For Quick Alerts
  ALLOW NOTIFICATIONS  
  For Daily Alerts

  ಕ್ರೇಜಿಕ್ವೀನ್ ಸಹೋದರನ ಮುಂದಿನ ಚಿತ್ರಕ್ಕೆ ಪ್ರೇಮ್‌ ಶಿಷ್ಯನಿಂದಲೇ ಆ್ಯಕ್ಷನ್‌ ಕಟ್‌

  |

  ಕ್ರೇಜಿ ಕ್ವೀನ್‌ ರಕ್ಷಿತಾ ಕನ್ನಡ ಚಿತ್ರರಂಗದ ಎವರೆಗ್ರೀನ್ ಸ್ಟಾರ್‌ ಚಾಲೆಂಜಿಂಗ್‌ ಸ್ಟಾರ್‌ ದರ್ಶನ್, ಕಿಚ್ಚ ಸುದೀಪ್‌ ಸೇರಿದಂತೆ ಸ್ಟಾರ್‌ ನಟರ ಜೊತೆಗೆ ಸೈ ಎನಿಸಿಕೊಂಡಿದ್ದ ರಕ್ಷಿತಾ ಮದುವೆಯ ಬಳಿಕ ಚಿತ್ರರಂಗದಿಂದ ಅಂತರ ಕಾಯ್ದುಕೊಂಡಿದ್ದರು. ಇತ್ತೀಚಿಗೆ ರಕ್ಷಿತಾ ನಿರ್ಮಾಪಕಿಯಾಗಿ ಮತ್ತೆ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದರು. ಅಲ್ಲದೇ ತಮ್ಮದೇ ಸಹೋದರನ್ನು ಕನ್ನಡ ಚಿತ್ರರಂಗಕ್ಕೆ ಪರಿಚಯಿಸಿದರು.

  ನಟಿ ರಕ್ಷಿತ ಇತ್ತೀಚಿಗೆ ತಮ್ಮ 'ಏಕ್‌ ಲವ್‌ ಯಾ' ಚಿತ್ರದ ಮೂಲಕ ತಮ್ಮ ಸಹೋದರ ರಾಣಾ ಅವರನ್ನು ಚಿತ್ರರಂಗಕ್ಕೆ ಪರಿಚಯಿಸಿದರು. ಜೋಗಿ ಪ್ರೇಮ್‌ ನಿರ್ದೇಶನದ ಏಕ್‌ ಲವ್‌ ಯಾ ಚಿತ್ರ ರೋಮ್ಯಾಂಟಿಕ್‌ ಲವ್‌ ಸ್ಟೋರಿ ಮೂಲಕ ಪ್ರೇಕ್ಷಕರ ಮನಸ್ಸು ಕದ್ದಿತ್ತು. ಬಾಕ್ಸ್‌ ಆಫೀಸ್‌ನಲ್ಲೂ ಸಖತ್‌ ಸದ್ದು ಮಾಡಿದ್ದ ಲಕ್‌ ಲವ್‌ ಯಾ ಚಿತ್ರ 14 ಕೋಟಿ ರೂ ಗಳಿಕೆ ಮಾಡಿತ್ತು.

  Ek Love Ya: ಒಟಿಟಿಗೆ 'ಏಕ್ ಲವ್ ಯಾ': ಯಾವಾಗ ಬಿಡುಗಡೆ? ಯಾವ ಒಟಿಟಿ?Ek Love Ya: ಒಟಿಟಿಗೆ 'ಏಕ್ ಲವ್ ಯಾ': ಯಾವಾಗ ಬಿಡುಗಡೆ? ಯಾವ ಒಟಿಟಿ?

  ಫಬ್ರವರಿ 24, 2022ರಂದು 'ಏಕ್‌ ಲವ್‌ ಯಾ' ಚಿತ್ರ ರಾಜ್ಯಾದಾದ್ಯಂತ 300ಕ್ಕೂ ಹೆಚ್ಚು ಸ್ಕ್ರೀನ್‌ಗಳಲ್ಲಿ ತೆರೆ ಕಂಡಿತ್ತು. ಜೋಗಿ ಪ್ರೇಮ್‌ ನಿರ್ದೇಶನದ ಮೇಲೆ ಭಾರೀ ಭರವಸೆ ಇಟ್ಟಿದ್ದ ಸಿನಿ ಪ್ರೇಮಿಗಳು ಚಿತ್ರದ ಬಗ್ಗೆ ವ್ಯಾಪಕ ಮೆಚ್ಚುಗೆ ವ್ಯಕ್ತಪಡಿಸಿದ್ದರು. 2022ರಲ್ಲಿ ತೆರೆಕಂಡ ಉತ್ತಮ ಚಿತ್ರಗಳಲ್ಲಿ ಏಕ್‌ ಲವ್‌ ಯಾ ಕೂಡ ಒಂದಾಗಿದೆ. ಈ ಚಿತ್ರದ ಮೂಲಕ ಜೋಗಿ ಪ್ರೇಮ್‌ ಹೊಸ ನಟ ಹಾಗೂ ನಟಿಯನ್ನು ಸ್ಯಾಂಡಲ್‌ವುಡ್‌ಗೆ ಪರಿಚಯಿಸಿದರು.

  ರಾಣಾ ಜೊತೆ ಸ್ಕ್ರೀನ್‌ ಶೇರ್‌ ಮಾಡಿದ್ದ ರಚಿತಾ

  ರಾಣಾ ಜೊತೆ ಸ್ಕ್ರೀನ್‌ ಶೇರ್‌ ಮಾಡಿದ್ದ ರಚಿತಾ

  'ಏಕ್‌ ಲವ್‌ ಯಾ' ಚಿತ್ರ ಕೆಲವು ವಿಚಾರದಿಂದ ಸ್ಪೆಷಲ್‌ ಆಗಿತ್ತು. ಬಿಡುಗಡೆಗೂ ಮುನ್ನವೇ ಹಾಡಿನ ಮೂಲಕವೇ 'ಏಕ್‌ ಲವ್‌ ಯಾ' ಚಿತ್ರ ಭಾರೀ ಬರವಸೆ ಮೂಡಿಸಿತ್ತು. ಚಿತ್ರದ ಒಂದು ಹಾಡಿನಲ್ಲಿ ಎಂಟ್ರಿಕೊಡುವ ಮೂಲಕ ರಕ್ಷಿತಾ ಮತ್ತೆ ಬೆಳ್ಳಿ ತೆರೆ ಮೇಲೆ ಕಾಣಿಸಿಕೊಂಡರು. ಇನ್ನು ಚಿತ್ರದ ನಾಯಕ ರಾಣಾ ಹಾಗೂ ನಾಯಕಿ ರೀಷ್ಮಾ ಇಬ್ಬರೂ ಹೊಸ ಪರಿಚಯವೇ ಆಗಿದ್ದು, ಸ್ಯಾಂಡಲ್‌ವುಡ್‌ ಡಿಂಪಲ್‌ ಕ್ವೀನ್‌ ನಟಿ ರಚಿತಾ ರಾಮ್‌ ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.

  'ಏಕ್ ಲವ್ ಯಾ' ಯಶಸ್ಸನ್ನು ಮುಖ್ಯವಾದ ವ್ಯಕ್ತಿಗಳಿಗೆ ಅರ್ಪಿಸಿದ ಪ್ರೇಮ್'ಏಕ್ ಲವ್ ಯಾ' ಯಶಸ್ಸನ್ನು ಮುಖ್ಯವಾದ ವ್ಯಕ್ತಿಗಳಿಗೆ ಅರ್ಪಿಸಿದ ಪ್ರೇಮ್

  ರಾಣಾ ನಟನೆಗೆ ಫ್ಯಾನ್ಸ್‌ ಫಿದಾ

  ರಾಣಾ ನಟನೆಗೆ ಫ್ಯಾನ್ಸ್‌ ಫಿದಾ

  'ಏಕ್‌ ಲವ್‌ ಯಾ' ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಟ್ಟ ರಾಣಾ ತಮ್ಮ ಮೊದಲ ಸಿನಿಮಾದಲ್ಲೇ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರರಾದರು. ಚಿತ್ರದಲ್ಲಿ ರಾಣಾ ನಟನೆಯನ್ನು ಸ್ಯಾಂಲಡ್‌ವುಡ್‌ ಕಲಾವಿದರು ಕೂಡ ಕೊಂಡಾಡಿದ್ದರು. ಈ ಮೂಲಕ ರಾಣಾ ಕನ್ನಡ ಚಿತ್ರರಂಗದಲ್ಲಿ ಮುಂದಿನ ದಿನಗಳಲ್ಲಿ ಸ್ಟಾರ್‌ ನಟನಾಗುವ ಭರವಸೆ ನೀಡಿದರು. ತಮ್ಮ ಸ್ಟೈಲ್‌, ಲುಕ್‌, ಧ್ವನಿ ಮೂಲಕವೇ ರಾಣಾ ಸಿನಿ ಪ್ರಿಯರ ಮನಸ್ಸು ಕದ್ದಿದ್ದು, ಮತ್ತೆ ರಾಣಾರನ್ನು ತೆರೆ ಮೇಲೆ ನೋಡಲು ಅಭಿಮಾನಿಗಳು ಆಸೆ ವ್ಯಕ್ತಪಡಿಸಿದ್ದರು.

  ಏಕ್‌ ಲವ್‌ ಯಾ ನಾಯಕನ ಮುಂದಿನ ಚಿತ್ರ ಯಾವುದು..?

  ಏಕ್‌ ಲವ್‌ ಯಾ ನಾಯಕನ ಮುಂದಿನ ಚಿತ್ರ ಯಾವುದು..?

  'ಏಕ್‌ ಲವ್‌ ಯಾ' ಅವರ ಮೊದಲ ಸಿನಿಮಾ ಆದರೂ ಕೂಡ ತೆರೆ ಮೇಲೆ ರಾಣಾ ಒಬ್ಬ ಅನುಭವಿ ನಟನಂತೆ ಮಿಂಚಿದ್ದರು. ಲವ್‌, ಫೈಲ್‌, ಎಮೋಷನಲ್‌ ಎಲ್ಲಾ ಸೀನ್‌ಗಳಲ್ಲೂ ರಾಣಾ ನೂರಕ್ಕೆ ನೂರು ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸುವಂತೆ ನಟಿಸಿದ್ದರು. ರಾಣಾ ಈ ರೀತಿಯ ಉತ್ತಮ ನಟನೆಗೆ, ಅವರು ನಿರ್ದೇಶಕ ಜೋಗಿ ಪ್ರೇಮ್‌ ಅವರ ಗರಡಿಯಲ್ಲಿ ಪರಳಗಿರುವುದೇ ಕಾರಣ ಎಂದು ಕೆಲವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಏಕ್‌ ಲವ್‌ ಯಾ ಹಿಟ್‌ ಬಳಿಕ ರಾಣಾ ಎಲ್ಲಿಯೂ ಕಾಣಿಸಿಕೊಂಡಿರಲಿಲ್ಲ. ನಟ ರಾಣಾ ಮುಂದಿನ ಚಿತ್ರ ಯಾವುದು ಎನ್ನುವುದಕ್ಕೆ ಸದ್ಯ ತೆರೆ ಬಿದ್ದಿದೆ.

  ಜೋಗಿ ಪ್ರೇಮ್‌ ಶಿಷ್ಯನಿಗೆ ಒಕೆ ಅಂದ್ರಾ ರಾಣಾ

  ಜೋಗಿ ಪ್ರೇಮ್‌ ಶಿಷ್ಯನಿಗೆ ಒಕೆ ಅಂದ್ರಾ ರಾಣಾ

  ನಟ ರಾಣಾ ತಮ್ಮ ಮುಂದಿನ ಸಿನಿಮಾದಲ್ಲಿ ನಟಿಸಲು ಸಜ್ಜಾಗುತ್ತಿದ್ದಾರೆ. ಜೋಗಿ ಪ್ರೇಮ್‌ ನಿರ್ದೇಶನದಲ್ಲಿ ನಟಿಸಿರುವ ರಾಣಾಗೆ ಮುಂದಿನ ಚಿತ್ರದಲ್ಲಿ ಯಾರು ಆಕ್ಯಕ್ಷನ್ ಕಟ್‌ ಹೇಳಬಹುದು ಎನ್ನುವ ಕುತೂಹಲಕ್ಕೆ ಉತ್ತರ ಇಲ್ಲಿದೆ. ಏಕ್‌ ಲವ್‌ ಯಾ ನಟ ರಾಣಾಗೆ ನಿರ್ದೇಶಕ ಪ್ರೇಮ್‌ ಜೊತೆಗೆ ಹಲವು ಸಿನಿಮಾಗಳಲ್ಲಿ ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡುತ್ತಿದ್ದ ವಿಜಯ್‌ ಈಶ್ವರ್ ನಿರ್ದೇಶನ ಮಾಡುತ್ತಿದ್ದಾರೆ ಎನ್ನುವ ಸುದ್ದಿ ಹೊರಬಿದ್ದಿದೆ. ವಿಜಯ್‌ ಈಶ್ವರ್‌ ಜೊತೆ ಕೆಲಸ ಮಾಡಲು ರಾಣಾ ಕೂಡ ಒಕೆ ಹೇಳಿದ್ದಾರೆ ಎನ್ನಲಾಗಿದ್ದು, ಈ ಬಗ್ಗೆ ಚಿತ್ರತಂಡವೇ ಅಧಿಕೃತವಾಗಿ ಮಾಹಿತಿ ಬಹಿರಂಗ ಪಡಿಸಬೇಕಿದೆ.

  English summary
  Ek Love Ya movie hero Raana next movie with sandalwood director Vijay Eshwar.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X