Just In
- 1 hr ago
ಬಾಯ್ ಫ್ರೆಂಡ್ ನನ್ನು ತಬ್ಬಿಕೊಂಡಿದ್ದಾರಾ ಕತ್ರಿನಾ ಕೈಫ್; ಇದು ಆ ಸ್ಟಾರ್ ನಟನೇ ಎನ್ನುತ್ತಿದ್ದಾರೆ ನೆಟ್ಟಿಗರು
- 3 hrs ago
ತಮನ್ನಾ ಮತ್ತು ವಿರಾಟ್ ಕೊಹ್ಲಿಗೆ ಕೇರಳ ಹೈಕೋರ್ಟ್ ನೋಟಿಸ್
- 3 hrs ago
ಕಿಶೋರ್ ಮತ್ತು ಹರಿಪ್ರಿಯಾ ನಟನೆಯ 'ಅಮೃತಮತಿ' ಚಿತ್ರಕ್ಕೆ ಅಂತಾರಾಷ್ಟ್ರೀಯ ಪ್ರಶಸ್ತಿ
- 12 hrs ago
ಡ್ರಗ್ಸ್ ಪ್ರಕರಣ: ಇಂದ್ರಜಿತ್ ಲಂಕೇಶ್ ಗೆ ಮತ್ತೆ ಬುಲಾವ್ ನೀಡಿದ ಸಿಸಿಬಿ
Don't Miss!
- Automobiles
ಗಣರಾಜ್ಯೋತ್ಸವದ ಪಥಸಂಚಲನದಲ್ಲಿ ಮೊದಲ ಬಾರಿಗೆ ಪ್ರದರ್ಶನಗೊಂಡ ಟಾಟಾ ನೆಕ್ಸಾನ್ ಇವಿ
- News
ವರ್ಜಿನ್ ಹೈಪರ್ ಲೂಪ್ ಪ್ರಯಾಣಿಕರ ಅನುಭವದ ವಿಡಿಯೋ
- Finance
ಗರಿಷ್ಠ ಮಟ್ಟದಿಂದ 7500 ರು. ದೂರದಲ್ಲಿರುವ ಚಿನ್ನದ ಬೆಲೆ ಸತತ 5ನೇ ದಿನ ಇಳಿಕೆ
- Sports
ಆಲ್ರೌಂಡರ್ ವಿಜಯ್ ಶಂಕರ್ ದಾಂಪತ್ಯದ ಇನ್ನಿಂಗ್ಸ್ ಆರಂಭ
- Lifestyle
ಕರ್ನಾಟಕ ಶೈಲಿಯ ಅವರೆಕಾಳು ಚಿತ್ರಾನ್ನ ನಿಮಗಾಗಿ
- Education
BEL Recruitment 2021: 22 ಸರಂಕ್ಷಣೆ ಅಧಿಕಾರಿ, ಕಿರಿಯ ಮೇಲ್ವಿಚಾರಕರು ಮತ್ತು ಹವಿಲ್ದಾರ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
'ನಟ ರತ್ನಾಕರ' ಹಿರಣ್ಣಯ್ಯ ಅವರ ಅಂತಿಮ ದರ್ಶನ ಪಡೆದ ಚಿತ್ರರಂಗದ ಗಣ್ಯರು
ಹಿರಿಯ ರಂಗಭೂಮಿ ಕಲಾವಿದ ಮಾಸ್ಟರ್ ಹಿರಣ್ಣಯ್ಯ ಅವರ ನಿಧನಕ್ಕೆ ಚಿತ್ರರಂಗದ ಗಣ್ಯರು ಸಂತಾಪ ಸೂಚಿಸಿದ್ದಾರೆ. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಹಿರಿಯ ರಂಗಕರ್ಮಿ ಹಿರಣ್ಣಯ್ಯ ಅವರು ಇಂದು ಬೆಳಗ್ಗೆ(ಮೇ-2) ಇಹಲೋಕ ತ್ಯಾಜಿಸಿದ್ದಾರೆ. ಬಿ ಜಿ ಎಸ್ ಆಸ್ಪತ್ರೆಯಲ್ಲಿ ನಿಧನರಾದ ಹಿರಣ್ಣಯ್ಯ ಅವರ ಪಾರ್ಥೀವ ಶರೀರವನ್ನು ಬೆಂಗಳೂರಿನ ಬನಶಂಕರಿಯಲ್ಲಿರುವ ಅವರ ನಿವಾಸದಲ್ಲಿ ಇರಿಸಲಾಗಿದೆ.
ಚಿತ್ರರಂಗದ ಗಣ್ಯರು, ರಂಗಭೂಮಿ ಕಲಾವಿದರು ಸೇರಿದಂತೆ ಅನೇಕರು ಪಾರ್ಥೀವ ಶರೀರದ ಅಂತಿಮ ದರ್ಶನ ಪಡೆಯುತ್ತಿದ್ದಾರೆ. ಇಂದು ಸಂಜೆ 6 ಗಂಟೆಗೆ ಹಿರಿಯ ರಂಗಕರ್ಮಿಯ ಅಂತ್ಯಕ್ರಿಯೆ ನಡೆಯಲಿದೆ. ಆದ್ರೆ ಅದಕ್ಕು ಮುನ್ನ ಮಧ್ಯಾಹ್ನ ರವೀಂದ್ರ ಕಲಾಕ್ಷೇತ್ರದಲ್ಲಿ ಸಾರ್ವಜನಿಕ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.
'ಗಜ' ಚಿತ್ರದಲ್ಲಿ ಅಭಿನಯಿಸಿದ ನೆನಪು ಸದಾ ನನ್ನೊಂದಿಗೆ: ನಟ ದರ್ಶನ್ ಸಂತಾಪ
ಸ್ಯಾಂಡಲ್ ವುಡ್ ಗಣ್ಯರಾದ ದರ್ಶನ್, ದೇವರಾಜ್, ಪ್ರಜ್ವಲ್ ದೇವರಾಜ್, ಹಿರಿಯ ನಟರಾದ ಶ್ರೀನಾಥ್ ಮತ್ತು ಮಖ್ಯಮಂತ್ರಿ ಚಂದ್ರು ಸೇರಿದಂತೆ ಅನೇಕರು ಬನಶಂಕರಿ ನಿವಾಸಕ್ಕೆ ಭೇಟಿ ನೀಡಿ ಹಿರಣ್ಣಯ್ಯ ಅವರಿಗೆ ಅಂತಿಮ ನಮನ ಸಲ್ಲಿಸಿದರು. ಈ ಸಮಯದಲ್ಲಿ ಸ್ಯಾಂಡಲು ವುಡ್ ನಟರು ಹಿರಣ್ಣಯ್ಯ ಅವರನ್ನು ನೆನಪಿಸಿಕೊಂಡಿದ್ದು ಹೀಗೆ. ಮುಂದೆ ಓದಿ..

ಇನ್ನು ಹೆಚ್ಚಿನ ಪ್ರಶಸ್ತಿಗಳಿಗೆ ಅರ್ಹರಾಗಿದ್ದರು
ಹಿರಿಯ ನಟ ಮುಖ್ಯಮಂತ್ರಿ ಚಂದ್ರು ಹಿರಣ್ಣಯ್ಯ ಅವರ ಅಂತಿಮ ದರ್ಶನ ಪಡೆದು ನಂತರ ಅವರ ಜೊತೆಗಿನ ಒಡನಾಟವನ್ನು ಹಂಚಿಕೊಂಡರು "ನನ್ನ ಮತ್ತು ಹಿರಣ್ಣಯ್ಯ ಅವರ ಸಂಬಂಧ ಗುರು ಶಿಷ್ಯರ ಸಂಬಂಧದ ಹಾಗೆ ಇತ್ತು. ಹಿರಣ್ಣಯ್ಯ ಅವರು ಇಡೀ ಸಮಾಜಕ್ಕೆ ಸಾಕ್ಷಿ ಪ್ರಜ್ಞೆ ಇದ್ದ ಹಾಗೆ. ನಾಟಕಗಳನ್ನು ಕೇವಲ ಮನರಂಜನೆ ಅಂತ ಮಾತ್ರ ಬಳಸಲಿಲ್ಲ. ಸಾಮಾಜಿಕ ಕಾಳಜಿ, ವ್ಯವಸ್ಥೆಯನ್ನು ಕಟೋರವಾಗಿ ಟೀಕಿಸುವುದು, ನೇರವಾಗಿ ವ್ಯಕ್ತಿಗಳನ್ನು ಮುಂದೆ ನಿಲ್ಲಿಸಿಕೊಂಡೆ ಟೀಕಿಸುವಂತಹ ಅಪರೂಪದ ನಟ. ಗಟ್ಟಿ ದ್ವನಿಯಲ್ಲಿ, ಯಾರಿಗೂ ಹೆದರದೆ ನೇರ ನುಡಿಗಳಲ್ಲಿ ಟೀಕೆ ಮಾಡುತ್ತಿದ್ದವರು. ಇಂತಹ ನಟ ಇನ್ನು ಮುಂದೆ ಬರಲ್ಲ. ಹಿರಣ್ಣಯ್ಯ ಅವರು ಇನ್ನು ಹೆಚ್ಚಿನ ಪ್ರಶಸ್ತಿಗಳಿಗೆ ಅರ್ಹರಾಗಿದ್ದರು. ಅವರ ಮುಖ್ಯ ಉದ್ದೇಶ ರಂಗಭೂಮಿ ಮೂಲಕ ಸಮಾಜವನ್ನು ತಿದ್ದುವುದು"
ಸುದೀಪ್ ಅಭಿಮಾನಿಗಳಿಗೆ ಬಿಗ್ ನ್ಯೂಸ್: 'ಪೈಲ್ವಾನ್' ಸಿನಿಮಾ ರಿಲೀಸ್ ಡೇಟ್ ಬಹಿರಂಗ

ಮಾಸ್ಟರ್ ಅಂತಾನೆ ಕರೆಯುತ್ತಿದ್ದವು
ಹಿರಿಯಣ್ಣಯ್ಯ ಅವರ ಅಂತಿದ ದರ್ಶನ ಪಡೆದ ನಟ ದೇವರಾಜ್ ಮಾಸ್ಟರ್ ಹಿರಣ್ಣಯ್ಯ ಅವರ ಜೊತೆಗಿನ ಒಡನಾಟವನ್ನು ಹಂಚಿಕೊಂಡರು. "ಅವರನ್ನ ಮಾಸ್ಟರ್ ಅಂತನೇ ಕರೆಯುತ್ತಿದ್ದೆವು. ಅವರ ತಂದೆಯ ಹೆಸರನ್ನೆ ಮಗನು ಇಟ್ಟುಕೊಂಡು ಮಾಸ್ಟರ್ ಹಿರಣ್ಣಯ್ಯ ಅಂತಾನೆ ಇಡೀ ಕರ್ನಾಟಕದಾದ್ಯಂತ ಹೆಸರುವಾಸಿಯಾದರು. ರಂಗಭೂಮಿ ಕಲಾವಿದರಿಗೆ ಕನ್ನಡ ಭಾಷೆಯನ್ನು ರಂಗಭೂಮಿಯಲ್ಲಿ ಹೇಗೆ ಬಳಸಬೇಕು ಎನ್ನುವುದನ್ನು ತೋರಿಸಿಕೊಟ್ಟವರು. ಅವರ ನೆನಪು ಸದಾ ಹಸಿರಾಗಿರುವಂತೆ ಮಾಡಬೇಕು. ಅವರು ತೋರಿದ ದಾರಿ, ಅವರ ಸಾಧನೆ, ನಾಟಕ ಕಂಪೆನಿಯನ್ನು ನಡೆಸಿಕೊಂಡು ಹೋಗಲು ಚಿತ್ರರಂಗದವರು ಸಹಾಯ ಮಾಡಬೇಕು" ಎಂದು ದೇವರಾಜ್ ಹೇಳಿದರು.
ಇಂದಿನ ಮೆಜೆಸ್ಟಿಕ್, ಅಂದು ಹಿರಣಯ್ಯ ಮಿತ್ರ ಮಂಡಳಿ ಬಿಡಾರ!

ನೋವನ್ನು ಯಾರ ಬಳಿಯೂ ಹೇಳಿಕೊಳ್ಳುತ್ತಿರಲಿಲ್ಲ
ಹಿರಿಯ ರಂಗಕರ್ಮಿ ಬಗ್ಗೆ ಹಿರಿಯ ನಟ ಶ್ರೀನಾಥ್ ಮಾತನಾಡಿ "ಪ್ರತಿಯೊಂದು ವಿಭಾಗಕ್ಕೂ ಮಾಸ್ಟರ್ ಆಗಿದ್ದರು. ಎಲ್ಲಿ ಓರೆ ಕೋರೆಗಳಿದ್ದರು ಎಲ್ಲವನ್ನು ತಿದ್ದುತ್ತಿದ್ದರು. ತನ್ನೊಳಗಿನ ನೋವನ್ನು ಯಾರ ಹತ್ತಿರನು ಹೇಳಿಕೊಳ್ಳುತ್ತಿರಲಿಲ್ಲ. ಮಾತು, ನಗೆಚಾಟಾಕಿ ಯಾವತ್ತು ಎಂದೆಂದಿಗೂ ಇರುತ್ತೆ. ಎಲ್ಲೇ ಇರಲಿ ಹೇಗೆ ಇರಲಿ ನಮ್ಮನೆಲ್ಲರನ್ನು ಆಶೀರ್ವಾದ ಮಾಡುತ್ತಿರಬೇಕು" ಎಂದರು

ಅಂತಿಮ ದರ್ಶನ ಪಡೆದ ನಟ ದರ್ಶನ್
ದರ್ಶನ್ ಅಭಿನಯದ 'ಗಜ' ಚಿತ್ರದಲ್ಲಿ ಹಿರಣ್ಣಯ್ಯ ತಾತನ ಪಾತ್ರದಲ್ಲಿ ಬಣ್ಣ ಹಚ್ಚಿದ್ದರು. ತಾತ ಮೊಮ್ಮಗನ ಪಾತ್ರದಲ್ಲಿ ಕಾಣಿಸಿಕೊಡಿದ್ದ ದರ್ಶನ್-ಹಿರಣ್ಣಯ್ಯ ಅವರ ಕಾಂಬಿನೇಶನ್ ಚಿತ್ರಪ್ರಿಯರ ಮನಗೆದ್ದಿತ್ತು. ಇಂದು ಅಂತಿಮ ನಮನ ಸಲ್ಲಿಸಿ ಮಾತನಾಡಿದ ದರ್ಶನ್ " ಅವರ ಬಗ್ಗೆ ಮಾತನಾಡಲು ತುಂಬಾ ಚಿಕ್ಕವನು. ಸಮಾಜದ ಆಗುಹೋಗುಗಳನ್ನು ನಾಟಕದ ಮೂಲಕ ಎಲ್ಲರಿಗೂ ತಿಳಿಸುತ್ತಿದ್ದರು. ಇವತ್ತು ಆ ಮಾತನಾಡುವ ಶಕ್ತಿ ಇಲ್ಲ" ಎಂದು ಹೇಳಿದ್ದಾರೆ.