Just In
Don't Miss!
- Automobiles
ಬಿಡುಗಡೆಯ ನಂತರ ಎರಡನೇ ಬಾರಿಗೆ ಬೆಲೆ ಹೆಚ್ಚಳ ಪಡೆದುಕೊಂಡ ನಿಸ್ಸಾನ್ ಮ್ಯಾಗ್ನೈಟ್
- Sports
ಐಪಿಎಲ್ 2021: ಹೊಸ ಆವೃತ್ತಿಗೆ ಸಿದ್ಧತೆ, ಚೆನ್ನೈಗೆ ಬಂದಿಳಿದ ಧೋನಿ, ರಾಯುಡು
- News
ಈ ಬಾರಿಯ 'ಉರಿ ಬೇಸಿಗೆ' ಕುರಿತು ಎಚ್ಚರಿಕೆ ಕೊಟ್ಟ ಹವಾಮಾನ ಇಲಾಖೆ
- Finance
ಚಿನ್ನದ ಬೆಲೆ ಇಳಿಕೆ: ಗರಿಷ್ಠ ಮಟ್ಟಕ್ಕಿಂತ 11,500 ರೂ. ಕಡಿಮೆ
- Lifestyle
ರಾತ್ರಿ ವೇಳೆ ಬೇಳೆಕಾಳು ತಿನ್ನಬೇಕೋ ಬೇಡವೋ, ಆಯುರ್ವೇದ ಏನು ಹೇಳುತ್ತದೆ?
- Education
Vijayapura District Court Recruitment 2021: ವಿಜಯಪುರ ಜಿಲ್ಲಾ ನ್ಯಾಯಾಲಯದಲ್ಲಿ 2 ಬೆರಳಚ್ಚು-ನಕಲುಗಾರ ಹುದ್ದೆಗಳ ನೇಮಕಾತಿ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ತಾರೆಯರ ಮನೆಯಲ್ಲಿ ಸಂಕ್ರಾಂತಿ ಸೆಲೆಬ್ರೇಷನ್ ಹೇಗಿರುತ್ತೆ?
ಹಬ್ಬಗಳು ಬಂತಂದ್ರೆ ಸಿನಿಮಾ ತಾರೆಯರಿಗೆ ಅದೇನೋ ಒಂಥರಾ ಖುಷಿ. ಸದಾ ಸಿನಿಮಾ, ಶೂಟಿಂಗ್ ಅಂತ ಬ್ಯುಸಿ ಇರುವ ಸೆಲೆಬ್ರಿಟಿಗಳ ಲೈಫ್ ನಲ್ಲಿ ಹಬ್ಬದ ದಿನಗಳು ತುಂಬ ಸಂತೋಷ ನೀಡುತ್ತೆ.
ವರ್ಷದ ಮೊದಲ ಹಬ್ಬ ಸಂಕ್ರಾಂತಿ, ಆ ಸಂಭ್ರಮವನ್ನ ಮತ್ತಷ್ಟು ಹೆಚ್ಚಿಸುತ್ತೆ. ಹೊಸ ವರ್ಷದ ಆಚರಣೆಯ ನಂತರ ಬರುವ ಈ ಹಬ್ಬಕ್ಕಾಗಿ ತಾರೆಯರು ಕಾಯುತ್ತಿರುತ್ತಾರೆ. ತೆರೆಮೇಲೆ ಗ್ಲಾಮರ್ ಪಾತ್ರಗಳಲ್ಲಿ ಮಿಂಚುವ ಈ ನಟಿಯರು, ಹಬ್ಬದ ದಿನಗಳಲ್ಲಿ ಸಂಪ್ರದಾಯವಾಗಿ ಸಂಭ್ರಮಿಸುತ್ತಾರೆ. ಇದನ್ನ ನೋಡೋದು ಅಭಿಮಾನಿಗಳಿಗೆ ಇನ್ನೊಂದು ಖುಷಿ.
ಅನ್ನದಾತರಿಗಾಗಿ ಜೀ ಕನ್ನಡ ವಾಹಿನಿಯಲ್ಲಿ 'ಸುಗ್ಗಿ ಸಂಭ್ರಮ'
ಹಾಗಿದ್ರೆ, ನಮ್ಮ ಇಂಡಸ್ಟ್ರಿಯ ನಟಿಯರ ಮನೆಯಲ್ಲಿ ಸಂಕ್ರಾಂತಿ ಸಡಗರ ಹೇಗಿತ್ತು? ಯಾವ ನಟಿ ಹೇಗೆ ಸೆಲೆಬ್ರೆಟ್ ಮಾಡ್ತಾರೆ ಎಂಬುದನ್ನ ತಿಳಿಯಲು ಮುಂದೆ ಓದಿ.....

ಕಬ್ಬು ಅಂದ್ರೆ ರಚಿತಾಗೆ ಇಷ್ಟವಂತೆ
ಹೊಸ ವರ್ಷದ ಸಂಭ್ರಮದಲ್ಲಿರುವ ನಮಗೆ ಇದು ಇನ್ನಷ್ಟು ಖುಷಿ ಕೊಡುತ್ತೆ. ಮನೆಯಲ್ಲಿ ಪೊಂಗಲ್, ಎಳ್ಳುಬೆಲ್ಲ ಮಾಡುತ್ತೇವೆ. ಅಪ್ಪ ಅಮ್ಮನ ಜತೆ ದೇವಸ್ಥಾನಕ್ಕೆ ಹೋಗಿ ಪೂಜೆ ಸಲ್ಲಿಸಿ ಬರುತ್ತೇನೆ. ಮನೆಗೆ ಸ್ನೇಹಿತರು ಬರುತ್ತಾರೆ. ಕಬ್ಬು ನನಗೆ ತುಂಬಾ ಇಷ್ಟ. ಆದರೆ ಅದನ್ನು ತಿನ್ನೋದು ಸ್ವಲ್ಪ ಇಷ್ಟ.'' - ರಚಿತಾ ರಾಮ್, ನಟಿ

ಮೇಘನಾಗೆ ಈ ಸಂಕ್ರಾಂತಿ ಸ್ಪೆಷಲ್
ಮನೆಯಲ್ಲಿ ಪೊಂಗಲ್ ಮಾಡಲೇಬೇಕು. ಇದರ ಜತೆ ಆಂಟಿ ಮನೆಯಿಂದ ಎಳ್ಳುಬೆಲ್ಲ ಬರುತ್ತೆ. ಎಲ್ಲರೂ ಒಟ್ಟಿಗೆ ಹಬ್ಬ ಆಚರಿಸುತ್ತೇವೆ. ಚಿರಂಜೀವಿ ಸರ್ಜಾ ಜತೆ ನನ್ನ ಎಂಗೇಜ್ ಮೆಂಟ್ ಆದ್ಮೇಲೆ ಬಂದಿರುವ ಮೊದಲ ಸಂಕ್ರಾಂತಿ ಇದು. ಹಾಗಾಗಿ ಇದು ನನಗೆ ತುಂಬಾ ಸಂತೋಷ ಉಂಟು ಮಾಡಿದೆ ಎನ್ನುತ್ತಾರೆ ಮೇಘನಾ. ದರ್ಶನ್ ಕುರುಕ್ಷೇತ್ರದಲ್ಲಿ ಭಾನುಮತಿ ಆಗಿ ನಟಿಸುತ್ತಿರುವ ಮೇಘನಾ ಅವರ 'ಇರುವುದೆಲ್ಲವ ಬಿಟ್ಟು' ಚಿತ್ರದ ಪೋಸ್ಟರ್ ರಿಲೀಸ್ ಆಗಿದೆ.

ಹರಿಪ್ರಿಯಾ ಸಂಭ್ರಮ ಜೋರು
ಇತರೆ ಹಬ್ಬಗಳಿಗಿಂತ ಜೋರಾಗಿ ಸಂಕ್ರಾಂತಿಯನ್ನು ಆಚರಿಸುತ್ತೇವೆ. ಸಾಮಾನ್ಯವಾಗಿ ನಾನು ಯಾವ ಹಬ್ಬವನ್ನೂ ಮಿಸ್ ಮಾಡೋಲ್ಲ, ಮನೆಯಲ್ಲೇ ಇರುತ್ತೇನೆ. ಸಂಕ್ರಾಂತಿ ಸ್ವಲ್ಪ ಹೆಚ್ಚು ಸ್ಪೆಷಲ್. ಇವತ್ತು ಹಬ್ಬಕ್ಕೆ ಪೊಂಗಲ್, ಗೆಣಸು, ಕಡಲೆಕಾಯಿ ಇರಲೇಬೇಕು. ಹಸುವನ್ನು ಮನೆ ಬಾಗಿಲಿಗೆ ಕರೆತಂದು ಪೂಜೆ ಮಾಡಿ, ಅದಕ್ಕೆ ಪ್ರಸಾದವನ್ನು ತಿನ್ನಿಸಿ ನಂತರ ನಾವು ಊಟ ಮಾಡುತ್ತೇವೆ ಎನ್ನುತ್ತಾರೆ ನಟಿ ಹರಿಪ್ರಿಯಾ.

ಶ್ರುತಿ 'ಸಂಕ್ರಾಂತಿ'
ಸಂಕ್ರಾಂತಿ ಹಬ್ಬಕ್ಕಾಗಿ ನಾನು ಕಾಯುತ್ತಿರುತ್ತೇನೆ. ಯಾಕೆಂದರೆ, ನನಗೆ ಎಳ್ಳುಬೆಲ್ಲ ಅಂದ್ರೆ ತುಂಬಾ ಇಷ್ಟ. ನಮ್ಮ ಮನೆಯಲ್ಲಿ ಖಾರ ಮತ್ತು ಸಿಹಿ ಪೊಂಗಲ್ ಮಾಡುತ್ತೇವೆ. ಆದರೆ, ಎಳ್ಳುಬೆಲ್ಲ ಬೀರುವ ಪದ್ಧತಿ ನಮ್ಮಲ್ಲಿಲ್ಲ. ಹಾಗಾಗಿ ನನ್ನ ಸ್ನೇಹಿತರು ಕಳಿಸುವ ಎಳ್ಳುಬೆಲ್ಲ ನನಗೆ ಪ್ರಿಯ. ಅದರಲ್ಲಿರುವ ಒಣ ಕೊಬರಿ ಮತ್ತು ಬೆಲ್ಲದ ತುಂಡುಗಳನ್ನು ಮಾತ್ರ ಆರಿಸಿಕೊಂಡು ತಿನ್ನುತ್ತಾ ಕೂರುತ್ತೇನೆ. ಇದು ನನಗೆ ಪ್ರಿಯವಾದ ಕೆಲಸ' ಎನ್ನುತ್ತಾರೆ ಶ್ರುತಿ ಹರಿಹರನ್