For Quick Alerts
  ALLOW NOTIFICATIONS  
  For Daily Alerts

  ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ಗಾನಕೋಗಿಲೆ ಎಸ್ ಜಾನಕಿ

  |

  ಸುಪ್ರಸಿದ್ಧ ಹಿನ್ನಲೆ ಗಾಯಕಿ, ಗಾನಕೋಗಿಲೆ, ಗಾನ ಶಾರದೆ ಎಸ್ ಜಾನಕಿ ಅನಾರೋಗ್ಯದ ಕಾರಣ ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಸಂಬಂಧಿಕರ ಮನೆಗೆ ಭೇಟಿ ನೀಡಿದ್ದ ವೇಳೆ ಸೊಂಟ ಮುರಿತದಿಂದಾಗಿ ಕಳೆದೊಂದು ವಾರದಿಂದ ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಇಂದು ಡಿಸ್ಚಾರ್ಜ್ ಆಗಿದ್ದಾರೆ.

  ಮೈಸೂರಿನ ತಮ್ಮ ಸಂಬಂಧಿಕರ ಮನೆಗೆ ಬಂದಿದ್ದ ಎಸ್ ಜಾನಕಿಯವರು ಕಾಲು ಜಾರಿ ಬಿದ್ದು ಸೊಂಟಕ್ಕೆ ಪೆಟ್ಟು ಮಾಡಿಕೊಂಡಿದ್ದರು. ಈ ಹಿನ್ನೆಲೆ ನಗರದ ಕೊಲಂಬಿಯಾ ಏಷಿಯಾ ಆಸ್ಪತ್ರೆಯಲ್ಲಿ ಚಿಕ್ಸಿತೆ ಪಡೆದು ಗುಣಮುಖರಾಗಿದ್ದಾರೆ. ಇನ್ನು ಜಾನಕಿಯವರನ್ನು ಪರೀಕ್ಷೆ ನಡೆಸಿದ ವೈದ್ಯರು ಸೊಂಟದ ಭಾಗದಲ್ಲಿ ಫ್ರಾಕ್ಚರ್ ಆಗಿರುವುದನ್ನು ದೃಢಪಡಿಸಿದ್ದರು. ತಕ್ಷಣ ಡಾ.ನಿತಿನ್ ಅವರು ಶಸ್ತ್ರಚಿಕಿತ್ಸೆ ನಡೆಸಿದ್ದಾರೆ. ಇದೀಗ ಅವರು ಗುಣಮುಖರಾಗಿದ್ದು, ಇಂದು ಆಸ್ಪತ್ರೆಯಿಂದ ಡಿಸ್ಟ್ರಾಜ್ ಆಗಿದ್ದಾರೆ.

  ಇದೇ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಎಸ್ ಜಾನಕಿ, ಕನ್ನಡ ಮಕ್ಕಳ ಕೃಪೆಯಿಂದ ನಾನು ಚೆನ್ನಾಗಿದ್ದೇನೆ. ಇಡೀ ಕನ್ನಡ ಮಕ್ಕಳು ನನ್ನ ಅತ್ಯಂತ ಪ್ರೀತಿಯಿಂದ ಕಾಣುತ್ತಾರೆ. ಅವರ ಪ್ರೀತಿಯಿಂದ ಚೆನ್ನಾಗಿಯೇ ಇರುತ್ತೇನೆ. ನಾನು ಸ್ನೇಹಿತರ ಮನೆಗೆ ಬಂದಿದ್ದೆ. ಅಲ್ಲಿ ಬಾಗಿಲ ಹೊಸಿಲು ದಾಟುವಾಗ ಜಾರಿ ಬಿದ್ದಿದ್ದೆ. ತುಂಬಾ ನೋವಾಯ್ತು ಆಗ. ನಂತರ ಆಸ್ಪತ್ರೆಗೆ ಕರೆದುಕೊಂಡು ಆಪರೇಷನ್ ಮಾಡಿದ್ದಾರೆ. ಇಲ್ಲಿ ಅದೇನೋ ಬದಲಾಯಿಸಿದ್ದಾರೆ. ಹಳೆದು ಮುರಿದುಹೋಯ್ತು ಎಂದು ನಡೆದ ಶಸ್ತ್ರಚಿಕಿತ್ಸೆ ಬಗ್ಗೆ ಸ್ವತಃ ಅವರೇ ವಿಶ್ಲೇಷಿಸಿದರು.

  ನನಗೆ ಮೈಸೂರಿನ ಜೊತೆ ಜನ್ಮಂತರದ ಋಣ ಇದೆ. ಅದಕ್ಕೆ ಈ ಊರೆಂದರೇ ನನಗೆ ಇಷ್ಟ. ಡಿಸ್ಚಾರ್ಜ್ ಆಗಿ ಮೈಸೂರಿನಲ್ಲಿಯೇ ಕೆಲ ದಿನಗಳ ಕಾಲ ವಿಶ್ರಾಂತಿ ಪಡೆಯುತ್ತೇನೆ ಎಂದು ತಿಳಿಸಿದರು.

  English summary
  S Janaki discharged from hospital. Famous singer S Janaki hospitalized after injury. Janaki sliped and fell down in relative home, She is taking treatment in Mysore hospital.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X