Just In
Don't Miss!
- News
ಸತ್ಯ ಹೇಳುವ ಏಕೈಕ ರಾಜಕಾರಣಿ ರಾಹುಲ್ ಗಾಂಧಿ; ಮುಫ್ತಿ
- Finance
ಬಜೆಟ್ 2021: MSME ವಲಯಕ್ಕೆ ಏನು ಸಿಗಬಹುದು?
- Automobiles
ಅನಾವರಣವಾಯ್ತು 2021ರ ಮೋಟೋ ಗುಜಿ ವಿ9 ಬೈಕುಗಳು
- Sports
ಆಸ್ಟ್ರೇಲಿಯಾ ವಿರುದ್ಧ ಆಡ್ತಿರೋದು ಅತೀ ದುರ್ಬಲ ಭಾರತ ತಂಡ ಅನ್ನೋದು ಗೊತ್ತಾ!?
- Lifestyle
ನಿಮ್ಮ ಮಕ್ಕಳ ಕೋಣೆಯನ್ನು ವಾಸ್ತು ಪ್ರಕಾರ ಈ ರೀತಿ ರೆಡಿ ಮಾಡಿ
- Education
NIA Recruitment 2021: 15 ಡೆಪ್ಯುರಿಟಿ ಸೂಪರಿಂಟೆಂಡೆಂಟ್ ಆಫ್ ಪೊಲೀಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಆದಿತ್ಯ ಮಾಡಬೇಕಿದ್ದ 'ಚಂದ್ರ ಚಕೋರಿ' ಸಿನಿಮಾ ಶ್ರೀಮುರಳಿ ಪಾಲಾಗಿದ್ದು ಹೇಗೆ?
ರೋರಿಂಗ್ ಸ್ಟಾರ್ ಶ್ರೀಮುರಳಿಯನ್ನು ಬಣ್ಣದ ಲೋಕಕ್ಕೆ ಪರಿಚಯಿಸಿದ ಸಿನಿಮಾ 'ಚಂದ್ರ ಚಕೋರಿ'. 2003ರಲ್ಲಿ ತೆರೆಗೆ ಬಂದ ಚಂದ್ರ ಚಕೋರಿ ದೊಡ್ಡ ಮಟ್ಟದಲ್ಲಿ ಯಶಸ್ಸು ಕಂಡಿತ್ತು. ಚೊಚ್ಚಲ ಸಿನಿಮಾದಲ್ಲೇ ಶ್ರೀಮುರಳಿ ಗೆದ್ದು ಬೀಗಿದ್ದರು. ಚಂದ್ರ ಚಕೋರಿ ಮೂಲಕ ಶ್ರೀಮುರಳಿ ಅದ್ದೂರಿಯಾಗಿ ಚಿತ್ರರಂಗಕ್ಕೆ ಎಂಟ್ರಿ ಕೊಡುವ ಮೂಲಕ ಮೊದಲ ಸಿನಿಮಾದಲ್ಲೇ ಸ್ಟಾರ್ ಪಟ್ಟವನ್ನು ಗಿಟ್ಟಿಸಿಕೊಂಡಿದ್ದರು.
ಖ್ಯಾತ ನಿರ್ದೇಶಕ ಎಸ್.ನಾರಾಯಣ್ ನಿರ್ದೇಶನ, ಚಿತ್ರದ ಸಂಗೀತ, ಮುರಳಿ ಅಭಿನಯ ಕನ್ನಡ ಚಿತ್ರ ಪ್ರಿಯರ ಹೃದಯ ಗೆದ್ದಿತ್ತು. ಶ್ರೀಮುರಳಿ ಸಿನಿಮಾ ಜೀವನದ ಅತ್ಯುತ್ತಮ ಸಿನಿಮಾಗಳಲ್ಲಿ ಒಂದಾಗಿರುವ ಚಂದ್ರ ಚಕೋರಿ ಸಿನಿಮಾದ ಬಗ್ಗೆ ಇಂಟರೆಸ್ಟಿಂಗ್ ಮಾಹಿತಿಯೊಂದು ಬಹಿರಂಗವಾಗಿದೆ. ಹೌದು, ಸಿನಿಮಾ ರಿಲೀಸ್ ಆಗಿ ಸುಮಾರು 18 ವರ್ಷದ ಬಳಿಕ ಸಿನಿಮಾ ಬಗ್ಗೆ ಕುತೂಹಲಕಾರಿ ಮಾಹಿತಿಯನ್ನು ರಿವೀಲ್ ಮಾಡಿದ್ದಾರೆ ನಿರ್ದೇಶಕ ಎಸ್ ನಾರಾಯಣ್.
ಆದಿತ್ಯ ಜೊತೆಗೆ ಸಿನಿಮಾ ಘೋಷಿಸಿದ ಎಸ್.ನಾರಾಯಣ್: ನಾಯಕಿ ಯಾರು?

ನಟ ಆದಿತ್ಯ ನಟಿಸಬೇಕಿದ್ದ ಸಿನಿಮಾ
ಚಂದ್ರ ಚಕೋರಿ ಸಿನಿಮಾಗೆ ಶ್ರೀಮುರಳಿಗೂ ಮೊದಲು ಬೇರೊಬ್ಬ ನಾಯಕನನ್ನು ಆಯ್ಕೆ ಮಾಡಿದ ಬಗ್ಗೆ ಎಸ್ ನಾರಾಯಣ್ ಹೇಳಿದ್ದಾರೆ. ಚಂದ್ರ ಚಕೋರಿ ಸಿನಿಮಾದಲ್ಲಿ ನಟ ಆದಿತ್ಯ ನಾಯಕನಾಗಿ ನಟಿಸಬೇಕಿತ್ತಂತೆ. ಆದರೆ ಬಳಿಕ ಶ್ರೀಮುರಳಿ ನಾಯಕರಾದರು ಎಂದು ಎಸ್ ನಾರಾಯಣ್ ಬಹಿರಂಗ ಪಡಿಸಿದ್ದಾರೆ. ಎಸ್ ನಾರಾಯಣ್ ಸದ್ಯ ಆದಿತ್ಯ ಜೊತೆ ಹೊಸ ಸಿನಿಮಾ ಅನೌನ್ಸ್ ಮಾಡಿದ್ದಾರೆ. ಈ ಸಿನಿಮಾದ ಲಾಂಚ್ ಸಮಯದಲ್ಲಿ ಈ ಇಂಟರೆಸ್ಟಿಂಗ್ ಮಾಹಿತಿ ರಿವೀಲ್ ಮಾಡಿದ್ದಾರೆ.
ಎಸ್ ನಾರಾಯಣ್ ಗೆ ಮುಜುಗರ ತರಿಸಿದ ಪುತ್ರನ ಬೆಡ್ ರೂಮ್ ಡೈಲಾಗ್

ಹೊಸ ಪ್ರತಿಭೆ ಹುಡುಕಾಟದಲ್ಲಿದ್ದ ಎಸ್ ನಾರಾಯಣ್
'ಆದಿ ಜೊತೆ ಕೆಲಸ ಮಾಡಲು ಅವಕಾಶ ಸಿಕ್ಕಿರಲಿಲ್ಲ. 3-4 ಸರಿ ಪ್ರಯತ್ನ ಪಟ್ಟರು ಮಿಸ್ ಆಗಿತ್ತು. ಚಂದ್ರ ಚಕೋರಿ ಸಿನಿಮಾದ ನಾಯಕ ಆದಿತ್ಯ ಆಗಬೇಕಿತ್ತು. ಯಾಕೆಂದರೆ ಆ ಸಿನಿಮಾದ ಸ್ಕ್ರಿಪ್ಟ್ ಮಾಡಿದ್ದು, ಕುರಿಗಳು ಸಾರ್ ಕುರಿಗಳು ಸಿನಿಮಾ ಸೆಟ್ ನಲ್ಲಿ. ಅಲ್ಲಿ ನಾನು ನಟಿಸುವ ಜೊತೆಗೆ ಕಥೆ ಸಹ ಮಾಡುತ್ತಿದ್ದೆ. ಆ ಸಮಯದಲ್ಲಿ ಹೊಸ ಮುಖ ಬೇಕಾಗಿತ್ತು. ಆ ಹುಡುಕಾಟದಲ್ಲಿ ಇದ್ದಾಗ ಆದಿತ್ಯ ಕಂಡರು.

ರಾಜೇಂದ್ರ ಸಿಂಗ್ ಬಾಬು ಬಳಿ ಕೇಳಿದೆ
'ಆದಿತ್ಯ ಕುರಿಗಳು ಸಾರ್ ಕುರಿಗಳು ಸಿನಿಮಾದ ನಿರ್ಮಾಪಕರಲ್ಲಿ ಒಬ್ಬರಾಗಿದ್ದರು. ಹಾಗಾಗಿ ದಿನ ಸೆಟ್ ಗೆ ಬರುತ್ತಿದ್ದರು. ಆದರೆ ಸೆಟ್ ಗೆ ಮಿಂಚು ಬಂದು ಹೋದ ಹಾಗೆ ಬಂದು ಹೊರಟು ಹೊಗುತ್ತಿದ್ದರು. ಸುಂದರವಾಗಿ, ಮುದ್ದುಮುದ್ದಾಗಿ ಕಾಣುತ್ತಿದ್ದರು. ಹೀರೋ ಇಲ್ಲೇ ಹೀರೋ ಓಡಾಡುತ್ತಿದ್ದಾರಲ್ಲಾ, ನನಗೆ ಯಾಕೆ ಹೊಳೆದಿಲ್ಲ ಎಂದುಕೊಂಡೆ. ಬಳಿಕ ಕುರಿಗಳು ಸಾರ್ ಕುರುಗಳು ಸಿನಿಮಾ ಡೈರೆಕ್ಟರ್ ರಾಜೇಂದ್ರ ಸಿಂಗ್ ಬಾಬು ಕೇಳಿದೆ.'

ಬೇರೆ ಸಿನಿಮಾ ಒಪ್ಪಿಕೊಂಡಿದ್ದ ಆದಿತ್ಯ
ಆದರೆ ಆದಿತ್ಯ ಆಗಲೆ 'ಲವ್' ಎನ್ನುವ ಸಿನಿಮಾ ಒಪ್ಪಿಕೊಂಡಿದ್ದರು. ಇಲ್ಲವಾಗಿದ್ದಾರೆ ಚಂದ್ರ ಚಕೋರಿ ಸಿನಿಮಾ ಆದಿತ್ಯ ಜೊತೆ ಮಾಡಬೇಕಿತ್ತು ಎಂದು ಹೇಳಿದ್ದಾರೆ. ಆದಿತ್ಯ ಜೊತೆ ಒಟ್ಟಿಗೆ ಕೆಲಸ ಮಾಡಿದ್ದೀನೆ. ಆದರೆ ಅವರು ನಿರ್ಮಾಪಕರು, ನಾನು ಪಾತ್ರಧಾರಿಯಾಗಿ ಅಷ್ಟೆ. ಕುರಿಗಳು ಸಾರ್ ಕುರಿಗಳು, ಕೋತಿಗಳು ಸಾರ್ ಕೋತಿಗಳು, ತಿಪ್ಪಾರಳ್ಳಿ ಸಿನಿಮಾಗಳಿಗೆ ಆದಿತ್ಯ ನಿರ್ಮಾಪಕರಾಗಿದ್ದರು.

ಆದಿತ್ಯಗೆ ಎಸ್ ನಾರಾಯಣ್ ನಿರ್ದೇಶನ
ಇದೀಗ ವರ್ಷಗಳ ಬಳಿಕ ಆದಿತ್ಯ ಜೊತೆ ಕೆಲಸ ಮಾಡುತ್ತಿದ್ದಾರೆ ನಿರ್ದೇಶಕ ಎಸ್ ನಾರಾಯಣ್. ಚಿತ್ರಕ್ಕೆ ಡಿ ಎಂದು ಟೈಟಲ್ ಇಡಲಾಗಿದೆ. ರವಿ ಎನ್ನುವವರು ಬರೆದ ಕಥೆಗೆ ಎಸ್ ನಾರಾಯಣ್ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಈ ಚಿತ್ರದಲ್ಲಿ ನಾಯಕನಾಗಿ ಆದಿತ್ಯ ಕಾಣಿಸಿಕೊಳ್ಳುತ್ತಿದ್ದಾರೆ. ನಾಯಕಿಯಾಗಿ ಅದಿತಿ ಪ್ರಭುದೇವ ನಟಿಸುತ್ತಿದ್ದಾರೆ. ಹೊಸ ವರ್ಷದ ಮೊದಲ ದಿನ ಚಾಲೆಂಜಿಂಗ್ ಸ್ಟಾರ್ ದರ್ಶನ್ ಡಿ ಸಿನಿಮಾವನ್ನು ಲಾಂಚ್ ಮಾಡುವ ಮೂಲಕ ಚಿತ್ರಕ್ಕೆ ಚಾಲನೆ ನೀಡಿದ್ದಾರೆ.