For Quick Alerts
  ALLOW NOTIFICATIONS  
  For Daily Alerts

  ಹುಟ್ಟೂರಲ್ಲಿ ಮಣ್ಣು ಸೇರಿದ ಸಂಚಾರಿ ವಿಜಯ್: ಸರ್ಕಾರಿ ಗೌರವದೊಂದಿಗೆ ಅಂತ್ಯಕ್ರಿಯೆ

  |

  ರಸ್ತೆ ಅಪಘಾತದಿಂದ ತೀವ್ರವಾಗಿ ಗಾಯಗೊಂಡು ಮೃತಪಟ್ಟ ಸಂಚಾರಿ ವಿಜಯ್‌ರ ಅಂತ್ಯಕ್ರಿಯೆ ಹುಟ್ಟೂರಾದ ಪಂಚನಹಳ್ಳಿಯಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿತು.

  Sanchari Vijay ಗೆ ಹುಟ್ಟೂರಿನಲ್ಲಿ ಸರ್ಕಾರಿ ಗೌರವ ಸಿಕ್ಕಿದ್ದು ಹೀಗೆ... | Oneindia Kannada

  ಇಂದು ಬೆಳಿಗ್ಗೆ ರವೀಂದ್ರ ಕಲಾಕ್ಷೇತ್ರದಲ್ಲಿ ಸಂಚಾರಿ ವಿಜಯ್ ಅಂತಿಮ ದರ್ಶನದ ವ್ಯವಸ್ಥೆ ಮಾಡಲಾಗಿತ್ತು. ಸಿನಿಮಾ ಗಣ್ಯರು, ರಂಗಭೂಮಿ ಗಣ್ಯರು, ರಾಜಕಾರಣಿಗಳು ವಿಜಯ್‌ರ ಅಂತಿಮ ದರ್ಶನ ಪಡೆದುಕೊಂಡರು.

  ಅದರ ಬಳಿಕ ಆಂಬುಲೆನ್ಸ್‌ನಲ್ಲಿ ವಿಜಯ್‌ರನ್ನು ಹುಟ್ಟೂರಿಗೆ ತೆಗೆದುಕೊಂಡು ಹೋಗಲಾಯಿತು. ಆಂಬುಲೆನ್ಸ್ ಹೋಗುತ್ತಿದ್ದ ದಾರಿಯುದ್ದಕ್ಕೂ ಗ್ರಾಮಸ್ಥರು, ವಿಜಯ್ ಅಭಿಮಾನಿಗಳು ಕೈಮುಗಿದು ವಿಜಯ್‌ಗೆ ಅಂತಿಮ ವಿದಾಯ ಹೇಳಿದರು.

  ಸಂಜೆ ವೇಳೆಗೆ ಹುಟ್ಟೂರಿಗೆ ವಿಜಯ್ ಪಾರ್ಥಿವ ಶರೀರ ತಲುಪಿತು. ಊರ ಹೆಮ್ಮೆಯ ಮಗನನ್ನು ಕೊನೆಯ ಬಾರಿ ನೋಡಲು ಜನಸಾಗರವೇ ಹರಿದುಬಂದಿತ್ತು. ಆಂಬುಲೆನ್ಸ್‌ ನಿಲ್ಲಿಸಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಯಿತು.

  ಆ ವೇಳೆಗಾಗಲೇ ವಿಜಯ್‌ರ ಗೆಳೆಯ ರಘು ಅವರ ತೋಟದಲ್ಲಿ ಅಂತಿಮ ಸಂಸ್ಕಾರಕ್ಕೆ ಅಣಿ ಮಾಡಲಾಗಿತ್ತು. ಹಿಂದು ಲಿಂಗಾಯತ ಪದ್ಧತಿಯಂತೆ ಅಂತಿಮ ವಿಧಿ-ವಿಧಾನಗಳನ್ನು ಮಾಡಲಾಯಿತು. ಕುಪ್ಪೂರು ಗದ್ದುಗೆ ಮಠದ ಡಾ.ಯತೀಶ್ವರ್ ಶಿವಾಚಾರ್ಯರ ನೇತೃತ್ವದಲ್ಲಿ ಅಂತಿಮ ವಿಧಿ-ವಿಧಾನಗಳನ್ನು ಪೂರೈಸಲಾಯಿತು. ಸಕಲ ಸರ್ಕಾರಿ ಗೌರವದೊಂದಿಗೆ ವಿಜಯ್ ಪಾರ್ಥಿವ ಶರೀರವನ್ನು ಮಣ್ಣು ಮಾಡಲಾಯಿತು. ಊರ ಜನರು, ವಿಜಯ್ ಸ್ನೇಹಿತರು, ಕುಟುಂಬದವರು ಭಾರವಾದ ಹೃದಯದಿಂದ ವಿಜಯ್‌ ಅನ್ನು ಬೀಳ್ಕೊಟ್ಟರು.

  English summary
  Actor Sanchari Vijay cremated in Chikkamagaluru's Panchanahalli. He died because of road accident.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X