For Quick Alerts
  ALLOW NOTIFICATIONS  
  For Daily Alerts

  ಋಷಿಕುಮಾರ ಸ್ವಾಮಿ ಕಂಠಸಿರಿ '24ಕ್ಯಾರೆಟ್' ಸಾಂಗ್

  By Rajendra
  |

  ಕಾಳಿಮಠದ ಋಷಿಕುಮಾರ ಸ್ವಾಮಿ ಈಗ ಸಖತ್ ಬಿಜಿ. ಈಟಿವಿ ಕನ್ನಡ ವಾಹಿನಿಯಲ್ಲಿ ತಾವೊಬ್ಬ ಸಕಲಕಲಾ ಪಾರಂಗತ ಎಂಬುದನ್ನು ತೋರಿಸಿಕೊಂಡಿದ್ದರು. ಸೂಪರೋ ರಂಗ ಎಂದು ಡಾನ್ಸ್ ಮಾಡಿ ಎಲ್ಲರ ಗಮನಸೆಳೆದಿದ್ದರು. ಈಗ ಇನ್ನೊಂದು ವರಸೆ ತೋರಿಸಲು ಬರುತ್ತಿದ್ದಾರೆ.

  ಚೌಡೇಶ್ವರಿ ಸಿನಿ ಚಿತ್ರಾಲಯ ಲಾಂಛನದಲ್ಲಿ ಚೌಡರೆಡ್ಡಿ (ಬಾಗೇಪಲ್ಲಿ) ಅವರು ನಿರ್ಮಿಸುತ್ತಿರುವ '24 ಕ್ಯಾರೆಟ್' ಚಿತ್ರದ "ಹುಟ್ಟಿನ ಟೇಶನ್ನು ಬಿಟೈತೆ ಜೀವ ಹತೈತೇ ಪ್ರೀತಿಯ ತೇರ ಬಂಡಿ.." ಎಂಬ ಹಾಡನ್ನು ಋಷಿಕುಮಾರ ಸ್ವಾಮಿ ಹಾಡಿದ್ದಾರೆ. ಈ ಹಾಡನ್ನು ಅವರೇ ಬರೆದಿದ್ದಾರೆ ಎಂದು ನಿರ್ದೇಶಕ ಎಸ್.ಉಮೇಶ್ ತಿಳಿಸಿದ್ದಾರೆ. ['ಕಲಿಯುಗ' ಕಾಳಿ ಸ್ವಾಮಿ]

  ನಾಲ್ಕು ಹಾಡುಗಳಿರುವ ಈ ಚಿತ್ರಕ್ಕೆ ಎ.ಟಿ.ರವೀಶ್ ಸಂಗೀತ ನೀಡುತ್ತಿದ್ದಾರೆ. ದೀಪು ಛಾಯಾಗ್ರಹಣ, ಸಂಜೀವರೆಡ್ಡಿ ಸಂಕಲನ, ಬಾಬುಖಾನ್ ಕಲಾ ನಿರ್ದೇಶನ, ನಂಜುಂಡಿ ನಾಗರಾಜ್, ಡೈನಾಮೆಟ್ ಶಿವು ಸಾಹಸ ನಿರ್ದೇಶನವಿರುವ ಈ ಚಿತ್ರದ ಸಹ ನಿರ್ಮಾಪಕರು ಸಿ.ಎಂ.ಕೃಷ್ಣಪ್ಪ. ವಿರಾಟ್ ಹಾಗೂ ಪೂಜಾ ಎಂಬ ನೂತನ ಪ್ರತಿಭೆ ನಾಯಕ, ನಾಯಕಿ.

  ಈ ಚಿತ್ರದ ತಾರಾಬಳಗದಲ್ಲಿ ಋಷಿಕುಮಾರ ಸ್ವಾಮೀಜಿ, ರಂಗಾಯಣರಘು, ಶೋಭಾ ರಾಜ್, ಸುರೇಶ್ ಮಂಗಳೂರು, ಧನಂಜಯ್, ಸುಧಾ ಬೆಳವಾಡಿ, ಪೆಟ್ರೋಲ್ ಪ್ರಸನ್ನ, ಅಮರನಾಥ್ ಆರಾಧ್ಯಾ, ಕರುಣಾಕರ್, ಕೃಷ್ಣಕುಮಾರ್ ಮುಂತಾದವರಿದ್ದಾರೆ. ಋಷಿಕುಮಾರ್ ಸ್ವಾಮೀಜಿ ಪುತ್ರಿ ಲಿಖಿತಾ ಕೂಡ ಈ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. (ಒನ್ಇಂಡಿಯಾ ಕನ್ನಡ)

  English summary
  Proclaimed godman Rishikumara Swamy aka Kaali Swamy sings a song in Kannada movie 24 carrot. Along with singing he penned the lyrics also. Recently he acted in Kaliyuga movie. 

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X