ಮನೆ ಕೆಲಸದವರ ಜೊತೆ ಕೂತು ಊಟ ಮಾಡಿದ ಅಣ್ಣಾವ್ರ ಮಗ
ಹೊಸ ವರ್ಷದ ಆಚರಣೆಯನ್ನು ಸ್ಟಾರ್ ಗಳು ಬೇರೆ ಬೇರೆ ರೀತಿಯಲ್ಲಿ ತಮಗೆ ಖುಷಿ ನೀಡುವ ಹಾಗೆ ಆಚರಣೆ ಮಾಡಿದ್ದಾರೆ. ಆದರೆ, ನಟ ರಾಘವೇಂದ್ರ ರಾಜ್ ಕುಮಾರ್ ಅರ್ಥಪೂರ್ಣವಾಗಿ ಈ ವರ್ಷವನ್ನು ಪ್ರಾರಂಭ ಮಾಡಿದ್ದಾರೆ.
ತಮ್ಮ ಮನೆಯಲ್ಲಿ ಕೆಲಸ ಮಾಡುವವರ ಜೊತೆಗೆ ಕೂತು ರಾಘಣ್ಣ ಊಟ ಮಾಡಿದ್ದಾರೆ. ಕಾರ್ ಡೈವರ್, ಅಡುಗೆ ಮಾಡುವವರು, ಕಸ ಹೊಡೆಯುವವರು, ಪಾತ್ರೆ ತೊಳೆಯುವವರು, ತಮ್ಮ ಸಹಾಯಕರು ಹೀಗೆ ತಮ್ಮ ಮನೆಯಲ್ಲಿ ಕೆಲಸ ಮಾಡುವ ಎಲ್ಲರನ್ನು ಹೋಟೆಲ್ ಗೆ ಕರೆದುಕೊಂಡು ಹೋಗಿದ್ದಾರೆ.
ಪ್ರತಿ ದಿನ ತಮಗೆ ಊಟ ಬಡಿಸುವವರನ್ನು ಒಂದು ಹೋಟೆಲ್ ಗೆ ಕರೆದುಕೊಂಡು ಬಂದು, ಅವರ ಜೊತೆಗೆ ರಾಘವೇಂದ್ರ ರಾಜ್ ಕುಮಾರ್ ಊಟ ಮಾಡಿದ್ದಾರೆ. ತಮ್ಮ ಸೇವೆ ಮಾಡುವ ಮನೆ ಕೆಲಸದವರು ನಮ್ಮ ಕುಟುಂಬದವರೇ ಎಂದು ರಾಘವೇಂದ್ರ ರಾಜ್ ಕುಮಾರ ಹೇಳಿದ್ದಾರೆ.

ರಾಜ್ ಕುಮಾರ್ ಈ ರೀತಿ ಮನೆ ಕೆಲಸದವರ ಜೊತೆಗೆ ಊಟ ಮಾಡುತ್ತಿದ್ದರಂತೆ. ಆ ಕೆಲಸವನ್ನು ರಾಘವೇಂದ್ರ ರಾಜ್ ಕುಮಾರ್ ಕೂಡ ಮುಂದುವರೆಸಿಕೊಂಡು ಹೋಗಿದ್ದಾರೆ. ಈ ರೀತಿ ತಮ್ಮ ಈ ವರ್ಷವನ್ನು ರಾಘವೇಂದ್ರ ರಾಜ್ ಕುಮಾರ್ ಶುರು ಮಾಡಿದ್ದಾರೆ.
ಹೆಂಡತಿ ಮಕ್ಕಳನ್ನು ಇನ್ನಷ್ಟು ಹೆಚ್ಚು ಪ್ರೀತಿಸಬೇಕು ಎನ್ನುವುದು ಅವರ ಪ್ರತಿ ವರ್ಷದ ಸಂಕಲ್ಪವಾಗಿದೆಯಂತೆ. ಇದರೊಂದಿಗೆ ಪ್ಲಾಸ್ಟಿಕ್ ಬಳಸದೆ ಇರುವ ಸಂದೇಶ ನೀಡಿದ್ದಾರೆ. ಹೀಗಾಗಿ ತಮ್ಮ ಸಂಸ್ಥೆಯಿಂದ ಬಟ್ಟೆ ಬ್ಯಾಕ್ ನಲ್ಲಿ ತಯಾರಿಸಲಾಗಿದೆ


Click it and Unblock the Notifications











