»   » ಸ್ಯಾಂಡಲ್ ವುಡ್ ಕಿಂಗ್ ಶಿವಣ್ಣ ಮುಡಿಗೆ ಡಾಕ್ಟರೇಟ್ ಗರಿ

ಸ್ಯಾಂಡಲ್ ವುಡ್ ಕಿಂಗ್ ಶಿವಣ್ಣ ಮುಡಿಗೆ ಡಾಕ್ಟರೇಟ್ ಗರಿ

By: ಉದಯರವಿ
Subscribe to Filmibeat Kannada

ಹ್ಯಾಟ್ರಿಕ್ ಹೀರೋ, ಸೆಂಚುರಿ ಸ್ಟಾರ್, ಕರುನಾಡ ಚಕ್ರವರ್ತಿ ಮುಂತಾದ ವಿಶೇಷಣಗಳಿಗೆ ಪಾತ್ರರಾಗಿರುವ ಶಿವರಾಜ್ ಕುಮಾರ್ ಅವರು ಶನಿವಾರ (ಜೂ.21) ಹೊಸ ಬಿರುದನ್ನು ತಮ್ಮ ಮುಡಿಗೇರಿಸಿಕೊಂಡರು. ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯ ಅವರಿಗೆ ಗೌರವ ಡಾಕ್ಟರೇಟ್ ನೀಡಿ ಸನ್ಮಾನಿಸಿದೆ.

ವಿಶ್ವವಿದ್ಯಾಲಯದ ಎರಡನೇ ಘಟಿಕೋತ್ಸವದಲ್ಲಿ ಅವರಿಗೆ ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಯಿತು. ಬಳ್ಳಾರಿಯ ಬಿಡಿಎ ಫುಟ್ ಬಾಲ್ ಮೈದಾನದಲ್ಲಿ ಆಯೋಜಿಸಿದ್ದ ಗೌರವ ಡಾಕ್ಟರೇಟ್ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಗಣ್ಯಾತಿಗಣ್ಯರು ಆಗಮಿಸಿದ್ದರು. [ಡಾಕ್ಟರೇಟ್ ಗೆ ಪಾತ್ರರಾದ ಸಿನಿಮಾ ತಾರೆಯರು]

Dr. Shivrajkumar

ನಿವೃತ್ತ ನ್ಯಾಯಮೂರ್ತಿ ರಾಮಜೋಯಿಸ್ ಅವರು ಗೌರವ ಡಾಕ್ಟರೇಟ್ ಪ್ರದಾನ ಮಾಡಿದರು. ಶಿವಣ್ಣ ಅವರ ಜೊತೆಗೆ ಅಣ್ಣಾ ಹಜಾರೆ, ಪ್ರೊ.ಯು.ಆರ್.ರಾವ್, ಡಾ.ಎನ್.ಸಿ.ಶರ್ಮ, ಜಾಕೋಬ್ ಕ್ರಾಸ್ಟ, ನಾಸಿರ್ ಅಹಮದ್, ಸಂಗನ ಬಸವಶ್ರೀಗಳು ಹಾಗೂ ಸುಭದ್ರಮ್ಮ ಮನ್ಸೂರ್ ಅವರೂ ಗೌರವ ಡಾಕ್ಟರೇಟ್ ಗೆ ಪಾತ್ರರಾದರು. [ಕೃಷ್ಣದೇವರಾಯ ವಿವಿಯಿಂದ ಅಣ್ಣಾ ಹಜಾರೆಗೆ ಡಾಕ್ಟರೇಟ್]

ನೂರು ಪ್ಲಸ್ ಚಿತ್ರಗಳ ಮೂಲಕ ವೈವಿಧ್ಯಮಯ ಪಾತ್ರಗಳನ್ನು ಪೋಷಿಸಿ ಕೋಟ್ಯಾಂತರ ಅಭಿಮಾನಿಗಳನ್ನು ಸಂಪಾದಿಸಿರುವ ಡಾ.ಶಿವರಾಜ್ ಕುಮಾರ್ ಅವರಿಗೆ ಐವತ್ತೊಂದನೇ ವಯಸ್ಸಿನಲ್ಲಿ ಈ ವಿಶೇಷ ಮನ್ನಣೆ ಸಿಗುತ್ತಿರುವುದು ಅಭಿಮಾನಿಗಳ ಪಾಲಿಗೆ ಸಂಭ್ರಮದ ಸಂಗತಿ. ಈ ಗೌರವವನ್ನು ಅವರು ತಮ್ಮ ಅಭಿಮಾನಿಗಳಿಗೆ ಅರ್ಪಿಸುವುದಾಗಿ ಹೇಳಿದ್ದಾರೆ.

English summary
Sandalwood King Shivrajkumar conferred with the Honorary Doctorate on Saturday June 21 by Vijayanagar Sri Krishnadevaraya University, Bellary. Shivarajkumar will be the second member of his family to receive this honor. His father Rajkumar also was honoured with a doctorate. 
Please Wait while comments are loading...