For Quick Alerts
  ALLOW NOTIFICATIONS  
  For Daily Alerts

  2ನೇ ದಿನವೂ ರಾಬರ್ಟ್ ದಾಖಲೆ ಗಳಿಕೆ: ಎರಡು ದಿನಕ್ಕೆ ಒಟ್ಟು ಕಲೆಕ್ಷನ್ ಎಷ್ಟು?

  |

  ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ರಾಬರ್ಟ್ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ದಾಖಲೆಯ ಗಳಿಕೆ ಕಾಣುತ್ತಿದೆ. ಕರ್ನಾಟಕ ಮತ್ತು ತೆಲುಗು ರಾಜ್ಯಗಳಲ್ಲಿ ಭರ್ಜರಿಯಾಗಿ ತೆರೆಕಂಡಿದ್ದ ಸಿನಿಮಾ ಮೊದಲ ದಿನ ಒಟ್ಟು 20 ಕೋಟಿಗೂ ಅಧಿಕ ಹಣ ಗಳಿಕೆ ಮಾಡಿತ್ತು. ಈಗ ಎರಡನೇ ದಿನವೂ ದಾಖಲೆಯ ಹಣ ಬಾಚಿಕೊಂಡಿದೆ.

  ಕರ್ನಾಟಕದಲ್ಲಿ ಮಾತ್ರ ಎರಡನೇ ದಿನ 12 ಕೋಟಿ ಕಲೆಕ್ಷನ್ ಮಾಡಿದೆ ಎಂದು ಚಿತ್ರತಂಡ ಮಾಹಿತಿ ನೀಡಿದೆ. ಪ್ರಾದೇಶಿಕ ಜಿಲ್ಲೆವಾರು ರಾಬರ್ಟ್ ಸಿನಿಮಾ ಉತ್ತಮ ಗಳಿಕೆ ಕಾಣುವುದರ ಮೂಲಕ ಬಾಕ್ಸ್ ಆಫೀಸ್‌ನಲ್ಲಿ ಸದ್ದು ಮಾಡ್ತಿದೆ. ಅಂದ್ಹಾಗೆ, ಎರಡು ದಿನಕ್ಕೆ ರಾಬರ್ಟ್ ಚಿತ್ರದ ಒಟ್ಟು ಗಳಿಕೆ ಎಷ್ಟು? ಯಾವ ಜಿಲ್ಲೆಯಲ್ಲಿ ಹೆಚ್ಚು ಹಣ ಗಳಿಸಿದೆ. ತೆಲಂಗಾಣ ಮತ್ತು ಆಂಧ್ರದ ಕಲೆಕ್ಷನ್ ಎಷ್ಟು ಎಂಬ ಪೂರ್ತಿ ವಿವರ ಇಲ್ಲಿದೆ. ಮುಂದೆ ಓದಿ....

  ಎರಡನೇ ದಿನ 12.78 ಕೋಟಿ ಗಳಿಕೆ

  ಎರಡನೇ ದಿನ 12.78 ಕೋಟಿ ಗಳಿಕೆ

  ದರ್ಶನ್ ಅಭಿನಯದ ರಾಬರ್ಟ್ ಸಿನಿಮಾ ಎರಡನೇ ದಿನ ಕರ್ನಾಟಕ ಬಾಕ್ಸ್ ಆಫೀಸ್‌ನಲ್ಲಿ 12.78 ಕೋಟಿ ಗಳಿಕೆ ಕಂಡಿದೆ. ಮೊದಲ ದಿನ 17.24 ಕೋಟಿ ಬಾಚಿಕೊಂಡಿತ್ತು. ಈಗ ಎರಡು ದಿನಕ್ಕೆ ಕರ್ನಾಟಕದಲ್ಲಿ 30.05 ಕೋಟಿ ಆಗಿದೆ. ಇದು ಕನ್ನಡ ಚಿತ್ರದ ಮಟ್ಟಿಗೆ ಹೊಸ ದಾಖಲೆಯಾಗಿದೆ.

  'ರಾಬರ್ಟ್' ಯಾವ ಜಿಲ್ಲೆಯಲ್ಲಿ ಎಷ್ಟು ಕಲೆಕ್ಷನ್ ಮಾಡಿದೆ? ಇಲ್ಲಿದೆ ಸಂಪೂರ್ಣ ವಿವರ'ರಾಬರ್ಟ್' ಯಾವ ಜಿಲ್ಲೆಯಲ್ಲಿ ಎಷ್ಟು ಕಲೆಕ್ಷನ್ ಮಾಡಿದೆ? ಇಲ್ಲಿದೆ ಸಂಪೂರ್ಣ ವಿವರ

  ಎರಡನೇ ದಿನದ ಪ್ರಾದೇಶಿಕವಾರು ವಿವರ

  ಎರಡನೇ ದಿನದ ಪ್ರಾದೇಶಿಕವಾರು ವಿವರ

  ಬಿಕೆಟಿ ಮತ್ತು ಸೌತ್ ಕೆನರಾದಲ್ಲಿ 5 ಕೋಟಿ ರೂ ಕಲೆಕ್ಷನ್ ಮಾಡಿದೆ. ಎಂಎಂಸಿಎಚ್‌ನಲ್ಲಿ 2 ಕೋಟಿ ರೂ ಬಾಚಿಕೊಂಡಿದ್ರೆ, ಚಿತ್ರದುರ್ಗ ಮತ್ತು ದಾವಣಗೆರೆಯಲ್ಲಿ 1.15 ಕೋಟಿ ರೂ. ಗಳಿಸಿದೆ. ಶಿವಮೊಗ್ಗದಲ್ಲಿ 78 ಲಕ್ಷ ರೂ, ಹೈದರಾಬಾದ್ ಕರ್ನಾಟಕ 2 ಕೋಟಿ ರೂ, ಬಾಂಬೆ ಕರ್ನಾಟಕದಲ್ಲಿ 1.5 ಕೋಟಿ ರೂ ಕಲೆಕ್ಷನ್ ಆಗಿದೆ. ಕರ್ನಾಟಕದಲ್ಲಿ ರಾಬರ್ಟ್ ಗಳಿಸಿದ್ದು, ಒಟ್ಟು 12.78 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ.

  ಆಂಧ್ರ-ತೆಲಂಗಾಣದಲ್ಲಿ ಕುತೂಹಲ ಹೆಚ್ಚಿಸಿದೆ

  ಆಂಧ್ರ-ತೆಲಂಗಾಣದಲ್ಲಿ ಕುತೂಹಲ ಹೆಚ್ಚಿಸಿದೆ

  ಆಂಧ್ರ ಪ್ರದೇಶ ಮತ್ತು ತೆಲಂಗಾಣದಲ್ಲಿ ರಾಬರ್ಟ್ ಸಿನಿಮಾ ದಾಖಲೆಯ ಸ್ಕ್ರೀನ್‌ಗಳಲ್ಲಿ ಬಿಡುಗಡೆಯಾಗಿದೆ. ಮೊದಲ ದಿನ ತೆಲುಗು ರಾಜ್ಯಗಳಿಂದ 3.12 ಕೋಟಿ ರೂ ಬಂದಿತ್ತು. ಎರಡನೇ ದಿನ ಲೆಕ್ಕಾಚಾರ ಸದ್ಯಕ್ಕೆ ಹೊರಬಿದ್ದಿಲ್ಲ. ಬಹುಶಃ ಎರಡನೇ ದಿನವೂ ಉತ್ತಮ ಗಳಿಕೆ ಕಂಡಿದೆ ಎಂದು ನಿರೀಕ್ಷಿಸಲಾಗಿದೆ.

  ದರ್ಶನ್ 'ರಾಬರ್ಟ್' ಸಿನಿಮಾ ಮೊದಲ ದಿನವೇ ದಾಖಲೆ ಕಲೆಕ್ಷನ್ದರ್ಶನ್ 'ರಾಬರ್ಟ್' ಸಿನಿಮಾ ಮೊದಲ ದಿನವೇ ದಾಖಲೆ ಕಲೆಕ್ಷನ್

  ರಾಬರ್ಟ್ ಒಟ್ಟು ಬಿಸಿನೆಸ್

  ರಾಬರ್ಟ್ ಒಟ್ಟು ಬಿಸಿನೆಸ್

  ರಾಬರ್ಟ್ ಸಿನಿಮಾ ಬಿಡುಗಡೆ ಆದ್ಮೇಲೆ ಚಿತ್ರಮಂದಿರಗಳಿಗೆ 33.22 ಕೋಟಿ ಕಲೆಕ್ಷನ್ ಆಗಿರುವ ಮಾಹಿತಿ ಇದೆ. ಇದರಲ್ಲಿ ಎರಡನೇ ದಿನದ ಆಂಧ್ರ-ತೆಲಂಗಾಣದ ಲೆಕ್ಕ ಇಲ್ಲ. ಬಿಡುಗಡೆಗೂ ಮುಂಚೆಯೇ ರಾಬರ್ಟ್ ಸಿನಿಮಾ 78 ಕೋಟಿಗೆ ವಿತರಣೆ ಹಕ್ಕು ಮಾರಾಟ ಆಗಿತ್ತು ಎಂದು ವರದಿಯಾಗಿತ್ತು. ಜೊತೆಗೆ ಡಿಜಿಟಲ್ ಹಕ್ಕು, ಸ್ಯಾಟ್‌ಲೈಟ್ ಹಕ್ಕು ದೊಡ್ಡ ಬೆಲೆಗೆ ಸೇಲ್ ಆಗಿದೆ ಎಂಬ ಮಾಹಿತಿಯೂ ಇತ್ತು.

  Roberrt Box Office Collection : ಅಭಿಮಾನಿಗಳ ಆರ್ಭಟಕ್ಕೆ ಬಾಕ್ಸ್ ಆಫೀಸ್ ಲೂಟಿ | Filmibeat Kannada
  English summary
  Roberrt Day 2 Box Office Collection: Darshan starrer Roberrt collects Rs 12.78 cr on its second day, total collection at Rs 30.05 cr.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X