»   » ಗಂಡ ಹೆಂಡತಿ ಸಂಜನಾ ಫ್ಯಾನ್ಸ್ ಗೆ ಕಸಿವಿಸಿ ಸಮಾಚಾರ

ಗಂಡ ಹೆಂಡತಿ ಸಂಜನಾ ಫ್ಯಾನ್ಸ್ ಗೆ ಕಸಿವಿಸಿ ಸಮಾಚಾರ

Posted By:
Subscribe to Filmibeat Kannada

'ಗಂಡ ಹೆಂಡತಿ' ಸಂಜನಾ ಏಕಾಏಕಿ ಈ ನಿರ್ಧಾರಕ್ಕೆ ಬಂದಿರುವುದು ಅವರ ಅಭಿಮಾನಿಗಳ ಪಾಲಿಗೆ ಒಂಚೂರು ಕಸಿವಿಸಿ ಸಮಾಚಾರ. ತಮ್ಮ ಬಿಂದಾಸ್ ಸೌಂದರ್ಯವನ್ನು ತೆರೆದಿಟ್ಟ ದಿಟ್ಟ ತಾರೆ ಈಗ ಗ್ಲಾಮರ್ ಪಾತ್ರಗಳು ಸಾಕು ಎಂದು ತಮಗೆ ತಾವೆ ಕಟ್ಟುಪಾಡು ಹಾಕಿಕೊಂಡಿದ್ದಾರೆ. ಈಗ ತಾವೇನಿದ್ದರೂ ಅಭಿನಯಕ್ಕೆ ಸವಾಲೊಡ್ಡುವ ಪಾತ್ರಗಳನ್ನು ಮಾಡುತ್ತೇನೆ ಎಂದಿದ್ದಾರೆ.

ಸದ್ಯಕ್ಕೆ 'ಮಹಾನದಿ' ಎಂಬ ಚಿತ್ರದಲ್ಲಿ ಸಂಜನಾ ಅಭಿನಯಿಸುತ್ತಿದ್ದಾರೆ. ಈ ಚಿತ್ರದಲ್ಲಿನ ತಮ್ಮ ಪಾತ್ರ ಚಾಲೆಂಜಿಂಗ್ ಆಗಿದೆ ಎನ್ನುತ್ತಾರೆ ಸಂಜನಾ. ತೆಲುಗು, ತಮಿಳು ಹಾಗೂ ಮಲಯಾಳಂ ಚಿತ್ರರಂಗದಲ್ಲಿ ಒಂದು ಸುತ್ತು ಹಾಕಿಕೊಂಡು ಬಂದಿರುವ ಅವರು ಈಗ ಅನುಭವಿ ತಾರೆ.

ಚಿತ್ರದಲ್ಲಿ ಎಷ್ಟು ಹಾಡುಗಳಿರುತ್ತವೆ, ಎಷ್ಟು ಸೀನ್ ಗಳಿರುತ್ತವೆ ಎಂದು ತಲೆಕೆಡಿಸಿಕೊಳ್ಳುವುದಿಲ್ಲ. ಈಗ ಏನಿದ್ದರೂ ತಮ್ಮದು ಅಭಿನಯಕ್ಕೆ ಪ್ರಾಮುಖ್ಯತೆ ಕೊಡುವ ಮನಸ್ಥಿತಿ ಎನ್ನುತ್ತಾರೆ. ಅವಕಾಶಗಳಿಲ್ಲ ಎಂದಲ್ಲ, ಸೆಕ್ಸಿ ಪಾತ್ರಗಳಲ್ಲಿ ಅಭಿನಯಿಸುವಂತೆ ತಮ್ಮ ಬಳಿಗೆ ಈಗಲೂ ನಿರ್ದೇಶಕರು ಕತೆ ಹಿಡಿದುಕೊಂಡು ಬರುತ್ತಿದ್ದಾರೆ.

ಅವರಿಗೆಲ್ಲಾ ನೋ ಎಂದು ಹೇಳಿ ಮನೆಗೆ ಕಳುಹಿಸುತ್ತಿದ್ದೇನೆ. ಇನ್ನು ಮೇಲೆ ತಾವು ಆ ರೀತಿಯ ಪಾತ್ರಗಳಲ್ಲಿ ಅಭಿನಯಿಸಲ್ಲ ಎಂದು ಖಡಾಖಂಡಿತವಾಗಿ ಹೇಳಿಕಳುಹಿಸುತ್ತಿದ್ದೇನೆ. ಇಷ್ಟು ದಿನ ಕಾದಿದ್ದಕ್ಕೇ 'ಮಹಾನದಿ'ಯಂತಹ ಉತ್ತಮ ಪಾತ್ರ ಸಿಕ್ಕಿತು ಎಂಬುದು ಸಂಜನಾ ಸಮಜಾಯಿಷಿ.

ಇದೊಂದು ಮಹಿಳಾ ಪ್ರಧಾನ ಚಿತ್ರ. ತೆಲುಗಿನ 'ಅರುಂಧತಿ' ಚಿತ್ರದಲ್ಲಿ ಅನುಷ್ಕಾ ಶೆಟ್ಟಿ ಪೋಷಿಸಿದ್ದ ಪಾತ್ರದ ತರಹ ಇರುತ್ತದೆ. 'ಮಹಾನದಿ' ಚಿತ್ರಕ್ಕಾಗಿ ತಮಗೆ ಬಂದ ಮತ್ತೊಂದು ಆಫರನ್ನು ಕೈಬಿಡಬೇಕಾಯಿತು. ಅಷ್ಟೊಂದು ಪ್ರಮಾಣದಲ್ಲಿ ತೊಡಗಿಕೊಂಡಿದ್ದೇನೆ ಎನ್ನುತ್ತಾರೆ ಸಂಜನಾ.

ಸದ್ಯಕ್ಕೆ 'ಮಹಾನದಿ' ಚಿತ್ರಕ್ಕೆ ಉಡುಪಿಯಲ್ಲಿ ಬಿರುಸಿನ ಚಿತ್ರೀಕರಣ ನಡೆಯುತ್ತಿದೆ. 'ಮೈಲಾರಿ' ಚಿತ್ರದ ಬಳಿಕ 'ಸಾಗರ್' ಚಿತ್ರದಲ್ಲಿ ಸಂಜನಾ ಅಭಿನಯಿಸಿದ್ದರು. 'ರೆಬೆಲ್' ಹಾಗೂ 'ಒಂದು ಕ್ಷಣದಲ್ಲಿ' ಚಿತ್ರಗಳು ಬಿಡುಗಡೆಯಾಗಬೇಕಿವೆ. (ಏಜೆನ್ಸೀಸ್)

English summary
Kannada actor Sanjjanaa decides to prefers performance oriented roles. At present she has acting in Mahanadi. She claims that her role is most challenging. The film is backed by a female oriented script.
Please Wait while comments are loading...