»   » ಸಾಹಸ ನಿರ್ದೇಶಕ ಕೌರವ ವೆಂಕಟೇಶ್ ಬಂಧನ

ಸಾಹಸ ನಿರ್ದೇಶಕ ಕೌರವ ವೆಂಕಟೇಶ್ ಬಂಧನ

Posted By:
Subscribe to Filmibeat Kannada
Kaurava Venkatesh
ಕನ್ನಡ ಚಿತ್ರಗಳ ಸಾಹಸ ನಿರ್ದೇಶಕ ಕೌರವ ವೆಂಕಟೇಶ್ ಅವರನ್ನು ಬೆಂಗಳೂರು ನಂದಿನಿಲೇಔಟ್ ಪೊಲೀಸರು ಶುಕ್ರವಾರ(ಡಿ.28) ಬಂಧಿಸಿದ್ದಾರೆ. ಸಹ ಕಲಾವಿದೆಯೊಬ್ಬರನ್ನು ಅವರು ಲೈಂಗಿಕವಾಗಿ ಬಳಸಿಕೊಂಡಿದ್ದಾರೆ ಎಂಬ ಆರೋಪ ಅವರ ಮೇಲಿದೆ.

ಈ ಹಿನ್ನೆಲೆಯಲ್ಲಿ ಪೊಲೀಸರು ಕೌರವ ವೆಂಕಟೇಶ್ ಅವರನ್ನು ಬಂಧಿಸಿದ್ದಾರೆ. ತಮ್ಮ ಬಳಿ ಸಹಾಯಕಿಯಾಗಿದ್ದ ನಿರ್ಮಲಾ (ಹೆಸರು ಬದಲಾಯಿಸಲಾಗಿದೆ) ಎಂಬುವವರನ್ನು ಕಳೆದ ನಾಲ್ಕು ಐದು ವರ್ಷಗಳಿಂದ ವೆಂಕಟೇಶ್ ಲೈಂಗಿಕವಾಗಿ ಬಳಸಿಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ.

ಇನ್ನೊಂದು ಮೂಲದ ಪ್ರಕಾರ ಇವರಿಬ್ಬರೂ ಲಿವ್ ಇನ್ ಸಂಬಂಧ ಇಟ್ಟುಕೊಂಡಿದ್ದರು ಎಂಬ ಮಾತುಗಳು ಕೇಳಿಬಂದಿವೆ. ಆದರೆ ಸತ್ಯಾಸತ್ಯತೆಗಳು ವಿಚಾರಣೆ ಬಳಿಕವಷ್ಟೇ ಗೊತ್ತಾಗಲಿವೆ. ಸದ್ಯಕ್ಕೆ ವೆಂಕಟೇಶ್ ವಿರುದ್ಧ ಅತ್ಯಾಚಾರವೆಸಗಿರುವ ದೂರು ದಾಖಲಾಗಿದೆ.

"ಬೇರೆ ಬೇರೆ ಕಡೆಗಳಲ್ಲಿ ಚಿತ್ರೀಕರಣಕ್ಕೆ ಹೋದಾಗಲೂ ತಮ್ಮ ಮೇಲೆ ಅತ್ಯಾಚಾರ ಮಾಡಿದ್ದಾರೆ. ಮಂಗಳೂರು, ರಾಮನಗರ ಸೇರಿದಂತೆ ಹಲವಾರು ಕಡೆ ಹೀಗೆ ನಡೆದಿದಿದೆ" ಎಂದು ನಿರ್ಮಲಾ ಅವರು ದೂರಿನಲ್ಲಿ ತಿಳಿಸಿದ್ದಾರೆ.

ಕನ್ನಡ ಚಿತ್ರೋದ್ಯಮದಲ್ಲಿ ಕೌರವ ವೆಂಕಟೇಶ್ ಅವರಿಗೆ ಒಳ್ಳೆಯ ಹೆಸರಿದೆ. ಆದರೆ ಈಗ ಅವರ ಅವರ ವಿರುದ್ಧ ಈ ರೀತಿಯ ಆರೋಪ ದಾಖಲಾಗಿರುವುದು ಕನ್ನಡ ಚಿತ್ರೋದ್ಯಮಕ್ಕೆ ಶಾಖ್ ನೀಡಿದೆ. ಬಿ.ಸಿ.ಪಾಟೀಲ್ ಹಾಗೂ ಪ್ರೇಮ ಅಭಿನಯದ 'ಕೌರವ' ಚಿತ್ರದಲ್ಲಿ ಅತ್ಯದ್ಭುತ ಸಾಹಸ ನಿರ್ದೇಶನ ಮಾಡುವ ಮೂಲಕ ಅವರ ಹೆಸರಿಗೆ 'ಕೌರವ' ಹೆಸರು ಬೆರೆಯಿತು.

ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗಿದೆ. ಇತ್ತೀಚೆಗಿನ ಕುಂಭರಾಶಿ, ಚೆಲ್ಲಾಪಿಲ್ಲಿ, ಪುಲಿಕೇಶಿ, ಸಂಕ್ರಾಂತಿ ಸೇರಿದಂತೆ 50ಕ್ಕೂ ಹೆಚ್ಚು ಕನ್ನಡ ಚಿತ್ರಗಳಿಗೆ ಕೌರವ ವೆಂಕಟೇಶ್ ಸಾಹಸ ನಿರ್ದೇಶನ ಮಾಡಿದ್ದಾರೆ. (ಒನ್ಇಂಡಿಯಾ ಕನ್ನಡ)

English summary
Nandini layout police arrest Kannada films stunt director Kaurava Venkatesh for allegedly misusing a co-artist.
Please Wait while comments are loading...