For Quick Alerts
  ALLOW NOTIFICATIONS  
  For Daily Alerts

  'ದೇವಕಿ' ಟೀಸರ್ ಹಿಟ್ : ಉಪ್ಪಿ ಮಗಳನ್ನು ಸ್ವಾಗತಿಸಿದ ಸ್ಟಾರ್ ಗಳು

  |

  ಕಳೆದ ವಾರ ಬಿಡುಗಡೆಯಾಗಿರುವ 'ದೇವಕಿ' ಸಿನಿಮಾದ ಟೀಸರ್ ಗೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ. ಸಿನಿಮಾ ಟೀಸರ್ ಯೂ ಟ್ಯೂಬ್ ನಲ್ಲಿ ಹಿಟ್ ಆಗಿದೆ. ಟೀಸರ್ ರಿಲೀಸ್ ಆಗಿ 2 ಲಕ್ಷ ಗಡಿ ದಾಟುತ್ತಿದೆ. ನಟಿ ಪ್ರಿಯಾಂಕ ಉಪೇಂದ್ರ ಹಾಗೂ ನಿರ್ದೇಶಕ ಲೋಹಿತ್ 'ಮಮ್ಮಿ' ಬಳಿಕ ಮತ್ತೆ ಒಂದಾಗಿದ್ದಾರೆ.

  ಉಪೇಂದ್ರ ಪುತ್ರಿ ಐಶ್ವರ್ಯ ಉಪೇಂದ್ರ ಸಿನಿಮಾದ ಮೂಲಕ ಲಾಂಚ್ ಆಗಿದ್ದಾರೆ. ಈ ಚಿತ್ರದ ಟೀಸರ್ ಪ್ರೇಕ್ಷಕರಿಂದ ಮಾತ್ರವಲ್ಲದೆ ಚಿತ್ರರಂಗದಿಂದಲೂ ಪ್ರಶಂಸೆ ಪಡೆದಿದೆ. ಸೌತ್ ಇಂಡಿಯಾದ ಹೆಸರಾಂತ ನಟ, ನಟಿಯರು ಚಿತ್ರದ ಟೀಸರ್ ಬಗ್ಗೆ ಟ್ವೀಟ್ ಮಾಡುತ್ತಿದ್ದಾರೆ.

  'ದೇವಕಿ' : ಉಪೇಂದ್ರ ಮಗಳ ಮೊದಲ ಚಿತ್ರದ ಮೊದಲ ಟೀಸರ್

  ಖ್ಯಾತ ಟಾಲಿವುಡ್ ನಿರ್ದೇಶಕ ಪೂರಿ ಜಗನ್ನಾಥ್, ಗಾಯಕಿ ಶ್ವೇತ ಮೋಹನ್, ಕನ್ನಡ ನಟ ಶ್ರೀಮುರಳಿ, ರಾಹುಲ್, ಧರ್ಮ ಕೀರ್ತಿರಾಜ್, ನಟಿ ಆಶಿಕಾ ರಂಗನಾಥ್, ಶುಭಾ ಪೂಂಜಾ, ವೇದಿಕಾ, ನಿರ್ಮಾಪಕ ಪುಷ್ಕರ್ ಮಲ್ಲಿಕಾರ್ಜುನಯ್ಯ, ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್ ಸೇರಿದಂತೆ ಸಾಕಷ್ಟು ಜನರು ಸಿನಿಮಾದ ಬಗ್ಗೆ ಮೆಚ್ಚುಗೆ ಸೂಚಿಸಿದ್ದಾರೆ. ಮುಂದೆ ಓದಿ..

  ಶ್ರೀ ಮುರಳಿ ಮೆಚ್ಚುಗೆ

  'ದೇವಕಿ' ಟೀಸರ್ ನೋಡಿ ಮೆಚ್ಚಿಕೊಂಡಿರುವ ರೋರಿಂಗ್ ಸ್ಟಾರ್ ಶ್ರೀಮುರಳಿ ಅದರ ಬಗ್ಗೆ ಟ್ವೀಟ್ ಮಾಡಿದ್ದಾರೆ. ಟೀಸರ್ ನೋಡಲು ತುಂಬ ಚೆನ್ನಾಗಿದೆ ಎಂದಿರುವ ಅವರು ಇಡೀ ತಂಡಕ್ಕೆ ಶುಭ ಹಾರೈಸಿದ್ದಾರೆ. ಶ್ರೀ ಮುರಳಿ ಸದ್ಯ 'ಭರಾಟೆ' ಸಿನಿಮಾದಲ್ಲಿ ಬ್ಯುಸಿ ಇದ್ದಾರೆ.

  ಕಥಾ ವಿಷಯ ಇಷ್ಟ ಪಟ್ಟ ಆಶಿಕಾ

  'ದೇವಕಿ' ಸಿನಿಮಾದ ಕಥೆ ಇರುವುದು ಚೈಲ್ಡ್ ಟ್ರಾಫಿಕಿಂಗ್ ಮೇಲೆ. ಈ ವಿಷಯ ಆಶಿಕಾ ರಂಗನಾಥ್ ಗೆ ಮೆಚ್ಚುಗೆಯಾಗಿದೆ. ಈ ಬಗ್ಗೆ ಫೇಸ್ ಬುಕ್ ಖಾತೆಯಲ್ಲಿ ಬರೆದುಕೊಂಡಿರುವ ಅವರು ಅವರು ''ಚೈಲ್ಡ್ ಟ್ರಾಫಿಕಿಂಗ್ ಎಂಬ ಗಂಭೀರ ವಿಷಯದ ಮೇಲೆ ಸಿನಿಮಾ ಮಾಡಲಾಗಿದೆ. ಪ್ರಿಯಾಂಕ ಉಪೇಂದ್ರ ಹಾಗೂ ತಂಡಕ್ಕೆ ಶುಭಾಶಯ'' ತಿಳಿಸಿದ್ದಾರೆ.

  ರಿಯಲ್ ಸ್ಟಾರ್ ಪುತ್ರಿಯ ಈ ಆಸೆ ಯಾವಾಗ ಈಡೆರುತ್ತೆ?

  ಅದ್ಬುತ ಟೀಸರ್ ಎಂದ ವೇದಿಕಾ ಮತ್ತು ಶುಭಾ ಪುಂಜಾ

  ದಕ್ಷಿಣ ಭಾರತದ ಖ್ಯಾತ ನಟಿ ವೇದಿಕಾ ಸಹ ಸಿನಿಮಾದ ಟೀಸರ್ ನೋಡಿ ಮೆಚ್ಚಿಕೊಂಡಿದ್ದು, ಸಿನಿಮಾಗಾಗಿ ಕಾಯುತ್ತಿದ್ದೇನೆ ಎಂದಿದ್ದಾರೆ. ಕನ್ನಡದ ನಟಿ ಶುಭಾ ಪುಂಜಾ ಟೀಸರ್ ಅದ್ಬುತವಾಗಿದ್ದು ಎಲ್ಲರೂ ಸಿನಿಮಾವನ್ನು ನೋಡಿ ಎಂದು ಟ್ವೀಟ್ ಮಾಡಿದ್ದಾರೆ. ಇದರ ಜೊತೆಗೆ ಸೌತ್ ಚಿತ್ರರಂಗದ ಖ್ಯಾತ ಗಾಯಕಿ ಶ್ವೇತ ಮೋಹನ್ ಸಹ ಸಿನಿಮಾ ಟೀಸರ್ ಬಹಳ ಇಷ್ಟ ಪಟ್ಟಿದ್ದರು.

  ಸ್ಯಾಂಡಲ್ ವುಡ್ ನಲ್ಲಿ 'ದೇವಕಿ' ಧ್ಯಾನ

  ಸ್ಯಾಂಡಲ್ ವುಡ್ ನ ಉಳಿದ ನಟರಾದ ಧರ್ಮ ಕೀರ್ತಿರಾಜ್, ರಾಹುಲ್, ಪ್ರತಾಪ್ ನಾರಾಯಣ್ ಸಹ ಸಿನಿಮಾ ಟೀಸರ್ ಕಂಡು ಬೆರಗಾಗಿದ್ದಾರೆ. ನಿರ್ಮಾಪಕರ ಪುಷ್ಕರ್ ಮಲ್ಲಿಕಾರ್ಜುನಯ್ಯ ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್ ನಿರ್ದೇಶಕ ಲೋಹಿತ್ ಕೆಲಸವನ್ನು ಹೊಗಳಿದ್ದಾರೆ.

  'ದೇವಕಿ' ಟೀಸರ್ ನೋಡಿ ಮೆಚ್ಚಿದ ಪೂರಿ ಜಗನ್ನಾಥ್

  English summary
  Sandalwood stars appreciated 'Devaki' kannada movie teaser. Actress Priyanka Upendra and her daughter Aishwarya Upendra's 'Devaki' kannada movie teaser getting good responses. This is Aishwarya Upendra's debut movie directed by Lohith.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X