For Quick Alerts
  ALLOW NOTIFICATIONS  
  For Daily Alerts

  Yash : ತನ್ನ ಜೀವನದ ಪ್ರಮುಖ ವ್ಯಕ್ತಿಗಳಿಗೆ ಧನ್ಯವಾದ ತಿಳಿಸಿದ ಯಶ್! ಶಿವಣ್ಣ ಭಾವುಕ.

  |

  ಬಹುನಿರೀಕ್ಷಿತ 'ಕೆಜಿಎಫ್ 2' ಟ್ರೈಲರ್ ಇಂದು ಪಂಚ ಭಾಷೆಗಳಲ್ಲಿ ತೆರೆಕಂಡಿದೆ. ಸಾಕಷ್ಟು ಅಭಿಮಾನಿಗಳು, ಸಿನಿಪ್ರಿಯರು ಟ್ರೈಲರ್ ಕಣ್ತುಂಬಿಕೊಳ್ಳಲು ಕಾತುರರಾಗಿದ್ರು. ಅದರಂತೆ ಟ್ರೈಲರ್ ಲಾಂಚ್ ಆಗಿದ್ದ ಗಣ್ಯಾತಿಗಣ್ಯರು ಈ ಕಾರ್ಯಕ್ರಮಕ್ಕೆ ಸಾಕ್ಷಿಯಾಗಿದ್ದರು. ಟ್ರೈಲರ್ ನೋಡಿ ಇಡೀ ಚಿತ್ರತಂಡ ತಮ್ಮ ತಮ್ಮ ಅಭಿಪ್ರಾಯ ಮತ್ತು ಕೆಜಿಎಫ್ ತಂಡದ ಬಗ್ಗೆ ಮಾತನಾಡಿದೆ. ಎಲ್ಲರೂ ಕುತೂಹಲದಿಂದ ರಾಕಿ ಬಾಯ್ ಯಶ್ ಮಾತಿಗಾಗಿ ಕಾದು ಕುಳಿತಿತ್ತು.

  ಅದರಂತೆ ಟ್ರೈಲರ್ ನೋಡಿ ಚಿತ್ರದ ಮಾತನಾಡಲು ಸ್ಟೇಜ್‌ಗೆ ಆಗಮಿಸಿದ ಯಶ್, "ನಾನು ಯಾವತ್ತೂ ನರ್ವಸ್ ಆಗಲ್ಲ. ಆದರೆ ಇವತ್ತು ಯಾಕೋ ಕೊಂಚ ನರ್ವಸ್ ಆದ ಹಾಗೆ ಅನ್ನಿಸುತ್ತಿದೆ. ಎಂದು ಮಾತು ಆರಂಭಿಸಿದ ಯಶ್ ಮೊದಲು ಪುನೀತ್‌ರನ್ನು ನೆನಪಿಸಿಕೊಂಡಿದ್ದಾರೆ. " ನನಗೆ ಯಾವಾಗಲೂ ಅಪ್ಪು ಅವರ ಬಗ್ಗೆ ಮಾತನಾಡೋದು ಶಿವಣ್ಣ ಅಳೋದನ್ನು ನೋಡೊದಕ್ಕೆ ಆಗೋದಿಲ್ಲ. ಶಿವಣ್ಣ ನನ್ನ ಅಣ್ಣ. ಹೇಳಬೇಕು ಅಂದರೇ ಹೊಂಬಾಲೆ ಫಿಲ್ಮ್ ಏನಿದೆ ಅದು ಅಪ್ಪು ಅವರ 'ನಿನ್ನಿಂದಲೇ' ಸಿನಿಮಾ ಮೂಲಕ ಆರಂಭ ವಾಗಿದ್ದು. ಹೀಗಾಗಿ ಇವತ್ತು ಅವರನ್ನು ತುಂಬ ಮಿಸ್ ಮಾಡಿಕೊಳ್ಳುತ್ತಿದೆ ಇಡೀ ತಂಡ" ಎಂದಿದ್ದಾರೆ.

  ಇನ್ನು "ಎಲ್ಲಾ ಕಡೆ 'ಕೆಜಿಎಫ್' ಅಂದ್ರೆ ಕೆಜಿಎಪ್ ಅನ್ನುತ್ತಿದ್ದಾರೆ. ಆದರೆ ನಿಜವಾಗಿಯೂ ಈ ಎಲ್ಲಾ ಕ್ರೆಡಿಟ್ ಪ್ರಶಾಂತ್ ನೀಲ್‌ಗೆ ಸಲ್ಲಬೇಕು. ಅವರು ಇಲ್ಲದೇ ಇದ್ದಿದ್ದರೇ ಕೆಜಿಎಫ್ ಸಿನಿಮಾ ಆಗ್ತಿತ್ತೋ ಇಲ್ವೋ ಗೊತ್ತಿಲ್ಲಾ. ನಾನು ಈ ಸಿನಿಮಾದ ಒಂದು ಭಾಗ ಅಷ್ಟೆ. ಎಲ್ಲರ ಶ್ರಮದಿಂದ ಈ ಸಿನಿಮಾ ರಿಲೀಸ್‌ಗೆ ತಯಾರಾಗಿದೆ" ಎಂದಿದ್ದಾರೆ ಯಶ್. ಕೆಜಿಎಫ್ ಸಿನಿಮಾದ ಸೆಟ್ ಬಾಯ್ಸ್ ಬಗ್ಗೆ ಮಾತನಾಡಿದ ಯಶ್ "ನಾನು ಹೆಮ್ಮೆಯಿಂದ ಹೇಳುತ್ತೇನೆ. ನಮ್ಮ ತಂಡದ ಸೆಟ್ ಬಾಯ್ಸ್, ಲೈಟ್ ಬಾಯ್ಸ್ ಥರ ಕೆಲಸ ಮಾಡುವವರು ಬೇರೆ ಇಂಡಸ್ಟ್ರಿಯಲ್ಲಿ ಸಿಗಲು ಸಾಧ್ಯವೇ ಇಲ್ಲ. ಯಾಕಂದ್ರೆ ಅವರ ಡೆಡಿಕೇಶನ್ ನೋಡಿ ನಾನೇ ಬೆರಗಾಗಿದ್ದೇನೆ" ಎಂದಿದ್ದಾರೆ.

  ಸಿನಿಮಾ ಕಲಾವಿದರ ಬಗ್ಗೆ ಮಾತನಾಡಿದ ಯಶ್ "ರವೀನಾ ಮ್ಯಾಮ್ ನಿಮ್ಮ ಬಗ್ಗೆ ಏನು ಹೇಳೋದು? ನೀವೊಬ್ಬರು ಅದ್ಭುತ ನಟಿ. ಸ್ಟನಿಂಗ್ ಬ್ಯೂಟಿ ನಿಮ್ಮದು. ನಿಮ್ಮ ಬಗ್ಗೆ ಏನು ಹೇಳಿದ್ರೂ ಕಮ್ಮಿನೆ. ಇನ್ನು ಸಂಜಯ್ ಸರ್ ಎಲ್ಲಿಂದ ಬರುತ್ತೆ ಈ ಎನರ್ಜಿ ನಿಮಗೆ? ಸಂಜು ಸರ್ ತುಂಬಾ ಡೌನ್‌ ಟು ಅರ್ಥ್, ಟ್ರೂ ಫೈಟರ್ ಅಂದರೆ ಅದು ನೀವೇ. ಸಂಜು ಸರ್ ನನ್ನ ಯಶ್ ಬಾಯ್ ಎಂದೇ ಕರೀತಾರೆ. ಅವರು ತುಂಬ ಹಂಬಲ್. ಸಂಜು ಸರ್ ಕಮಿಟ್‌ಮೆಂಟ್ ಸೂಪರ್" ಎಂದಿದ್ದಾರೆ ಯಶ್.

  ಹೀಗೆ ಎಲ್ಲರನ್ನು ನೆನಪಿಸಿಕೊಂಡ ಯಶ್ "ನಾನು ತುಂಬ ಮಾತನಾಡುತ್ತಿದ್ದೇನೆ ಎಂದು ಗೊತ್ತು. ಆದರೆ ನಮ್ಮೊಂದಿಗೆ ಕೆಲಸ ಮಾಡಿದವರನ್ನು ನಾವು ಯಾವತ್ತೂ ಮರೆಯಬಾರದು. ಇದು ಒಂದು ಅವಕಾಶ ಅವರಿಗೆ ಧನ್ಯವಾದ ತಿಳಿಸಲು ಹೀಗಾಗಿ ಎಲ್ಲರಿಗೂ ನಾನು ಧನ್ಯವಾದ ತಿಳಿಸುತ್ತೇನೆ" ಎಂದಿದ್ದಾರೆ.

  Recommended Video

  Yash | ಯಶ್ ಜೀವನದ ಪ್ರಮುಖ ವ್ಯಕ್ತಿ ಡಾ ಸೂರಿ | KGF 2 | Sanjay Dutt | Raveena Tandon

  ಮಾತನಾಡುತ್ತಾ ಕೊನೆಯಲ್ಲಿ ಯಶ್ ಗುರುಗಳಾದ ನಾಗಾಭರಣ ಅವರ ಬಗ್ಗೆಯೂ ಮಾತನಾಡಿದ್ದಾರೆ. "ಮೊದಲು ನಾಟಕದಲ್ಲಿ ನಾಗಾಭರಣ್ ಸರ್ ಅವರ ಜೊತೆ ಚಿಕ್ಕ ಚಿಕ್ಕ ಪಾತ್ರ ಮಾಡುತ್ತಿದ್ದೆ. ಈಗ ಇಬ್ಬರು ಒಟ್ಟಿಗೆ ಕೆಲಸ ಮಾಡಿರೋದು ಖುಷಿ ಇದೆ. ಹಾಗೇ ಶ್ರೀನಿಧಿ ಶೆಟ್ಟಿ ತುಂಬ ಲಕ್ಕಿ ನಟಿ. ಮೊದಲ ಸಿನಿಮಾವೇ ಪ್ಯಾನ್ ಇಂಡಿಯಾ ಸಿನಿಮಾ. ಅವರು ಇದಕ್ಕೆ ಯೋಗ್ಯರಾಗಿದ್ದಾರೆ. ಯಾರು ಆರು ವರ್ಷವೆಲ್ಲಾ ಸಿನಿಮಾಗೆ ಕಾಯೋದಿಲ್ಲ. ಆದರೇ ಶ್ರೀನಿಧಿ ಕೆಜಿಎಫ್ ಪ್ರಾಜೆಕ್ಟ್‌ಗಾಗಿ ಆರು ವರ್ಷ ಕಾದಿದ್ದಾರೆ" ಎಂದು ಹೇಳಿದ್ದಾರೆ.

  ಅಂಬರೀಶ್ ಅವರನ್ನು ನೆನಪಿಸಿಕೊಂಡ ಯಶ್, ಕೆಜಿಎಫ್ ಪಾರ್ಟ್ ಒಂದರ ಟ್ರೈಲರ್ ಅನ್ನು ಅಂಬರೀಶ್ ರಿಲೀಸ್ ಮಾಡಿದ್ರು. ಆದರೆ ಇವತ್ತು ಅವರು ನಮ್ಮೊಂದಿಗೆ ಇಲ್ಲ. ಅವರನ್ನು ಮರೆಯಲು ಸಾಧ್ಯ ಇಲ್ಲ. ಹಾಗೇ ಮಾಧ್ಯಮದವರ ಕೈಗೆ ನಾನು ಹೆಚ್ಚಾಗಿ ಸಿಗಲ್ಲಾ, ಆದರೂ ನನ್ನ ಮೇಲಿನ ಪ್ರೀತಿ ಅವರಿಗೆ ಕಮ್ಮಿ ಆಗಿಲ್ಲಾ. ಅದಕ್ಕೆ ನಾನು ಚಿರಋಣಿ. ಹಾಗೇ ಫ್ಯಾನ್ಸ್ ಗೆ ನನ್ನ ಧನ್ಯವಾದಗಳು. ಅವರು ಇರೋದಕ್ಕೆ ನಾನು ಇವತ್ತು ಇಲ್ಲಿ ಇದ್ದೇನೆ." ಎಂದು ಯಶ್ ಟ್ರೈಲರ್ ಲಾಂಚ್‌ನಲ್ಲಿ ಹೇಳಿದ್ದಾರೆ.

  English summary
  Rocking Star Yash thank everybody who work for kgf movie. Here is more details
  Monday, March 28, 2022, 10:01
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X