Don't Miss!
- Sports
ಬಾರ್ಡರ್-ಗವಾಸ್ಕರ್ ಟ್ರೋಫಿ: ರೋಹಿತ್ ಬಳಗದ ಅಭ್ಯಾಸಕ್ಕೆ ಭಾನುವಾರ ರಜೆ ನೀಡಿದ ಕೋಚ್ ದ್ರಾವಿಡ್
- Lifestyle
Horoscope Today 6 Feb 2023: ಸೋಮವಾರ : ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?
- News
ರಾಜ್ಯ ರಾಜಕೀಯದ ಮುಂದಿನ ರಹಸ್ಯವೊಂದನ್ನು ಬೇಧಿಸಿದ ಎಚ್ಡಿಕೆ
- Finance
ಆಧಾರ್ ಕಾರ್ಡ್ ಸಂಖ್ಯೆಯಿಂದ ನಿಮ್ಮ ಬ್ಯಾಂಕ್ ಬ್ಯಾಲೆನ್ಸ್ ಪರಿಶೀಲಿಸಿ, ಹೇಗೆ ಇಲ್ಲಿ ತಿಳಿಯಿರಿ
- Automobiles
ಹೆಚ್ಚಿನ ಮೈಲೇಜ್ ನೀಡುವ ಬಹುನಿರೀಕ್ಷಿತ ಟಾಟಾ ಆಲ್ಟ್ರೊಜ್ iCNG ಕಾರಿನ ವಿಶೇಷತೆಗಳು...
- Technology
ಇನ್ಮುಂದೆ ಟ್ವಿಟ್ಟರ್ನಲ್ಲೂ ಹಣ ಗಳಿಸಬಹುದು; ಮಸ್ಕ್ರ ಹೊಸ ನಿರ್ಧಾರ ಏನು!?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಜಮೀರ್ ಸರ್ ದಯವಿಟ್ಟು ಕ್ರಮ ತಗೊಳ್ಳಿ...,ಕೈಮುಗಿದು, ಕಣ್ಣೀರಿಟ್ಟ ನಟಿ ಸಂಜನಾ
ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ಖಾನ್ ಜೊತೆ ನಟಿ ಸಂಜನಾ ಕೊಲೊಂಬೊಗೆ ತೆರಳಿದ್ದು ಏಕೆ? ಎಂದು ಸಾಮಾಜಿಕ ಕಾರ್ಯಕರ್ತ ಪ್ರಶಾಂತ್ ಸಂಬರ್ಗಿ ಬಹಿರಂಗ ಆರೋಪ ಮಾಡಿದ್ದರು. ಈ ಆರೋಪಕ್ಕೆ ಪ್ರತಿಕ್ರಿಯೆ ನೀಡಿರುವ ಸಂಜನಾ, ಸಂಬರ್ಗಿ ವಿರುದ್ಧ ಏಕವಚನದಲ್ಲಿ ವಾಗ್ದಾಳಿ ನಡೆಸಿದ್ದಾರೆ.
Recommended Video
ಕೊಲೊಂಬೊ ಹೋಗಿದ್ದ ವಿಚಾರವಾಗಿ ಮಾತನಾಡಿದ ಸಂಜನಾ, ಕಾರ್ಯಕ್ರಮದ ಹಿನ್ನೆಲೆ ಅತಿಥಿಯಾಗಿ ನಾನು ಹೋಗಿದ್ದೆ, ಜಮೀರ್ ಅಹ್ಮದ್ ಅವರ ಜೊತೆಯಲ್ಲಿ ಹೋಗಿದ್ದಲ್ಲಾ, ಜಮೀರ್ ಅಹ್ಮದ್ ಯಾರು ಎಂದು ಗೊತ್ತೇ ಇರಲಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.
ಡ್ರಗ್
ಪೆಡ್ಲರ್
ರಾಹುಲ್
ಜೊತೆ
'ದೇಶಭಕ್ತ'
ಪ್ರಶಾಂತ್
ಸಂಬರ್ಗಿ
ಫೋಟೋ!
ಈ ವೇಳೆ ಕಣ್ಣೀರು ಹಾಕಿದ ಸಂಜನಾ, ಸಂಗರ್ಬಿ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಲು ಸಹ ನಿರ್ಧರಿಸಿರುವುದಾಗಿ ಮಾಹಿತಿ ನೀಡಿದ್ದಾರೆ. ಮುಂದೆ ಓದಿ...

ಜಮೀರ್ ಯಾರು ಎಂದೇ ಗೊತ್ತೆ ಇರಲಿಲ್ಲ
ಜಮೀರ್ ಅಹ್ಮದ್ ಖಾನ್ ಮತ್ತು ಸಂಜನಾ ಒಂದೇ ದಿನ ಕೊಲೊಂಬೊಗೆ ಏಕೆ ಹೋಗಿದ್ದರು ಎಂದು ಪ್ರಶಾಂತ್ ಸಂಬರ್ಗಿ ಪ್ರಶ್ನಿಸಿದ್ದರು. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಸಂಜನಾ ''ಆ ಕಾರ್ಯಕ್ರಮಕ್ಕೆ ನಾನು ಅತಿಥಿಯಾಗಿ ಹೋಗಿದ್ದೆ, ಬಹಳ ಜನ ಕಲಾವಿದರು ಅಲ್ಲಿ ಹೋಗಿದ್ದಾರೆ. ನನಗೆ ಜಮೀರ್ ಅಹ್ಮದ್ ಯಾರು ಎಂದು ಗೊತ್ತೇ ಇರಲಿಲ್ಲ. ಅವರು ದೊಡ್ಡ ಶಾಸಕರು. ಬರಿ ಪ್ರಚಾರಕ್ಕೆ ನನ್ನನ್ನು ಟಾರ್ಗೆಟ್ ಮಾಡ್ತಿದ್ದಾನೆ'' ಎಂದು ವಾಗ್ದಾಳಿ ನಡೆಸಿದರು.

ನಾನು ಸತ್ತೋದ್ರು ಸುಮ್ಮನೆ ಬಿಡಲ್ಲ
'ಪ್ರಶಾಂತ್ ಸಂಬರ್ಗಿ ಸುಮ್ಮನೆ ಆರೋಪ ಮಾಡ್ತಿದ್ದಾನೆ. ನಮ್ಮ ತಾಯಿಗೆ ಆರೋಗ್ಯ ಸರಿಯಲ್ಲ, ಮಾನಸಿಕವಾಗಿ ಹಿಂಸೆ ಆಗ್ತಿದೆ' ಎಂದು ಆಕ್ರೋಶ ವ್ಯಕ್ತಪಡಿಸಿದ ನಟಿ ಸಂಜನಾ, ''ಒಂದು ವೇಳೆ ನಮ್ಮ ತಾಯಿಗೆ ಏನಾದರೂ ಹೆಚ್ಚು-ಕಡಿಮೆ ಆದ್ರೆ, ನಾನು ಸತ್ತರೂ ಅವನನ್ನು ಬಿಡಲ್ಲ'' ಎಂದಿದ್ದಾರೆ.
ಸುಶಾಂತ್
ಸಿಂಗ್
ರೀತಿ
ನೇಣು
ಹಾಕಿಕೊಂಡು
ಸಾಯಬೇಕಾ?
ಸಂಜನಾ
ಗರಂ

ಕೈಮುಗಿದು, ಕಣ್ಣೀರಿಟ್ಟ ನಟಿ ಸಂಜನಾ
ನಿರಂತರ ಆರೋಪಗಳು ಮಾಡುತ್ತಿರುವ 'ಪ್ರಶಾಂತ್ ಸಂಬರ್ಗಿ ವಿಚಾರದಲ್ಲಿ ಕ್ರಮ ತಗೊಳ್ಳಿ ಜಮೀರ್ ಸರ್' ಎಂದು ವಿನಂತಿಸಿದ ಸಂಜನಾ ಕಣ್ಣೀರಿಟ್ಟರು. 'ಬೀದಿ ನಾಯಿ, ಅವನು ಯಾರೂ ಅಂತ ನನಗೆ ಗೊತ್ತಿಲ್ಲ, ನನ್ನ ಹಿಂದೆ ಏಕೆ ಬಿದ್ದಿದ್ದಾನೆ. ನಾನೊಬ್ಬ ಸೆಲೆಬ್ರಿಟಿ ಆಗಿರೋದೆ ದೊಡ್ಡ ತಪ್ಪಾ? ಎಂದು ಸಂಜನಾ ಭಾವುಕರಾದರು.

ನಾನು ಚಿಯರ್ ಗರ್ಲ್ ಅಲ್ಲ
ಸಿನಿಮಾ ಮಾಡುವುದಕ್ಕೆ ಮುಂಚೆ ಸಂಜನಾ ಚಿಯರ್ ಗರ್ಲ್ ಆಗಿದ್ದರು, 300 ರೂಪಾಯಿಗೆ ಕೆಲಸ ಮಾಡಿದ್ದರು ಎಂದು ಪ್ರಶಾಂತ್ ಸಂಬರ್ಗಿ ಟೀಕಿಸಿದ್ದರು. ಈ ಕುರಿತು ಪ್ರತಿಕ್ರಿಯೆ ಮಾಡಿದ ಸಂಜನಾ ''ನಾನು ಚಿಯರ್ ಗರ್ಲ್ ಅಲ್ಲ, ನಾನು 500 ರೂಪಾಯಿಗೆ ಮಾಡಲಿಂಗ್ ಮಾಡಿದ್ದೇನೆ, ಈಗಿನ ಕಾಲಕ್ಕೆ ಅದು 5000 ರೂಪಾಯಿ ಬೆಲೆ'' ಎಂದು ತಿರುಗೇಟು ನೀಡಿದ್ದಾರೆ.