For Quick Alerts
  ALLOW NOTIFICATIONS  
  For Daily Alerts

  'ಸ್ಯಾಂಡಲ್‌ವುಡ್ ಡ್ರಗ್ಸ್‌ ಫೈಲ್ಸ್': ರಾಜ್ಯ ಕಂಡ ರೋಚಕ ಪ್ರಕರಣದ ಬೆನ್ನತ್ತಿದಾಗ...

  |

  ಅದು ಕೊರೊನಾ ಮೊದಲ ಅಲೆಯ ದಿನಗಳು. ಜಗತ್ತು ಶತಮಾನದಲ್ಲಿಯೇ ಕಾಣದ ಸಾಂಕ್ರಾಮಿಕ ರೋಗವೊಂದನ್ನು ಎದುರಿಸುತ್ತಿದ್ದ ಹೊತ್ತು. ಕರ್ನಾಟಕದಲ್ಲಿ ಮೂರು ಹೊತ್ತು ಮಾಧ್ಯಮಗಳಲ್ಲಿ ಕೊರೊನಾ ವೈರಸ್, ಅದು ಹರಡುವ ಬಗೆ, ಬೀರುತ್ತಿರುವ ಪರಿಣಾಮಗಳನ್ನು ಹೊತ್ತ ಸುದ್ದಿಗಳು. ಜನ ಕೂಡ ಲಾಕ್‌ಡೌನ್ ಹೆಸರಿನಲ್ಲಿ ತಮ್ಮೆಲ್ಲಾ ಕೆಲಸ ಕಾರ್ಯಗಳನ್ನು ಬದಿಗೊತ್ತಿ ಆರೋಗ್ಯದ ಬಗೆಗೆ ಆಲೋಚನೆ ಮಾಡುತ್ತಿದ್ದ ಕಾಲ.

  ಹೀಗಿರುವಾಗಲೇ- ಇದ್ದಕ್ಕಿದ್ದ ಹಾಗೆ, 'ಸ್ಯಾಂಡಲ್ ವುಡ್ ಡ್ರಗ್ ಪ್ರಕರಣ' ಹೊರಬೀಳುತ್ತದೆ. ನಿನ್ನೆವರೆಗೂ ಕೊರೊನಾ ವಿಚಾರದಲ್ಲಿ ಹೊರಬೀಳುತ್ತಿದ್ದ ಭಯಭೀತ ಸುದ್ದಿಗಳು ಏಕಾಏಕಿ ಕಣ್ಮರೆಯಾಗುತ್ತವೆ. ಆ ಜಾಗದಲ್ಲಿ ಸೆಲೆಬ್ರಿಟಿಗಳು, ಬೆಂಗಳೂರಿನ ಸಿಸಿಬಿ ಪೊಲೀಸರು ಹಾಗೂ ನಾರ್ಕೋಟಿಕ್ ಜಗತ್ತಿನ ವಿವಾರ ಟಿವಿ ತೆರೆಗಳನ್ನು ತುಂಬಿಕೊಳ್ಳುತ್ತದೆ. ಯಾಕೆ?

  ಪ್ರಕರಣದ ಜಾಡು ಹಿಡಿದು....

  ಪ್ರಕರಣದ ಜಾಡು ಹಿಡಿದು....

  ಇಂತಹದೊಂದು ಪ್ರಶ್ನೆಯನ್ನು ಮುಂದಿಟ್ಟುಕೊಂಡು ಹೊರಟ 'ಫಿಲ್ಮಿಬೀಟ್ ಕನ್ನಡ/ ಒನ್‌ಇಂಡಿಯಾ'ಕ್ಕೆ ದೊರೆತ ಸಾಕ್ಷಿಗಳು, ಪೊಲೀಸರೇ ಸಲ್ಲಿಸಿರುವ ದಾಖಲೆಗಳು, ತನಿಖಾ ತಂಡದಲ್ಲಿದ್ದ ಅಧಿಕಾರಿಗಳು ನೀಡಿದ ಮಾಹಿತಿ ಹಾಗೂ ಪ್ರಕರಣದಲ್ಲಿ ಆರೋಪಿಗಳಾದವರ ಹತ್ತಿರದವರು ನೀಡಿದ ಜಾಡುಗಳು ಬೇರೆಯದ್ದೇ ಕತೆಯನನ್ನು ಸವಿಸ್ತಾರವಾಗಿ ಹೇಳುತ್ತವೆ. ಅವೆಲ್ಲವನ್ನೂ ಕಟ್ಟಿಕೊಡುವ ಪ್ರಯತ್ನವೇ ಈ ಸರಣಿ, 'ಸ್ಯಾಂಡಲ್‌ವುಡ್ ಡ್ರಗ್ಸ್ ಫೈಲ್'.

  ಆ ಹೊತ್ತಲ್ಲಿ ಡ್ರಗ್ಸ್‌ ಸದ್ದು ಮಾಡಿದ್ದೇಕೆ?

  ಆ ಹೊತ್ತಲ್ಲಿ ಡ್ರಗ್ಸ್‌ ಸದ್ದು ಮಾಡಿದ್ದೇಕೆ?

  ರಾಜ್ಯಾದ್ಯಂತ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿದ ಪ್ರಕರಣ ಇದು. ಅಂತಹ ಕೊರೊನಾ ಸಂಕಷ್ಟದ ಸಮಯದಲ್ಲೂ ಸರಕಾರ ಎಲ್ಲವನ್ನೂ ಮರೆತು ಭಾರಿ ಮಹತ್ವ ನೀಡಿದ ಕೇಸು ಇದು. ಈವರೆಗೆ ನ್ಯಾಯಾಲಯದಲ್ಲಿ ಸಲ್ಲಿಕೆಯಾಗಿರುವ ಪ್ರಕರಣದಲ್ಲಿ ಸಿಕ್ಕಿರುವುದು ಸುಮಾರು ಮೂರು ಸಾವಿರ ಪುಟಗಳ ದೋಷಾರೋಪಣೆ. ಒಂದೊಂದು ಪುಟವು ಒಂದೊಂದು ಕತೆಯನ್ನು ಹೇಳುತ್ತವೆ. ಪ್ರತಿ ಕತೆಯ ಹಿಂದೆ ಸಿಲಿಕಾನ್‌ ಸಿಟಿಯ ರಾತ್ರಿಗಳು, ಅವುಗಳು ಒಳಗೊಂಡ ರಹಸ್ಯಗಳು, ಶ್ರೀಮಂತ ಕುಟುಂಬದ ಕುಡಿಗಳು ನಡೆಸುವ ಮೋಜು ಮಸ್ತಿಗಳು, ಅವರ ನಡುವೆ ಬೆಳೆಯುವ ಸಂಪರ್ಕ ಜಾಲಗಳು, ಒಂದು ಪಾರ್ಟಿ- ಅದು ಮುಗಿಸ ಮೇಲೆ ನಡೆಯುವ ' ಅಫ್ಟರ್‌ ಪಾರ್ಟಿ'ಗಳು, ಅಂತಿಮವಾಗಿ ಡ್ರಗ್ಸ್‌ ಹೆಸರಿನಲ್ಲಿ ಬೆಂಗಳೂರಿನಲ್ಲಿಯೇ ನಡೆದ ಕೋಟ್ಯಾಂತರ ರೂಪಾಯಿ ವಹಿವಾಟಿನ ಸಂಪೂರ್ಣ ಚಿತ್ರಕತೆಯೊಂದು ತಯಾರಾಗುತ್ತದೆ.

  ನಡೆದಿದ್ದು ಕೋಟಿ ಕೋಟಿ ವಹಿವಾಟು

  ನಡೆದಿದ್ದು ಕೋಟಿ ಕೋಟಿ ವಹಿವಾಟು

  ಹೊರಗೆ ಎಷ್ಟೆ ಸದ್ದು ಮಾಡಿದರೂ, ಅಂತಿಮವಾಗಿ ಈ ಪ್ರಕರಣದಲ್ಲಿ ಇರುವುದು ಹಣದ ವಹಿವಾಟಿನ ಅಸಲಿ ಕತೆ. ಇವತ್ತಿಗೂ ಹೊರಬಾರದ ಹಲವು ದೊಡ್ಡ ಹೆಸರುಗಳು ಈ ಫೈಲ್ಸ್‌ಗಳಲ್ಲಿ ಅಡಕವಾಗಿದೆ. ಆರೋಪಿಗಳಾಗಿಯೂ ಮಾಧ್ಯಮದವರೆಗೆ ಬಾರದವರ ಮುಖವಾಡಗಳಿವೆ. ಬ್ಯಾಂಕ್‌ಗಳ ಮೂಲಕ ನಡೆಸಿದ ವಹಿವಾಟು, ಅದಕ್ಕಿಂತ ಹೆಚ್ಚಾಗಿ ನಗದು ರೂಪದಲ್ಲಿಯೇ ನಡೆದು ಹೋದ ಕಾಳದಂಧೆಗಳು, ಜನ ಲಾಕ್‌ಡೌನ್‌ ಎಂದು ಮನೆಯಲ್ಲಿ ಕುಳಿತಿರುವಾಗಲೇ ನಡೆದ ಕೋಟಿ ಕೋಟಿ ವ್ಯವಹಾರಗಳು, ತುಂಬಿ ತುಳುಕಿದ ಬ್ಯಾಂಕ್‌ ಅಕೌಂಟ್‌ಗಳು- ಸ್ಯಾಂಡಲ್‌ವುಡ್ ಡ್ರಗ್ಸ್‌ ಪ್ರಕರಣದ ಬೇರೆಯದೇ ಆಯಾಮವನ್ನು ತೆರೆದಿಡಲಿವೆ.

  ಫೊರೆನ್ಸಿಕ್ ಎವಿಡೆನ್ಸ್‌ ಬಿಚ್ಚಿಡುವ ಕತೆಗಳು...

  ಫೊರೆನ್ಸಿಕ್ ಎವಿಡೆನ್ಸ್‌ ಬಿಚ್ಚಿಡುವ ಕತೆಗಳು...

  ಇಷ್ಟಕ್ಕೂ ಈ ಪ್ರಕರಣ ಹೊರಬೀಳುವ ಹಲವು ತಿಂಗಳು ಮೊದಲೇ ಕರ್ನಾಟಕದ ಹಿರಿಯ ಪೊಲೀಸ್‌ ಅಧಿಕಾರಿಗಳ ಗಮನಕ್ಕೆ ಬಂದಿತ್ತಾ? ಆರೋಪಿಗಳ ಚಲನವಲನಗಳ ಮೇಲೆ ಅವರುಗಳು ಕಣ್ಣಿಟ್ಟಿದ್ದರಾ? ಆರೋಪಿಗಳ ಮೊಬೈಲ್‌ಗಳಲ್ಲಿ ಸಿಕ್ಕಿರುವ ಫೊರೆನ್ಸಿಕ್ ಎವಿಡೆನ್ಸ್‌ಗಳು ಏನು ಹೇಳುತ್ತವೆ? ಹೀಗೆ ಹಲವು ವಿಚಾರಗಳನ್ನು ಈ ಸರಣಿ ಒಂದೊಂದಾಗಿ ಬಿಚ್ಚಿಡಲಿದೆ, ನಾಳೆಯಿಂದ...

  English summary
  Sandalwood Drug Case explained: Here is the detailed information about sandalwood drug scandal, actors who involved and timeline of the case. Know more.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X