For Quick Alerts
  ALLOW NOTIFICATIONS  
  For Daily Alerts

  ಸಂಜನಾ ಗಲ್ರಾನಿಗೆ ಅಶ್ಲೀಲ ಸಂದೇಶ: ಆಡಂ ಬಿದ್ದಪ್ಪ ಪೊಲೀಸರ ವಶಕ್ಕೆ

  |

  ನಟಿ ಸಂಜನಾ ಗಲ್ರಾನಿಗೆ ಅಶ್ಲೀಲವಾಗಿ, ಅವಾಚ್ಯವಾಗಿ ಸಂದೇಶ ಕಳಿಸಿದ ಆಡಂ ಬಿದ್ದಪ್ಪ ಅನ್ನು ಇಂದಿರಾನಗರ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಜನಪ್ರಿಯ ಫ್ಯಾಷನ್ ಡಿಸೈನರ್, ಕೊರಿಯೋಗ್ರಾಫರ್ ಪ್ರಸಾದ್ ಬಿದ್ದಪ್ಪ ಪುತ್ರ ಈ ಆಡಂ ಬಿದ್ದಪ್ಪ.

  ಇದೇ ಫೆಬ್ರವರಿ 25ರಂದು ರಾತ್ರಿ 10ರಿಂದ 12ರವರೆಗೆ ಸಂಜನಾ ಗಲ್ರಾನಿ ಅವರಿಗೆ ಆಡಂ ಬಿದ್ದಪ್ಪ ಅಶ್ಲೀಲ ಮೆಸೇಜ್ ಕಳಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಈ ಕುರಿತು ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ನಟಿ ಸಂಜನಾ ದೂರು ನೀಡಿದ್ದರು. ದೂರಿನ ಜೊತೆಗೆ ವಾಟ್ಸಪ್​ ಚಾಟ್ ದಾಖಲೆಯನ್ನೂ ಸಂಜನಾ ನೀಡಿದ್ದಾರೆ. ಈ ದೂರಿನ ಆಧಾರದ ಮೇಲೆ ಇಂದಿರಾ ನಗರ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದ್ದು, ಆಡಂ ಬಿದ್ದಪ್ಪರನ್ನು ವಶಪಡಿಸಿಕೊಂಡು ವಿಚಾರಣೆ ನಡೆಸಲಾಗಿದೆ.

  ಗೆಳೆಯನ ವಿರುದ್ಧ ದೂರು ದಾಖಲಿಸಿದ ಸಂಜನಾ ಗಲ್ರಾನಿಗೆಳೆಯನ ವಿರುದ್ಧ ದೂರು ದಾಖಲಿಸಿದ ಸಂಜನಾ ಗಲ್ರಾನಿ

  ಕೊಡಗಿನ ತನ್ನ ಹೋಂ ಸ್ಟೇನಲ್ಲಿದ್ದ ಆಡಂ ಬಿದ್ದಪ್ಪ ಅವನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಸಂಜನಾ ಗಲ್ರಾನಿಯ ಆರೋಪಗಳನ್ನು ಆಡಂ ಬಿದ್ದಪ್ಪ ತಳ್ಳಿ ಹಾಕಿದ್ದಾರೆ. ತಾವು ಸಂಜನಾಗೆ ಯಾವುದೇ ಅಶ್ಲೀಲ ಅಥವಾ ಅವಾಚ್ಯ ಸಂದೇಶ ಕಳಿಸಿಲ್ಲ ಎಂದಿದ್ದಾರೆ. ಸಂಜನಾ ಗಲ್ರಾನಿ ತಮ್ಮನ್ನು ಬ್ಲಾಕ್ ಮಾಡಿದ್ದಾರೆ ತಾವು ಕಳಿಸಿದ ಸಂದೇಶ ಅವರಿಗೆ ತಲುಪಲು ಸಾಧ್ಯವಿಲ್ಲವೆಂದು ವಾದಿಸಿದ್ದಾರೆ. ತಮ್ಮ ವಾಟ್ಸ್‌ಆಪ್‌ ಚಾಟ್‌ಗಳನ್ನು ಆಡಂ ಬಿದ್ದಪ್ಪ ಡಿಲೀಟ್ ಮಾಡಿದ್ದಾರೆ ಎನ್ನಲಾಗುತ್ತಿದೆ.

  ಸಂಜನಾ ಗಲ್ರಾನಿ ನೀಡಿರುವ ದಾಖಲೆಗಳ ಆಧಾರದಲ್ಲಿ ಇಂದಿರಾ ನಗರ ಪೊಲೀಸರು ತನಿಖೆ ಮುಂದುವರೆಸಿದ್ದಾರೆ. ಸಂಜನಾ ಹಾಗೂ ಆಡಂ ಬಿದ್ದಪ್ಪ ಗೆಳೆಯರಾಗಿದ್ದರು ಎನ್ನಲಾಗಿದೆ. ಆದರೆ ಇತ್ತೀಚೆಗೆ ಯಾವುದೋ ಕಾರಣಕ್ಕೆ ಜಗಳ ಮಾಡಿಕೊಂಡಿದ್ದಾರೆ.

  ಹಿಜಾಬ್ ವಿವಾದ: ರಮ್ಯಾ, ಸಂಜನಾ ಗಲ್ರಾನಿ ಏನಂದ್ರು?ಹಿಜಾಬ್ ವಿವಾದ: ರಮ್ಯಾ, ಸಂಜನಾ ಗಲ್ರಾನಿ ಏನಂದ್ರು?

  ಕಳೆದ ವರ್ಷ ಅಕ್ಟೋಬರ್ ತಿಂಗಳಲ್ಲಿ ಸಂಜನಾ ಗಲ್ರಾನಿ ತನ್ನ ಗೆಳೆಯ ರಾಹುಲ್ ಥೋನ್ಸೆ ವಿರುದ್ಧವೂ ದೂರು ನೀಡಿದ್ದರು. ಡ್ರಗ್ಸ್ ಪ್ರಕರಣದಲ್ಲಿ ಸಂಜನಾ ಗಲ್ರಾನಿ ಜೊತೆಗೆ ರಾಹುಲ್ ಥೋನ್ಸೆ ಸಹ ಬಂಧನಕ್ಕೆ ಒಳಗಾಗಿದ್ದರು. ಈ ಸಮಯದಲ್ಲಿ ರಾಹುಲ್ ಥೊನ್ಸೆ ನನ್ನ ರಾಖಿ ಬ್ರದರ್ ಎಂದು ಸಂಜನಾ ಹೇಳಿಕೊಂಡಿದ್ದರು. ಆದರೆ ಕಳೆದ ಅಕ್ಟೋಬರ್ ನಲ್ಲಿ ಅವರ ವಿರುದ್ಧ ವಂಚನೆ ಪ್ರಕರಣ ದಾಖಲಿಸಿದ್ದರು.

   ಮೊದಲ ಮಗುವಿನ ನಿರೀಕ್ಷೆಯಲ್ಲಿರುವ ಸಂಜನಾ ಗಲ್ರಾನಿ ಹೇಳಿದ್ದೇನು?: ಗಂಡು ಮಗು ಎಂದಿದ್ದೇಕೆ? ಮೊದಲ ಮಗುವಿನ ನಿರೀಕ್ಷೆಯಲ್ಲಿರುವ ಸಂಜನಾ ಗಲ್ರಾನಿ ಹೇಳಿದ್ದೇನು?: ಗಂಡು ಮಗು ಎಂದಿದ್ದೇಕೆ?

  ತಾವು ಗೋವಾ ಹಾಗೂ ಕೊಲಂಬೊಗಳಲ್ಲಿ ಕ್ಯಾಸಿನೊಗಳ ಮ್ಯಾನೇಜಿಂಗ್ ಡೈರೆಕ್ಟರ್ ಎಂದು ಹೇಳಿಕೊಂಡಿದ್ದ ರಾಹುಲ್ ಥೋನ್ಸೆ ಸಂಜನಾರ ಗೆಳೆತನ ಸಂಪಾದಿಸಿದ್ದ. ಕ್ಯಾಸಿನೋಗಳಲ್ಲಿ ಹಣ ತೊಡಗಿಸಿದರೆ ಹೆಚ್ಚು ಲಾಭವಾಗುತ್ತದೆ ಎಂದು ಹೇಳಿ ಸಂಜನಾರಿಂದ ಮೂರು ವರ್ಷಗಳ ಹಿಂದೆ ಹಣ ಪಡೆದಿದ್ದ. ಆ ಸಮಯದಲ್ಲಿ ರಾಹುಲ್ ಥೋನ್ಸೆ, ರಾಮಕೃಷ್ಣ ಹಾಗೂ ರಾಗೇಶ್ವರಿ ಅವರ ಖಾತೆಗಳಿಗೆ ಸಂಜನಾ ಹಣ ಹಾಕಿದ್ದರು. ಹೂಡಿಕೆಯ ಲಾಭಾಂಶ ನೀಡದ ರಾಹುಲ್ ಥೋನ್ಸೆ, ನೀಡಿದ್ದ ಹಣವನ್ನೂ ವಾಪಸ್ ನೀಡುತ್ತಿಲ್ಲ. ನನ್ನ ಹಣವನ್ನು ಕಾನೂನು ಬಾಹಿರ ಚಟುವಟಿಕೆಗಳಿಗೆ ರಾಹುಲ್ ಥೋನ್ಸೆ ಬಳಸಿಕೊಂಡಿದ್ದಾರೆ. ಆ ಮೂಲಕ ನನ್ನ ಘನತೆಗೆ ಪೆಟ್ಟುಕೊಟ್ಟಿದ್ದಾರೆ ಎಂದು ಸಂಜನಾ ತಮ್ಮ ದೂರಿನಲ್ಲಿ ಆರೋಪಿಸಿದ್ದರು.

  English summary
  Actress Sanjjanaa Galrani gave complaint to Indira Nagar police station against Adam Biddappa alleging that he sent vulgar messages to her.
  Friday, March 4, 2022, 10:57
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X