For Quick Alerts
  ALLOW NOTIFICATIONS  
  For Daily Alerts

  ಸತೀಶ್ ನೀನಾಸಂ 'ಪೆಟ್ರೋಮ್ಯಾಕ್ಸ್' ಚಿತ್ರೀಕರಣ ಮುಕ್ತಾಯ

  |

  ಕನ್ನಡ ನಟ ಸತೀಶ್ ನೀನಾಸಂ ಮತ್ತು ಹರಿಪ್ರಿಯಾ ನಟನೆಯಲ್ಲಿ ತಯಾರಾಗುತ್ತಿರುವ ಪೆಟ್ರೋಮ್ಯಾಕ್ಸ್ ಸಿನಿಮಾದ ಚಿತ್ರೀಕರಣ ಮುಕ್ತಯವಾಗಿದೆ. ಎರಡು ಹಂತದಲ್ಲಿ ನಡೆದ ಪೆಟ್ರೋಮ್ಯಾಕ್ಸ್ ಶೂಟಿಂಗ್ ಯಶಸ್ವಿಯಾಗಿ ಮುಗಿದಿದೆ.

  ಕೊನೆಯ ದಿನದ ಚಿತ್ರೀಕರಣದಲ್ಲಿ ಸತೀಶ್ ನೀನಾಸಂ, ಕಾರುಣ್ಯ ರಾಮ್ ಸೇರಿದಂತೆ ಹಲವು ಕಲಾವಿದರು ಭಾಗವಹಿಸಿದ್ದರು. ಪೆಟ್ರೋಮ್ಯಾಕ್ಸ್ ಶೂಟಿಂಗ್ ಮುಗಿಸಿದ ಬಳಿಕ ತಂತ್ರಜ್ಞರ ಜೊತೆ ತೆಗೆದಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

  'ಪೆಟ್ರೋಮ್ಯಾಕ್ಸ್' ಕೊನೆಯ ಹಂತದ ಚಿತ್ರೀಕರಣ ಆರಂಭಿಸಿದ ಸತೀಶ್ ನೀನಾಸಂ'ಪೆಟ್ರೋಮ್ಯಾಕ್ಸ್' ಕೊನೆಯ ಹಂತದ ಚಿತ್ರೀಕರಣ ಆರಂಭಿಸಿದ ಸತೀಶ್ ನೀನಾಸಂ

  'ಪೆಟ್ರೋಮ್ಯಾಕ್ಸ್' ಶೂಟಿಂಗ್ ಮುಗಿಸಿದ ಸತೀಶ್ ನೀನಾಸಂ ಮತ್ತೊಂದೆಡೆ ದಸರಾ, ಮ್ಯಾಟ್ನಿ ಚಿತ್ರಗಳ ಶೂಟಿಂಗ್ ಮಾಡಬೇಕಿದೆ. ಪೆಟ್ರೋಮ್ಯಾಕ್ಸ್ ಜೊತೆಯಲ್ಲಿಯೇ ಈ ಎರಡು ಸಿನಿಮಾ ಶೂಟಿಂಗ್ ಆರಂಭಿಸಿತ್ತು.

  2020ರಲ್ಲಿ ಸತೀಶ್ ನೀನಾಸಂ ಅಭಿನಯದ ಯಾವ ಚಿತ್ರವೂ ಬಿಡುಗಡೆಯಾಗಿಲ್ಲ. ಆದರೆ, 2021ರಲ್ಲಿ ಸತೀಶ್ ನೀನಾಸಂ ನಟಿಸಿರುವ ಚಿತ್ರಗಳು ಬ್ಯಾಕ್ ಟು ಬ್ಯಾಕ್ ತೆರೆಗೆ ಬರಲಿದೆ ಎಂಬುದರ ಸುಳಿವು ಸಿಕ್ಕಿದೆ.

  ಪೆಟ್ರೋಮ್ಯಾಕ್ಸ್ ಸೆಟ್‌ಗೆ ಭೇಟಿ ನೀಡಿದ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬುಪೆಟ್ರೋಮ್ಯಾಕ್ಸ್ ಸೆಟ್‌ಗೆ ಭೇಟಿ ನೀಡಿದ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು

  ಅಂದ್ಹಾಗೆ, ಪೆಟ್ರೋಮ್ಯಾಕ್ಸ್ ಚಿತ್ರವನ್ನು 'ನೀರ್‌ದೋಸೆ' ಖ್ಯಾತಿಯ ವಿಜಯ್ ಪ್ರಸಾದ್ ನಿರ್ದೇಶನ ಮಾಡಿದ್ದಾರೆ. ಅಂದುಕೊಂಡ ದಿನಕ್ಕೆ ಚಿತ್ರೀಕರಣ ಮುಗಿಸಿರುವ ಡೈರೆಕ್ಟರ್ ಪೋಸ್ಟ್ ಪ್ರೊಡಕ್ಷನ್ ಮುಗಿಸಿ ಪ್ರೇಕ್ಷಕರ ಮುಂದೆ ತರಲಿದ್ದಾರೆ.

  English summary
  Sathish Ninasam starrer Petromax movie shooting completed. the movie directed by vijay prasad.
  Tuesday, January 5, 2021, 15:25
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X