Don't Miss!
- Sports
ಟಿ20 ವಿಶ್ವಕಪ್ ಗೆದ್ದ ಶಫಾಲಿ ವರ್ಮಾ ಪಡೆಗೆ ಬಿಸಿಸಿಐ ಸನ್ಮಾನ: 5 ಕೋಟಿ ರುಪಾಯಿ ಬಹುಮಾನ
- News
ತಂಬಾಕು ನಿಯಂತ್ರಣಕ್ಕೆ ಮೈಸೂರು ಜಿಲ್ಲಾಧಿಕಾರಿ ತೆಗೆದುಕೊಂಡ ಕ್ರಮಗಳು, ಇಲ್ಲಿದೆ ವಿವರ
- Lifestyle
ಬಜೆಟ್ನಲ್ಲಿ ಪ್ರಸ್ತಾಪವಾದ ಸಿಕಲ್ ಸೆಲ್ ಅನಿಮಿಯಾ ಕಾಯಿಲೆ ಎಷ್ಟು ಡೇಂಜರಸ್ ಗೊತ್ತೆ?
- Automobiles
ಹೊಸ ಇನೋವಾ ಹೈಕ್ರಾಸ್ ಬಲದೊಂದಿಗೆ ಮಾರಾಟದಲ್ಲಿ ದಾಖಲೆ ಮಟ್ಟದ ಬೆಳವಣಿಗೆ ಸಾಧಿಸಿದ ಟೊಯೊಟಾ
- Technology
ಚೀನಾದಲ್ಲಿ ಸೌಂಡ್ ಮಾಡಿದ್ದ ಈ ಡಿವೈಸ್ ಇದೀಗ ಜಾಗತಿಕ ಮಾರುಕಟ್ಟೆಗೆ ಎಂಟ್ರಿ!
- Finance
Union Budget 2023: ಹೊಸ ತೆರಿಗೆ ಪದ್ಧತಿಯಡಿಯಲ್ಲಿ ತೆರಿಗೆ ಲೆಕ್ಕಾಚಾರ ಹೇಗೆ?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಹೆಣ್ಣು ಮಕ್ಕಳ ನಕಲಿ ಪ್ರೊಫೈಲ್ ಬಳಸಿ ಸುಲಿಗೆ: ಈ ನಟನ ಹೆಸರು ಬಂದಿದ್ದೇಕೆ?
ಹೆಣ್ಣು ಮಕ್ಕಳನ್ನು ಬಳಸಿಕೊಂಡು ದಂಧೆ ನಡೆಸುತ್ತಿದ್ದ ಖರ್ತನಾಕ್ ವ್ಯಕ್ತಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತ ವ್ಯಕ್ತಿ 'ನ್ಯೂರಾನ್' ಸಿನಿಮಾ ನಟ ಮಂಜುನಾಥ್ ಎನ್ನಲಾಗಿತ್ತು. ಆದರೆ ಆತ ಬೇರೆ ಎನ್ನುವ ಮಾಹಿತಿ ಸಿಕ್ಕಿದೆ. ಹೆಣ್ಣು ಮಕ್ಕಳ ನಕಲಿ ಫೋಟೊಗಳನ್ನು ಬಳಸಿ ಗ್ರಾಹಕರನ್ನು ಸೆಳೆದು ಹಣ ದೋಚುತ್ತಿದ್ದ ಗ್ಯಾಂಗ್‌ನ ಪ್ರಮುಖ ಆರೋಪಿ ಮಂಜುನಾಥ್ ಆಗಿದ್ದಾನೆ.
ಬಂಧಿತ ಆರೋಪಿ ಲೊಕ್ಯಾಂಟೋ ವೆಬ್‌ಸೈಟ್ ಬಳಸಿ ಸುಲಿಗೆ ಮಾಡುತ್ತಿದ್ದದ್ದಾಗಿ ಪೊಲೀಸರು ತಿಳಿಸಿದ್ದಾರೆ. ಆದರೆ ಬಂಧಿತ ಮಂಜುನಾಥ್‌ಗೂ ಚಿತ್ರರಂಗಕ್ಕೂ ಸಂಬಂಧ ಇಲ್ಲ ಎನ್ನಲಾಗಿದೆ. ಲೊಕ್ಯಾಂಟೋ ವೆಬ್‌ಸೈಟ್‌ನಲ್ಲಿ ಹೆಣ್ಣು ಮಕ್ಕಳ ಫೋಟೊ ಬಳಸಿ ಪ್ರೊಫೈಲ್ ಕ್ರಿಯೇಟ್ ಮಾಡಿ ಗ್ರಾಹಕರನ್ನು ಸೆಳೆದು ಈ ಗ್ಯಾಂಗ್ ಬೆದರಿಸಿ ಹಣ ವಸೂಲಿ ಮಾಡುತ್ತಿತ್ತು. ಸುದ್ದಗುಂಟೆ ಪಾಳ್ಯ ಪೊಲೀಸರು 6 ಜನರ ಗ್ಯಾಂಗ್‌ನ ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ.
ಈ ಆಸಾಮಿ ಕಾಮುಕರ ಅಡ್ಡೆ ಆಗಿರುವ ಲೊಕ್ಯಾಂಟೋ ವೆಬ್‌ಸೈಟ್ ಬಳಸಿ ಹಣ ಮಾಡುವ ಸುಲಭ ಮಾರ್ಗ ಕಂಡುಕೊಂಡಿದ್ದ. ಆನ್‌ಲೈನ್‌ನಲ್ಲಿ ಹಾಗೂ ನೇರವಾಗಿ ಗ್ರಾಹಕರನ್ನು ಭೇಟಿ ಮಾಡಿ ಗ್ಯಾಂಗ್ ಹಣ ವಸೂಲಿ ಮಾಡುತ್ತಿತ್ತು.