twitter
    For Quick Alerts
    ALLOW NOTIFICATIONS  
    For Daily Alerts

    ದುನಿಯಾ ವಿಜಿ ಪ್ರಕರಣ: ರಾಜಿ ಸಂಧಾನಕ್ಕೆ ಮುಂದಾಗ್ತಾರಾ ಖ್ಯಾತ ನಿರ್ಮಾಪಕ.!

    |

    Recommended Video

    ವಿಜಿ-ಕಿಟ್ಟಿ ಸ್ಟೋರಿ ಮುಂದೇನು ಆಗತ್ತೋ..! | Filmibeat Kannada

    ಪಾನಿಪುರಿ ಕಿಟ್ಟಿ ಅಣ್ಣನ ಮಗ ಮಾರುತಿ ಗೌಡ ಅವರ ಮೇಲೆ ಹಲ್ಲೆ ಮತ್ತು ಕಿಡ್ನ್ಯಾಪ್ ಪ್ರಕರಣದಲ್ಲಿ ಜೈಲು ಸೇರಿರುವ ನಟ ದುನಿಯಾ ವಿಜಯ್ ಮತ್ತು ಸ್ನೇಹಿತರಿಗೆ ಕೋರ್ಟ್ 14 ದಿನ ನ್ಯಾಯಾಂದ ಬಂಧನ ವಿಧಿಸಿದೆ.

    ಈ ಮಧ್ಯೆ ವಿಜಿ ಪ್ರಕರಣದ ಬಗ್ಗೆ ಚಿತ್ರರಂಗದವರು ಯಾರೂ ಕೂಡ ಮಧ್ಯೆ ಪ್ರವೇಶ ಮಾಡಲಿಲ್ಲ. ಎಲ್ಲೋ ಒಂದು ಕಡೆ ಇಂಡಸ್ಟ್ರಿಯಿಂದ ಯಾರಾದರೂ ಹಿರಿಯರು ಈ ಪ್ರಕರಣದ ಬಗ್ಗೆ ಮಧ್ಯಸ್ಥಿಕೆ ವಹಿಸಿ ರಾಜಿ ಸಂಧಾನ ಮಾಡಬಹುದು ಎಂಬ ನಿರೀಕ್ಷೆ ಇತ್ತು. ಆದ್ರೆ, ಇದುವರೆಗೂ ಎಲ್ಲೂ ಕೂಡ ಈ ಬಗ್ಗೆ ಸಣ್ಣ ಸುಳಿವು ಕೂಡ ಸಿಕ್ಕಿಲ್ಲ.

    ದುನಿಯಾ ವಿಜಿ ಜಾಮೀನು ಅರ್ಜಿ ವಜಾ: ಜೈಲಲ್ಲೇ ಉಳಿಯಬೇಕು 'ಜಂಗ್ಲಿ' ದುನಿಯಾ ವಿಜಿ ಜಾಮೀನು ಅರ್ಜಿ ವಜಾ: ಜೈಲಲ್ಲೇ ಉಳಿಯಬೇಕು 'ಜಂಗ್ಲಿ'

    ಆದ್ರೀಗ, 'ಇಂತಹದೊಂದು ಅವಕಾಶ ಇದ್ರೆ ಮಾಡೋಣ' ಎಂಬ ಮಾತನ್ನ ಕನ್ನಡದ ಖ್ಯಾತ ನಿರ್ಮಾಪಕರು ಹೇಳಿದ್ದಾರೆ. ಹೌದು, ದುನಿಯಾ ವಿಜಯ್ ಮತ್ತು ಪಾನಿಪುರಿ ಕಿಟ್ಟಿಗೆ ಸಂಬಂಧಿಸಿದ ಹಲ್ಲೆ ಪ್ರಕರಣಕ್ಕೆ ಪುಲ್ ಸ್ಟಾರ್ ಇಡಲು ಈ ನಿರ್ಮಾಪಕರು ಮುಂದಾಗ್ತಾರಾ ಎಂಬ ಕುತೂಹಲ ಕಾಡುತ್ತಿದೆ.! ಅಷ್ಟಕ್ಕೂ, ಯಾರವರು.? ಮುಂದೆ ಓದಿ.....

    ರಾಜಿ ಸಂಧಾನ ಬಗ್ಗೆ ಸಾರಾ ಗೋವಿಂದು ಮಾತು

    ರಾಜಿ ಸಂಧಾನ ಬಗ್ಗೆ ಸಾರಾ ಗೋವಿಂದು ಮಾತು

    ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಆರೋಗ್ಯ ವಿಚಾರಿಸಲು ಮೈಸೂರಿಗೆ ಭೇಟಿ ನೀಡಿದ್ದ ಫಿಲ್ಮ್ ಚೇಂಬರ್ ನ ಮಾಜಿ ಅಧ್ಯಕ್ಷ ಹಾಗೂ ಕನ್ನಡದ ಹಿರಿಯ ನಿರ್ಮಾಪಕ ಸಾರಾ ಗೋವಿಂದು ಅವರು ದುನಿಯಾ ವಿಜಯ್ ಮತ್ತು ಮಾರುತಿ ಗೌಡ ಹಲ್ಲೆ ಪ್ರಕರಣದಲ್ಲಿ ರಾಜಿ ಸಂಧಾನದ ಬಗ್ಗೆ ಮಾತನಾಡಿದ ಗಮನ ಸೆಳೆದಿದ್ದಾರೆ.

    ಮಾರುತಿ ಗೌಡ ಮೇಲೆ ದುನಿಯಾ ವಿಜಯ್ ಹಲ್ಲೆಗೆ ಅಸಲಿ ಕಾರಣ ಏನು.? ಮಾರುತಿ ಗೌಡ ಮೇಲೆ ದುನಿಯಾ ವಿಜಯ್ ಹಲ್ಲೆಗೆ ಅಸಲಿ ಕಾರಣ ಏನು.?

    ಅವಕಾಶ ಇದ್ದರೇ ಖಂಡಿತಾ ಮಾಡಬಹುದು

    ಅವಕಾಶ ಇದ್ದರೇ ಖಂಡಿತಾ ಮಾಡಬಹುದು

    'ಈ ವಿಷ್ಯ ಈಗಾಗಲೇ ಕೋರ್ಟ್ ನಲ್ಲಿದೆ. ಹಾಗಾಗಿ ನಾವು ಏನೂ ಮಾತನಾಡುವುದಕ್ಕೆ ಆಗಲ್ಲ. 14 ದಿನ ನ್ಯಾಯಾಂಗ ಬಂಧನವಾಗಿದ್ರು, ಮೇಲ್ಮನವಿ ಸಲ್ಲಿಸುವ ಅವಕಾಶ ಇದೆ. ಆತಂಕ ಪಡುವಂತಹ ಅಗತ್ಯವಿಲ್ಲ. ನಾನು ಅವರ ಮಾಸ್ತಿಗುಡಿ ಸಿನಿಮಾ ಗಲಾಟೆ ವಿಚಾರವಾಗಿ ಮಧ್ಯ ಪ್ರವೇಶಿಸಿದ್ದೆ. ಈಗಲೂ ಆ ರೀತಿ ರಾಜಿ ಸಂಧಾನಕ್ಕೆ ಅವಕಾಶವಿದ್ದರೆ ನೋಡೋಣ'' ಎಂದು ಸಾರಾ ಗೋವಿಂದು ಅವರು ಹೇಳಿದ್ದು ಈಗ ಕುತೂಹಲ ಮೂಡಿಸಿದೆ.

    ಜಾಮೀನು ಸಿಕ್ಕಿಲ್ಲ, ದುನಿಯಾ ವಿಜಯ್ ಮುಂದಿನ ನಿರ್ಧಾರವೇನು.? ಜಾಮೀನು ಸಿಕ್ಕಿಲ್ಲ, ದುನಿಯಾ ವಿಜಯ್ ಮುಂದಿನ ನಿರ್ಧಾರವೇನು.?

    ಸಾರಾ ಗೋವಿಂದು ಮನಸ್ಸು ಮಾಡಿದ್ರೆ

    ಸಾರಾ ಗೋವಿಂದು ಮನಸ್ಸು ಮಾಡಿದ್ರೆ

    ಅಂದ್ಹಾಗೆ, ಸಾರಾ ಗೋವಿಂದು ಅವರ ಮಾತನ್ನ ಸುಮ್ಮನೇ ಅಲ್ಲೆ ಗಳೆಯುವಂತಿಲ್ಲ. ಅವರು ಈ ಪ್ರಯತ್ನಕ್ಕೆ ಕೈಹಾಕಿದ್ರೆ, ಇಂಡಸ್ಟ್ರಿಯಲ್ಲಿರುವ ಕೆಲವು ಹಿರಿಯನ್ನ ಒಟ್ಟುಗೂಡಿಸಿ ರಾಜಿ ಸಂಧಾನ ಕೆಲಸಕ್ಕೆ ಮುಂದಾಗಬಹುದು. ಆದ್ರೆ, ಈ ಘಟನೆಯ ಬಗ್ಗೆ ಮತ್ತು ಅದರ ಸಾಧ್ಯತೆಗಳ ಬಗ್ಗೆ ಬಹುಶಃ ಯೋಚನೆ ಮಾಡಿರಬಹುದು.

    ಅಂಬೇಡ್ಕರ್ ಭವನದಲ್ಲಿ ಏನಾಯ್ತು ಎಂದು ಪಿನ್ ಟು ಪಿನ್ ಮಾಹಿತಿ ಬಿಚ್ಚಿಟ್ಟ ಮಾರುತಿ ಗೌಡ ಅಂಬೇಡ್ಕರ್ ಭವನದಲ್ಲಿ ಏನಾಯ್ತು ಎಂದು ಪಿನ್ ಟು ಪಿನ್ ಮಾಹಿತಿ ಬಿಚ್ಚಿಟ್ಟ ಮಾರುತಿ ಗೌಡ

    ಹಲವು ವಿವಾದಗಳನ್ನ ಬಗೆಹರಿಸಿರುವ ಸಾರಾ ಗೋವಿಂದು

    ಹಲವು ವಿವಾದಗಳನ್ನ ಬಗೆಹರಿಸಿರುವ ಸಾರಾ ಗೋವಿಂದು

    ಸಾರಾ ಗೋವಿಂದು ಅವರು ಸುಮಾರು ಮೂರು ವರ್ಷ ಫಿಲ್ಮ್ ಚೇಂಬರ್ ನ ಅಧ್ಯಕ್ಷರಾಗಿ ಕೆಲಸ ಮಾಡಿದ್ದಾರೆ. ಈ ವೇಳೆ ಕನ್ನಡ ಚಿತ್ರರಂಗಕ್ಕೆ ಸಂಬಂಧಪಟ್ಟಂತೆ ಹಲವು ವಿವಾದಗಳನ್ನ ಬಗೆಹರಿಸಿರುವ ಉದಾಹರಣೆಗಳಿವೆ. ಹಾಗಾಗಿ, ಅವರ ಮೇಲೆ ಮಾತಿನ ಮೇಲೆ ನಂಬಿಕೆ ಬರಬಹುದು.

    ದುನಿಯಾ ವಿಜಿಯಿಂದ ಹೊಡೆತ ತಿಂದ ಮಾರುತಿ ಗೌಡ ಯಾರು.? ಆತನ ಹಿನ್ನಲೆ ಏನು.? ದುನಿಯಾ ವಿಜಿಯಿಂದ ಹೊಡೆತ ತಿಂದ ಮಾರುತಿ ಗೌಡ ಯಾರು.? ಆತನ ಹಿನ್ನಲೆ ಏನು.?

    ಆದ್ರೆ, ಇದು ಸಾಮಾನ್ಯ ಪ್ರಕರಣವಲ್ಲ

    ಆದ್ರೆ, ಇದು ಸಾಮಾನ್ಯ ಪ್ರಕರಣವಲ್ಲ

    ಆದ್ರೆ, ಇದು ಸಾಮಾನ್ಯವಾದ ಪ್ರಕರಣವಲ್ಲ. ಮತ್ತು ಯಾವುದೋ ಸಿನಿಮಾ ವಿವಾದವೂ ಅಲ್ಲ. ಇದು ವೈಯಕ್ತಿಕವಾಗಿ ಹಲ್ಲೆ ಮತ್ತು ಕಿಡ್ನ್ಯಾಪ್ ಮಾಡಿರುವ ಆರೋಪ. ಬದಲಾಗಿ ಪೊಲೀಸ್ ಸ್ಟೇಷನ್ ನಲ್ಲಿ ದೂರು ದಾಖಲಾಗಿದ್ದು, ಈಗಾಗಲೇ ಕೋರ್ಟ್ ನಲ್ಲಿ ವಿಚಾರಣೆ ನಡೆಯುತ್ತಿದೆ. ಹಾಗಾಗಿ, ರಾಜಿ ಸಂಧಾನಕ್ಕೆ ಮುಂದಾದರೂ, ನ್ಯಾಯಾಲಯದಿಂದ ಮತ್ತು ವಿಚಾರಣೆಯಿಂದ ಸದ್ಯಕ್ಕೆ ಮುಕ್ತರಾಗಲು ಕಷ್ಟಸಾಧ್ಯ.

    ದುನಿಯಾ ವಿಜಿ-ಪಾನಿಪುರಿ ಕಿಟ್ಟಿ ಮಧ್ಯೆ ಇರೋ ಈ 'ಪ್ರಸಾದ್' ಯಾರು.? ದುನಿಯಾ ವಿಜಿ-ಪಾನಿಪುರಿ ಕಿಟ್ಟಿ ಮಧ್ಯೆ ಇರೋ ಈ 'ಪ್ರಸಾದ್' ಯಾರು.?

    ಮುನಿರತ್ನ ಅವರು ಹೇಳಿದ್ರು

    ಮುನಿರತ್ನ ಅವರು ಹೇಳಿದ್ರು

    ಇನ್ನು ನಿರ್ಮಾಪಕ ಸಂಘದ ಅಧ್ಯಕ್ಷ ಹಾಗೂ ಶಾಸಕ ಮುನಿರತ್ನ ಅವರು ಈ ಬಗ್ಗೆ ಮಾತನಾಡಿದ್ದರು. ಈಗ ಕೋರ್ಟ್ ನಲ್ಲಿ ಪ್ರಕರಣ ಇದೆ. ಜೈಲಿನಿಂದ ವಿಜಿ ಹೊರಬಂದ ಮೇಲೆ ಕಿಟ್ಟಿ ಮತ್ತು ವಿಜಯ್ ಇಬ್ಬರನ್ನ ಕರೆಯಿಸಿ ಮಾತನಾಡಿಸುವ ಚಿಂತನೆ ಇದೆ. ಅವರಿಬ್ಬರ ನಡುವಿನ ದ್ವೇಷವನ್ನ ತಣ್ಣಗಾಗಿಸುವ ಬಗ್ಗೆ ನಾನು, ಅಂಬರೀಶ್ ಅವರ ಜೊತೆ ಸೇರಿ ಮಾತನಾಡುತ್ತೇವೆ ಎಂದು ಹೇಳಿದ್ದರು.

    ಜಾಮೀನು ನಿರಾಕರಣೆ

    ಜಾಮೀನು ನಿರಾಕರಣೆ

    ಜಿಮ್ ಟ್ರೈನರ್ ಮಾರುತಿ ಗೌಡ ಅವರ ಮೇಲಿನ ಹಲ್ಲೆ ಮತ್ತು ಕಿಡ್ನ್ಯಾಪ್ ಪ್ರಕರಣದಲ್ಲಿ ಜೈಲು ಸೇರಿರುವ ನಟ ದುನಿಯಾ ಜಾಮೀನು ಅರ್ಜಿಯನ್ನ ಮ್ಯಾಜಿಸ್ಟ್ರೇಟ್ ಕೋರ್ಟ್ ನಿನ್ನೆ ತಿರಸ್ಕರಿಸಿದೆ. ದುನಿಯಾ ವಿಜಯ್, ಪ್ರಸಾದ್, ಮಣಿ ಮತ್ತು ಪ್ರಸಾದ್ ನಾಲ್ಕು ಜನ ಹಲ್ಲೆ ಪ್ರಕರಣದಲ್ಲಿ ಬಂಧನವಾಗಿದ್ದು, ಜಾಮೀನುಗಾಗಿ ಅರ್ಜಿ ಸಲ್ಲಿಸಿದ್ದರು. ಸೋಮವಾರ ವಿಚಾರಣೆ ನಡೆಸಿದ್ದ 8ನೇ ಎಸಿಎಂಎಂ ಕೋರ್ಟ್ ನಿನ್ನೆ ಅರ್ಜಿ ವಜಾ ಮಾಡಿದೆ. ಈಗ ಸೆಷನ್ಸ್ ಕೋರ್ಟ್ ನಲ್ಲಿ ಜಾಮೀನುಗಾಗಿ ಅರ್ಜಿ ಸಲ್ಲಿಸುವ ಸಾಧ್ಯತೆ ಇದೆ.

    English summary
    Former Karnataka film chamber president Sa Ra Govindu Reacts To Duniya Vijay Assault And Kidnap Attempt case.
    Thursday, September 27, 2018, 12:09
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X