»   » ಮದುವೆ ಬಳಿಕ ಹೆಸರು ಬದಲಿಸಿಕೊಂಡ 'ಅಕ್ಕಿನೇನಿ' ಸೊಸೆ ಸಮಂತಾ.!

ಮದುವೆ ಬಳಿಕ ಹೆಸರು ಬದಲಿಸಿಕೊಂಡ 'ಅಕ್ಕಿನೇನಿ' ಸೊಸೆ ಸಮಂತಾ.!

Posted By:
Subscribe to Filmibeat Kannada

ತೆಲುಗು ತಾರಾ ಜೋಡಿ ನಾಗಚೈತನ್ಯ ಮತ್ತು ಸಮಂತಾ ಅವರ ಮದುವೆ ಇದೇ ಅಕ್ಟೋಬರ್ 6 ರಂದು ಗೋವಾದಲ್ಲಿ ಸಂಪ್ರದಾಯವಾಗಿ ನೆರವೇರಿತ್ತು. ಇದೀಗ, ನಾಗಾರ್ಜುನ ಅವರ ಸೊಸೆ ಟ್ವಿಟ್ಟರ್ ನಲ್ಲಿ ತಮ್ಮ ಹೆಸರನ್ನ ಬದಲಾಯಿಸಿಕೊಂಡಿದ್ದಾರೆ.

ಮದುವೆ ಬಳಿಕ ಸಾಮಾನ್ಯವಾಗಿ ಪತ್ನಿ, ತನ್ನ ಹೆಸರಿನ ಬಳಿಕ ತಮ್ಮ ಪತಿಯ ಹೆಸರು ಸೇರಿಸಿಕೊಳ್ಳುವುದು ಸಂಪ್ರದಾಯ. ಹಾಗಾಗಿ, ಟ್ವಿಟ್ಟರ್ ನಲ್ಲಿ ಸಮಂತಾ ಕೂಡ ಹೆಸರು ಬದಲಿಸಿದ್ದಾರೆ. ಆದ್ರೆ, ತಮ್ಮ ಹೆಸರಿನ ಜೊತೆ ಪತಿ ನಾಗಚೈತನ್ಯ ಹೆಸರು ಸೇರಿಸಿಲ್ಲ. ನಾಗಾರ್ಜುನ ಅವರ ಕುಟುಂಬದ ಹೆಸರನ್ನ ಸೇರಿಸಿದ್ದಾರೆ.

ಮದುವೆ ಆಲ್ಬಂ: ನಾಗ ಚೈತನ್ಯ-ಸಮಂತಾ ಕ್ರಿಶ್ಚಿಯನ್ ವೆಡ್ಡಿಂಗ್

Samantha changes name to Samantha Akkineni

ಹೌದು, ಇಷ್ಟು ದಿನ ಸಮಂತಾ ಹೆಸರು ಟ್ವಿಟ್ಟರ್ ನಲ್ಲಿ 'ಸಮಂತಾ ರುತು ಪ್ರಭು' ಎಂದಿತ್ತು. ಆದ್ರೀಗ, 'ಸಮಂತಾ ಅಕ್ಕಿನೇನಿ' ಎಂದು ಬದಲಾಗಿದೆ. ಸಮಂತಾರ ಈ ನಡೆಗೆ ಅಕ್ಕಿನೇನಿ ಫ್ಯಾನ್ಸ್ ಸಂತಸ ವ್ಯಕ್ತಪಡಿಸಿದ್ದು, ಅಕ್ಕಿನೇನಿ ಸೊಸೆಗೆ ಸ್ವಾಗತ ಬಯಸಿದ್ದಾರೆ.

ಚಿತ್ರಗಳು: ನೂತನ ಬಾಳಿಗೆ ಕಾಲಿಟ್ಟ ಸಮಂತಾ ಮತ್ತು ನಾಗಚೈತನ್ಯ

ಇನ್ನು ನಾಗಾರ್ಜುನ ಮತ್ತು ಸಮಂತಾ ಅಭಿನಯದ 'ರಾಜುಗಾರಿ ಗದಿ' ಚಿತ್ರ ಕಳೆದ ವಾರವಷ್ಟೇ ಬಿಡುಗಡೆಯಾಗಿದ್ದು, ಯಶಸ್ವಿ ಪ್ರದರ್ಶನವಾಗುತ್ತಿದೆ. ಅಕ್ಕಿನೇನಿ ಕುಟುಂಬಕ್ಕೆ ಸಮಂತಾ ಸೊಸೆಯಾದ ಬಳಿಕ ಬಿಡುಗಡೆಯಾದ ಮೊದಲ ಸಿನಿಮಾ ಇದಾಗಿದ್ದು, ಇದೊಂದು ಹಾರರ್ ಎಂಟರ್ ಟೈನ್ ಮೆಂಟ್ ಸಬ್ಜೆಕ್ಟ್ ಆಗಿದೆ.

English summary
South Actress Samantha Ruth Prabhu Changed Her Name In Twitter Account.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada