For Quick Alerts
  ALLOW NOTIFICATIONS  
  For Daily Alerts

  ಇಲ್ಲ ಸಲ್ಲದ ಆರೋಪಗಳ ಬಗ್ಗೆ ಸ್ಪಷ್ಟನೆ ಕೊಟ್ಟ ಸಾಧುಕೋಕಿಲ

  By Pavithra
  |

  ಆರೋಪಿ ರೌಡಿ ಶೀಟರ್ ರವಿಕುಮಾರ್ ಅಲಿಯಾಸ್ ಸೈಕಲ್ ರವಿ ಅವರಿಗೂ ಸ್ಯಾಂಡಲ್ ವುಡ್ ಗೂ ನಂಟಿದೆ ಎನ್ನುವ ವಿಚಾರಗಳು ಕೇಳಿ ಬರುತ್ತಿದೆ. ಕಳೆದ ಕೆಲವು ದಿನಗಳ ಹಿಂದೆ ಸೈಕಲ್ ರವಿ ಅವರ ಮೊಬೈಲ್ ಗೆ ಸಾಧುಕೋಕಿಲ ಅವರಿಂದ ಕರೆ ಬಂದಿದೆ ಎನ್ನುವ ವಿಚಾರ ಎಲ್ಲೆಡೆ ಸುದ್ದಿ ಆಗಿತ್ತು.

  ಸಾಧುಕೋಕಿಲ ಅವರೇ ಏಳರಿಂದ ಎಂಟು ಭಾರಿ ಕರೆ ಮಾಡಿದ್ದಾರೆ ಎನ್ನುವ ವಿಚಾರ ತಿಳಿದು ಬಂದಿದೆ ಎನ್ನುವುದನ್ನು ಮಾಧ್ಯಮಗಳಲ್ಲಿ ಸುದ್ದಿ ಮಾಡಲಾಗಿತ್ತು. ಅದಷ್ಟೇ ಅಲ್ಲದೆ ಸೈಕಲ್ ರವಿಯನ್ನು ವಶಕ್ಕೆ ಪಡೆದಾಗ ಸುಮಾರು 11 ಮೊಬೈಲ್ ಅನ್ನು ವಶಕ್ಕೆ ಪಡೆದಿದ್ದರು.

  'ಚಕ್ರವರ್ತಿ' ದರ್ಶನ್ ಗೆ ಮರ್ಮಾಘಾತ ಕೊಟ್ಟ ಮಲ್ಲಿಕಾರ್ಜುನ್ ಯಾರು.? ಆತನ ಹಿನ್ನಲೆ ಏನು.?'ಚಕ್ರವರ್ತಿ' ದರ್ಶನ್ ಗೆ ಮರ್ಮಾಘಾತ ಕೊಟ್ಟ ಮಲ್ಲಿಕಾರ್ಜುನ್ ಯಾರು.? ಆತನ ಹಿನ್ನಲೆ ಏನು.?

  ಈ ಬಗ್ಗೆ ಇದುವರೆಗೆ ಎಲ್ಲಿಯೂ ಪ್ರತಿಕ್ರಿಯೆ ನೀಡದ ನಟ, ಸಂಗೀತ ನಿರ್ದೇಶಕ ಸಾಧುಕೋಕಿಲ ಈಗ ಮಾತನಾಡಿದ್ದಾರೆ. ಸಾಮಾಜಿಕ ಜಾಲತಾಣದ ಮೂಲಕ ಈ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಅಭಿಮಾನಿಗಳ ಜೊತೆ ಹಂಚಿಕೊಂಡಿದ್ದಾರೆ. ಹಾಗಾದರೆ ಸಾಧು ಹೇಳಿದ ಮಾತುಗಳೇನು? ಇಲ್ಲಿದೆ ಸಂಪೂರ್ಣ ಮಾಹಿತಿ ಮುಂದೆ ಓದಿ

  ಆರೋಪಗಳ ಬಗ್ಗೆ ಮಾತನಾಡಿದ ಸಾಧು

  ಆರೋಪಗಳ ಬಗ್ಗೆ ಮಾತನಾಡಿದ ಸಾಧು

  ರೌಡಿ ಶೀಟರ್ ರವಿಕುಮಾರ್ ಗೂ ನನಗೂ ಯಾವುದೇ ಲಿಂಕ್ ಇಲ್ಲ. ನನ್ನ ಬೇನಾಮಿ ಆಸ್ತಿಗಳು ರೌಡಿಗಳ ಬಳಿ ಇದೆ ಎನ್ನುವ ವಿಚಾರಗಳು ಎಲ್ಲೆಡೆ ಹರಿದಾಡಿದೆ. ಅವೆಲ್ಲವೂ ಸುಳ್ಳು.

  ಫೋನ್ ನಂಬರ್ ಯಾರ ಬಳಿಯೂ ಇಲ್ಲ

  ಫೋನ್ ನಂಬರ್ ಯಾರ ಬಳಿಯೂ ಇಲ್ಲ

  ನನ್ನ ಫೋನ್ ನಂಬರ್ ಯಾರ ಬಳಿಯೂ ಇಲ್ಲ. ನನ್ನ ಬಗ್ಗೆ ಯಾರು ಕೂಡ ಸ್ಫೂಟಕ ಮಾಹಿತಿ ನೀಡಿಲ್ಲ. ಸಿಸಿಬಿ ಅವರೇ ನಾವು ಯಾರಿಗೂ ಯಾವ ಬಗ್ಗೆ ಮಾಹಿತಿ ಕೊಟ್ಟಿಲ್ಲ ಎನ್ನುತ್ತಾರೆ. ಆದರೆ ಮಾಧ್ಯಮಗಳಲ್ಲಿ ಮಾತ್ರ ಸಾಧುಕೋಕಿಲ ಬಗ್ಗೆ ಸ್ಫೋಟಕ ಮಾಹಿತಿ ಅಂತ ಬರುತ್ತಿದೆ.

  ಅಭಿಮಾನಿಗಳಿಗೆ ಮಾತ್ರ ನನ್ನ ಉತ್ತರ

  ಅಭಿಮಾನಿಗಳಿಗೆ ಮಾತ್ರ ನನ್ನ ಉತ್ತರ

  ಇಷ್ಟೆಲ್ಲಾ ಸುದ್ದಿ ಆದರೂ ಕೂಡ ನಾನು ಎಲ್ಲಿಯೂ ಈ ಬಗ್ಗೆ ಮಾತನಾಡಿಲ್ಲ. ಯಾಕೆಂದರೆ ನಾನು ಉತ್ತರಿಸಬೇಕಿರುವುದು ನಿಮಗೆ ಮಾತ್ರ. ಅಭಿಮಾನಿಗಳು ನನ್ನನ್ನು ಬೆಳೆಸಿರುವುದು. ನನಗೂ ಯಾವುದೇ ರೌಡಿಗಳಿಗೂ ಸಂಬಂಧವಿಲ್ಲ. ಇನ್ನು ಮುಂದೆ ನನ್ನ ವಿಚಾರಗಳನ್ನು ಸಾಮಾಜಿಕ ಜಾಲತಾಣದ ಮೂಲಕವೇ ತಿಳಿಸುತ್ತೇನೆ ಎಂದಿದ್ದಾರೆ.

  ಸಂಬಂಧವಿಲ್ಲ ಆರೋಪಕ್ಕೆ ಯಾರು ಕಾರಣ?

  ಸರಿಯಾಗಿ ವಿಚಾರಿಸದೆ, ಸಾಧುಕೋಕಿಲ ಬಗ್ಗೆ ಈ ರೀತಿ ಆರೋಪಗಳು ಬರುತ್ತಿರುವುದರ ಬಗ್ಗೆ ನಟ ಸಾಧುಕೋಕಿಲ ಬೇಸರವಾಗಿದ್ದಾರೆ. ಕಲಾವಿದರ ಪರವಾಗಿರಬೇಕಾದ ಮಾಧ್ಯಮಗಳೇ ಈ ರೀತಿ ಮಾಡಿದರೇ ಹೇಗೆ ಎಂದು ಪ್ರಶ್ನೆ ಮಾಡಿದ್ದಾರೆ.

  English summary
  Kannada actor Sadhu Kokila talked about false news on him. He has clarified the false rumor through the social networking site.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X