'ಹೀರೋ' ಟ್ರೇಲರ್: ರಕ್ತ-ಸಿಕ್ತ ಲಂಕಾಪುರದಲ್ಲಿ ರಿಷಬ್

ಸಂಕ್ರಾಂತಿ ಹಬ್ಬದ ದಿನದಂದು ರಿಷಬ್ ಶೆಟ್ಟಿ ನಟಿಸಿರುವ 'ಹೀರೊ' ಸಿನಿಮಾದ ಟ್ರೇಲರ್ ಬಿಡುಗಡೆ ಆಗಿದ್ದು, ಸಿನಿಮಾದ ಬಗ್ಗೆ ಕುತೂಹಲ ಹೆಚ್ಚಿಸುತ್ತಿದೆ ಟ್ರೇಲರ್.

ರಕ್ತದೋಕುಳಿ, ಪ್ರೇಮ-ಸರಸ, ಹಾಸ್ಯ, ಆಕ್ಷನ್ ಎಲ್ಲವನ್ನೂ ಒಳಗೊಂಡಿರುವ ಸಿನಿಮಾ ಹೀರೊ ಆಗಿರುವುದನ್ನು ಟ್ರೇಲರ್ ಸಾರಿ ಹೇಳುತ್ತಿದೆ.

ಕೊರೊನಾ ಲಾಕ್‌ಡೌನ್ ಅವಧಿಯಲ್ಲಿ ಸೀಮಿತ ಜನರ, ಸೀಮಿತ ಲೊಕೇಶನ್‌ಗಳಲ್ಲಿ ತೆಗೆದ ಸಿನಿಮಾ ಈ 'ಹೀರೊ'. ಬಹುತೇಕ ಸಿನಿಮಾ ಒಂದೇ ಲೊಕೇಶನ್‌ನಲ್ಲಿ ನಡೆಯಲಿದೆ.

Rishab Shettys Hero Movie Trailer Released

ಭರತ್ ರಾಜ್ ಈ ಸಿನಿಮಾವನ್ನು ನಿರ್ದೇಶಿಸಿದ್ದು, ರಿಷಬ್ ಶೆಟ್ಟಿ ನಾಯಕ, ಗಾನವಿ ಲಕ್ಷ್ಮಣ್ ನಾಯಕಿಯಾಗಿ ನಟಿಸಿದ್ದಾರೆ. ಸಿನಿಮಾಕ್ಕೆ ಬಂಡವಾಳ ಹೂಡಿರುವುದು ಸಹ ರಿಷಬ್ ಶೆಟ್ಟಿಯೇ. ಸಂಗೀತ ನೀಡಿರುವುದು ಅಜನೀಶ್ ಲೋಕನಾಥ್.

ಟ್ರೇಲರ್ ನಲ್ಲಿ ರಕ್ತದೋಕುಳಿಯೇ ಹರಿದಿದೆ. ಸಿನಿಮಾದಲ್ಲಿ ರಿಷಬ್ ಶೆಟ್ಟಿ ಹೀರೋ ನಾ ಅಥವಾ ವಿಲನ್ ಆಗಿರಬಹುದಾ ಎಂಬ ಅನುಮಾನ ಮೂಡವಂತ ಟ್ವಿಸ್ಟ್ ಒಂದನ್ನು ಟ್ರೇಲರ್‌ ನ ಕೊನೆಯಲ್ಲಿ ನೀಡಲಾಗಿದೆ.

ರಿಷಬ್ ಶೆಟ್ಟಿ ಈಗಾಗಲೇ 'ಗರುಡ ಗಮನ ವೃಷಭ ವಾಹನ' ಸಿನಿಮಾದಲ್ಲಿ ನಟಿಸಿದ್ದಾರೆ. 'ಹರಿಕತೆ ಅಲ್ಲ ಗಿರಿಕತೆ' ಚಿತ್ರೀಕರಣ ಸಾಗಿದೆ. 'ಬೆಲ್ ಬಾಟಂ 2' ಸಿನಿಮಾದ ಚಿತ್ರೀಕರಣ ಪ್ರಾರಂಭವಾಗಲಿದೆ. ಇವುಗಳ ನಡುವೆ ಕಿರಿಕ್ ಪಾರ್ಟಿ 2 ಸಿನಿಮಾ ನಿರ್ದೇಶಿಸಲಿದ್ದಾರೆ. ಜೊತೆಗೆ ರುದ್ರಪ್ರಯಾಗ ಸಿನಿಮಾವನ್ನು ಸಹ ನಿರ್ದೇಶಿಸಲಿದ್ದಾರೆ ರಿಷಬ್.

More from Filmibeat

English summary
Rishab Shetty's hero movie trailer released on January 14. Bharath Raj directed this movie. This movie made on Corona lock down time.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X