದರು. ಸಿನಿಮಾ ನೋಡಿ ಪತ್ರ ಬರೆದು ಅದರ ಜೊತೆಗೆ 200 ರೂಪಾಯಿ ಹಣವನ್ನು ಕಳುಹಿಸಿದ್ದರು. ಚಿತ್ರಮಂದಿರಕ್ಕೆ ಹೋಗಿ ಸಿನಿಮಾ ನೋಡದ ಕಾರಣ ತಮ್ಮ ಟಿಕೆಟ್ ಹಣವನ್ನು ಪತ್ರದ ಜೊತೆಗೆ ಕಳುಹಿಸಿದ್ದರು.

  ಅಂದ್ಹಾಗೆ, 2018 ರಲ್ಲಿ ಬಿಡುಗಡೆ ಆಗಿದ್ದ ರಿಷಬ್ ಶೆಟ್ಟಿ ನಿರ್ಮಾಣದ ಮತ್ತು ನಿರ್ದೇಶನದ 'ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು' ಚಿತ್ರ ರಾಜ್ಯ ಮತ್ತು ರಾಷ್ಟ್ರ ಪ್ರಶಸ್ತಿಗೆ ಭಾಜನವಾಗಿದೆ.

  English summary
  Rishab Shetty met his special fan who wrote latter on Sarkari Hiriya Prathamika Shale Kasaragodu movie.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X