For Quick Alerts
  ALLOW NOTIFICATIONS  
  For Daily Alerts

  ವಿಡಿಯೋ: ಕೀನ್ಯಾ ಮಕ್ಕಳೊಂದಿಗೆ ಗೋಲ್ಡನ್ ಸ್ಟಾರ್‌ ಸಖತ್‌ ಸ್ಟೆಪ್ಸ್‌

  |

  ಗಾಳಿಪಟ-2 ಚಿತ್ರದ ಯಶಸ್ಸಿನ ಬಳಿಕ ಗೋಲ್ಡನ್‌ ಸ್ಟಾರ್‌ ಗಣೇಶ್‌ 'ಬಾನದಾರಿಯಲ್ಲಿ' ಸಿನಿಮಾದ ಚಿತ್ರೀಕರಣದಲ್ಲಿ ತೊಡಗಿಕೊಂಡಿದ್ದಾರೆ. ಪ್ರೀತಂ ಗುಬ್ಬಿ ಹಾಗೂ ಗೋಲ್ಡನ್‌ ಸ್ಟಾರ್‌ ಕಾಂಬಿನೇಷನ್‌ನ ಚಿತ್ರಗಳು ಸಾಮಾನ್ಯವಾಗಿ ಪ್ರೇಕ್ಷಕರಲ್ಲಿ ಕುತೂಹಲ ಹುಟ್ಟುಹಾಕುತ್ತದೆ. ಅದರಲ್ಲೂ 'ಬಾನದಾರಿಯಲ್ಲಿ' ಸಿನಿಮಾ ಶೀರ್ಷಿಕೆ ಮೂಲಕವೇ ಎಲ್ಲರ ಗಮನ ಸೆಳೆಯುತ್ತಿದ್ದು, ಈಗಾಗಲೇ ಚಿತ್ರದ ಚಿತ್ರೀಕರಣ ಭರ್ಜರಿಯಾಗಿ ನಡೆಯುತ್ತಿದೆ.

  'ಬಾನದಾರಿಯಲ್ಲಿ' ಶೂಟಿಂಗ್‌ಗಾಗಿ ಚಿತ್ರತಂಡ ಕಳೆದ ವಾರ ಸೌತ್‌ ಆಫ್ರಿಕಾ ವಿಮಾನ ಹತ್ತಿದ್ದು, ನಾಯಕ ನಟ ಗಣೇಶ್‌ ಸೇರಿದಂತೆ ಚಿತ್ರತಂಡ ಕೀನ್ಯಾದಲ್ಲಿ ಬೀಡುಬಿಟ್ಟಿದ್ದಾರೆ. ಈ ವಿಚಾರವನ್ನು ಗಣೇಶ್‌ ತಮ್ಮ ಸೋಶಿಯಲ್‌ ಮೀಡಿಯಾದಲ್ಲಿ ಹಿರಿಯ ನಟ ರಂಗಾಯಣ ರಘು ಅವರೊಂದಿಗೆ ವಿಮಾನ ನಿಲ್ದಾಣದಲ್ಲಿ ತೆಗೆದ ಫೋಟೋ ಹಂಚಿಕೊಳ್ಳುವ ಮೂಲಕ ಅಭಿಮಾನಿಗಳಿಗೆ ತಿಳಿಸಿದ್ದರು.

  'ಬಾನ ದಾರಿಯಲ್ಲಿ' ಮಂಗಳೂರಿನಿಂದ ಕೀನ್ಯಾಗೆ ಹೊರಟು ನಿಂತ ಗೋಲ್ಡನ್ ಸ್ಟಾರ್!'ಬಾನ ದಾರಿಯಲ್ಲಿ' ಮಂಗಳೂರಿನಿಂದ ಕೀನ್ಯಾಗೆ ಹೊರಟು ನಿಂತ ಗೋಲ್ಡನ್ ಸ್ಟಾರ್!

  ಕೀನ್ಯಾದ ಕೆಲ ಪ್ರದೇಶಗಳಲ್ಲಿ 'ಬಾನದಾರಿಯಲ್ಲಿ' ಶೂಟಿಂಗ್‌ ನಡೆಯುತ್ತಿದ್ದು, ಅಲ್ಲಿನ ಸಂಸ್ಕೃತಿಯನ್ನು ಚಿತ್ರತಂಡ ಅಧ್ಯಾಯನ ಮಾಡುತ್ತಿದ್ದಾರೆ. ಹೀಗಾಗಿ ನಟ ಗಣೇಶ್‌ ಅಲ್ಲಿನ ಜನರ ಜೊತೆ ಬೆರೆಯುತ್ತಿದ್ದಾರೆ. ಕೀನ್ಯಾ ಜನರು ಕೂಡ 'ಬಾನದಾರಿಯಲ್ಲಿ' ಚಿತ್ರತಂಡಕ್ಕೆ ಅಷ್ಟೇ ಪ್ರೀತಿ ನೀಡುತ್ತಿದ್ದಾರೆ ಎನ್ನುವುದಕ್ಕೆ ಗಣೇಶ್‌ ಹಂಚಿಕೊಂಡಿರುವ ವಿಡಿಯೋ ಸಾಕ್ಷಿಯಾಗಿದೆ.

  ನಟ ಗಣೇಶ್‌ ತಮ್ಮ ಸೋಶಿಯಲ್‌ ಮೀಡಿಯಾದಲ್ಲಿ ಕೀನ್ಯಾದ ಒಂದು ವಿಶೇಷವಾದ ವಿಡಿಯೋವೊಂದನ್ನು ಶೇರ್ ಮಾಡಿಕೊಂಡಿದ್ದಾರೆ. ಗಣೇಶ್‌ ಕೀನ್ಯಾದ ಮಕ್ಕಳ ಜೊತೆ ಅಲ್ಲಿನ ಹಾಡಿಗೆ ಸ್ಟೆಪ್ಸ್‌ ಹಾಕಿದ್ದಾರೆ. ಐದಾರು ಮಕ್ಕಳ ಗುಂಪಿನೊಂದಿಗೆ ಗಣೇಶ್‌ ಕೀನ್ಯಾ ಭಾಷೆಯ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಮಕ್ಕಳು ಹಾಕಿದ ಸ್ಟೆಪ್ಸ್‌ಗಳನ್ನೇ ಗಣೇಶ್‌ ಕೂಡ ಅನುಸರಿಸಿದ್ದು, ಮಕ್ಕಳು ಗಣೇಶ್‌ ಡಾನ್ಸ್‌ ನೋಡಿ ಕುಣಿದು ಕುಪ್ಪಳಿಸಿದ್ದಾರೆ. ಕೊನೆಯಲ್ಲಿ ಗಣೇಶ್‌ ಮಕ್ಕಳಿಗೆ ಹೈ-ಫೈ ಕೊಟ್ಟು ಖುಷಿಪಟ್ಟಿದ್ದಾರೆ. ಈ ವಿಶೇಷವಾದ ವಿಡಿಯೋಗೆ ಗೋಲ್ಡನ್ ಸ್ಟಾರ್‌ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.ಇತ್ತೀಚಿಗೆ ಗಣೇಶ್‌ ಕೀನ್ಯಾ ಮಾರ್ಕೆಟ್‌ನಲ್ಲಿ ಸುತ್ತಾಡುತ್ತಿದ್ದ ವಿಡಿಯೋ ಕೂಡ ಹಂಚಿಕೊಂಡಿದ್ದರು.

  ಗಾಳಿಪಟ 2ನಿಂದ ತೆಗೆದು ಹಾಕಿದ್ದ ವಿಡಿಯೋ ಸಾಂಗ್ ಬಿಡುಗಡೆ; ಯಪ್ಪಾ ಒಳ್ಳೆ ಕೆಲಸ ಮಾಡಿದ್ರಿ ಎಂದ ಪ್ರೇಕ್ಷಕರು!ಗಾಳಿಪಟ 2ನಿಂದ ತೆಗೆದು ಹಾಕಿದ್ದ ವಿಡಿಯೋ ಸಾಂಗ್ ಬಿಡುಗಡೆ; ಯಪ್ಪಾ ಒಳ್ಳೆ ಕೆಲಸ ಮಾಡಿದ್ರಿ ಎಂದ ಪ್ರೇಕ್ಷಕರು!

  ಮಂಗಳೂರು, ಬೆಂಗಳೂರು, ಚೆನೈ ಹಾಗೂ ದಕ್ಷಿಣ ಆಫ್ರಿಕಾದಲ್ಲಿ 'ಬಾನದಾರಿಯಲ್ಲಿ' ಸಿನಿಮಾದ ಚಿತ್ರೀಕರಣ ನಡೆಯಲಿದೆ. ಈಗಾಗಲೇ ಮಂಗಳೂರಿನಲ್ಲಿ ಚಿತ್ರೀಕರಣ ಮುಗಿಸಿರುವ ತಂಡ. ಸದ್ಯ ಕೀನ್ಯಾದಲ್ಲಿ ಶೂಟಿಂಗ್‌ ಆರಂಭಿಸಿದೆ. ಮಂಗಳೂರಿನ ಸಮುದ್ರ ತಟ ಸೇರಿದಂತೆ ಪ್ರಮುಖ ಸ್ಥಳಗಳಲ್ಲಿ ಚಿತ್ರೀಕರಣ ನಡೆಸಲಾಗಿದ್ದು, ಚಿತ್ರದ ನಾಯಕ ಗಣೇಶ್‌ ಸಮುದ್ರ ತಟದಲ್ಲಿರುವ ಹಾಗೂ ನಾಯಕಿ ರುಕ್ಮಿಣಿ ವಸಂತ್‌ ಸ್ವಿಮ್ಮಿಂಗ್‌ ಸೂಟ್‌ನಲ್ಲಿರುವ ಫೋಟೋಗಳು ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದ್ದವು.

  ಮುಂಗಾರು ಮಳೆ, ದಿಲ್‌ ರಂಗೀಲಾ, 99 ಚಿತ್ರಗಳ ಬಳಿಕ ಗೋಲ್ಡನ್‌ ಸ್ಟಾರ್ ಗಣೇಶ್‌ ಹಾಗೂ ಪ್ರೀತಂ ಗುಬ್ಬಿ ಮತ್ತೆ ಒಂದಾಗುತ್ತಿದ್ದು, 'ಬಾನದಾರಿಯಲ್ಲಿ' ಅಡ್ವೆಂಚರ್‌, ಥ್ರಿಲ್ಲಿಂಗ್‌ ಹಾಗೂ ಒಂದೊಳ್ಳೆ ಪ್ರೇಮ ಕತೆಯಾಗಿದೆ. ಈ ಸಿನಿಮಾದಲ್ಲಿ ಗಣೇಶ್‌ ಕ್ರಿಕೆಟ್‌ ಆಟಗಾರನಾಗಿ ಕಾಣಿಸಿಕೊಂಡಿದ್ದು, ನಾಯಕಿ ರುಕ್ಮಿಣಿ ವಸಂತ್‌ ಈಜುಗಾರ್ತಿಯಾಗಿ ಕಾಣಿಸಿಕೊಳ್ಳಲಿದ್ದಾರೆ.

  12 ವರ್ಷಗಳ ಬಳಿಕ ನಿರ್ದೇಶನಕ್ಕೆ ಇಳಿಯಲಿರೋ ಗೋಲ್ಡನ್ ಸ್ಟಾರ್ ಗಣೇಶ್: ಇಲ್ಲಿದೆ ಡಿಟೈಲ್ಸ್!12 ವರ್ಷಗಳ ಬಳಿಕ ನಿರ್ದೇಶನಕ್ಕೆ ಇಳಿಯಲಿರೋ ಗೋಲ್ಡನ್ ಸ್ಟಾರ್ ಗಣೇಶ್: ಇಲ್ಲಿದೆ ಡಿಟೈಲ್ಸ್!

  ಪ್ರೀತಂ ಗುಬ್ಬಿ ನಿರ್ದೇಶನದ 'ಬಾನದಾರಿಯಲ್ಲಿ' ಚಿತ್ರಕ್ಕೆ ಪ್ರೀತಾ ಜಯರಾಂ ಕತೆ ಬರೆದಿದ್ದು, ಮಾಸ್ತಿ ಸಂಭಾಷಣೆ ಬರೆದಿದ್ದಾರೆ. ಅಭಿಲಾಷ್‌ ಕಲ್ಲತ್ತಿ ಛಾಯಗ್ರಹಣದಲ್ಲಿ 'ಬಾನದಾರಿಯಲ್ಲಿ' ಮೂಡಿಬರುತ್ತಿದ್ದು, ಕೆ.ಎಂ ಪ್ರಕಾಶ್‌ ಚಿತ್ರಕ್ಕೆ ಸಂಕಲನ ಮಾಡಿದ್ದಾರೆ. ಶ್ರೀವಾರಿ ಬ್ಯಾನರ್‌ ಅಡಿಯಲ್ಲಿ ನಿರ್ಮಾಣವಾಗುತ್ತಿರುವ ಚಿತ್ರಕ್ಕೆ ಅರ್ಜುನ್‌ ಜನ್ಯಾ ಸಂಗೀತಾ ಸಂಯೋಜನೆ ಮಾಡಿದ್ದಾರೆ.

  ಇನ್ನು ಗಣೇಶ್‌ ನಟನೆಯ 'ತ್ರಿಬ್ಬಲ್‌ ರೈಡಿಂಗ್‌' ಚಿತ್ರ ಬಿಡುಗಡೆಗೆ ಸಿದ್ಧವಾಗಿದೆ. ಆ್ಯಕ್ಷನ್, ಥ್ರಿಲ್ಲರ್, ಕಾಮಿಡಿ, ಸೆಂಟಿಮೆಂಟ್ ಹಾಗೂ ಸಸ್ಪೆನ್ಸ್ ಹೊಂದಿರುವ ' ತ್ರಿಬ್ಬಲ್‌ ರೈಡಿಂಗ್‌' ಚಿತ್ರದಲ್ಲಿ ಅದಿತಿ ಪ್ರಭುದೇವ, ಮೇಘಾ ಶೆಟ್ಟಿ ಹಾಗೂ ರಚನಾ ಇಂದರ್ ಗಣೇಶ್‌ಗೆ ಜೋಡಿಯಾಗಿ ಕಾಣಿಸಿಕೊಂಡಿದ್ದಾರೆ.

  English summary
  Sandalwood actor Ganesh starrer Banadariyalli Movie shooting ongoing in Kenya. Ganesh dance with Kenya childrens.
  Tuesday, September 27, 2022, 13:56
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X