For Quick Alerts
  ALLOW NOTIFICATIONS  
  For Daily Alerts

  ಪ್ಯಾನ್‌ ಇಂಡಿಯಾ ಚಿತ್ರವಾಯ್ತು 'ಕಾಂತಾರ': ಐದು ಭಾಷೆಗಳಲ್ಲೂ ರಿಷಬ್‌ ಅಬ್ಬರ

  |

  ರಿಷಬ್‌ ಶೆಟ್ಟಿ ನಿರ್ದೇಶನದ 'ಕಾಂತಾರ' ಚಿತ್ರ ಕನ್ನಡ ಚಿತ್ರರಂಗದಲ್ಲಿ ಹೊಸ ಇತಿಹಾಸ ಸೃಷ್ಟಿಸುತ್ತಿದೆ. ನಿರೀಕ್ಷೆಗೂ ಮೀರಿ ಅದ್ಭುತ ಯಶಸ್ಸುಗಳಿಸಿರುವ 'ಕಾಂತಾರ' ಚಿತ್ರ ಬಾಕ್ಸ್‌ ಆಫೀಸ್‌ನಲ್ಲೂ ಸಖತ್ ಸದ್ದು ಮಾಡುತ್ತಿದೆ. ಸೆಪ್ಟೆಂಬರ್‌ 30 ರಂದು ತೆರೆಕಂಡ 'ಕಾಂತಾರ' ಸಿನಿಮಾ ಇಂದಿಗೂ ಹೌಸ್‌ಫುಲ್‌ ಪ್ರದರ್ಶನ ಕಾಣುತ್ತಿದೆ.

  ವಿಶ್ವದಾದ್ಯಂತ 'ಕಾಂತಾರ' ಸಿನಿಮಾ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಸೋಶಿಯಲ್‌ ಮೀಡಿಯಾಗಳಲ್ಲಂತೂ ಚಿತ್ರದ ಬಗ್ಗೆ ಅತೀವ ಮೆಚ್ಚುಗೆ ವ್ಯಕ್ತವಾಗುತ್ತಿದ್ದು, ಜನ 'ಕಾಂತಾರ 'ವೀಕ್ಷಣೆಗೆ ಮುಗಿಬೀಳುತ್ತಿದ್ದಾರೆ. 'ಕಾಂತಾರ' ಒಂದು ನೋಡಿ ಮರೆಯುವ ಚಿತ್ರವಲ್ಲ. ಅದು ನೋಡಿ ಅನುಭವಿಸುವ ಸಿನಿಮಾ ಎನ್ನುವುದು 'ಕಾಂತಾರ' ಸಿನಿಮಾ ನೋಡಿರುವ ಪ್ರೇಕ್ಷಕರ ಅಭಿಪ್ರಾಯವಾಗಿದೆ.

  'ಕಾಂತಾರ' ಸಿನಿಮಾ ನೋಡಿ ಮೆಚ್ಚಿದ ಸುದೀಪ್: ರಿಷಬ್‌ ಬಗ್ಗೆ ಹೀಗೆಂದರು'ಕಾಂತಾರ' ಸಿನಿಮಾ ನೋಡಿ ಮೆಚ್ಚಿದ ಸುದೀಪ್: ರಿಷಬ್‌ ಬಗ್ಗೆ ಹೀಗೆಂದರು

  ಕರಾವಳಿ ಸಂಸ್ಕೃತಿಯನ್ನು ಹೊತ್ತು ತಂದ 'ಕಾಂತಾರ' ಚಿತ್ರ ಸೂಪರ್‌ ಹಿಟ್‌ ಆಗಿದ್ದು, ರಿಷಬ್‌ ಶೆಟ್ಟಿ ಅವರ ನೂತನ ಶೈಲಿಯ ಚಿತ್ರಕಥೆ ಹಾಗೂ ನಟನೆಗೆ ಪ್ರೇಕ್ಷಕರು ಮನಸೋತಿದ್ದಾರೆ. ಕೇವಲ ಕರ್ನಾಟಕ ಮಾತ್ರವಲ್ಲದೇ ಇತರ ರಾಜ್ಯಗಳಲ್ಲೂ 'ಕಾಂತಾರ' ಚಿತ್ರದ ಮೆಚ್ಚುಗೆಯ ಮಾತುಗಳು ವ್ಯಕ್ತವಾಗಿದ್ದು, ಇದನ್ನು ಪ್ಯಾನ್‌ ಇಂಡಿಯಾ ಸಿನಿಮಾ ಮಾಡಿದ್ದರೆ ಎಲ್ಲಾ ಭಾಷೆಯ ಪ್ರೇಕ್ಷಕರು ಚಿತ್ರವನ್ನು ಅನುಭವಿಸಿ ನೋಡುತ್ತಿದ್ದರು ಎನ್ನುವುದು ಹಲವರ ಅಭಿಪ್ರಾಯವಾಗಿದೆ.

  ಹಿಂದಿಯಲ್ಲಿ 'ಕಾಂತಾರ' ಟ್ರೈಲರ್‌ ಬಿಡುಗಡೆ

  'ಕಾಂತಾರ' ಇತರ ಭಾಷೆಯಲ್ಲೂ ತೆರೆ ಕಾಣಬೇಕು ಎನ್ನುವ ವ್ಯಾಪಕ ಒತ್ತಾಯ ಕೇಳಿ ಬಂದ ಹಿನ್ನೆಲೆಯಲ್ಲಿ ಹೊಂಬಾಳೆ ಫಿಲ್ಮ್ಸ್ ಇತರ ಭಾಷೆಗಳಲ್ಲೂ ಚಿತ್ರ ಬಿಡುಗಡೆ ಮಾಡಲು ಸಜ್ಜಾಗಿದೆ. 'ಕಾಂತಾರ' ಚಿತ್ರವನ್ನು ಮೊದಲಿಗೆ ಹಿಂದಿಯಲ್ಲಿ ಡಬ್‌ ಮಾಡಲಾಗಿದ್ದು, 'ಕಾಂತಾರ' ಹಿಂದಿ ಅವತರಣಿಕೆ ಅಕ್ಟೋಬರ್‌ 14ರಂದು ತೆರೆ ಕಾಣಲಿದೆ. ಈಗಾಗಲೇ 'ಕಾಂತಾರ' ಹಿಂದಿ ಭಾಷೆಯ ಟ್ರೈಲರ್‌ ಬಿಡುಗಡೆಯಾಗಿದ್ದು, ಪ್ರೇಕ್ಷಕರಿಂದ ಭಾರಿ ಮೆಚ್ಚುಗೆ ಪಡೆದುಕೊಂಡಿದೆ. ಹಿಂದಿ ಭಾಷೆಯಲ್ಲಿ ಡಬ್‌ ಆಗಿರುವ 'ಕಾಂತಾರ' ಅಕ್ಟೋಬರ್‌ 14ರಿಂದ ಚಿತ್ರಮಂದಿರಗಳಲ್ಲಿ ಪ್ರದರ್ಶನಗೊಳ್ಳಲಿದೆ ಎಂದು ಹೊಂಬಾಳೆ ಫಿಲ್ಮ್ಸ್ ತನ್ನ ಟ್ವಿಟರ್‌ ಖಾತೆಯಲ್ಲಿ ಹಂಚಿಕೊಂಡಿದೆ.

  ಖುಷಿ ಹಂಚಿಕೊಂಡ ಹೊಂಬಾಳೆ ಫಿಲ್ಮ್ಸ್

  ವಿಶ್ವದಾದ್ಯಂತ ಕನ್ನಡದಲ್ಲಿ ತೆರೆ ಕಂಡಿದ್ದ 'ಕಾಂತಾರ' ಸದ್ಯ ಪ್ಯಾನ್‌ ಇಂಡಿಯಾ ಸಿನಿಮಾವಾಗುತ್ತಿದೆ. ಕನ್ನಡದಲ್ಲಿ ಚಿತ್ರ ವೀಕ್ಷಿಸಿರುವ ಅನೇಕ ಇತರ ಭಾಷೆಯ ವಿಮರ್ಶಕರು 'ಕಾಂತಾರ'ವನ್ನು ತಮ್ಮ ಭಾಷೆಗಳಲ್ಲಿ ಡಬ್‌ ಮಾಡುವಂತೆ ಒತ್ತಾಯಿಸಿದ್ದರು. ಇದರ ಪರಿಣಾಮ 'ಕಾಂತಾರ' ಚಿತ್ರ ತಮಿಳು, ತೆಲುಗು ಹಾಗೂ ಮಲಯಾಳಂನಲ್ಲೂ ಬಿಡುಗಡೆಯಾಗಲಿದೆ. ಈ ಮೂಲಕ ಹೊಂಬಾಳೆ ಫಿಲ್ಮ್ಸ್ 'ಕಾಂತಾರ' ಚಿತ್ರವನ್ನು ಪ್ಯಾನ್‌ ಇಂಡಿಯಾ ಮಾಡಲು ಹೊರಟಿದೆ. ಈ ವಿಚಾರವನ್ನು ಸ್ವತಃ ಹೊಂಬಾಳೆ ಫಿಲ್ಮ್ಸ್ ತಮ್ಮ ಸೋಶಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

  ತಮಿಳು, ಮಲಯಾಳಂನಲ್ಲೂ 'ಕಾಂತಾರ' ಹವಾ

  'ಕಾಂತಾರ' ಚಿತ್ರ ಈಗಾಗಲೇ ತೆಲುಗಿನಲ್ಲಿ ಡಬ್‌ ಆಗಿದ್ದು, ಇದೇ ಅಕ್ಟೋಬರ್‌ 15ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಈಗಾಗಲೇ 'ಕಾಂತಾರ' ತೆಲುಗು ಅವತರಣಿಕೆಯ ಟ್ರೈಲರ್‌ ಕೂಡ ಬಿಡುಗಡೆಯಾಗಿದೆ. 'ಕಾಂತಾರ' ಚಿತ್ರವನ್ನು ಕಣ್ತುಂಬಿಕೊಳ್ಳಲು ತೆಲುಗು ಪ್ರೇಕ್ಷಕರು ಕಾತುರರಾಗಿದ್ದಾರೆ. ಇನ್ನು 'ಕಾಂತಾರ' ತಮಿಳು ಹಾಗೂ ಮಲಯಾಳಂ ಅವತರಣಿಕೆ ಕೂಡ ಸಿದ್ಧವಾಗುತ್ತಿದೆ. ಈ ವಿಚಾರವನ್ನು ಮಲಯಾಳಂನ ಖ್ಯಾತ ನಟ, ನಿರ್ಮಾಪಕ ಪ್ರಥ್ವಿರಾಜ್‌ ಸುಕುಮಾರನ್‌ ತಮ್ಮ ಸೋಶಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

  ರಿಷಬ್‌ ಶೆಟ್ಟಿ ಪ್ರಯತ್ನಕ್ಕೆ ಮಲಯಾಳಂ ನಟನ ಮೆಚ್ಚುಗೆ

  ಈಗಾಗಲೇ ಕನ್ನಡದಲ್ಲಿ 'ಕಾಂತಾರ' ಚಿತ್ರವನ್ನು ವೀಕ್ಷಿಸಿರುವ ಪ್ರಥ್ವಿರಾಜ್‌ ಸುಕುಮಾರನ್‌ 'ಕಾಂತಾರ' ಸದ್ಯದಲ್ಲೇ ಮಲಯಾಳಂನಲ್ಲಿ ಬರಲಿದೆ. ಕೇರಳ ರಾಜ್ಯಾದ್ಯಂತ ಎಲ್ಲಾ ಚಿತ್ರಮಂದಿರಗಳಲ್ಲಿ 'ಕಾಂತಾರ' ಚಿತ್ರ ತೆರ ಕಾಣಲಿದೆ. ಈ ಅದ್ಭುತವಾದ ಚಿತ್ರವನ್ನು ಯಾರೂ ಮಿಸ್‌ ಮಾಡಿಕೊಳ್ಳಬೇಡಿ ಎಂದು ಬರೆದುಕೊಂಡಿದ್ದಾರೆ. 'ಕಾಂತಾರ' ಸಿನಿಮಾ ಬಗ್ಗೆ ಈ ಹಿಂದೆ ಕೂಡ ಮೆಚ್ಚುಗೆ ವ್ಯಕ್ತಪಡಿಸಿದ್ದ ಪ್ರಥ್ವಿರಾಜ್‌ ಸುಕುಮಾರನ್‌, ರಿಷಬ್‌ ಶೆಟ್ಟಿ ಕ್ಯಾಮರಾ ಮುಂದೆ ಹಾಗೂ ಹಿಂದೆ ಎರಡರಲ್ಲೂ ಅದ್ಭುತವಾಗಿ ಕೆಲಸ ಮಾಡಿದ್ದಾರೆ. ಇಂತಹ ವಿಚಾರವನ್ನು ಆಯ್ಕೆ ಮಾಡಿರುವ ಹೊಂಬಾಳೆ ಫಿಲ್ಮ್ಸ್ ಗೂ ಧನ್ಯವಾದ ತಿಳಿಸಿದ್ದರು. ಕನ್ನಡ ಭಾಷೆಯಲ್ಲಿ ಈವರೆಗೂ ಹೌಸ್‌ಫುಲ್‌ ಪ್ರದರ್ಶನ ಕಾಣುತ್ತಾ ಬಾಕ್ಸ್‌ ಆಫೀಸ್‌ ಕೊಳ್ಳೆ ಹೊಡೆಯುತ್ತಿರುವ 'ಕಾಂತಾರ' ಇತರ ಭಾಷೆಗಳಲ್ಲೂ ಅಬ್ಬರಿಸುವ ನಿರೀಕ್ಷೆಯಿದೆ.

  English summary
  Sandalwood actor Rishab Shetty Starrer Kantara Movie dubbed in Hindi, Telugu, Tamil and Malayalam language,
  Sunday, October 9, 2022, 12:31
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X