»   » ಸಿನಿಮಾದವ್ರಿಗೆ ದೇವರಿಗಿಂತ ದೆವ್ವಾನೇ ಬಲು ಇಷ್ಟ

ಸಿನಿಮಾದವ್ರಿಗೆ ದೇವರಿಗಿಂತ ದೆವ್ವಾನೇ ಬಲು ಇಷ್ಟ

By: ಜೀವನರಸಿಕ
Subscribe to Filmibeat Kannada

ಹೌದು ಸಿನಿಮಾದವರು ದೇವರಿಗಿಂತ ಹೆಚ್ಚಾಗಿ ದೆವ್ವವನ್ನೇ ಪ್ರೀತಿಸ್ತಾರೆ. ಹೀಗಂತ ಸುದ್ದಿಯೊಂದು ಗಾಂಧಿನಗರದ ತುಂಬಾ ಹರಿದಾಡ್ತಿದೆ. ಇವರಿಗೆ ದೇವರು ದುಡ್ಡು ತಂದುಕೊಡುತ್ತೋ ಇಲ್ವೋ, ಆದರೆ ದೆವ್ವ ಅಂತೂ ಖಂಡಿತ ಕಾಸು ಮಾಡಿಕೊಡುತ್ತಂತೆ.

ಗಾಂಧಿನಗರದ ಸಿನಿಮಾದವರು ಹೀಗೊಂದು ಲೆಕ್ಕಾಚಾರ ಹಾಕಿದ್ದಾರೆ. ಈ ವರ್ಷದ ಸಿನಿಮಾ ಲಿಸ್ಟನ್ ತೆಗೆದು ನೋಡಿದರೆ ಕನ್ನಡ ಸಿನಿಮಾ ನಿರ್ಮಾಪಕರು ಎರಡು ದೇವರ ಸಿನಿಮಾಗೆ ದುಡ್ಡು ಹಾಕಿದ್ರೆ ಹನ್ನೆರಡು ದೆವ್ವದ ಸಿನಿಮಾಗೆ ಕಾಸು ಹಾಕಿದ್ದಾರೆ. [ಸ್ಯಾಂಡಲ್ ವುಡ್ ನಲ್ಲಿ ಹಾರರ್ ಫೀವರ್]

Sandalwood likes Ghost more than God

ಇನ್ನು ಹಾರರ್ ಸಿನಿಮಾ ಅಂದ್ರೆ ಅದು ವಯಸ್ಕರಿಗೆ ಮಾತ್ರ. ಹಾಗಾಗಿ ಸಹಜವಾಗಿ ಹಾರರ್ ಸಿನಿಮಾದಲ್ಲಿ ಹಾಟ್ ಹಾಟ್ ದೃಶ್ಯಗಳನ್ನ ತೋರಿಸಬಹುದು. ಆದರೆ ದೇವರ ಸಿನಿಮಾ ಆದ್ರೆ ಅಂತಹದ್ದೇನನ್ನೂ ತೋರಿಸೋ ಸಾಧ್ಯವಿಲ್ಲ. ಬಿ, ಸಿ ಸೆಂಟರ್ ನ ಗಾಂಧಿಕ್ಲಾಸ್ ಆಡಿಯನ್ಸ್ ಥಿಯೇಟರ್ಗೆ ಬರೋಕೂ ಸಾಧ್ಯವಿಲ್ಲ. [ಮೋದಿ ಮಾತನ್ನು ಕನ್ನಡದಲ್ಲಿ ಕೇಳಿರಿ]

ಹಾಗಾಗಿ ಸ್ಯಾಂಡಲ್ ವುಡ್ ನಿರ್ಮಾಪಕರು ದೆವ್ವ ಭೂತಗಳಿಗೇ ಜೈ ಅನ್ನುತ್ತಿದ್ದಾರೆ. ಹಾಗಾಗಿ ಇಲ್ಲಿಯವರೆಗೂ ಪ್ರತೀವರ್ಷ 4-5 ಹಾರರ್ ಸಿನಿಮಾಗಳು ಬರ್ತಿದ್ದ ಸಮಯದಲ್ಲಿ 14ರಿಂದ 15 ಸಿನಿಮಾಗಳು ಬರ್ತಿವೆ. ದೇವರು ಆದ್ರೇನು ದೆವ್ವ ಆದ್ರೇನು ಕಾಸು ಕೊಟ್ಟೋನೇ ಬಾಸು ಏನಂತೀರಾ?

ಇತ್ತೀಚೆಗಿನ ಚಂದ್ರಲೇಖ, 6-5=2, ಲೈಟ್ಸ್ ಕ್ಯಾಮೆರಾ ಆಕ್ಷನ್, 12 AM ಮಧ್ಯರಾತ್ರಿ, ಕಲ್ಪನ...ಹೀಗೆ ಬಹಳಷ್ಟು ಹಾರರ್ ಚಿತ್ರಗಳು ಚರ್ಚೆಗೆ ಗ್ರಾಸವಾದವು. ಬಹುತೇಕ ಚಿತ್ರಗಳು ಬಾಕ್ಸ್ ಆಫೀಸಲ್ಲೂ ದುಡ್ಡು ಮಾಡಿದ ಇತಿಹಾಸ ನಮ್ಮ ಕಣ್ಣ ಮುಂದಿದೆ.

English summary
Sandalwood film industry likes Ghost more than God. Because in recent days Ghost stories (Horror movies) doing well at box office. Whether it is God or Ghost who ever makes money at BO is importance in film industry. 
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada