For Quick Alerts
  ALLOW NOTIFICATIONS  
  For Daily Alerts

  ಸಿನಿಮಾದಿಂದ ಬ್ರೇಕ್ ಪಡೆದಿರುವ ರಿಷಬ್ ಶೆಟ್ಟಿ ‘ವರ್ಕ್ ಫ್ರಮ್ ಹೋಂ’ ಜೋರಾಗಿದೆ!

  |

  ಕೊರೊನಾ ಎಫೆಕ್ಟ್ ನಿಂದ ಇಡೀ ಚಿತ್ರತಂಡ ಸಂಪೂರ್ಣ ಸ್ಥಬ್ದವಾಗಿದೆ. ಚಿತ್ರೀಕರಣ, ಚಿತ್ರ ಪ್ರದರ್ಶನ ಸೇರಿದಂತೆ ಸಿನಿಮಾಗೆ ಸಂಬಂಧಿಸಿದ ಎಲ್ಲಾ ಚಟುವಟಿಕೆಗಳು ಬಂದ್ ಆಗಿವೆ. ಈ ಸಮಯದಲ್ಲಿ ಸ್ಯಾಂಡಲ್ ವುಡ್ ಮಂದಿ ಕೊಂಚ ರಿಲ್ಯಾಕ್ಸ್ ಮೂಡ್ ಗೆ ಹೋಗಿದ್ದರೆ.

  ಮನೆಯಲ್ಲಿ ಏನ್ ಮಾಡ್ತಿದ್ದಾರೆ ಸ್ಯಾಂಡಲ್ ವುಡ್ ಸ್ಟಾರ್ಸ್? | Rishab Shetty | Work from home

  ಸಿಕ್ಕ ಪುಟ್ಟ ಬ್ರೇಕ್ ನಲ್ಲಿ ಸ್ಯಾಂಡಲ್ ವುಡ್ ಸ್ಟಾರ್ ಕುಟುಂಬದ ಜೊತೆ ಸಮಯ ಕಳೆಯುತ್ತಿದ್ದಾರೆ. ಊರು ಬಿಟ್ಟು ಬೆಂಗಳೂರಿಗೆ ಬಂದವರನ್ನು ಈ ಕೊರೊನಾ ವೈರಸ್ ಮತ್ತೆ ಊರಿಗೆ ಮರಳುವಂತೆ ಮಾಡಿದೆ. ಸ್ಯಾಂಡಲ್ ವುಡ್ ನಟ ಮತ್ತು ನಿರ್ದೇಶಕ ರಿಷಬ್ ಶೆಟ್ಟಿ ಕುಟುಂಬದ ಜೊತೆ ಕಾಲಕಳೆಯುತ್ತಿರುವ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

  ಮಗನ ಆರೈಕೆಯಲ್ಲಿ ರಿಷಬ್

  ಮಗನ ಆರೈಕೆಯಲ್ಲಿ ರಿಷಬ್

  ಸಿನಿಮಾದಿಂದ ಬ್ರೇಕ್ ಸಿಕ್ಕಿರುವ ಕಾರಣ ರಿಷಬ್ ಸೀದ ಊರಿನ ಕಡೆ ಪಯಣ ಬೆಳೆಸಿದ್ದಾರೆ. ಹುಟ್ಟೂರು ಕುಂದಾಪುರಕ್ಕೆ ತೆರಳಿರುವ ರಿಷಬ್ ಅಲ್ಲಿ ಮಗನ ಆರೈಕೆಯಲ್ಲಿ

  ಬ್ಯುಸಿಯಾಗಿದ್ದಾರೆ. ಮಗರಾಯ ರಣ್ವಿತ್ ಶೆಟ್ಟಿಯನ್ನು ಕಾಲಿನ ಮೇಲೆ ಮಲಗಿಸಿಕೊಂಡು ಮಜ್ಜನ ನೀಡುತ್ತಿರುವ ರಿಷಬ್, ಈ ನೆಮ್ಮದಿನೆ ಬೇರೆ ಎಂದು ಸಂತಸದಿಂದ ಫೋಟೋವನ್ನು ಹಂಚಿಕೊಂಡಿದ್ದಾರೆ.

  ‘ವರ್ಕ್ ಫ್ರಮ್ ಹೋಂ’ ಜೋರಾಗ್ ನೆಡಿತಿದೆ

  ಸದ್ಯ ಆಫೀಸ್ ಗಳು ಬಂದ್ ಆಗಿವೆ. ಎಲ್ಲಾ ವರ್ಕ್ ಫ್ರಂ ಹೋಮ್ ಮಾಡುತ್ತಿದ್ದಾರೆ. ರಿಷಬ್ ಕೂಡ ವರ್ಕ್ ಫ್ರಂ ಹೋಮ್ ಜೋರಾಗಿ ನಡೆಯುತ್ತಿದೆ ಎಂದು ಹೇಳಿದ್ದಾರೆ. "ಊರೂರೇ ಖಾಲಿಯಾಗಿದೆ, ಆಫೀಸ್ ಬೀಗ ಹಾಕಿದೆ, ಸಿನಿಮಾದಿಂದ ಚಿಕ್ಕ ಬ್ರೇಕ್ ಸಿಕ್ಕಿದೆ. ಎಲ್ಲಾ ಆತಂಕಗಳನ್ನ ಹಿಂದೆ ಬಿಟ್ಟು ಹುಟ್ಟಿದೂರಲ್ಲಿ, ನಾನು ಬೆಳೆದಿದ್ ಮನೇಲಿ, ಮಗರಾಯನಿಗೆ ಮಜ್ಜನ ನೀಡೋ ನೆಮ್ಮದಿನೇ ಬೇರೆ. ಒಟ್ಟಾರೆ ಎಲ್ಲರ ತರ ನಮ್ದೂ ‘ವರ್ಕ್ ಫ್ರಂ ಹೋಂ' ಜೋರಾಗ್ ನೆಡಿತಿದೆ" ಎಂದು ಹೇಳಿದ್ದಾರೆ.

  ರಿಷಬ್ ಪೋಸ್ಟ್ ಗೆ ರಕ್ಷಿತ್ ಹೇಳಿದ್ದೇನು?

  ರಕ್ಷಿತ್ ಶೆಟ್ಟಿ ಕೂಡ ಸದ್ಯ ರಿಲ್ಯಾಕ್ಸ್ ಮೂಡಲ್ಲಿ ಇದ್ದಾರೆ. ಇತ್ತೀಚಿಗಷ್ಟೆ ಹೊಸ ಸಿನಿಮಾ ಅನೌನ್ಸ್ ಮಾಡಿರುವ ರಕ್ಷಿತ್ ಸಿನಿಮಾ ಕೆಲಸ ದಿಂದ ಬ್ರೇಕ್ ಪಡೆದಿದ್ದಾರೆ. ರಿಷಬ್ ಶೆಟ್ಟಿ ಹಾಕಿರುವ ಫೋಟೋಗೆ ರಕ್ಷಿತ್ "ನನ್ನ ಮುಗ್ಧತೆಯ ಅರಿವು ನನಗಿಲ್ಲ, ನನ್ನ ಹೆತ್ತವರನೊಮ್ಮೆ ನೋಡು, ಅವನ ಮುಗ್ಧತೆಯಲ್ಲವೆ ನನಗೆಲ್ಲ. ಎಂದು ಪ್ರತಿಕ್ರಿಯೆ ನೀಡಿದ್ದಾರೆ.

  ಸ್ಯಾಂಡಲ್ ವುಡ್ ಸ್ಟಾರ್ ಏನ್ಮಾಡುತ್ತಿದ್ದಾರೆ?

  ಸ್ಯಾಂಡಲ್ ವುಡ್ ಸ್ಟಾರ್ ಏನ್ಮಾಡುತ್ತಿದ್ದಾರೆ?

  ಸಿನಿಮಾದಿಂದ ಬ್ರೇಕ್ ಪಡೆದು ರಿಲ್ಯಾಕ್ಸ್ ಮೂಡ್ ಗೆ ಹೋಗಿರುವ ಚಿತ್ರತಾರೆಯರು ಕುಟುಂಬದ ಜೊತೆ ಸಮಯ ಕಳೆಯುತ್ತಿದ್ದಾರೆ. ಪುನೀತ್ ರಾಜ್ ಕುಮಾರ್ ಮನೆಯಲ್ಲಿದ್ದಾರೆ. ಶಿವಣ್ಣ ಮನೆಯಲ್ಲಿಯೆ ಸಿನಿಮಾಗಳನ್ನು ನೋಡುತ್ತಿದ್ದಾರೆ. ಇನ್ನು ನಟ ಧನಂಜಯ್ ಪುಸ್ತಕಗಳನ್ನು ಓದುತ್ತಿದ್ದಾರೆ. ಸುದೀಪ್ ಕುಟುಂಬದ ಜೊತೆ ಸಮಯ ಕಳೆಯುತ್ತಿದ್ದಾರೆ. ಇನ್ನು ಊರು ಬಿಟ್ಟು ಬೆಂಗಳೂರಿಗೆ ಬಂದವರೆಲ್ಲ ಬಹುತೇಕರು ಊರಿಗೆ ವಾಪಸ್ ಆಗಿ ಹುಟ್ಟೂರಿನಲ್ಲಿ ಎಂಜಾಯ್ ಮಾಡುತ್ತಿದ್ದಾರೆ.

  English summary
  Actor Rishab Shetty got a break from cinema and he is taking care of his son. Rishab Shetty is in his Native place Kundapur.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X