For Quick Alerts
  ALLOW NOTIFICATIONS  
  For Daily Alerts

  ಜಯನಗರ ಫುಟ್‌ಪಾತ್ ಸರಿಪಡಿಸಿದ ನಟಿ ಸಂಯುಕ್ತಾ ಹೊರನಾಡ್

  |

  ರಸ್ತೆಯಲ್ಲಿ ಹೋಗುತ್ತಿರುವಾಗ ನೆರೆಹೊರೆಯಲ್ಲಿ ಏನೇ ಅನಾಹುತ ಆದರೂ, ಸಮಸ್ಯೆ ಉಂಟಾದರೂ ತಾವಾಯಿತು ತಮ್ಮ ಪಾಡಾಯಿತು ಎಂದು ಹೋಗುವವರೇ ಹೆಚ್ಚು. ಇಂತಹದ್ರಲ್ಲಿ ನಟಿ ಸಂಯುಕ್ತಾ ಹೊರನಾಡ್ ಜನರಿಗೆ ಸಮಸ್ಯೆ ಆಗುತ್ತಿದೆ ಎಂದು ತಿಳಿದು ಖುದ್ದು ತಾವೇ ಅದನ್ನು ಸರಿಪಡಿಸುವ ಕೆಲಸ ಮಾಡಿದ್ದಾರೆ.

  ಜಯನಗರ 4ನೇ ಹಂತದ ಬಸ್ ನಿಲ್ದಾಣದ ಎದುರಿನಲ್ಲಿರುವ ರಸ್ತೆಯ ಫುಟ್‌ಪಾತ್ ಕಿತ್ತು ಹೋಗಿದೆ. ಸಾರ್ವಜನಿಕರು ನಡೆದಾಡುವ ಪಾದಾಚಾರಿ ಮಾರ್ಗ ದುರಸ್ಥಿಯಾಗಿದೆ. ಆದರೆ, ಈ ಬಗ್ಗೆ ಬಿಬಿಎಂಪಿ ಅಧಿಕಾರಿಗಳು ಗಂಭೀರವಾಗಿ ಪರಿಗಣಿಸಿಲ್ಲ.

  ಕೊರೊನಾ ಕಾಲಕ್ಕೆ ಗಾನಸುಧೆ ಹರಿಸಿದ ಬೆಳವಾಡಿ ಅಮ್ಮ-ಮಗಳುಕೊರೊನಾ ಕಾಲಕ್ಕೆ ಗಾನಸುಧೆ ಹರಿಸಿದ ಬೆಳವಾಡಿ ಅಮ್ಮ-ಮಗಳು

  ಇದನ್ನು ಕಂಡ ನಟಿ ಮತ್ತು ಕೆಲವು ಸ್ನೇಹಿತರು ಆ ರಸ್ತೆಯನ್ನು ಜನರಿಗೆ ಓಡಾಡಲು ಅನುಕೂಲವಾಗುವಂತೆ ಮಾಡಿಕೊಟ್ಟಿದ್ದಾರೆ. ಸ್ಥಳಿಯ ಕೆಲವು ವ್ಯಾಪಾರಿಗಳ ಜೊತೆ ಕೈ ಜೋಡಿಸಿದ ನಟಿ ಸುಗಮ ಹಾದಿಯಾಗಿ ಪರಿವರ್ತಿಸಲು ನೆರವಾಗಿದ್ದಾರೆ.

  ಈ ಫೋಟೋಗಳನ್ನು ಮತ್ತು ವಿಡಿಯೋವನ್ನು ನಟಿ ಸಂಯುಕ್ತಾ ತಮ್ಮ ಟ್ವಿಟ್ಟರ್‌ ಖಾತೆಯಲ್ಲಿ ಪೋಸ್ಟ್ ಮಾಡಿದ್ದು, ನೆಟ್ಟಿಗರಿಂದ ಭಾರಿ ಮೆಚ್ಚುಗೆಗೆ ಪಾತ್ರವಾಗಿದೆ.

  ವಿಶೇಷ ಅಂದ್ರೆ ಸಂಯುಕ್ತಾ ಹೊರನಾಡ್‌ ಅವರ ಈ ಸಮಾಜಮುಖಿ ಕಾರ್ಯಕ್ಕೆ ಹಿರಿಯ ನಟ ಪ್ರಕಾಶ್ ಬೆಳವಾಡಿ ಸಹ ಜೊತೆಯಾಗಿದ್ದಾರೆ. ಇದು ಮಾತ್ರವಲ್ಲ, ಇಂತಹದ ಯಾವುದೇ ಸ್ಥಳಗಳು ಇದ್ದಲ್ಲಿ ನಮಗೆ ಮಾಹಿತಿ ನೀಡಿ ಎಂದು ಸಂಯುಕ್ತಾ ಮನವಿ ಮಾಡಿಕೊಂಡಿದ್ದಾರೆ.

  Rakesh Adiga spiritual Rap , ಕನ್ನಡಧ Rapperಗಳಿಗೆ ಕಿವಿಮಾತು | Rakesh Adiga | Filmibeat Kannada

  ಅಂದ್ಹಾಗೆ, ಜಯನಗರ 4ನೇ ಹಂತದ ಸುತ್ತಮುತ್ತಾ ರಸ್ತೆಗಳಲ್ಲಿ ವೈಟ್‌ ಟ್ಯಾಂಪಿಂಗ್ ಕೆಲಸ ಪ್ರಗತಿಯಲ್ಲಿದೆ. ಈ ಕೆಲಸ ಸಂಪೂರ್ಣವಾಗಿ ಇನ್ನು ಮುಗಿದಿಲ್ಲ.

  English summary
  Kannada actress Samyuktha hornad and friends fixed a footpath at Jayanagar 4th block.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X