For Quick Alerts
  ALLOW NOTIFICATIONS  
  For Daily Alerts

  ಮತ್ತೆ ಕನ್ನಡಕ್ಕೆ ಸಂಜಯ್ ದತ್! ಈ ಬಾರಿ ಕರೆತರುತ್ತಿರುವುದು ಯಾರು?

  |

  'ಕೆಜಿಎಫ್ 2' ಮೂಲಕ ಹವಾ ಸೃಷ್ಟಿಸಿರುವ ಸಂಜಯ್ ದತ್‌ಗೆ ಇದೀಗ ದಕ್ಷಿಣ ಭಾರತ ಚಿತ್ರರಂಗದಲ್ಲಿ ಭಾರಿ ಡಿಮ್ಯಾಂಡ್ ಸೃಷ್ಟಿಯಾಗಿದೆ.

  ದೊಡ್ಡ ದೊಡ್ಡ ಸಿನಿಮಾ ನಿರ್ಮಾಣ ಸಂಸ್ಥೆಗಳು, ಸ್ಟಾರ್ ನಟರೊಟ್ಟಿಗೆ ಸಿನಿಮಾಗಲ್ಲಿ ನಟಿಸಲು ಸಂಜಯ್ ದತ್‌ಗೆ ಆಹ್ವಾನ ನೀಡುತ್ತಿವೆ. 'ಕೆಜಿಎಫ್ 2' ಮೂಲಕ ದಕ್ಷಿಣ ಭಾರತಕ್ಕೆ ಪರಿಚಯವಾದ ನಟ ಸಂಜಯ್ ದತ್ ಇದೀಗ ಮತ್ತೆ ಕನ್ನಡ ಸಿನಿಮಾಕ್ಕೆ ಮರಳುವ ಸಾಧ್ಯತೆ ಇದೆ.

  ಧ್ರುವ ಸರ್ಜಾ ನಟನೆಯ ಹೊಸ ಸಿನಿಮಾ ಒಂದಕ್ಕೆ ಸಂಜಯ್ ದತ್ ಅನ್ನು ವಿಲನ್ ಪಾತ್ರಕ್ಕೆ ಕೇಳಲಾಗಿದೆ. ಆದರೆ ಸಂಜಯ್ ದತ್ ಇನ್ನೂ ಒಪ್ಪಿಗೆ ಸೂಚಿಸಿಲ್ಲ.

  ಧ್ರುವ ಸರ್ಜಾ ನಟಿಸಿ ಪ್ರೇಮ್ ನಿರ್ದೇಶನ ಮಾಡುತ್ತಿರುವ ಹೊಸ ಸಿನಿಮಾದಲ್ಲಿ ಪವರ್‌ಫುಲ್ ವಿಲನ್ ಪಾತ್ರವೊಂದಿದ್ದು ಆ ಪಾತ್ರಕ್ಕೆ ಸಂಜಯ್ ದತ್ ಅನ್ನು ಕೇಳಲಾಗಿದೆ. ಸಂಜಯ್ ದತ್ ಮಾತ್ರವೇ ಅಲ್ಲದೆ ಇನ್ನೂ ಕೆಲವು ದೊಡ್ಡ ಸ್ಟಾರ್ ನಟರುಗಳು ಆ ಸಿನಿಮಾದ ಭಾಗವಾಗಲಿದ್ದಾರಂತೆ.

  ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಪ್ರೇಮ್ ಸಿನಿಮಾ ಮಾಡುತ್ತಿದ್ದು, ಪ್ರತಿಯೊಂದು ಸಿನಿಮಾ ರಂಗದಿಂದಲೂ ಒಬ್ಬೊಬ್ಬರು ಸ್ಟಾರ್‌ಗಳನ್ನು ಸಿನಿಮಾಕ್ಕೆ ಹಾಕಿಕೊಳ್ಳುವ ಯೋಚನೆ ಪ್ರೇಮ್‌ರದ್ದು. ಹಿಂದಿಯಿಂದ ಸಂಜಯ್ ದತ್ ಅವರನ್ನು ಪ್ರಮುಖ ವಿಲನ್ ಪಾತ್ರಕ್ಕೆ ಕರೆತರುವ ಯತ್ನದಲ್ಲಿದ್ದಾರೆ ಪ್ರೇಮ್.

  ಸಿನಿಮಾದ ಕತೆ ಫೈನಲ್ ಆಗಿದ್ದು, ಪಾತ್ರಗಳ ಆಯ್ಕೆ ನಡೆಯುತ್ತಿದೆ. ಸಿನಿಮಾದ ಕತೆಯು 1968 ರಿಂದ 1978 ರ ಒಳಗೆ ನಡೆಯಲಿದ್ದು, ಅದಕ್ಕಾಗಿ ಹಳೆಯ ಕಾಲದ ಫೀಲ್ ನೀಡುವ ಸೆಟ್‌ಗಳ ನಿರ್ಮಾಣ, ಸೆಟ್‌ ಪ್ರಾಪರ್ಟಿಗಳ ಸಂಗ್ರಹ ಕಾರ್ಯದ ಯೋಜನೆಯೆಲ್ಲ ಪೂರ್ಣಗೊಂಡಿದೆ.

  ಸಂಜಯ್ ದತ್‌ಗೆ ಕನ್ನಡದಿಂದ ಮಾತ್ರವೇ ಅಲ್ಲದೆ ತಮಿಳಿನಿಂದಲೂ ಬಂಪರ್ ಆಫರ್‌ ಒಂದು ಬಂದಿದೆ. ತಮಿಳಿನ ಸ್ಟಾರ್ ನಟ ವಿಜಯ್ ನಟನೆಯ ಹೊಸ ಸಿನಿಮಾದಲ್ಲಿ ವಿಲನ್ ಪಾತ್ರಕ್ಕೆ ಸಂಜಯ್ ದತ್ ಅವರನ್ನು ಕೇಳಲಾಗಿದೆ. ಈ ಸಿನಿಮಾವನ್ನು ಲೋಕೇಶ್ ಕನಕರಾಜನ್ ನಿರ್ದೇಶನ ಮಾಡಲಿದ್ದಾರೆ. ವಿಜಯ್ ಸಿನಿಮಾದಲ್ಲಿ ನಟಿಸಲು ಸಂಜಯ್ ಈಗಾಗಲೇ ಒಪ್ಪಿಗೆ ಸೂಚಿಸಿದ್ದಾರೆ. ಆ ಸಿನಿಮಾಕ್ಕಾಗಿ ಭಾರಿ ದೊಡ್ಡ ಸಂಭಾವನೆಯನ್ನೂ ಸಂಜಯ್ ಪಡೆಯುತ್ತಿದ್ದಾರೆ ಎನ್ನಲಾಗುತ್ತಿದೆ.

  ದಕ್ಷಿಣ ಭಾರತದ ಚಿತ್ರರಂಗದಲ್ಲಿ ಮಾತ್ರವೇ ಅಲ್ಲದೆ ಬಾಲಿವುಡ್ ಸಿನಿಮಾಗಳಲ್ಲಿಯೂ ಸಂಜಯ್ ದತ್ ಬ್ಯುಸಿಯಾಗಿದ್ದಾರೆ. 'ದಿ ಗುಡ್ ಮಹಾರಾಜ', 'ಬ್ಲಾಕ್‌ಬಸ್ಟರ್', 'ಗುಡ್‌ಚಡಿ' ಸಿನಿಮಾದಲ್ಲಿ ಸಂಜಯ್ ದತ್ ನಟಿಸುತ್ತಿದ್ದಾರೆ. 'ಬ್ರಹ್ಮಾಸ್ತ್ರ' ಪಾರ್ಟ್‌ 2 ನಲ್ಲಿಯೂ ಸಂಜಯ್ ದತ್ ನಟಿಸಲಿದ್ದಾರೆ ಎನ್ನಲಾಗುತ್ತಿದೆ.

  English summary
  Bollywood actor Sanjay Dutt was offered a role in Dhruva Sarja and Prem's new Kannada movie.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X