For Quick Alerts
  ALLOW NOTIFICATIONS  
  For Daily Alerts

  'ರಾಬರ್ಟ್'ಗೆ ಪೈರಸಿ ಕಾಟ: 3 ಸಾವಿರಕ್ಕೂ ಅಧಿಕ ಲಿಂಕ್ ಡಿಲೀಟ್

  |

  ಚಿತ್ರರಂಗಕ್ಕೆ ಪೈರಸಿ ಕಾಟ ದೊಡ್ಡ ಶಾಪವಾಗಿದೆ. ಚಿತ್ರಮಂದಿರಗಳಲ್ಲಿ ಸಿನಿಮಾ ಬಿಡುಗಡೆಯಾಗುತ್ತಿದ್ದಂತೆ ಪೈರಸಿ ಲಿಂಕ್ ಗಳ ಸಂಖ್ಯೆಯು ಹೆಚ್ಚಾಗಿರುತ್ತೆ. ಸಿನಿಮಾತಂಡ ಎಷ್ಟೇ ಕ್ರಮಗಳನ್ನು ಕೈಗೊಂಡರು ಸಹ ಪೈರಸಿ ತಡೆಯಲು ಸಾಧ್ಯವಾಗುತ್ತಿಲ್ಲ.

  ರಾಬರ್ಟ್ ಸಿನಿಮಾವನ್ನು ದಯವಿಟ್ಟು ಪೈರಸಿ ಮಾಡಬೇಡಿ ಎಂದ ಕಿಚ್ಚ | Filmibeat Kannada

  ಕೋಟಿ ಕೋಟಿ ಬಂಡವಾಳ ಹೂಡಿ ಸಿನಿಮಾ ತಯಾರಿಸಿ, ಕಷ್ಟಪಟ್ಟು ಪ್ರಮೋಷನ್ ಮಾಡಿ ಬಿಡುಗಡೆ ಮಾಡುತ್ತಿದ ಕೆಲವೇ ಕ್ಷಣದಲ್ಲಿ ಪೈರಸಿಯಾಗಿ, ಸಂಪೂರ್ಣ ಸಿನಿಮಾ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುತ್ತದೆ. ಇದೀಗ ರಾಬರ್ಟ್ ಸಿನಿಮಾ ಸಹ ಪೈರಸಿ ಸಮಸ್ಯೆಯಲ್ಲಿ ಸಿಲುಕಿದೆ. ರಾಬರ್ಟ್ ಸಿನಿಮಾದ ಸಾವಿರಾರು ಪೈರಸಿ ಲಿಂಕ್ ಗಳು ಪತ್ತೆಯಾಗಿದೆ. ಮುಂದೆ ಓದಿ..

  'ರಾಬರ್ಟ್' ಯಾವ ಜಿಲ್ಲೆಯಲ್ಲಿ ಎಷ್ಟು ಕಲೆಕ್ಷನ್ ಮಾಡಿದೆ? ಇಲ್ಲಿದೆ ಸಂಪೂರ್ಣ ವಿವರ'ರಾಬರ್ಟ್' ಯಾವ ಜಿಲ್ಲೆಯಲ್ಲಿ ಎಷ್ಟು ಕಲೆಕ್ಷನ್ ಮಾಡಿದೆ? ಇಲ್ಲಿದೆ ಸಂಪೂರ್ಣ ವಿವರ

  ರಾಬರ್ಟ್'ಗೆ ಪೈರಸಿ ಕಾಟ

  ರಾಬರ್ಟ್'ಗೆ ಪೈರಸಿ ಕಾಟ

  ನಿನ್ನೆಯಷ್ಟೆ (ಮಾರ್ಚ್ 11) ಚಿತ್ರಮಂದಿರಕ್ಕೆ ಬಂದ ರಾಬರ್ಟ್ ಸಿನಿಮಾ ಪೈರಸಿಯಾಗಿದ್ದು, 3 ಸಾವಿರಕ್ಕೂ ಹೆಚ್ಚು ಪೈರಸಿ ಲಿಂಕ್ ಗಳು ಪತ್ತೆಯಾಗಿವೆ. ಖದೀಮರು ಸಿನಿಮಾವನ್ನು ಮೊಬೈಲ್ ಗಳಲ್ಲಿ ಸೆರೆಹಿಡಿದು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುತ್ತಿದ್ದಾರೆ.

  3 ಸಾವಿರಕ್ಕೂ ಅಧಿಕ ಲಿಂಕ್ ಡಿಲೀಟ್

  3 ಸಾವಿರಕ್ಕೂ ಅಧಿಕ ಲಿಂಕ್ ಡಿಲೀಟ್

  ಸೈಬರ್ ಕ್ರೈಮ್ ಮೊರೆಹೋಗಿರುವ ಸಿನಿಮಾತಂಡ ಈಗಾಗಲೇ 3 ಸಾವಿನ ಲಿಂಕ್ ಗಳನ್ನು ಡಿಲೀಟ್ ಮಾಡಿಸಿದ್ದಾರಂತೆ. ಇನ್ನು ಹೆಚ್ಚು ಲಿಂಕ್ ಗಳು ಪತ್ತೆಯಾಗುತ್ತಿದ್ದು, ಡಿಲೀಟ್ ಮಾಡಿಸುವ ಕಾರ್ಯದಲ್ಲಿ ಸಿನಿಮಾತಂಡ ನಿರತರಾಗಿದ್ದಾರೆ.

  ದರ್ಶನ್ 'ರಾಬರ್ಟ್' ಸಿನಿಮಾ ಮೊದಲ ದಿನವೇ ದಾಖಲೆ ಕಲೆಕ್ಷನ್ದರ್ಶನ್ 'ರಾಬರ್ಟ್' ಸಿನಿಮಾ ಮೊದಲ ದಿನವೇ ದಾಖಲೆ ಕಲೆಕ್ಷನ್

  ವಾರ್ನಿಂಗ್ ನೀಡಿದ್ದ ನಿರ್ಮಾಪಕ ಉಮಾಪತಿ

  ವಾರ್ನಿಂಗ್ ನೀಡಿದ್ದ ನಿರ್ಮಾಪಕ ಉಮಾಪತಿ

  ಸಿನಿಮಾ ಬಿಡುಗಡೆಯೂ ಮೊದಲೇ ನಿರ್ಮಾಪಕ ಉಮಾಪತಿ ಮಾತನಾಡಿ, ಪೈರಸಿ ಮಾಡುವವರಿಗೆ ವಾರ್ನಿಂಗ್ ನೀಡಿದ್ದರು. 'ಪೈರಸಿ ಮಾಡಬೇಡಿ, ಮಾಡಿದ್ರೆ ಅದರ ಪರಿಣಾಮ ದೊಡ್ಡದಾಗಿ ಇರುತ್ತೆ. ಪೈರಸಿ ಮಾಡಿ ಸಿಕ್ಕಿ ಹಾಕಿಕೊಂಡ್ರೆ ಜೀವನ ಪರ್ಯಂತ ಕೋರ್ಟ್-ಕಚೇರಿ ಅಂತ ಅಲೆಸಿ, ಕೋರ್ಟಲ್ಲೇ ಕಳೆಯುವಂತೆ ಮಾಡುತ್ತೇನೆ' ಎಂದಿದ್ದರು. ಆದರೂ ಪೈರಸಿ ಮಾಡುವವರು ಮಾಡುತ್ತಿದ್ದಾರೆ.

  ಪೈರಸಿ ನಡುವೆಯೂ ದಾಖಲೆ ಕಲೆಕ್ಷನ್

  ಪೈರಸಿ ನಡುವೆಯೂ ದಾಖಲೆ ಕಲೆಕ್ಷನ್

  ಪೈರಸಿ ನಡುವೆಯೂ ರಾಬರ್ಟ್ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ. ಮೊದಲ ದಿನ ಭರ್ಜರಿ ಕಲೆಕ್ಷನ್ ಮಾಡಿರುವ ರಾಬರ್ಟ್ ದಾಖಲೆ ನಿರ್ಮಿಸಿದೆ. ಕರ್ನಾಟಕದಲ್ಲಿ ರಾಬರ್ಟ್ ಬರೋಬ್ಬರಿ 17.24 ಕೋಟಿ ರೂ. ಕಲೆಕ್ಷನ್ ಮಾಡಿದೆ. ಇನ್ನು ಆಂಧ್ರ ಪ್ರದೇಶದಲ್ಲೂ ರಾಬರ್ಟ್ 3.12 ಕೋಟಿ ರೂ. ಬಾಚಿಕೊಂಡಿದೆ. ಎರಡನೇ ದಿನವು ರಾಬರ್ಟ್ ವಿಜಯ ಯಾತ್ರೆ ಮುಂದುವರೆದಿದ್ದು, ಇವತ್ತಿನ ಕಲೆಕ್ಷನ್ ಕೂಡ ಕುತೂಹಲ ಮೂಡಿಸಿದೆ.

  English summary
  Darshan starrer Roberrt Movie Piracy: Movie Team Deletes over 3000 links.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X