For Quick Alerts
  ALLOW NOTIFICATIONS  
  For Daily Alerts

  50 ದಿನಗಳ ಹೊಸ್ತಿಲಲ್ಲಿ 'ಕಾಂತಾರ': ಕನ್ನಡದ ಯಾವುದೇ ಸಿನಿಮಾ ಮಾಡದ ದಾಖಲೆ ಬರೆಯಲು ಕ್ಷಣಗಣನೆ

  |

  ಅಪರೂಪದ ದಾಖಲೆಗಳನ್ನು ಸ್ವಂತ ಮಾಡಿಕೊಂಡು 'ಕಾಂತಾರ' ಸಿನಿಮಾ ಮುನ್ನುಗ್ಗುತ್ತಿದೆ. 50 ದಿನಗಳ ಹೊಸ್ತಿಲಲ್ಲಿ ಇರುವ ಸಿನಿಮಾ ಮತ್ತೊಂದು ದಾಖಲೆಗೆ ಸಜ್ಜಾಗಿದೆ. ಸಿನಿಮಾ ರಿಲೀಸ್ ಆಗಿ 5 ವಾರ ಕಳೆದರೂ ಹೊರ ರಾಜ್ಯಗಳಲ್ಲಿ 100 ಕ್ಕೂ ಅಧಿಕ ಶೋಗಳಲ್ಲಿ ಸಿನಿಮಾ ಪ್ರದರ್ಶನವಾಗುತ್ತಲೇ ಇದೆ.

  ರಿಷಬ್ ಶೆಟ್ಟಿ ನಿರ್ದೇಶಿಸಿ ನಟಿಸಿರುವ 'ಕಾಂತಾರ' ಸಿನಿಮಾ ಬಾಕ್ಸಾಫೀಸ್‌ನಲ್ಲಿ ಆರ್ಭಟ ಮುಂದುವರೆಸಿದೆ. ರಾಜ್ಯದ 300ಕ್ಕೂ ಅಧಿಕ ಸ್ಕ್ರೀನ್‌ಗಳಲ್ಲಿ ಸಿನಿಮಾ ಇನ್ನು ಪ್ರದರ್ಶನ ಕಾಣುತ್ತಿದೆ. ಹಲವೆಡೆ ಸಂಜೆ ವೇಳೆ ಸಿನಿಮಾ ಇಂದಿಗೂ ಹೌಸ್‌ಫುಲ್ ಆಗುತ್ತಿರುವುದು ವಿಶೇಷ. ರಾಜ್ಯದಲ್ಲಿ 7ನೇ ವಾರ ಸಿನಿಮಾ ಯಶಸ್ವಿಯಾಗಿ ಮುನ್ನುಗ್ಗುತ್ತಿದೆ. ಹಿಂದಿ, ತೆಲುಗು, ತಮಿಳು, ಮಲಯಾಳಂ ವರ್ಷನ್ 5ನೇ ವಾರಕ್ಕೆ ಕಾಲಿಟ್ಟಿದೆ. ಈಗಾಗಲೇ ಸಿನಿಮಾ 300 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿದೆ. ಸಣ್ಣ ಸಿನಿಮಾವೊಂದು ದೊಡ್ಡ ದೊಡ್ಡ ಸಿನಿಮಾಗಳ ದಾಖಲೆ ಮುರಿದು ಅಚ್ಚರಿ ಮೂಡಿಸಿದೆ.

  ಕರ್ನಾಟಕದಲ್ಲಿ 'ಕೆಜಿಎಫ್ 2' ಹಿಂದಿಕ್ಕಲು 'ಕಾಂತಾರ'ಗೆ ಬೇಕಿರೋದು ₹2.10 ಕೋಟಿ ಅಷ್ಟೇನಾ? ಏನಿದೆ ರಿಪೋರ್ಟ್?ಕರ್ನಾಟಕದಲ್ಲಿ 'ಕೆಜಿಎಫ್ 2' ಹಿಂದಿಕ್ಕಲು 'ಕಾಂತಾರ'ಗೆ ಬೇಕಿರೋದು ₹2.10 ಕೋಟಿ ಅಷ್ಟೇನಾ? ಏನಿದೆ ರಿಪೋರ್ಟ್?

  ಹೊಂಬಾಳೆ ಫಿಲ್ಮ್ಸ್ ಸಂಸ್ಥೆ ಮೊದಲಿಗೆ ಇಂಗ್ಲೀಷ್ ಸಬ್‌ಟೈಟಲ್ ಜೊತೆಗೆ ಕನ್ನಡದಲ್ಲಿ ಮಾತ್ರ ಸಿನಿಮಾ ಬಿಡುಗಡೆ ಮಾಡಿತ್ತು. ಸಿನಿಮಾ ನೋಡಿದವರೆಲ್ಲಾ ಮೆಚ್ಚಿ ಬಹುಪರಾಕ್ ಹೇಳಿದ್ದರು. ನಂತರ ಹೊರ ರಾಜ್ಯಗಳಿಂದಲೂ ಡಬ್ ಮಾಡುವಂತೆ ಬೇಡಿಕೆ ಬಂತು. ಹಾಗಾಗಿ 'ಕಾಂತಾರ' ಪ್ಯಾನ್ ಇಂಡಿಯಾ ಸಿನಿಮಾ ಆಗಿ ಬದಲಾಯಿತು.

   ಕನ್ನಡ ಚಿತ್ರರಂಗದಲ್ಲಿ ಹೊಸ ದಾಖಲೆ

  ಕನ್ನಡ ಚಿತ್ರರಂಗದಲ್ಲಿ ಹೊಸ ದಾಖಲೆ

  ಇದೇ ನವೆಂಬರ್ 18ಕ್ಕೆ ಸಿನಿಮಾ 50 ದಿನ ಪೂರೈಸುತ್ತಿದೆ. ವಿಶೇಷ ಅಂದರೆ ಬಿಡುಗಡೆಯಾದ ಬಹುತೇಕ ಎಲ್ಲಾ ಥಿಯೇಟರ್‌ಗಳಲ್ಲಿ 'ಕಾಂತಾರ' ಈ ಸಾಧನೆ ಮಾಡುತ್ತಿದೆ. ಅದರಲ್ಲೂ ಬೆಂಗಳೂರಿನ 30 ಕ್ಕೂ ಅಧಿಕ ಸಿಂಗಲ್ ಸ್ಕ್ರೀನ್ ಥಿಯೇಟರ್‌ಗಳಲ್ಲಿ 50 ದಿನ ಕಂಪ್ಲೀಟ್ ಮಾಡುತ್ತಿದೆ. ಬಾಕ್ಸಾಫೀಸ್‌ ಗಳಿಕೆಯನ್ನು ಆಧರಿಸಿ ಇತ್ತೀಚೆಗೆ ಸಿನಿಮಾಗಳ ಸಕ್ಸಸ್ ನಿರ್ಧರಿಸಲಾಗುತ್ತಿತ್ತು. ಆದರೆ ಕಾಂತಾರ ಮಾತ್ರ ಇದಕ್ಕೆ ತದ್ವಿರುದ್ಧ ಎನ್ನುವಂತೆ ಕಲೆಕ್ಷನ್ ಜೊತೆಗೆ 50 ದಿನ ಪೂರೈಸುತ್ತಿದೆ. ಮೊದಲ ದಿನ ಸಿನಿಮಾ ರಿಲೀಸ್ ಆಗಿದ್ದ ಅಷ್ಟು ಥಿಯೇಟರ್‌ಗಳಲ್ಲಿ ಅರ್ಧ ಶತಕ ಬಾರಿಸುತ್ತಿದೆ.

   ಬೆಂಗಳೂರಿನಲ್ಲಿ 280 ಶೋ

  ಬೆಂಗಳೂರಿನಲ್ಲಿ 280 ಶೋ

  'ಕಾಂತಾರ' ಸದ್ಯ ಬೆಂಗಳೂರಿನಲ್ಲಿ 280ಕ್ಕೂ ಹೆಚ್ಚು ಶೋಗಳಲ್ಲಿ ಪ್ರದರ್ಶನ ಕಾಣುತ್ತಿದೆ. ಸಿನಿಮಾ ರಿಲೀಸ್ ಆಗಿ 45 ದಿನ ಕಳೆದರು ಕ್ರೇಜ್ ಮಾತ್ರ ಕಮ್ಮಿ ಆಗಿಲ್ಲ. ಬೆಂಗಳೂರಿನಲ್ಲೂ ಕೆಲವೆಡೆ ಸಿನಿಮಾ ಹೌಸ್‌ಫುಲ್ ಆಗುತ್ತಿದೆ. ದೊಡ್ಡ ದೊಡ್ಡ ಸಿನಿಮಾಗಳನ್ನು ಹಿಂದಿಕ್ಕಿ ರಿಷಬ್ ಶೆಟ್ಟಿ ಸಿನಿಮಾ ಅಬ್ಬರಿಸುತ್ತಿದೆ. ಸಿನಿಮಾ ಹಲವು ಥಿಯೇಟರ್‌ಗಳಲ್ಲಿ 100 ದಿನ ಪೂರೈಸುವ ಸಾಧ್ಯತೆಯಿದೆ.

   ಯಾವ ರಾಜ್ಯದಲ್ಲಿ ಎಷ್ಟು ಶೋ?

  ಯಾವ ರಾಜ್ಯದಲ್ಲಿ ಎಷ್ಟು ಶೋ?

  'ಕಾಂತಾರ' ಸಿನಿಮಾ ರಿಲೀಸ್ ಆಗಿ 40 ದಿನಗಳ ಕಳೆದರೂ ಇವತ್ತಿಗೂ ದೇಶಾದ್ಯಂತ 1000ಕ್ಕೂ ಅಧಿಕ ಶೋ ಪ್ರದರ್ಶನವಾಗುತ್ತಿದೆ. ಮಹಾರಾಷ್ಟ್ರದಲ್ಲಿ 416, ಗುಜರಾತ್ 312, ಆಂಧ್ರ 265, ತೆಲಂಗಾಣದಲ್ಲಿ 165 ಶೋ ಪ್ರದರ್ಶನ ಕಾಣುತ್ತಿದೆ. ಇನ್ನು ತಮಿಳುನಾಡಿನಲ್ಲಿ 100ಕ್ಕೂ ಅಧಿಕ ಸ್ಕ್ರೀನ್‌ಗಳಲ್ಲಿ ಸಿನಿಮಾ ಸದ್ದು ಮಾಡುತ್ತಿದೆ. ಕರ್ನಾಟಕದಲ್ಲಿ 300ಕ್ಕೂ ಅಧಿಕ ಸ್ಕ್ರೀನ್‌ಗಳಲ್ಲಿ 50 ದಿನ ಪೂರೈಸಲಿದೆ.

   ಹಿಂದಿ ಬೆಲ್ಟ್‌ನಲ್ಲಿ 75 ಕೋಟಿ ಗಳಿಕೆ

  ಹಿಂದಿ ಬೆಲ್ಟ್‌ನಲ್ಲಿ 75 ಕೋಟಿ ಗಳಿಕೆ

  'ಕಾಂತಾರ' ಹಿಂದಿ ವರ್ಷನ್ ಆರ್ಭಟ ಮುಂದುವರೆದಿದೆ. ಸಿನಿಮಾ ಈಗಾಗಲೇ 75 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿ ಹುಬ್ಬೇರಿಸಿದೆ. ಕಳೆದೊಂದು ತಿಂಗಳಿನಿಂದ ಬಿಡುಗಡೆಯಾದ ಎಲ್ಲಾ ಹಿಂದಿ ಸಿನಿಮಾಗಳನ್ನು ಮೀರಿ 'ಕಾಂತಾರ' ಬಾಕ್ಸಾಫೀಸ್ ಶೇಕ್ ಮಾಡುತ್ತಿದೆ. ವಾರದ ದಿನಗಳಲ್ಲಿ ಒಂದು ಕೋಟಿಗೂ ಅಧಿಕ ಕಲೆಕ್ಷನ್ ಮಾಡುತ್ತಿರುವ ಸಿನಿಮಾ ಶನಿವಾರ, ಭಾನುವಾರ 2 ಕೋಟಿ ಬಾಚುತ್ತಿದೆ.

  'ಕಾಂತಾರ' ಸಿನಿಮಾ ಪ್ರದರ್ಶನ ನಿಲ್ಲಿಸುವಂತೆ ಜಿಲ್ಲಾಧಿಕಾರಿಗೆ ಮನವಿ'ಕಾಂತಾರ' ಸಿನಿಮಾ ಪ್ರದರ್ಶನ ನಿಲ್ಲಿಸುವಂತೆ ಜಿಲ್ಲಾಧಿಕಾರಿಗೆ ಮನವಿ

  English summary
  Rishab Shetty Starrer Kantara Will Be completing 50 days in 300+ Theatres All over Karnataka This Week. first Kannada Film to Complete 50 days in all Screens it Released on the first day. know more.
  Tuesday, November 15, 2022, 13:11
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X